ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Elon Musk: ನನ್ನ ಮಗುವಿಗೆ ಎಲಾನ್‌ ಮಸ್ಕ್‌ ತಂದೆ ಎಂದ ಮಹಿಳೆ! 13 ಮಕ್ಕಳ ಅಪ್ಪನಾದರೆ ಮಸ್ಕ್‌?

ಅಮೆರಿಕದ ಲೇಖಕಿ ಹಾಗೂ ಇನ್‌ಫ್ಲೂಯನ್ಸರ್‌ ಆಶ್ಲೇ ಸೇಂಟ್ ಕ್ಲೇರ್ ಹೇಳಿಕೆಯೊಂದನ್ನು ನೀಡಿದ್ದು, ಸದ್ಯ ವೈರಲ್‌ ಎಲ್ಲೆಡೆ ವೈರಲ್‌ ಆಗಿದೆ. ಆಶ್ಲೇ ಸೇಂಟ್ ಕ್ಲೇರ್ ಐದು ತಿಂಗಳ ಹಿಂದೆ ನನಗೆ ಮಗು ಜನಿಸಿದೆ. ಈ ಮಗುವಿನ ತಂದೆ ಎಲಾನ್‌ ಮಸ್ಕ್‌ ಎಂದು ಹೇಳಿದ್ದಾರೆ.

13 ಮಕ್ಕಳ ಅಪ್ಪನಾದರೆ ಮಸ್ಕ್‌? ತಾಯಿ ಯಾರು?

ಎಲಾನ್‌ ಮಸ್ಕ್‌

Profile Vishakha Bhat Feb 16, 2025 1:15 PM

ವಾಷಿಂಗ್ಟನ್‌: ಜಗತ್ತಿನ ಶ್ರೀಮಂತ ಉದ್ಯಮಿ ಎಲಾನ್‌ ಮಸ್ಕ್‌ (Elon Musk) ಒಂದೆಲ್ಲಾ ಒಂದು ರೀತಿಯಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಅಮೆರಿಕದ ಲೇಖಕಿ ಹಾಗೂ ಇನ್‌ಫ್ಲೂಯನ್ಸರ್‌ ಆಶ್ಲೇ ಸೇಂಟ್ ಕ್ಲೇರ್ ಹೇಳಿಕೆಯೊಂದನ್ನು ನೀಡಿದ್ದು, ಸದ್ಯ ವೈರಲ್‌ ಎಲ್ಲೆಡೆ ವೈರಲ್‌ ಆಗಿದೆ. ಆಶ್ಲೇ ಸೇಂಟ್ ಕ್ಲೇರ್ ಐದು ತಿಂಗಳ ಹಿಂದೆ ನನಗೆ ಮಗು ಜನಿಸಿದೆ. ಈ ಮಗುವಿನ ತಂದೆ ಎಲಾನ್‌ ಮಸ್ಕ್‌ ಎಂದು ಹೇಳಿದ್ದಾರೆ. ಫೆಬ್ರವರಿ 15 ರಂದು ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಈ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಟ್ವೀಟ್‌ನಲ್ಲಿ ಅವರು ಐದು ತಿಂಗಳ ಹಿಂದೆ ನಾನು ನನ್ನ ಮಗುವನ್ನು ಜಗತ್ತಿಗೆ ಸ್ವಾಗತಿಸಿದ್ದೇನೆ. ನಮ್ಮ ಮಗುವಿನ ಗೌಪ್ಯತೆ ಮತ್ತು ಸುರಕ್ಷತೆಯನ್ನು ರಕ್ಷಿಸಲು ನಾನು ಇದನ್ನು ಈ ಹಿಂದೆ ಬಹಿರಂಗಪಡಿಸಿರಲಿಲ್ಲ ಎಂದು ತಿಳಿಸಿದ್ದಾರೆ. ನಮ್ಮ ಮಗು ಸಾಮಾನ್ಯ ಮತ್ತು ಸುರಕ್ಷಿತ ವಾತಾವರಣದಲ್ಲಿ ಬೆಳೆಯಲು ನಾನು ಅವಕಾಶ ನೀಡಲು ಉದ್ದೇಶಿಸಿದ್ದೇನೆ. ಆ ಕಾರಣಕ್ಕಾಗಿ ಮಾಧ್ಯಮಗಳು ನಮ್ಮ ಮಗುವಿನ ಗೌಪ್ಯತೆಯನ್ನು ಗೌರವಿಸಬೇಕು ಮತ್ತು ಟ್ಯಾಬ್ಲಾಯ್ಡ್‌ಗಳು ಆಕ್ರಮಣಕಾರಿ ವರದಿ ಮಾಡುವುದನ್ನು ನಿಲ್ಲಿಸಬೇಕು ಎಂದು ನಾನು ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.



ತನ್ನ ಮಗುವಿನ ಹೆಸರನ್ನು ಬಹಿರಂಗಪಡಿಸಲು ನಿರಾಕರಿಸಿದ ಸೇಂಟ್ ಕ್ಲೇರ್, ಮಗು ಸಂತೋಷ ಮತ್ತು ಆರೋಗ್ಯವಾಗಿದೆ ಎಂದು ಹೇಳಿದ್ದಾರೆ. ತಮ್ಮ ಹಾಗೂ ಮಸ್ಕ್‌ ಸಂಬಂಧ 2023 ರಲ್ಲಿ ಪ್ರಾರಂಭವಾಯಿತು. ಎಕ್ಸ್‌ನಲ್ಲಿ ತಮಾಷೆಯಾಗಿ ಶುರುವಾದ ನಮ್ಮ ಗೆಳೆತನ ಇಲ್ಲಿಗೆ ಬಂದು ನಿಂತಿದೆ ಎಂದು ಅವರು ಹೇಳಿದ್ದಾರೆ. ಆಕೆ ಮಸ್ಕ್‌ ಮೇಲೆ ಆರೋಪವನ್ನು ಮಾಡಿದ್ದು, ತನ್ನ ಗರ್ಭಾವಸ್ಥೆಯಲ್ಲಿ ನಾನು ಸಂಪೂರ್ಣವಾಗಿ ಒಂಟಿಯಾಗಿದ್ದೆ. ಮಸ್ಕ್‌, ಯಾರೊಂದಿಗೂ ನನಗೆ ಮಾತನಾಡಲು ಬಿಡಲಿಲ್ಲ. ಹೆಚ್ಚಿನ ಭದ್ರತೆಯೊಂದಿಗೆ ಐಷಾರಾಮಿ ನ್ಯೂಯಾರ್ಕ್ ಅಪಾರ್ಟ್ಮೆಂಟ್ನಲ್ಲಿ ವಾಸಿಸಲು ವ್ಯವಸ್ಥೆ ಮಾಡಿದ್ದರು. ಅವರು ನನಗೆ ಭಾವನಾತ್ಮಕ ಬೆಂಬಲವನ್ನು ನೀಡಿಲ್ಲ ಎಂದು ಹೇಳಿದ್ದಾರೆ. "ಗೌಪ್ಯತೆ ಮತ್ತು ಭದ್ರತೆ" ಕಾರಣಗಳಿಗಾಗಿ ಜನನ ಪ್ರಮಾಣಪತ್ರದಿಂದ ಮಸ್ಕ್ ಹೆಸರನ್ನು ಕೈಬಿಡಬೇಕೆಂದು ಮಸ್ಕ್ ಅವರ ಹಣಕಾಸು ಸಲಹೆಗಾರ ಜೇರೆಡ್ ಬಿರ್ಚಾಲ್ ವಿನಂತಿಸಿದ್ದಾರೆ ಎಂದು ಅವರು ಆರೋಪಿಸಿದರು.

ಈ ಸುದ್ದಿಯನ್ನೂ ಓದಿ: Barack Obama: ಬರಾಕ್‌ ಒಬಾಮ ಒಬ್ಬ ಸಲಿಂಗಿ, ಆತನ ಹೆಂಡತಿ ಹೆಣ್ಣಲ್ಲ, ಗಂಡು! ಎಲಾನ್‌ ಮಸ್ಕ್‌ ತಂದೆಯಿಂದ ಇದೆಂತಾ ಹೇಳಿಕೆ!?

ಮಗು ಜನಿಸಿದ ಬಗ್ಗೆ ಎಲಾನ್‌ ಮಸ್ಕ್‌ ಇಲ್ಲಿಯವರೆಗೆ ಅಧಿಕೃತವಾಗಿ ಹೇಳಿಕೆ ನೀಡಿಲ್ಲ ಎಲಾನ್‌ ಮಸ್ಕ್‌ಗೆ ಈ ವರೆಗೆ ಮೂವರು ಗೆಳತಿಯರಿಂದ 12 ಮಕ್ಕಳಿದ್ದಾರೆ. ಮೊದಲ ಪತ್ನಿ ಜಸ್ಟಿನ್‌ಗೆ 6 ಮಕ್ಕಳು ಜನಿಸಿದ್ದರು. ಸಂಗೀತಗಾರ್ತಿ ಗ್ರೀಮ್ಸ್‌ಗೆ 3 ಮಕ್ಕಳು ಹುಟ್ಟಿದ್ದರೆ ಮಸ್ಕ್‌ ಅವರ ಕಂಪನಿಯಾದ ನ್ಯೂರಾಲಿಂಕ್ ಕಾರ್ಯಾಚರಣೆಗಳ ಮಾಜಿ ನಿರ್ದೇಶಕಿ ಶಿವೋನ್ ಜಿಲಿಸ್‌ಗೆ ಮೂರು ಮಕ್ಕಳಿದ್ದಾರೆ. ಈಗ ಈ ಮಗು ಮಸ್ಕ್‌ ಅವರದ್ದೇ ಎಂದಾದರೆ ಎಲಾನ್‌ ಮಸ್ಕ್‌ಗೆ 13 ಮಕ್ಕಳಿದ್ದಂತಾಗುತ್ತದೆ.