Delhi Election 2025 : ಚುನಾವಣಾ ಫಲಿತಾಂಶಕ್ಕೂ ಮುನ್ನ ದೆಹಲಿಯ ಗಮನ ಸೆಳೆದ 'ಮಿನಿ ಕೇಜ್ರಿವಾಲ್!
ದೆಹಲಿಯಲ್ಲಿ ಮತ ಎಣಿಕೆಯ ಸಂದರ್ಭದಲ್ಲಿ 'ಮಿನಿ ಅರವಿಂದ್ ಕೇಜ್ರಿವಾಲ್' ದೆಹಲಿ ಜನರ ಗಮನ ಸೆಳೆಯುತ್ತಿದ್ದಾರೆ. ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ಪುಟ್ಟ ಬೆಂಬಲಿಗ ಅವ್ಯಾನ್ ತೋಮರ್ ಶನಿವಾರ ಬೆಳಿಗ್ಗೆ ಕೇಜ್ರಿವಾಲ್‌ರಂತೆ ವೇಷ ಧರಿಸಿ ಅವರ ನಿವಾಸಕ್ಕೆ ತೆರಳಿದ್ದಾರೆ
![ದೆಹಲಿಯಲ್ಲಿ ಮಿನಿ ಕೇಜ್ರಿವಾಲ್ ! ಯಾರೀತ?](https://cdn-vishwavani-prod.hindverse.com/media/original_images/Viral.jpg)
Arvind Kejriwal
![Profile](https://vishwavani.news/static/img/user.png)
ನವದೆಹಲಿ: ದೆಹಲಿಯಲ್ಲಿ (Delhi Election) ಗದ್ದುಗೆ ಗುದ್ದಾಟ ಜೋರಾಗಿ ನಡೆಯುತ್ತಿದೆ. ಬೆಳಿಗ್ಗೆ ಇಂದಲೇ ಮತ ಎಣಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಕೂತೂಹಲ ಕೆರಳಿಸಿದೆ. ಸದ್ಯ ಮತ ಎಣಿಕೆಯ ಸಂದರ್ಭದಲ್ಲಿ 'ಮಿನಿ ಅರವಿಂದ್ ಕೇಜ್ರಿವಾಲ್' (Arvind Kejriwal) ದೆಹಲಿ ಜನರ ಗಮನ ಸೆಳೆಯುತ್ತಿದ್ದಾರೆ. ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ಪುಟ್ಟ ಬೆಂಬಲಿಗ ಅವ್ಯಾನ್ ತೋಮರ್ (Avyan Tomar) ಶನಿವಾರ ಬೆಳಿಗ್ಗೆ ಕೇಜ್ರಿವಾಲ್‌ರಂತೆ ವೇಷ ಧರಿಸಿ ಅವರ ನಿವಾಸಕ್ಕೆ ತೆರಳಿದ್ದಾರೆ. ಸದ್ಯ ಎಲ್ಲಡೆ ಪುಟ್ಟ ಅಭಿಮಾನಿಯ ಫೋಟೋ, ವಿಡಿಯೋಗಳು (Viral Video) ವೈರಲ್ ಆಗುತ್ತಿವೆ.
#WATCH | Delhi: A young supporter of AAP National Convenor Arvind Kejriwal, Avyan Tomar reached the residence of Arvind Kejriwal dressed up as him to show support. pic.twitter.com/dF7Vevy6En
— ANI (@ANI) February 8, 2025
ಆತ ನೀಲಿ ಬಣ್ಣದ ಸ್ವೆಟರ್ ಧರಿಸಿ, ಅದರ ಮೇಲೆ ಹಸಿರು ಪಫ್ ಜಾಕೆಟ್ ಧರಿಸಿದ್ದ. ಇದು ಚಳಿಗಾಲದ ಪತ್ರಿಕಾಗೋಷ್ಠಿಗಳಲ್ಲಿ ಕೇಜ್ರಿವಾಲ್ ಸಾಮಾನ್ಯವಾಗಿ ಧರಿಸುವ ಉಡುಗೆಯಾಗಿದೆ. ಹುಡುಗ ಕೇಜ್ರಿವಾಲ್ ಅವರಂತೆ ಕಾಣಲು ಕನ್ನಡಕ ಹಾಕಿಕೊಂಡು ಮತ್ತು ಮೀಸೆಯನ್ನು ಅಂಟಿಸಿಕೊಂಡಿದ್ದ. ಅವ್ಯಾನ್ ಕೇಜ್ರಿವಾಲ್ ಅವರಂತೆ ವೇಷ ಧರಿಸಿರುವುದು ಇದೇ ಮೊದಲಲ್ಲ. 2022 ರ ದೆಹಲಿ ನಾಗರಿಕ ಸಂಸ್ಥೆ ಚುನಾವಣೆಗೆ, ಅವರು ಕೆಂಪು ಸ್ವೆಟರ್ ಧರಿಸಿ, ಮೀಸೆ ಮತ್ತು ತಲೆಗೆ ಮಫ್ಲರ್ ಸುತ್ತಿಕೊಂಡು ಎಎಪಿ ಕ್ಯಾಪ್ ಧರಿಸಿದ್ದರು. ಎಎಪಿ ಗೆಲುವಿನತ್ತ ಸಾಗುತ್ತಿದ್ದಂತೆ, ಆತ ಇತರ ಮಕ್ಕಳೊಂದಿಗೆ ಆಚರಿಸುತ್ತಿರುವುದು ಕಂಡುಬಂದಿತ್ತು. ಆಗ 4 ವರ್ಷ ವಯಸ್ಸಿನ ಹುಡುಗನ ಚಿತ್ರವೊಂದು ವೈರಲ್ ಆಗಿತ್ತು.
ಈ ಸುದ್ದಿಯನ್ನೂ ಓದಿ : Delhi Election 2025: ಚುನಾವಣೆಗೆ ಸಜ್ಜಾದ ದೆಹಲಿ; ಮೂರನೇ ಬಾರಿಗೆ ಹ್ಯಾಟ್ರಿಕ್ ಬಾರಿಸುತ್ತಾ ಆಪ್?
ದೆಹಲಿಯಲ್ಲಿ ಇಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದ್ದು, ಸಮೀಕ್ಷೆಗಳು ಬಿಜೆಪಿಯ ಗೆಲುವಿನ ಮುನ್ಸೂಚನೆಯನ್ನು ನೀಡಿದ್ದವು. ಒಟ್ಟು 70 ಕ್ಷೇತ್ರಗಳ ಮತ ಎಣಿಕೆ ನಡೆಯಲಿದ್ದು, 699 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಇಂದು ಪ್ರಕಟಗೊಳ್ಳಲಿದೆ. ಇನ್ನು ಸರ್ಕಾರ ರಚನೆಗೆ ಕನಿಷ್ಠ 36 ಮ್ಯಾಜಿಕ್ ನಂಬರ್ ಆಗಿದ್ದು, ಆಡಳಿತಾರೂಢ ಆಪ್ ರಾಜಧಾನಿಯಲ್ಲಿ ಸತತ ಮೂರನೇ ಅವಧಿಗೆ ಅಧಿಕಾರ ಹಿಡಿಯಬಹುದೇ ಅಥವಾ ಬರೋಬ್ಬರಿ 27 ವರ್ಷಗಳ ನಂತರ ಬಿಜೆಪಿ ಗದ್ದುಗೆ ಏರಲಿದೆಯೇ ಎಂಬುದು ಇಂದು ಮಧ್ಯಾಹ್ನದ ಹೊತ್ತಿಗೆ ಸ್ಪಷ್ಟವಾಗಲಿದೆ.