ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ʼಚಲ್ಕಾ ಚಲ್ಕಾ ರೇʼ ಹಾಡಿಗೆ ಅದ್ಭುತವಾಗಿ ಭರತನಾಟ್ಯ ಸ್ಟೆಪ್ಸ್‌ ಹಾಕಿದ ವಿದೇಶಿ ನರ್ತಕ; ನೆಟ್ಟಿಗರು ಫಿದಾ

ವಿದೇಶಿ ನರ್ತಕ ಅಲೆಕ್ಸ್ ವಾಂಗ್ ಭರತನಾಟ್ಯ‌ ಪ್ರದರ್ಶನ ಈಗ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಅವರು ʼಸಾಥಿಯಾʼ ಬಾಲಿವುಡ್‌ ಚಿತ್ರದ ʼಚಲ್ಕಾ ಚಲ್ಕಾ ರೇʼ ಹಾಡಿಗೆ ಸಖತ್‌ ಆಗಿ ನೃತ್ಯ ಮಾಡಿದ್ದಾರೆ. ಹಾಡಿಗೆ ತಕ್ಕ ಹಾಗೇ ಮುಖಭಾವ ಹಾಗೂ ನೃತ್ಯ ಭಂಗಿಗಳನ್ನು ಪ್ರದರ್ಶನ ನೀಡಿದ್ದಾರೆ. ನೆಟ್ಟಿಗರು ಈ ವಿಡಿಯೊ ನೋಡಿ ಫುಲ್‌ ಖುಷ್‌ ಆಗಿದ್ದಾರೆ.

ವಾಷಿಂಗ್ಟನ್: ಇತ್ತೀಚೆಗೆ ಜಪಾನಿನ ಯುವತಿಯೊಬ್ಬಳು ಭಾರತೀಯ ಸಿನಿಮಾದ ಹಾಡಿಗೆ ಸಖತ್‌ ಆಗಿ ಡ್ಯಾನ್ಸ್‌ ಮಾಡಿದ ವಿಡಿಯೊವೊಂದು ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಇದೀಗ ಅಮೆರಿಕದ ಅಲೆಕ್ಸ್ ವಾಂಗ್ ಭರತನಾಟ್ಯವನ್ನು ಬಹಳ ಅದ್ಭುತವಾಗಿ ಪ್ರದರ್ಶಿಸಿದ್ದಾರೆ. ಇದರ ವಿಡಿಯೊ ಕೂಡ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ (Viral Video). ನೆಟ್ಟಿಗರು ಅಲೆಕ್ಸ್ ವಾಂಗ್‌ನ ಭರತನಾಟ್ಯ ಪ್ರೇಮಕ್ಕೆ ಫುಲ್‌ ಫಿದಾ ಆಗಿದ್ದಾರೆ. ವೈರಲ್ ಆದ ವಿಡಿಯೊದಲ್ಲಿ ಅಲೆಕ್ಸ್ ʼಸಾಥಿಯಾʼ ಬಾಲಿವುಡ್‌ ಚಿತ್ರದ ʼಚಲ್ಕಾ ಚಲ್ಕಾ ರೇʼ ಹಾಡಿಗೆ ಸಖತ್‌ ಆಗಿ ಹೆಜ್ಜೆ ಹಾಕಿರುವುದು ಕಂಡು ಬಂದಿದೆ. ಹಾಡಿಗೆ ತಕ್ಕ ಹಾಗೇ ಮುಖಭಾವ ಹಾಗೂ ನೃತ್ಯ ಭಂಗಿಗಳನ್ನು ಪ್ರದರ್ಶಿಸಿದ್ದಾರೆ.

ಎ.ಆರ್. ರೆಹಮಾನ್ ಸಂಗೀತ ಸಂಯೋಜಿಸಿರುವ ಈ ಹಾಡನ್ನು ರಿಚಾ ಶರ್ಮಾ, ವೈಶಾಲಿ, ಮಹಾಲಕ್ಷ್ಮೀ ಮತ್ತು ಶೋಮಾ ಹಾಡಿದ್ದಾರೆ. ವಾಂಗ್ ನೃತ್ಯ ಪ್ರದರ್ಶನಕ್ಕೆ ಸೋಶಿಯಲ್ ಮೀಡಿಯಾಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಒಬ್ಬರು, "ನೀವು ಅದ್ಭುತವಾಗಿ ಡ್ಯಾನ್ಸ್‌ ಮಾಡುತ್ತಿದ್ದೀರಿ" ಎಂದು ಹೊಗಳಿದ್ದಾರೆ. ಮತ್ತೊಬ್ಬರು, "ತುಂಬಾ ಆಕರ್ಷಕವಾಗಿದೆ. ಇದಕ್ಕೆ 10/10 ಅಂಕಗಳನ್ನು ಪಡೆದ್ದೀರಿ”ಎಂದು ಹೇಳಿದ್ದಾರೆ.

ವಿಡಿಯೊ ಇಲ್ಲಿದೆ ನೋಡಿ...



ಕಮಲ್ ಹಾಸನ್ ಅವರ ಕಿರಿಯ ಮಗಳು ಅಕ್ಷರಾ ಹಾಸನ್ ಕೂಡ ವಿಡಿಯೊಗೆ ಪ್ರತಿಕ್ರಿಯಿಸಿ, "ನೀವು ತುಂಬಾ ಸುಂದರ ಮತ್ತು ಅದ್ಭುತ ನರ್ತಕ" ಎಂದು ಕಾಮೆಂಟ್ ಮಾಡಿದ್ದಾರೆ. ಅದೇ ರೀತಿ, ಸೆಲೆಬ್ರಿಟಿ ನರ್ತಕಿ ಲಾರೆನ್ ಗಾಟ್ಲೀಬ್, "ಅಲೆಕ್ಸ್ ಲೆಟ್ಸ್ ಗೊ" ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಬತ್ತಿಹೋದ ಭೂಮಿಗೆ ಹರಿದುಬಂದ ಕಾವೇರಿ...ನೀರು ನೋಡಿದ ಖುಷಿಯಲ್ಲಿ ಜನ ಮಾಡಿದ್ದೇನು? ವಿಡಿಯೊ ನೋಡಿ

ವೃತ್ತಿಪರ ನರ್ತಕ ಅಲೆಕ್ಸ್ ವಾಂಗ್, ಆಗಾಗ ತನ್ನ ನೃತ್ಯ ವಿಡಿಯೊಗಳನ್ನು ಸೋಶಿಯಲ್ ಮೀಡಿಯಾ ಪೇಜ್‍ನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಬೀದಿ, ಮೆಟ್ರೋ ರೈಲು, ಜಿಮ್‌ ಮತ್ತಿತರ ಕಡೆ ಪ್ರತಿಭೆಯನ್ನು ಪ್ರದರ್ಶಿಸುತ್ತಾರೆ. ಭಾರತೀಯ ಶಾಸ್ತ್ರೀಯ ನೃತ್ಯವು ಪ್ರಪಂಚದಾದ್ಯಂತ ಅಭಿಮಾನಿಗಳನ್ನು ಹೇಗೆ ತನ್ನತ್ತ ಸೆಳೆಯುತ್ತಿದೆ ಎಂಬುದಕ್ಕೆ ಈ ವಿಡಿಯೊ ಒಂದು ಉದಾಹರಣೆ.