ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ್​ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

AI Robot Attacks: ಟೆಸ್ಟಿಂಗ್‌ ವೇಳೆ ಕೆಲಸಗಾರನ ಮೇಲೆ AI ರೋಬೋಟ್ ಡೆಡ್ಲಿ ಅಟ್ಯಾಕ್‌! ವಿಡಿಯೊ ಇದೆ

AI Robot Attacks: ಚೀನಾದ ಕಾರ್ಖಾನೆಯೊಂದರಲ್ಲಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯ ಕೃತಕ ಬುದ್ಧಿಮತ್ತೆ ಮತ್ತು ರೋಬೋಟಿಕ್ಸ್‌ನ ಸಂಭಾವ್ಯ ಅಪಾಯಗಳ ಬಗ್ಗೆ ಚರ್ಚೆಗೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋವನ್ನು ಜನರು ಹೆಚ್ಚು ಶೇರ್‌ ಮಾಡುತ್ತಿದ್ದಾರೆ. ಮಾನವ ರೂಪದ ರೋಬೋಟ್ ತನ್ನ ನಿರ್ವಾಹಕರ ಮೇಲೆ ಅನಿರೀಕ್ಷಿತವಾಗಿ ದಾಳಿ ಮಾಡುವ ದೃಶ್ಯವು ರೋಬೋಟ್‌ಗಳ ವೇಗವಾದ ಅಭಿವೃದ್ಧಿಯ ಬಗ್ಗೆ ಆತಂಕವನ್ನು ಹುಟ್ಟುಹಾಕಿದೆ.

ಕಾರ್ಖಾನೆಯ ಕೆಲಸಗಾರನ ಮೇಲೆ ರೋಬೋಟ್  ಡೆಡ್ಲಿ ಅಟ್ಯಾಕ್‌!

Profile Sushmitha Jain May 7, 2025 4:32 PM

ಬೀಜಿಂಗ್: ಚೀನಾದ ಕಾರ್ಖಾನೆಯೊಂದರಲ್ಲಿ (Chinese Factory) ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯ ಕೃತಕ ಬುದ್ಧಿಮತ್ತೆ (Artificial Intelligence) ಮತ್ತು ರೋಬೋಟಿಕ್ಸ್‌ನ (Robotics) ಸಂಭಾವ್ಯ ಅಪಾಯಗಳ ಬಗ್ಗೆ ಚರ್ಚೆಗೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ (Social Media) ಈ ವಿಡಿಯೋವನ್ನು ಜನರು ಹೆಚ್ಚು ಶೇರ್‌ ಮಾಡುತ್ತಿದ್ದಾರೆ. ಮಾನವ ರೂಪದ ರೋಬೋಟ್ ತನ್ನ ನಿರ್ವಾಹಕರ ಮೇಲೆ ಅನಿರೀಕ್ಷಿತವಾಗಿ ದಾಳಿ ಮಾಡುವ ದೃಶ್ಯವು ರೋಬೋಟ್‌ಗಳ ವೇಗವಾದ ಅಭಿವೃದ್ಧಿಯ ಬಗ್ಗೆ ಆತಂಕವನ್ನು ಹುಟ್ಟುಹಾಕಿದೆ. ಚೀನಾದ ಕಾರ್ಖಾನೆಯಲ್ಲಿ ದಾಖಲಾದ ಈ ವಿಡಿಯೋದಲ್ಲಿ, ಯುನಿಟ್ರೀ H1 ಮಾನವ ರೂಪದ ರೋಬೋಟ್‌ವೊಂದು ದಿಢೀರ್ ತಾಂತ್ರಿಕ ದೋಷಕ್ಕೊಳಗಾಗಿದೆ. ಇದರಿಂದಾಗಿ ರೋಬೋಟ್‌ಗಳ ಸುರಕ್ಷತೆ ಮತ್ತು ವಿಶ್ವಾಸಾರ್ಹತೆಯ ಬಗ್ಗೆ ಗಂಭೀರ ಪ್ರಶ್ನೆಗಳು ಎದುರಾಗಿವೆ. ವಿಡಿಯೋದಲ್ಲಿ, ಇಬ್ಬರು ವ್ಯಕ್ತಿಗಳು ರೋಬೋಟ್‌ನ ಚಲನೆಗಳನ್ನು ಎಚ್ಚರಿಕೆಯಿಂದ ಗಮನಿಸುತ್ತಿರುವುದು ಕಂಡುಬಂದಿದೆ. ಆದರೆ, ರೋಬೋಟ್ ಒಮ್ಮಿಂದೊಮ್ಮೆ ನಿಯಂತ್ರಣ ಕಳೆದುಕೊಂಡು, ತನ್ನ ಕೈಕಾಲುಗಳನ್ನು ಅಸ್ತವ್ಯಸ್ತವಾಗಿ ಚಲಿಸಲಾರಂಭಿಸಿತು.

ರೋಬೋಟ್‌ನ ಅನಿಯಂತ್ರಿತ ಚಲನೆಗಳಿಂದ ತಪ್ಪಿಸಿಕೊಳ್ಳಲು ವ್ಯಕ್ತಿಗಳು ಓಡಾಡಿದಾಗ, ರೋಬೋಟ್ ಮುಂದಕ್ಕೆ ಒರಗಿ, ತನ್ನ ಸ್ಟ್ಯಾಂಡ್‌ನೊಂದಿಗೆ ಕಂಪ್ಯೂಟರ್ ಮತ್ತು ಇತರ ವಸ್ತುಗಳನ್ನು ನೆಲಕ್ಕೆ ಬೀಳಿಸಿದೆ. ಅಂತಿಮವಾಗಿ, ಒಬ್ಬ ವ್ಯಕ್ತಿ ಮಧ್ಯಪ್ರವೇಶಿಸಿ, ರೋಬೋಟ್‌ನ ಸ್ಟ್ಯಾಂಡ್ ಅನ್ನು ಸರಿಪಡಿಸುವ ಮೂಲಕ ಅದನ್ನು ಸ್ಥಿರಗೊಳಿಸಲು ಯತ್ನಿಸಿದ.



ಈ ಸುದ್ದಿಯನ್ನು ಓದಿ: Pahalgam Terror Attack: ಉಗ್ರರ ದಾಳಿ ಕೇಸ್; ಬುಲೆಟ್ ಪ್ರೂಫ್ ಜಾಕೆಟ್ ಧರಿಸಿ ಓಡಾಡುತ್ತಿದ್ದ ಶಂಕಿತ ಅರೆಸ್ಟ್

ಈ ಘಟನೆಯು ರೋಬೋಟ್‌ಗಳ ದಂಗೆಯ ಭಯವನ್ನು ಹುಟ್ಟುಹಾಕಿದ್ದು, ಅನೇಕ ವೀಕ್ಷಕರು ಇದನ್ನು ಟರ್ಮಿನೇಟರ್ ಚಿತ್ರದೊಂದಿಗೆ ಹೋಲಿಸಿದ್ದಾರೆ. ಯಂತ್ರಗಳು ಜಗತ್ತನ್ನು ವಶಪಡಿಸಿಕೊಳ್ಳುವ ದಿನ ದೂರವಿಲ್ಲವೇ ಎಂಬ ಆತಂಕ ವ್ಯಕ್ತವಾಗಿದೆ. ಈ ಮೊದಲೂ ಯುನಿಟ್ರೀ ರೋಬೋಟ್‌ಗಳು ಹಲವಾರು ಘಟನೆಗಳಿಂದ ಸುದ್ದಿಯಾಗಿವೆ. ಈ ವರ್ಷದ ಫೆಬ್ರವರಿಯಲ್ಲಿ, ಚೀನಾದ ತಿಯಾಂಜಿನ್‌ನ ಸ್ಪ್ರಿಂಗ್ ಫೆಸ್ಟಿವಲ್ ಗಾಲಾದಲ್ಲಿ ಮಾನವ ರೂಪದ ರೋಬೋಟ್ ಒಂದು ಗುಂಪಿನ ಮೇಲೆ ದಾಳಿ ಮಾಡಿದ ಆಘಾತಕಾರಿ ದೃಶ್ಯ ಸೆರೆಯಾಗಿತ್ತು. ರೋಬೋಟ್, ರಂಗುರಂಗಿನ ಜಾಕೆಟ್ ಧರಿಸಿ, ಗೋಡೆಯ ಹಿಂದೆ ನಿಂತಿದ್ದ ಜನರ ಕಡೆಗೆ ದಿಢೀರ್ ಧಾವಿಸಿತ್ತು.

ಇದಕ್ಕೂ ಮೊದಲು, ಟೆಸ್ಲಾದ ಟೆಕ್ಸಾಸ್ ಕಾರ್ಖಾನೆಯಲ್ಲಿ ರೋಬೋಟ್, ಒಬ್ಬ ಎಂಜಿನಿಯರ್ ಮೇಲೆ ದಾಳಿ ಮಾಡಿದ ಘಟನೆಯೂ ಸುದ್ದಿಯಾಗಿತ್ತು. ಇಂತಹ ಅನೇಕ ಪ್ರಕರಣಗಳಲ್ಲಿ ಸಾಫ್ಟ್‌ವೇರ್ ದೋಷವೇ ಮೂಲ ಕಾರಣವಾಗಿದ್ದು, ಕೃತಕ ಬುದ್ಧಿಮತ್ತೆಯ ಅಭಿವೃದ್ಧಿಯಲ್ಲಿ ಕಟ್ಟುನಿಟ್ಟಾದ ಪರೀಕ್ಷೆ ಮತ್ತು ಗುಣಮಟ್ಟ ನಿಯಂತ್ರಣದ ಮಹತ್ವವನ್ನು ಒತ್ತಿಹೇಳಿದೆ.