ಟಾಂಜಾನಿಯಾ: ಸ್ಥಿರವಾದ ಉದ್ಯೋಗವು ಅನೇಕರ ಕುಟುಂಬಗಳನ್ನು ಪೋಷಿಸಲು ಜೀವನಾಡಿಯಾಗಿದೆ. ಆದರೆ, ಉದ್ಯೋಗದ ಸ್ಥಳವು ವಿಷಕಾರಿಯಾದಾಗ ಅಸಹನೀಯವಾಗುತ್ತವೆ. ಬಾಸ್ (ಮೇಲಾಧಿಕಾರಿ) ಕಾರಣದಿಂದಾಗಿ, ನೌಕರರು ತಮ್ಮ ಕೆಲಸಗಳಿಗೆ ರಾಜೀನಾಮೆಗಳನ್ನು (Resignation) ನೀಡುತ್ತಾರೆ. ಇತ್ತೀಚೆಗೆ ವೈರಲ್ ಆಗಿರುವ ರಾಜೀನಾಮೆ ಪತ್ರವೊಂದು ಇದೇ ರೀತಿಯ ಪರಿಸ್ಥಿತಿಯನ್ನು ತೋರಿಸುತ್ತದೆ. ಈ ವೈರಲ್ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರ ಗಮನ ಸೆಳೆದಿದೆ (Viral News).
ಜೇ ಡೆಕೋರ್ ಎಂಬುದು ಟಾಂಜಾನಿಯಾದಲ್ಲಿರುವ ಒಂದು ಕಂಪನಿಯಾಗಿದ್ದು, ಅದರ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ 100,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದೆ. ಈ ಕಂಪನಿಯ ಉದ್ಯೋಗಿಯಾಗಿದ್ದ ಎಸಿ ಮಿಂಜಾ ಎಂಬುವವರು ತನ್ನ ಬಾಸ್ ಮತ್ತು ಕಂಪನಿಯ ನೀತಿಗಳಿಂದ ಹತಾಶೆಗೊಂಡು ರಾಜೀನಾಮೆ ನೀಡಿದ ಪತ್ರದ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ.
ಪತ್ರವು ಸಂಕ್ಷಿಪ್ತವಾಗಿದ್ದರೂ ಸ್ಪಷ್ಟವಾಗಿದೆ. ಅವರ ರಾಜೀನಾಮೆಗೆ ಕಾರಣವನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಈ ರಾಜೀನಾಮೆ ಪತ್ರ ಈಗ ವೈರಲ್ ಆಗಿದೆ. ಅದರಲ್ಲಿ ಅವರು ಹೀಗೆ ಬರೆದಿದ್ದಾರೆ: ಈ ಕಂಪನಿಯಲ್ಲಿ ಸಂಬಳ ಹೆಚ್ಚಳದ ಗುರಿ ಮಾತ್ರ ಇದೆ, ನಾನು ರಾಜೀನಾಮೆ ನೀಡುತ್ತಿದ್ದೇನೆ. ನಾನು ಕೆಲಸ ಮಾಡುತ್ತೇನೆ, ನಾನು ಮ್ಯಾಜಿಕ್ ಮಾಡುವುದಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಆ ಪತ್ರವು ಕಂಪನಿಯ ಅಧಿಕೃತ ಮುದ್ರೆಯನ್ನು ಸಹ ಹೊಂದಿದೆ.
ಪೋಸ್ಟ್ ಇಲ್ಲಿದೆ:
ಕಂಪನಿಯು ಈ ಪತ್ರವನ್ನು ಇನ್‌ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದು, ಅದರ ಶೀರ್ಷಿಕೆ ಹೀಗಿದೆ: ನಮಗೆ ಇಂದು ಈ ರಾಜೀನಾಮೆ ಪತ್ರ ಬಂದಿದೆ. ಇದನ್ನು ತಮಾಷೆಯಾಗಿ ಬರೆದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗಿದೆ ಎಂದು ನಾವು ಅನುಮಾನಿಸುತ್ತೇವೆ. ಸಾಮಾನ್ಯವಾಗಿ, ಅಂತಹ ಪತ್ರಗಳನ್ನು ಸರಳ ಕಾಗದದ ಮೇಲೆ ಬರೆಯಲಾಗುತ್ತದೆ ಅಥವಾ ಇಮೇಲ್ ಮೂಲಕ ಕಳುಹಿಸಲಾಗುತ್ತದೆ. ಆದರೆ, ನಾವು ಅದರ ಸತ್ಯಾಸತ್ಯತೆಯನ್ನು ಖಚಿತಪಡಿಸಲು ಸಾಧ್ಯವಿಲ್ಲ ಎಂದು ಬರೆಯಲಾಗಿದೆ.
ಇದನ್ನೂ ಓದಿ: Viral Video: ಟಿಟಿಇ ಮೇಲೆ ಬಿಸಿ ಚಹಾ ಸುರಿದು ಮಹಿಳೆಯ ರಂಪಾಟ! ವಿಡಿಯೊ ಇಲ್ಲಿದೆ
ಈ ಪೋಸ್ಟ್ ವೈರಲ್ ಆಗಿದ್ದು, 16,000 ಕ್ಕೂ ಹೆಚ್ಚು ಲೈಕ್‌ಗಳು ಮತ್ತು 100 ಕ್ಕೂ ಹೆಚ್ಚು ಕಾಮೆಂಟ್‌ಗಳನ್ನು ಪಡೆದಿದೆ. ಒಬ್ಬ ಬಳಕೆದಾರರು, ಈ ಪೋಸ್ಟ್ ಅನ್ನು ಸೇವ್ ಮಾಡುತ್ತಿದ್ದೇನೆ. ಏಕೆಂದರೆ ಮುಂದೆ ನನಗೆ ಇದು ಬೇಕಾಗುತ್ತದೆ ಎಂದು ಬರೆದಿದ್ದಾರೆ. ನೀವು ಯಾರೊಬ್ಬರ ಜವಾಬ್ದಾರಿಗಳನ್ನು, ಅವರ ವೇತನವನ್ನು ಹೆಚ್ಚಿಸದೆ ಹೆಚ್ಚಿಸಲು ಸಾಧ್ಯವಿಲ್ಲ ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಸಂಬಳವು ಹೆಚ್ಚಾಗದಿದ್ದರೆ, ಜವಾಬ್ದಾರಿಗಳನ್ನು ಹೆಚ್ಚಿಸುವುದು ಅರ್ಥಹೀನ ಎಂದು ಮಗದೊಬ್ಬರು ಹೇಳಿದರು.