ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಮಾನವ ದೇಹದಂತೆ ಕಾಣುವ ರೋಬೋಟ್ ವಿಡಿಯೊ ವೈರಲ್; ಇದು ಬಲು ಡೇಂಜರಸ್‌ ಅಂತೆ!

ಮನುಷ್ಯನಂತೆ ಹೋಲುವ ಹ್ಯೂಮನಾಯ್ಡ್ ರೋಬೋಟ್‍ನ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ಇದನ್ನು "ವಿಶ್ವದ ಮೊದಲ ಬಿಪೆಡಲ್, ಮಸ್ಕ್ಯುಲೋಸ್ಕೆಲೆಟಲ್ ಆಂಡ್ರಾಯ್ಡ್" ಎಂದು ಕರೆಯಲಾಗಿದೆ. ಕ್ಲೋನ್ ರೊಬೊಟಿಕ್ಸ್ ಪ್ರೋಟೋಕ್ಲೋನ್ ಎಂಬ ಮುಖವಿಲ್ಲದ ರೋಬೋಟ್‍ ಅನ್ನು ಅಭಿವೃದ್ಧಿಪಡಿಸಿದೆ. ಇದನ್ನು ಯಾವುದಕ್ಕೆ ಬಳಸಬಹುದು ಎಂಬುದನ್ನು ಕಂಪನಿ ವಿವರಿಸಿದೆ.

ಮನುಷ್ಯನಂತೆ ಹೋಲುವ ಹ್ಯೂಮನಾಯ್ಡ್ ರೋಬೋಟ್‍(Humanoid robot)ನ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ. ಅನೇಕ ವೀಕ್ಷಕರು ಇದನ್ನು ನೋಡಿ ಶಾಕ್‌ ಕೂಡ ಆಗಿದ್ದಾರೆ. ಕ್ಲೋನ್ ರೊಬೊಟಿಕ್ಸ್ ಅಭಿವೃದ್ಧಿಪಡಿಸಿದ, ಪ್ರೋಟೋಕ್ಲೋನ್ ಎಂಬ ಮುಖವಿಲ್ಲದ ಆಂಡ್ರಾಯ್ಡ್ ಅನ್ನು ಕೃತಕ ಸ್ನಾಯುಗಳು ಮತ್ತು ಕೀಲುಗಳನ್ನು ಒಳಗೊಂಡಿರುವ ಮಾನವ ಅಂಗರಚನೆಯನ್ನು ಹೋಲುವಂತೆ ವಿನ್ಯಾಸಗೊಳಿಸಲಾಗಿದೆ. ಎಕ್ಸ್‌ನಲ್ಲಿ ಇತ್ತೀಚೆಗೆ ಪೋಸ್ಟ್ ಮಾಡಲಾದ ವಿಡಿಯೊದಲ್ಲಿ, ಈ ರೋಬೋಟ್ ಅನ್ನು ತೂಗುಹಾಕಲಾಗಿದ್ದು, ಅದರ ಕೈಕಾಲುಗಳು, ಮೊಣಕೈಗಳು ಬಾಗಿದಂತೆ ಮತ್ತು ಅದರ ಕೈ ಕಾಲುಗಳು ಸಾಮಾನ್ಯ ಮನುಷ್ಯರ ಕೈಕಾಲುಗಳಿನಂತೆ ಮೂವ್‌ ಆಗುವುದು(Viral Video) ಸೆರೆಯಾಗಿದೆ.

ಕಂಪನಿಯು ತನ್ನ ಈ ಆವಿಷ್ಕಾರವನ್ನು ಹೊಗಳಿದರೂ, ಸೋಶಿಯಲ್ ಮೀಡಿಯಾ ನೆಟ್ಟಿಗರು ಇದನ್ನು ಕಂಡು ಶಾಕ್‌ ಆಗಿದ್ದಾರೆ"ಈ ವಿಡಿಯೊಗೆ ಈಗಾಗಲೇ 32 ದಶಲಕ್ಷಕ್ಕೂ ಹೆಚ್ಚು ವ್ಯೂವ್ಸ್ ಗಳಿಸಿದೆ. ಕಂಪನಿಯ ಪ್ರಕಾರ, ಪ್ರೋಟೋಕ್ಲೋನ್ ನಡೆಯುವುದು, ಮಾತನಾಡುವುದು ಮತ್ತು ಪಾತ್ರೆ ತೊಳೆಯುವುದು, ಲಾಂಡ್ರಿ ಮತ್ತು ಟೇಬಲ್ ಸೆಟ್ಟಿಂಗ್‍ನಂತಹ ಮನೆಕೆಲಸಗಳನ್ನು ಮಾಡುವ ಸಾಮರ್ಥ್ಯವನ್ನು ಹೊಂದಿದೆಯಂತೆ. ಇದು ಸ್ವಚ್ಛಗೊಳಿಸುವ ಕೆಲಸದ ಜೊತೆ ಹ್ಯಾಂಡ್‌ ಶೇಕ್‌ ಮಾಡುವುದು, ಸ್ಯಾಂಡ್ ವಿಚ್‍ಗಳನ್ನು ತಯಾರಿಸುವುದು, ಜ್ಯೂಸ್‍ಗಳನ್ನು ಗ್ಲಾಸ್‍ಗೆ ಸುರಿಯುವ ಕೆಲಸ ಕೂಡ ಮಾಡುತ್ತದೆಯಂತೆ.



ಪ್ರೋಟೋಕ್ಲೋನ್‍ನ ವಿನ್ಯಾಸವು ಮಾನವ ಅಂಗರಚನೆಯನ್ನು ಹೊಂದಿದೆ. ಇದರಲ್ಲಿ 206 ಪಾಲಿಮರ್ ಮೂಳೆಗಳು, ಜಾಯಿಂಟ್ಸ್‌, ಕೃತಕ ಮಯೋಫೈಬರ್ ಸ್ನಾಯುಗಳು ಮತ್ತು ಸಂವೇದಕ ಆಧಾರಿತ ನರಮಂಡಲವನ್ನು ಒಳಗೊಂಡಿದೆ. ಇನ್ನು ರಕ್ತದ ಬದಲು, ಅದರ ನಾಳಗಳು ಅದರ ಚಲನೆಗಳಿಗೆ ಶಕ್ತಿ ನೀಡಲು ನೀರನ್ನು ಪಂಪ್ ಮಾಡುತ್ತದೆಯಂತೆ. ದೃಷ್ಟಿ ಮತ್ತು ಪ್ರತಿಕ್ರಿಯೆಗಾಗಿ ರೋಬೋಟ್ ನಾಲ್ಕು ಡೆಪ್ತ್ ಕ್ಯಾಮೆರಾಗಳನ್ನು ಸಹ ಹೊಂದಿದೆ.

ಕ್ಲೋನ್ ರೊಬೊಟಿಕ್ಸ್‌ನ ಸೃಷ್ಟಿಯನ್ನು ಟೆಸ್ಲಾ ಅವರ ಆಪ್ಟಿಮಸ್ ರೋಬೋಟ್‍ಗೆ ಹೋಲಿಸಲಾಗುತ್ತಿದೆ, ಇದು ದೈನಂದಿನ ಕೆಲಸಗಳು, ಮಗುವನ್ನು ನೋಡಿಕೊಳ್ಳುವುದು, ನಾಯಿಯನ್ನು ಹೊರಗಡೆ ಕರೆದುಕೊಂಡು ಹೋಗುವಂತಹ ಕೆಲಸವನ್ನು ಮಾಡುತ್ತದೆ ಎಂದು ಎಲಾನ್‌ ಮಸ್ಕ್ ಹೇಳಿದ್ದಾರೆ. ಬೋಸ್ಟನ್ ಡೈನಾಮಿಕ್ಸ್ ಮತ್ತು ಮೆಟಾದಂತಹ ಇತರ ಕಂಪನಿಗಳು ಸಹ ಹ್ಯೂಮನಾಯ್ಡ್ ರೋಬೋಟ್‍ಗಳ ಮೇಲೆ ಕೆಲಸ ಮಾಡುತ್ತಿವೆ.

ಇತ್ತೀಚೆಗೆ ನಿಯೋ ಬೀಟಾ ಎಂಬ ರೊಬೊಟಿಕ್ ಹೋಮ್ ಅಸಿಸ್ಟೆಂಟ್ ಅನ್ನು ಪ್ರಾರಂಭಿಸಿದ 1ಎಕ್ಸ್‌ನ ಸಿಇಒ ಬರ್ನಟ್ ಬೊರ್ನಿಚ್, ಹ್ಯೂಮನಾಯ್ಡ್ ರೋಬೋಟ್‍ಗಳು ಶೀಘ್ರದಲ್ಲೇ ಗೃಹಬಳಕೆಯ ವಸ್ತುಗಳಾಗಲಿವೆ ಎಂಬ ನಂಬಿಕೆ ವ್ಯಕ್ತಪಡಿಸಿದ್ದಾರೆ. "ಭವಿಷ್ಯದಲ್ಲಿ ನೀವು ನಿಮ್ಮ ಬಟ್ಟೆ ಒಗೆಯಲು ನೀವು ಮನೆಯಲ್ಲಿ ಹ್ಯೂಮನಾಯ್ಡ್‌ಗಳನ್ನು ಇಟ್ಟುಕೊಳ್ಳುವ ಸಮಯ ತುಂಬಾ ಹತ್ತಿರದಲ್ಲಿದೆ, ಮತ್ತು ಇದರ ಬೆಲೆ ತುಂಬಾ ಕಡಿಮೆ ಇರುತ್ತದೆ" ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ:Elon Musk: ನನ್ನ ಮಗುವಿಗೆ ಎಲಾನ್‌ ಮಸ್ಕ್‌ ತಂದೆ ಎಂದ ಮಹಿಳೆ! 13 ಮಕ್ಕಳ ಅಪ್ಪನಾದರೆ ಮಸ್ಕ್‌?