Hair Care: ಕೂದಲಿನ ಆರೋಗ್ಯಕ್ಕೆ ಈರುಳ್ಳಿ ರಸ ಎಷ್ಟು ಪ್ರಯೋಜನಕಾರಿ ಗೊತ್ತಾ?
Hair Care: ಅನಾದಿ ಕಾಲದಿಂದಲೂ ಮನೆಮದ್ದಾಗಿ ಬಳಕೆ ಮಾಡುವ ಈರುಳ್ಳಿ ರಸವು ಕೂದಲಿನ ಆರೈಕೆಗೆ ಬಹಳ ಉತ್ತಮ. ಅಡುಗೆಯಲ್ಲಿ ಬಳಸುವ ಈ ಈರುಳ್ಳಿ ರಸದಲ್ಲಿ ಕೂದಲನ್ನು ಪೋಷಿಸುವ ಅಂಶವಿದ್ದು, ಇದರ ರಸವನ್ನು ಹಲವು ಹೇರ್‌ಕೇರ್ ಪ್ರಾಡಕ್ಟ್‌ಗಳಲ್ಲಿ ಬಳಲಾಗುತ್ತದೆ.ಇದು ಕೂದಲಿನ ಸಮಸ್ಯೆಗಳಿಗೆ ಮುಕ್ತಿ ನೀಡು ವುದು ಮಾತ್ರವಲ್ಲದೆ ಕೂದಲು ದಟ್ಟ ಹಾಗೂ ಉದ್ದವಾಗಿ ಬೆಳೆಯಲು ಸಹಾಯ ಮಾಡುತ್ತದೆ. ಹಾಗಾದರೆ ಈರುಳ್ಳಿ ರಸವು ಕೂದಲಿಗೆ ಯಾವೆಲ್ಲಾ ಪ್ರಯೋಜನ ನೀಡುತ್ತದೆ? ಇದನ್ನು ಬಳಸೋದು ಹೇಗೆ ಎಂದು ತಿಳಿಯಲು ಈ ಮಾಹಿತಿ ಓದಿ..


ನವದೆಹಲಿ: ಹೊಳೆಯುವ ಮತ್ತು ಉದ್ದವಾದ ಕೂದಲನ್ನು ಪಡೆಯಬೇಕೆಂಬ ಆಸೆ ಹೆಚ್ಚಿನವರಿಗೆ ಇರುತ್ತದೆ. ಹಾಗಾಗಿ ಕೆಲವು ಮಹಿಳೆಯರು ಕೂದಲಿನ ಕಾಳಜಿಗೆ (Hair Care Tips) ಹೆಚ್ಚು ನಿಗಾವಹಿಸಿ ಮನೆಯಲ್ಲೇ ನೈಸ ರ್ಗಿಕ ರೀತಿಯಲ್ಲಿ ಆರೈಕೆ ಮಾಡುತ್ತಾರೆ. ಅದರಲ್ಲೂ ಅನಾದಿ ಕಾಲದಿಂದ ಲೂ ಮನೆಮದ್ದಾಗಿ ಬಳಕೆ ಮಾಡುವ ಈರುಳ್ಳಿ ರಸವು (Onion Juice) ಕೂದಲಿನ ಆರೈಕೆಗೆ ಬಹಳ ಉತ್ತಮ. ಅಡುಗೆಯಲ್ಲಿ ಬಳಸುವ ಈ ಈರುಳ್ಳಿ ರಸದಲ್ಲಿ ಕೂದಲನ್ನು ಪೋಷಿಸುವ ಅಂಶವಿದ್ದು, ಇದರ ರಸವನ್ನು ಹಲವು ಹೇರ್‌ಕೇರ್ ಪ್ರಾಡಕ್ಟ್‌ಗಳಲ್ಲಿ ಬಳಲಾಗುತ್ತದೆ. ಇದು ಕೂದಲಿನ ಸಮಸ್ಯೆಗಳಿಗೆ ಮುಕ್ತಿ ನೀಡುವುದು ಮಾತ್ರವಲ್ಲದೆ ಕೂದಲು ದಟ್ಟ ಹಾಗೂ ಉದ್ದ ವಾಗಿ ಬೆಳೆಯಲು ಸಹಾಯ ಮಾಡುತ್ತದೆ. ಹಾಗಾದರೆ ಈರುಳ್ಳಿ ರಸವು ಕೂದಲಿಗೆ ಯಾವೆಲ್ಲಾ ಪ್ರಯೋಜನ ನೀಡುತ್ತದೆ? ಇದನ್ನು ಬಳಸೋದು ಹೇಗೆ ಎಂದು ತಿಳಿಯಲು ಈ ಮಾಹಿತಿ ಓದಿ..
ಕೂದಲು ಉದುರುವ ಸಮಸ್ಯೆ ಇದ್ದಲ್ಲಿ ಈರುಳ್ಳಿ ರಸವನ್ನು ಹಚ್ಚಿಕೊಳ್ಳು ವುದು ಪ್ರಯೋಜನಕಾರಿ ಎಂದು ಕೆಲವು ವೈದ್ಯಕೀಯ ವರದಿಗಳು ಬಹಿರಂಗಪಡಿಸಿವೆ. ಈರುಳ್ಳಿಯಲ್ಲಿರುವ ಸಲ್ಫರ್ ಅಂಶವು ಕಾಲಜನ್ ಉತ್ಪಾದನೆಗೆ ನೆರವಾಗಿ ಇದು ಆರೋಗ್ಯಕರ ಕೂದಲಿಗೆ ಹೆಚ್ಚು ನೆರವಾಗುತ್ತದೆ. ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುವುದಷ್ಟೇ ಅಲ್ಲದೇ ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ.
ರಕ್ತದ ಪೂರೈಕೆ ಹೆಚ್ಚಿಸುತ್ತದೆ:
ಕೂದಲು ಮತ್ತು ನೆತ್ತಿಗೆ ಈರುಳ್ಳಿ ರಸವನ್ನು ಹಚ್ಚುವುದರಿಂದ ಕೂದಲು ಕಿರುಚೀಲಗಳಿಗೆ ರಕ್ತ ಪೂರೈಕೆ ಹೆಚ್ಚಾಗುತ್ತದೆ,.ಇದರಲ್ಲಿ ಇರುವ ವಿಟಮಿನ್ ಹಾಗೂ ಖನಿಜಾಂಶಗಳು ನೇರವಾಗಿ ಕೂದಲಿನ ಕಿರುಚೀಲಗಳನ್ನು ತಲುಪಿ ಕೂದಲಿಗೆ ಪೋಷಣೆ ನೀಡುವುದು.
ಉರಿಯೂತವನ್ನು ಕಡಿಮೆ ಮಾಡುತ್ತದೆ:
ಈರುಳ್ಳಿ ರಸದಲ್ಲಿ ಉರಿಯೂತ ವಿರೋಧಿ ಗುಣಲಕ್ಷಣ ಇದ್ದು ಕೂದಲಿನ ಸಮಸ್ಯೆಗೆ ಪರಿಹಾರ ಒದಗಿಸುತ್ತದೆ. ಇದರಲ್ಲಿರುವ ಉರಿಯುತದ ಗುಣವು ನಿಮ್ಮ ನೆತ್ತಿಯ ಉರಿಯುತದ ಸಮಸ್ಯೆಯನ್ನು ಶಮನಗೊಳಿಸಿ ಕೂದಲಿನ ಬೆಳವಣಿಗೆಗೆ ಅಡ್ಡಿಯಾಗುವಂತಹ ಯಾವುದೇ ಉರಿಯೂತ ಅಥವಾ ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ.
ಕೂದಲು ಬೆಳವಣಿಗೆಗೆ ಸಹಾಯ ಮಾಡುತ್ತದೆ:
ಸಲ್ಫರ್, ಕಾಲಜನ್ ಉತ್ಪಾದನೆಗೆ ಈರುಳ್ಳಿ ರಸವು ಪ್ರಮುಖವಾಗಿದ್ದು ಇದು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಈರುಳ್ಳಿ ರಸವು, ಹೊಸ ಕೂದಲು ಬೆಳೆಯಲು ಕೂದಲಿನ ಬೇರುಗಳನ್ನು ಉತ್ತೇಜಿಸಲು ಹಾಗೂ ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ
ತಲೆ ಹೊಟ್ಟು ನಿವಾರಣೆ:
ಈರುಳ್ಳಿ ರಸದಲ್ಲಿ ಬ್ಯಾಕ್ಟೀರಿಯ ವಿರೋಧಿ ಗುಣಲಕ್ಷಣಗಳು ಇದ್ದು ತಲೆಯ ಚರ್ಮದಲ್ಲಿ ಉಂಟಾಗುವ ಸಮಸ್ಯೆ,ತಲೆಹೊಟ್ಟು ಹೋಗಲಾಡಿಸಲು ಕೂದಲು ಉದುರುವಿಕೆಗೆ ಕಾರಣವಾಗುವ ಸಮಸ್ಯೆಗಳನ್ನು ನಿವಾರಿಸುವಲ್ಲಿ ಸಹಾಯ ಮಾಡುತ್ತದೆ.
ಹೈಡ್ರೇಟ್ ಆಗಿ ಇರಿಸುತ್ತದೆ:
ಕೂದಲಿಗೆ ಈರುಳ್ಳಿ ರಸವನ್ನು ಹಚ್ಚಿಕೊಂಡರೆ ಅದರಲ್ಲಿ ಇರುವ ಮಾಯಿ ಶ್ಚರೈಸರ್ ಗುಣವು ನಿಮ್ಮ ಕೂದಲನ್ನು ಹೈಡ್ರೇಟ್ ಆಗಿ ಇರಿಸುತ್ತದೆ. ಇದರಿಂದ ಕೂದಲಿಗೆ ತನ್ನ ನೈಸರ್ಗಿಕ ಬಣ್ಣ ಪಡೆಯಲು ಸಹಕಾರಿ ಆಗಲು ನೆರವಾಗುವುದು.
ಇದನ್ನು ಓದಿ: White Hair: ಯೌವನದಲ್ಲೇ ಬಿಳಿಗೂದಲು; ಏನಿದಕ್ಕೆ ಪರಿಹಾರ?
ಹೊಳಪನ್ನು ನೀಡುತ್ತದೆ:
ಈರುಳ್ಳಿ ಯಲ್ಲಿರುವ ಪೋಷಕಾಂಶಗಳು ನಿಮ್ಮ ಕೂದಲಿಗೆ ನೈಸರ್ಗಿಕ ಹೊಳಪನ್ನು ನೀಡಿ ಇದು ಆರೋಗ್ಯಕರ ಮತ್ತು ಹೆಚ್ಚು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ.ಹಾಗಾಗಿ ವಾರದಲ್ಲಿ ಒಮ್ಮೆಯಾದರೂ ಇದನ್ನು ಬಳಕೆ ಮಾಡುವ ಅಭ್ಯಾಸ ಮಾಡಿಕೊಳ್ಳಿ.
ಬಳಕೆ ಹೇಗೆ?
ಬೇಕಾದ ಪ್ರಮಾಣದಷ್ಟು ಈರುಳ್ಳಿಯನ್ನು ತೆಗೆದುಕೊಂಡು ಸಿಪ್ಪೆ ತೆಗೆದು ಕತ್ತರಿಸಿಕೊಳ್ಳಿ. ಬಳಿಕ ಅದನ್ನು ಬ್ಲೆಂಡರ್ ನಲ್ಲಿ ಹಾಕಿ ಅದರ ರಸವನ್ನು ತೆಗೆದು ನೇರವಾಗಿ ನಿಮ್ಮ ನೆತ್ತಿಗೆ ಅನ್ವಯಿಸಿ,ಕನಿಷ್ಠ 30 ನಿಮಿಷಗಳ ಹಾಗೆ ಬಿಡಿ. ಉತ್ತಮ ಫಲಿತಾಂಶಕ್ಕಾಗಿ, ಈರುಳ್ಳಿ ರಸವನ್ನು ವಾರಕ್ಕೆ 2-3 ಬಾರಿ ನಿಮ್ಮ ನೆತ್ತಿಗೆ ಹಚ್ಚಿಕೊಳ್ಳಿ. ಹೀಗೆ ನಿರಂತರವಾಗಿ ಹಚ್ಚಿದರೆ ನಿಮ್ಮ ಕೂದಲು ದಟ್ಟವಾಗಿ ಬೆಳೆಯಲಿದೆ
ಕೊಬ್ಬರಿ ಎಣ್ಣೆಯೊಂದಿಗೆ ಬಳಸಿ:
ಕೂದಲ ಆರೈಕೆಗೆ ಕೊಬ್ಬರಿ ಎಣ್ಣೆಯು ಅತ್ಯುತ್ತಮ ಆಯ್ಕೆಯಾಗಿದ್ದು ಈರುಳ್ಳಿ ರಸದೊಂದಿಗೆ ಬಳಸಬಹುದು. ಈರುಳ್ಳಿ ರಸವನ್ನು ಬಿಸಿಮಾಡಿ ಬಳಿಕ ಕೊಬ್ಬರಿ ಎಣ್ಣೆಯೊಂದಿಗೆ ಮಿಶ್ರಣ ಮಾಡಿ ಬಳಿಕ ತಲೆಗೆ ಹಚ್ಚಿಕೊಳ್ಳಿ. ಸುಮಾರು ಒಂದು ಗಂಟೆ ಹಾಗೇ ಬಿಟ್ಟು ಬಳಿಕ ಉಗುರು ಬೆಚ್ಚನೆಯ ನೀರು ಮತ್ತು ಶಾಂಪೂ ಬಳಸಿ ತೊಳೆದುಕೊಳ್ಳಿ.