ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಪುಟ್ಟ ಪುಟ್ಟ ಕಾರ್ಮಿಕರು ಫುಡ್ ಕನ್‌ಸ್ಟ್ರಕ್ಷನ್‌ ಮಾಡೋದನ್ನು ನೋಡಿದ್ದೀರಾ..!? AI ವಿಡಿಯೊ ಫುಲ್‌ ವೈರಲ್‌

ಭವಿಷ್ಯದಲ್ಲಿ AI ನಮ್ಮನ್ನು ಆಳಲಿದೆ ಎಂಬುದಕ್ಕೆ ಸಾಕ್ಷಿಯಾಗಿ ಹಲವಾರು ಕ್ರಿಯೇಟಿವ್ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗುತ್ತಲೇ ಇದೆ. ಅಂತಹ ಕ್ಯೂಟ್ ಮತ್ತು ಕ್ರಿಯೇಟಿವ್ ವಿಡಿಯೋ ಒಂದು ಇದೀಗ ಸಿಕ್ಕಾಪಟ್ಟೆ ಟ್ರೆಂಡಿಂಗ್ ನಲ್ಲಿದೆ. ಹಾಗಾದ್ರೆ ಇದರ ಕಥೆ ಏನು? ನೋಡೋಣ ಬನ್ನಿ.

ನವದೆಹಲಿ: ಆರ್ಟಿಫಿಶಿಯಲ್ ಇಂಟಲಿಜೆನ್ಸ್ (Artificial Intelligence) ಅಥವಾ ಕೃತಕ ಬುದ್ದಿಮತ್ತೆಯ ಬಳಕೆ ಸರ್ವವ್ಯಾಪಿಯಾಗುತ್ತಿರುವಂತೆ, ಯಾವ ಕೆಲಸ ಕಾರ್ಯಗಳೂ ಕಷ್ಟಕರವೆಂದು ಅನ್ನಿಸುವುದೇ ಇಲ್ಲ ಎಂಬ ಮಾತನ್ನು ಎಲ್ಲರೂ ಒಪ್ಪಲೇಬೇಕಾದದ್ದು. ಈ ಆವಿಷ್ಕಾರ ಫುಡ್ ಪ್ರಾಸೆಸಿಂಗ್‌ಗೆ (Food Processing) ಕಾಲಿಟ್ಟರೆ ಹೇಗಾದ್ದೀತು? ಹಾಗಾದ ಪಕ್ಷದಲ್ಲಿ ಒಂದು ಆಹಾರ ಸಿದ್ಧಗೊಳ್ಳುವ ಎಲ್ಲಾ ಹಂತಗಳನ್ನೂ ನಾವು ಕಂಡುಕೊಳ್ಳಲು ಸಾಧ್ಯವಿರುತ್ತದೆ. ಆಹಾರವನ್ನು ತಯಾರಿಸುವುದಲ್ಲ, ಬದಲಾಗಿ ಆಹಾರವನ್ನು ನಿರ್ಮಾಣ ಮಾಡಿದರೆ ಹೇಗಿದ್ದೀತು..? ಎಂಬುದನ್ನು ಸಾಕ್ಷೀಕರಿಸುವ ವಿಡಿಯೋ ಒಂದು ಇಲ್ಲಿದೆ. ಪಾಬ್ಲೋ ಪ್ರಾಂಪ್ಟ್ ಎಂಬ ಎಐ ಕ್ರಿಯೇಟರ್ (AI Creator) ಒಬ್ಬರು ಈ ಕ್ರಿಯೇಟಿವ್ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ (Social Media) ಹಂಚಿಕೊಂಡಿದ್ದು ಸದ್ಯಕ್ಕಿದು ಸಿಕ್ಕಾಪಟ್ಟೆ ವೈರಲ್ (Viral Video) ಆಗುತ್ತಿದೆ.

ಪಾಬ್ಲೋ ಈ ವಿಡಿಯೋವನ್ನು ಹೆಸರಾಂತ ಪೌಷ್ಠಿಕಾಂಶ ತಜ್ಞ ಕಾರ್ಲೋಸ್ ಹ್ಯೂಗೋ ಜಿಮೆನೆಝ್ ಜೊತೆ ಜಂಟಿಯಾಗಿ ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೊ ಕ್ಲಿಪ್ ನಲ್ಲಿರುವಂತೆ ಎಐ ರಚಿಸಿದ ಪುಟ್ಟ ಪುಟ್ಟ ಮಾನವರು ಸಮವಸ್ತ್ರವನ್ನು ಧರಿಸಿ ವೈವಿಧ್ಯಮಯ ಆಹಾರಗಳಲ್ಲಿ ಕನ್ ಸ್ಟ್ರಕ್ಷನ್ ಕೆಲಸದಲ್ಲಿ ನಿರತರಾಗಿರುವುದನ್ನು ನಾವಿಲ್ಲಿ ಕಾಣಬಹುದಾಗಿದೆ. ಇಲ್ಲಿ ಈ ಪುಟ್ಟ ಕಾರ್ಮಿಕರು ದೊಡ್ಡ ದೊಡ್ಡ ಮನೆಗಳನ್ನು ನಿರ್ಮಿಸುವಂತೆ ನಿರ್ಧಿಷ್ಟ ಆಹಾರ ಪದಾರ್ಥಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವುದನ್ನು ಕಾಣಬಹುದಾಗಿದೆ.

ಇದನ್ನೂ ಓದಿ: Delhi Election 2025 : ಚುನಾವಣಾ ಫಲಿತಾಂಶಕ್ಕೂ ಮುನ್ನ ದೆಹಲಿಯ ಗಮನ ಸೆಳೆದ 'ಮಿನಿ ಕೇಜ್ರಿವಾಲ್!



ವಿಡಿಯೋ ಕ್ಲಿಪ್ಪಿನ ಪ್ರಾರಂಭದಲ್ಲಿ ಈ ಆಹಾರ ಕಾರ್ಮಿಕರು ಒಂದು ಸಾಲ್ಮನ್‌ ತುಂಡನ್ನು ಗಾರ್ನಿಶ್ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಈ ಸಂದರ್ಭದಲ್ಲಿ ಡೆಕ್ ಕ್ರೇನ್ ಒಂದು ಜಾಗರೂಕತೆಯಿಂದ ನಿಂಬೆ ಹಣ್ಣಿನ ತುಂಡನ್ನು ಗ್ರಿಲ್ ಮಾಡಿರುವ ಮೀನಿನ ಮೇಲೆ ಇರಿಸುತ್ತದೆ. ಇದಕ್ಕಿಂತ ರೊಮಾಂಚನಕಾರಿಯಾದ ವಿಷಯ ಇನ್ನೊಂದು ಬೇಕೇ? ಮುಂದುವರಿದಂತೆ ಕೆಲವರು ಸ್ಟೀಂ ಅನ್ನದ ಮೇಲೆ ಭಾರತೀಯ ಗ್ರೇವಿಯನ್ನು ಸುರಿಯುತ್ತಿರುವುದನ್ನೂ ಸಹ ಕಾಣಬಹುದಾಗಿದೆ. ಇನ್ನೊಂದು ದೃಶ್ಯದಲ್ಲಿ ಕಾರ್ಮಿಕನೊಬ್ಬ ಪಿಜ್ಹಾಗೆ ಸೀಸನಿಂಗ್ ಮಾಡುತ್ತಿರುವುದನ್ನೂ ಸಹ ಕಾಣಬಹುದಾಗಿದೆ. ಸಿಗಡಿ ರೈಸ್ ಸಹ ಇಲ್ಲಿ ಬಂದು ಹೋಗುವುದನ್ನು ನಾವು ಕಾಣಬಹುದಾಗಿದೆ. ಒಟ್ಟಿನಲ್ಲಿ ಈ ಕ್ರಿಯೇಟಿವ್ ಎಐ ವಿಡಿಯೋ ಎಲ್ಲಾ ಅಂಶಗಳನ್ನೂ ಟಚ್ ಮಾಡಿದಂತಿದೆ.

ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಆಗತ್ತಿದ್ದಂತೆ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಈ ವಿಡಿಯೋಗೆ ಸಿಕ್ಕಾಪಟ್ಟೆ ಕಮೆಂಟ್ ಗಳು ಬರುತ್ತಿದೆ. ‘ಇದು ನಾನು ನೋಡಿದ ವಿಚಿತ್ರಾತಿವಿಚಿತ್ರ ಸಂಗತಿಯಾಗಿದ್ದರೂ, ಇದು ನೋಡಲು ಚೆನ್ನಾಗಿದೆ!’ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ‘ಇದನ್ನು ನೊಡಿದಾಗ ವಿಚಿತ್ರವಾಗಿದ್ದರೂ ಖುಷಿಯಾಗುತ್ತದೆ’ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ‘ಇದು, ಎಐ ಉಂಟು ಮಾಡಬಲ್ಲ ಗೊಂದಲ’ ಎಂದು ಇನ್ನೊಬ್ಬರು ಕಮೆಂಟ್ ಹಾಕಿದ್ದಾರೆ. ‘ಇದು ರುಚಿಕರವೂ ಆಗಿದೆ ಮತ್ತು ಕಿರಿ ಕಿರಿಯನ್ನುಂಟುಮಾಡುವಂತೆಯೂ ಇದೆ’ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ‘ತುಂಬಾ ಉತ್ತಮವಾದ ಕ್ರಿಯೇಟಿವಿಟಿ’ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವಿಚಿತ್ರವಾದ ಯೋಚನೆಯಲ್ಲಿ ಮೂಡಿಬಂದಿರುವ ಈ ಕ್ರಿಯೇಟಿವ್ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.