New Year: ಹೊಸ ವರ್ಷಕ್ಕೆ ಟ್ರಿಪ್ ಪ್ಲ್ಯಾನ್ ಮಾಡ್ತಿದ್ದೀರಾ?; ಇಲ್ಲಿದೆ ನೋಡಿ ಟಿಪ್ಸ್
2025 ಹೊಸ ವರ್ಷಕ್ಕೆ ಇನೇನು ನಾಲ್ಕೇ ನಾಲ್ಕು ದಿನಗಳಿವೆ. ಈಗಾಗಲೇ ಕೆಲವರು ನ್ಯೂ ಇಯರ್ ಸೆಲೆಬ್ರೇಷನ್ ಗೆ ಪ್ಲ್ಯಾನ್ ಮಾಡಿರುತ್ತಾರೆ. ನೀವು ಏನಾದರೂ ನ್ಯೂ ಇಯರ್ ಸೆಲೆಬ್ರೇಶನ್‌ಗಾಗಿ ತಯಾರಿ ನಡೆಸುತ್ತಿದ್ದರೆ, ಈ ಸ್ಥಳಗಳಿಗೆ ಭೇಟಿ ನೀಡಿ ಬನ್ನಿ. ಹೊಸ ವರ್ಷದ ರಜೆಗೆ ರೋಮಾಂಚಕ ತಾಣಗಳ ಪ್ರವಾಸ ಮಾಡಿದಂತಾಗುತ್ತದೆ, ನಿಮ್ಮ ಮನ ಹಾಗೂ ಮನಸ್ಸಿಗೂ ರಿಪ್ರೆಶ್ ಸಿಕ್ಕಿದಂತಾಗುತ್ತದೆ
ಸಾಂಧರ್ಬಿಕ ಚಿತ್ರ -
ಬೆಂಗಳೂರು: ಸಾಕಷ್ಟು ಮಂದಿಗೆ ಟೂರ್ (Tour) ಎಂದರೆ ಬಲು ಖುಷಿ. ಅದರಲ್ಲೂ ಕೆಲವರಿಗೆ ನ್ಯೂ ಇಯರ್ - ಹೊಸ ವರ್ಷನಂತಹ (New Year) ಸಮಯದಲ್ಲಿ ಸ್ನೇಹಿತರ ಜೊತೆ ಟ್ರಿಪ್ ಹೋಗಬೇಕು ಎಂಬ ಆಸೆ ಇರುತ್ತದೆ. ನೀವು ಕೂಡಾ ಇಂತಹ ಯೋಚನೆಯಲ್ಲಿ ಇರಬಹುದು. ಒಂದೊಮ್ಮೆ ಇಂತಹ ಯೋಚನೆಯಲ್ಲಿ ನೀವಿದ್ದರೆ ಒಂದಷ್ಟು ಸುಂದರ ತಾಣಗಳ ಪಟ್ಟಿ ಇಲ್ಲಿದೆ. ಇವುಗಳು ಖುಷಿ ನೀಡುವ ತಾಣಗಳ ಜತೆಗೆ ಕಡಿಮೆ ಖರ್ಚಿನಲ್ಲಿ ಉತ್ತಮ ಪ್ರಯಾಣದ ಅನುಭವವನ್ನು ಪಡೆದುಕೊಳ್ಳಬಹುದು. ಒಂದೊಮ್ಮೆ ಹೊಸ ವರ್ಷದ ಪ್ರವಾಸದ ಸಿದ್ಧತೆಯಲ್ಲಿ ನೀವಿದ್ದರೆ ಇವತ್ತಿನಿಂದಲೇ ಸಿದ್ಧತೆಯನ್ನು ಮಾಡಿಕೊಳ್ಳುವುದು ಒಳ್ಳೆಯದು.
ಗೋವಾ
ಹೊಸ ವರ್ಷದ ಸಂಭ್ರಮಾಚರಣೆಗೆ ಗೋವಾ ತುಂಬಾನೇ ಫೇಮಸ್ ಆಗಿದ್ದು, ಇಂದಿನ ಯುವಜನಕರಿಗೆ ಮೋಜು-ಮಸ್ತಿ ಮಾಡಲು ಹೇಳಿ ಮಾಡಿಸಿದ ಜಾಗ ಇದಾಗಿದೆ. ಅಲ್ಲದೇ ಅತೀ ಹೆಚ್ಚು ಜನ ಇಷ್ಟ ಪಟ್ಟು ಪ್ರವಾಸ ಹೋಗುವುದು ಕೂಡ ಈ ಪುಟ್ಟ ರಾಜ್ಯಕ್ಕೆ. ಇನ್ನು ಇಲ್ಲಿ ನೈಟ್ ಪಾರ್ಟಿ, ಪಬ್ ಎಂಬ ತುಂಬಾ ಚಾಯ್ಸ್. ಗೋವಾದಲ್ಲಿ ಹೊಸವರ್ಷವನ್ನು ಆಚರಿಸಲು ಪ್ರತ್ಯೇಕವಾದ ಸ್ಥಳಗಳಿದ್ದು, ನೈಟ್ ಔಟ್ ಪ್ರಿಯರಿಗಂತೂ ಗೋವಾ ಸ್ವರ್ಗವೇ ಸರಿ. ಇಲ್ಲಿ ಅಗ್ಗದ ಬೆಲೆಯಲ್ಲಿ ಮದ್ಯಪಾನ ದೊರೆಯುತ್ತದೆ. ಹಾಗೆಯೇ ಗೋವಾದ ರಮಣೀಯವಾದ ಕಡಲತೀರಗಳು, ಜಲಪಾತಗಳ ಸೌಂದರ್ಯವನ್ನು ಸವಿಯಬಹುದು.
New Year 2026: ಹೊಸ ವರ್ಷಕ್ಕಿರಲಿ ಹಳೆಯದಾಗದ ನಿರ್ಣಯಗಳು
ಗೋಕರ್ಣ
ಗೋಕರ್ಣ ಮನೋಕರವಾದ ಕಡಲತೀರಗಳಿಗೆ ತುಂಬಾನೇ ಫೇಮಸ್ ಆಗಿದ್ದು, ಹಚ್ಚ ಹಸಿರಿನಿಂದ ಕೂಡಿದ ಕಡಲತೀರಗಳ ಮಧ್ಯೆ ದಿನ ಕಳೆಯುವುದರಿಂದ ನಿಮ್ಮ ಮನಸ್ಸಿಗೆ ಆಹ್ಲಾದಕರ ಅನುಭವನ್ನುಂಟು ಮಾಡುತ್ತದೆ . ಅದರಲ್ಲೂ ಓಂ ಬೀಚ್ ಬಹಳ ಜನಪ್ರಿಯವಾಗಿದ್ದು, ಪ್ರತಿ ವರ್ಷ ಸಾವಿರಾರು ಪ್ರವಾಸಿಗರು ಓಂ ಬೀಚ್‌ನ ಸೌಂದರ್ಯ ಆಸ್ವಾದಿಸಲು ಬರುತ್ತಾರೆ. ಈ ಕಡಲತೀರದಲ್ಲಿ ಬಾಳೆಹಣ್ಣಿನ ದೋಣಿ, ಸರ್ಫಿಂಗ್, ಜೆಟ್ ಸ್ಕೀಯಿಂಗ್ ಇತ್ಯಾದಿ ವಾಟರ್ ಗೇಮ್ ಇದ್ದು, ಮೋಜು ಮಸ್ತಿಗೆ ಯಾವುದೇ ತೊಂದರೆ ಇಲ್ಲ.
ಪಾಂಡಿಚೇರಿ
ತಮಿಳುನಾಡಿನ ಪಾಂಡಿಚೇರಿಯು ನ್ಯೂ ಇಯರ್ ಸೆಲೆಬ್ರೇಷನ್ ಗೆ ಬೆಸ್ಟ್ ಆಯ್ಕೆ ಆಗಿದ್ದು, ಇದನ್ನು ಪುದುಚೇರಿಯು ಎಂದು ಕರೆಯುತ್ತಾರೆ. ಅಲ್ಲದೇ ಇದು ಅತ್ಯಂತ ರೋಮಾಂಚಕಾರಿ ಪಟ್ಟಣವಾಗಿದ್ದು, ನೈಟ್ ಪಾರ್ಟಿಗೆ ಪಾಂಡಿಚೇರಿಯಲ್ಲಿ ಹಲವಾರು ಆಯ್ಕೆಗಳಿದೆ. ಆಹ್ಲಾದಕರವಾದ ಕಡಲತೀರಗಳು, ಫ್ರೆಂಚ್ ರೆಸ್ಟೋರೆಂಟ್ ಮತ್ತು ಕೆಫೆಗಳು ಇಲ್ಲಿದ್ದು, ಈ ಪ್ರವಾಸಿ ತಾಣದಲ್ಲಿ ಹೊಸ ವರ್ಷವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಹಾಗೇ ಈ ತಾಣದ ಬೀಚ್ ಗಳ ನೆಲೆಯಾಗಿದ್ದು, ಪಾಂಡಿಚೇರಿ ಬೀಚ್, ಆಶ್ರಮ, ಪಾಂಡಿಚೇರಿ ಮ್ಯೂಸಿಯಂ, ಅದ್ಭುತವಾದ ಹಿಂದೂ ದೇವಾಲಯಗಳನ್ನು ನೋಡಿ ಬರಬಹುದು.
ಇನ್ನು ಇವುಗಳ ಹೊರತಾಗಿ ನಮ್ಮ ರಾಜಧಾನಿಯಾದ ಬೆಂಗಳೂರು ಕೂಡ ಹೊಸ ವರ್ಷ ಆಚರಣೆಗೆ ಫೇಮಸ್ ಆಗಿದ್ದು, ವರ್ಷಾರಂಭದಲ್ಲಿ ಈ ಎಂಜಿ ರಸ್ತೆ, ಚರ್ಚ್ ರೋಡ್ ನೂರಾರು ದೀಪಗಳಿಂದ ಕಂಗೊಳಿಸುತ್ತಿರುತ್ತದೆ. ದೊಡ್ಡ ದೊಡ್ಡ ಮಾಲ್‌ಗಳು, ರೆಸ್ಟೋರೆಂಟ್‌ಗಳು, ಪಬ್, ನಾನಾ ಅನೇಕ ಆಕರ್ಷಕವಾದ ತಾಣಗಳು ಇಲ್ಲಿವೆ. ರಾತ್ರಿಯ ಜೀವನವನ್ನು ಎಂಜಾಯ್ ಮಾಡಲು ಬೆಂಗಳೂರು ಹಲವಾರು ಅವಕಾಶಗಳಿದೆ.