ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸೂಕ್ತ ರಸ್ತೆ ಇಲ್ಲದೆ ಗಂಡನ ಮನೆಗೆ ತೆರಳಲು ಲೆಹೆಂಗಾದಲ್ಲಿ ಬರೋಬ್ಬರಿ 18 ಕಿಲೋ ಮೀಟರ್‌ ನಡೆದ ನವವಧು! ವಿಡಿಯೊ ವೈರಲ್‌

Viral Video: ಉತ್ತರಾಖಂಡದಲ್ಲಿ ವಧು ತನ್ನ ಆಲಂಕಾರಿಕ ಉಡುಪಿನಲ್ಲೇ ಸುಮಾರು 18 ಕಿಲೋ ಮೀಟರ್ ಬೆಟ್ಟಗುಡ್ಡದ ಕಠಿಣ ರಸ್ತೆ ಮೂಲಕ ಕಾಲ್ನಡಿಗೆಯಲ್ಲೇ ಸಾಗಿರುವ ಘಟನೆ ನಡೆದಿದೆ. ಈ ಪರಿಶ್ರಮ ಯಾಕೆ ಎನ್ನುವ ಕುತೂಹಲ ನಿಮಗೆ ಇರಬಹುದು. ಏಕೆಂದರೆ ಆಕೆಯ ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ರಸ್ತೆಯೇ ಇಲ್ಲ. ಸ್ಥಳೀಯ ನಿವಾಸಿಗಳನ್ನು ವರ್ಷಗಳಿಂದ ಕಾಡುತ್ತಿರುವ ಸಮಸ್ಯೆಯ ಬಗ್ಗೆ ಧ್ವನಿ ಎತ್ತಲು ಆಕೆ ಕಾಲ್ನಡಿಗೆಯಲ್ಲೇ ತೆರಳಿದ್ದಾರೆ.

ಮದುವೆ ಆಲಂಕಾರದಲ್ಲೇ 18 ಕಿ.ಮೀ. ನಡೆದು ಸಾಗಿದ ವಧು ಶರ್ಮಿಳಾ

ಡೆಹ್ರಾಡೂನ್, ಅ. 25: ಸಾಮಾನ್ಯವಾಗಿ ಮದುವೆ ಮುಗಿದ ತಕ್ಷಣ ವಧು ದುಬಾರಿ ಕಾರಿನಲ್ಲಿ ಅಥವಾ ಅಲಂಕೃತಗೊಂಡ ವಾಹನಗಳಲ್ಲಿ ಗಂಡನ ಮನೆಗೆ ತೆರುಳುವ ಪದ್ದತಿ ಇದೆ. ಆದರೆ ಉತ್ತರಾಖಂಡದಲ್ಲಿ ವಧು ಮಾತ್ರ ತನ್ನ ಆಲಂಕಾರಿಕ ಉಡುಪಿನಲ್ಲೇ ಸುಮಾರು 18 ಕಿಲೋ ಮೀಟರ್ ಬೆಟ್ಟಗುಡ್ಡದ ಕಠಿಣ ರಸ್ತೆ ಮೂಲಕ ಕಾಲ್ನಡಿಗೆಯಲ್ಲೇ ಸಾಗಿದ್ದಾರೆ. ಈ ಪರಿಶ್ರಮ ಯಾಕೆ ಎನ್ನುವ ಕುತೂಹಲ ನಿಮಗೆ ಇರಬಹುದು. ಏಕೆಂದರೆ ಅವರ ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ರಸ್ತೆಯೇ ಇಲ್ಲ. ಸ್ಥಳೀಯ ನಿವಾಸಿಗಳನ್ನು ವರ್ಷಗಳಿಂದ ಕಾಡುತ್ತಿರುವ ಸಮಸ್ಯೆಯ ಬಗ್ಗೆ ಧ್ವನಿ ಎತ್ತಲು ಆಕೆ ಕಾಲ್ನಡಿಗೆಯಲ್ಲೇ (Viral News) ತೆರಳಿದ್ದಾರೆ. ಸದ್ಯ ಈ ವಿಡಿಯೊ ವೈರಲ್‌ ಆಗಿದೆ.

ಗ್ರಾಮಸ್ಥರು ವರ್ಷಗಳಿಂದ ಎದುರಿಸುತ್ತಿರುವ ಸಮಸ್ಯೆಯೊಂದನ್ನು ಈ ಘಟನೆ ಎತ್ತಿ ತೋರಿಸಿದೆ. ವಧು ತನ್ನ ಮದುವೆಯ ಉಡುಪಿನಲ್ಲೇ ಸುಮಾರು 18 ಕಿಲೋ ಮೀಟರ್ ನಡೆದು ಅತ್ತೆಮನೆ ತಲುಪಬೇಕಾಯಿತು.

ವಿಡಿಯೊ ನೋಡಿ:



ನವವಧುವೊಬ್ಬರು ಪತಿಯ ಮನೆಗೆ ತಲುಪಲು, ಭಾರವಾದ ಮದುವೆ ಲೆಹೆಂಗಾ ತೊಟ್ಟೇ ಕಾಲ್ನಡಿಗೆಯಲ್ಲಿ ತೆರಳಿದ್ದಾರೆ. ಬರೋಬ್ ​ಬುಲ್ಹಾರ್ ಗ್ರಾಮದ ಶರ್ಮಿಳಾ ಈ ಸಾಹಸ ಮೆರೆದವರು. ಡೆಹ್ರಾಡೂನ್‌ ಸಮೀಪದ ಉಂದಾವಾ ಎಂಬ ದೂರದ ಹಳ್ಳಿಯಲ್ಲಿರುವ ತಮ್ಮ ಅತ್ತೆಯ ಮನೆಗೆ ತಲುಪಲು ಲೋಖಂಡಿಯಿಂದ ಉಂದಾವಾವರೆಗೆ ಕಾಲ್ನಡಿಗೆಯಲ್ಲೇ ಪ್ರಯಾಣ ಬೆಳೆಸಿದ್ದಾರೆ.

ಬುಲ್ಹಾರ್ ಗ್ರಾಮದಿಂದ ಡೆಹ್ರಾಡೂನ್ ಸಮೀಪದ ಉಂದಾವಾ ಪ್ರದೇಶಕ್ಕೆ ತೆರಳಲು ಸರಿಯಾದ ರಸ್ತೆ ಇಲ್ಲದ ಕಾರಣ ಕಾಲ್ನಡಿಗೆಯಲ್ಲೇ ಹೋಗಬೇಕಾಯಿತು. ಈ ಪ್ರಯಾಣದ ವೇಳೆ, ಗ್ರಾಮಸ್ಥರಿಗೆ ಇಂತಹ ಕಷ್ಟಗಳು ಎದುರಾಗದಂತೆ ನೋಡಿಕೊಳ್ಳಲು ರಸ್ತೆಯೊಂದನ್ನು ನಿರ್ಮಿಸಿ ಕೊಡುವಂತೆ ಅವರು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ ಮನವಿ ಕೂಡ ಮಾಡಿದ್ದಾರೆ

ನೇಪಾಳ ಪ್ರವಾಹದಲ್ಲಿ ಮೃತಪಟ್ಟ ಮಹಿಳೆಯ ಚಿನ್ನದ ಓಲೆ ಕದ್ದ ಕಿಡೀಗೆಡಿಗಳು!

ಶರ್ಮಿಳಾ ತೆರಳುತ್ತಿರುವಾಗ ಗ್ರಾಮಸ್ಥರು ವಿಡಿಯೊ ಚಿತ್ರೀಕರಿಸಿದ್ದಾರೆ. ಅದರಲ್ಲಿ ಶರ್ಮಿಳಾ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ ನೇರವಾಗಿ ಭಾವುಕ ಮನವಿ ಮಾಡಿದ್ದಾರೆ. ​"ನಮ್ಮ ಗ್ರಾಮಕ್ಕೆ ತಲುಪಲು ರಸ್ತೆ ಇಲ್ಲದೆ ಅನುಭವಿಸುತ್ತಿರುವ ಕಷ್ಟ ಅಷ್ಟಿಷ್ಟಲ್ಲ. ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ವ್ಯವಸ್ಥೆ ಸರಿಪಡಿಸಿʼʼ ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಕೇವಲ ಮದುವೆ ಸಮಾರಂಭ ಮಾತ್ರವಲ್ಲ, ಗರ್ಭಿಣಿಯರು, ವೃದ್ಧರು ಹಾಗೂ ರೋಗಿಗಳಿಗೆ ತುರ್ತು ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

​ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೊ ವೈರಲ್ ಆಗಿದ್ದು, ಅನೇಕರು ತಮಗಾದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಹಳ್ಳಿ ಪ್ರದೇಶಕ್ಕೆ ಮೂಲಸೌಕರ್ಯ ಒದಗಿಸುವಂತೆ ಆಗ್ರಹಿಸಿದ್ದಾರೆ.