ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: 3 ವರ್ಷಕ್ಕೂ ಅಧಿಕ ಕಾಲ ಮಹಿಳೆಗೆ ಋತುಚಕ್ರ; ವಿಚಿತ್ರ ಸ್ಥಿತಿ ಕಂಡು ವೈದ್ಯರು ದಿಗ್ಭ್ರಮೆ!

ಮಹಿಳೆಯರಿಗೆ ಮುಟ್ಟಾದಾಗ 6-7 ದಿನಗಳು ಖತುಸ್ರಾವಾಗುವುದು, ಕೈಕಾಲುಗಳ ಸೆಳೆತ, ಸುಸ್ತು ಸಾಮಾನ್ಯವಾಗಿರುತ್ತದೆ. ಇದೀಗ ಟಿಕ್‌ಟಾಕ್ ಬಳಕೆದಾರ ಅಮೆರಿಕದ ಮಹಿಳೆ 1,000 ದಿನಗಳಿಗೂ ಹೆಚ್ಚು ಕಾಲ ನಡೆದ ಅಸಾಮಾನ್ಯವಾಗಿ ದೀರ್ಘವಾದ ಋತುಚಕ್ರದ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ವಾಷಿಂಗ್ಟನ್:‌ ಮಹಿಳೆಯರಿಗೆ ಮುಟ್ಟಾದಾಗ 6-7 ದಿನಗಳು ಖತುಸ್ರಾವಾಗುವುದು, ಕೈಕಾಲುಗಳ ಸೆಳೆತ, ಸುಸ್ತು ಸಾಮಾನ್ಯವಾಗಿರುತ್ತದೆ. ಇದೀಗ ಟಿಕ್‌ಟಾಕ್ ಬಳಕೆದಾರರೊಬ್ಬರು 1,000 ದಿನಗಳಿಗೂ ಹೆಚ್ಚು ಕಾಲ ನಡೆದ ಅಸಾಮಾನ್ಯವಾಗಿ ದೀರ್ಘವಾದ ಋತುಚಕ್ರದ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವೈದ್ಯರನ್ನು ಸಂಪರ್ಕಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಮೆರಿಕದ ಮಹಿಳೆ ಹೇಳಿಕೊಂಡಿದ್ದಾಳೆ. ಮಹಿಳೆ ಕೊನೆಗೂ ತನಗೆ ಹೀಗಾಗಿರುವುದಕ್ಕೆ ಕಾರಣ ತಿಳಿದು ಕೊಂಡೆ (Viral News) ಎಂದು ಬರೆದುಕೊಂಡಿದ್ದಾಳೆ.

ಹೆಚ್ಚಿನ ಮಹಿಳೆಯರಿಗೆ, ಮುಟ್ಟಿನ ರಕ್ತಸ್ರಾವವು ಪ್ರತಿ 21 ರಿಂದ 35 ದಿನಗಳಿಗೊಮ್ಮೆ ಸಂಭವಿಸುತ್ತದೆ ಮತ್ತು 2 ರಿಂದ 7 ದಿನಗಳ ನಡುವೆ ಇರುತ್ತದೆ. ಆದಾಗ್ಯೂ, ವಯಸ್ಸು, ಹಾರ್ಮೋನುಗಳು, ಜನನ ನಿಯಂತ್ರಣ ಮತ್ತು ಜೀವನಶೈಲಿಯ ಅಂಶಗಳು, ಒತ್ತಡ, ಆಹಾರ ಮತ್ತು ವ್ಯಾಯಾಮದಂತಹ ಅಂಶಗಳನ್ನು ಅವಲಂಬಿಸಿ ಈ ಕಾಲಾವಧಿಯು ಬದಲಾಗಬಹುದು. ಆದರೆ ಈ ಮಹಿಳೆಗೆ ಮೂರು ವರ್ಷಗಳ ಕಾಲ ಋತುಚಕ್ರವಾಗಿದೆ. ವೈದ್ಯರ ಸಮಾಲೋಚನೆಗಳು, ಪರೀಕ್ಷೆಗಳು ಮತ್ತು ಔಷಧಿಗಳ ಹೊರತಾಗಿಯೂ, ರಕ್ತಸ್ರಾವವು ಮುಂದುವರೆಯಿತು. ಅವಳ ಅಂಡಾಶಯಗಳಲ್ಲಿ ಚೀಲಗಳು ಕಂಡುಬಂದವು, ಆದರೆ ಕಾರಣ ತಿಳಿದು ಬಂದಿರಲ್ಲಿಲ್ಲ. ನನ್ನ ಕಬ್ಬಿಣದ ಮಟ್ಟ ಕಡಿಮೆ ಆಗಿತ್ತು. ನನಗೆ ಎಲ್ಲಾ ಸ್ನಾಯುಗಳು ನೋಯುತ್ತಿದ್ದವು. ನನ್ನ ಮೂಳೆಗಳು ನೋಯುತ್ತಿದ್ದವು. ನಿರಂತರ ತಲೆನೋವು, ನಿರಂತರ ವಾಕರಿಕೆ ಇದೆ ಎಂದು ಮಹಿಳೆ ಹೇಳಿದ್ದಾಳೆ.

ವೈದ್ಯರು ಹಿಸ್ಟರೊಸ್ಕೋಪಿ ಮಾಡಿದರು, ಆದರೆ ಸ್ಪಷ್ಟ ಕಾರಣವನ್ನು ಕಂಡುಹಿಡಿಯಲಿಲ್ಲ. ತಜ್ಞರು ಹೊಸ ಔಷಧಿಯನ್ನು ಸೂಚಿಸಿದರು ಮತ್ತು ಐಯುಡಿಯನ್ನು ಸೇರಿಸಿದರು, ಅದು ಸಹ ಪರಿಹಾರವನ್ನು ನೀಡಲು ವಿಫಲವಾಯಿತು. ಹಲವಾರು ಪರೀಕ್ಷೆಗಳಿಗೆ ಒಳಗಾದ ಮತ್ತು ವಿವಿಧ ಚಿಕಿತ್ಸೆಗಳು ಮತ್ತು ಔಷಧಿಗಳನ್ನು ಪ್ರಯತ್ನಿಸಿದರೂ, ಒಂದು ವರ್ಷಕ್ಕೂ ಹೆಚ್ಚು ಕಾಲ ನಿರಂತರ ರಕ್ತಸ್ರಾವದಿಂದ ಬಳಲುತ್ತಿದ್ದೆ. ರಕ್ತಸ್ರಾವದ 950 ನೇ ದಿನದಂದು, ಆಕೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ. ಆಕೆಗೆ ಬೈಕಾರ್ನ್ಯುಯೇಟ್ ಗರ್ಭಕೋಶ ಎಂಬ ಅಪರೂಪದ ಕಾಯಿಲೆ ಇದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Hair Care: ಕೂದಲಿನ ಆರೋಗ್ಯಕ್ಕೆ ಈರುಳ್ಳಿ ರಸ ಎಷ್ಟು ಪ್ರಯೋಜನಕಾರಿ ಗೊತ್ತಾ?

ಈ ಪರಿಸ್ಥಿತಿಯಲ್ಲಿ ಗರ್ಭಾಶಯವು ಒಂದರ ಬದಲು ಎರಡು ಕೋಣೆಗಳಾಗಿ ವಿಂಗಡೆಯಾಗಿದೆ. ರಕ್ತಸ್ರಾವದ ಮೂರನೇ ಅಥವಾ ನಾಲ್ಕನೇ ತಿಂಗಳಿನ ಸುಮಾರಿಗೆ ಆಕೆಯ ಮೊದಲ ಅಲ್ಟ್ರಾಸೌಂಡ್‌ನಲ್ಲಿ ಈ ವಿಷಯ ಬೆಳಕಿಗೆ ಬಂದಿತ್ತು.5% ಕ್ಕಿಂತ ಕಡಿಮೆ ಮಹಿಳೆಯರು ಈ ಸ್ಥಿತಿಯನ್ನು ಹೊಂದಿದ್ದಾರೆ ಎಂದು ವರದಿಗಳು ಸೂಚಿಸಿವೆ. ಬೈಕಾರ್ನ್ಯುಯೇಟ್ ಗರ್ಭಾಶಯವು ಭಾರೀ ಮತ್ತು ದೀರ್ಘಕಾಲದ ರಕ್ತಸ್ರಾವ, ನೋವಿನ ಮುಟ್ಟು ಮುಂತಾದ ಲಕ್ಷಣವನ್ನು ಹೊಂದಿರುತ್ತದೆ. ಸದ್ಯ ಮಹಿಳೆ ತನ್ನ ಈ ಸಮಸ್ಯೆಯ ಬಗ್ಗೆ ಹಂಚಿಕೊಂಡು ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದ್ದಾಳೆ.