Viral News: ಹಬ್ಬಕ್ಕೆ ಸೀರೆಯುಟ್ಟು ಬಾರದ ಉದ್ಯೋಗಿಗೆ ಬಿತ್ತು ಭಾರೀ ಫೈನ್- ಏನಿದು ಘಟನೆ?
ಪುಣೆ ಮೂಲದ ಕಂಪನಿಯೊಂದರಲ್ಲಿ ಹೊಸದಾಗಿ ಕೆಲಸಕ್ಕೆ ಸೇರಿಕೊಂಡ ಮಹಿಳೆಯೊಬ್ಬರು ಹಬ್ಬದ ದಿನದಂದು ಭಾರತೀಯ ಸಾಂಪ್ರದಾಯಿಕ ಡ್ರೆಸ್ ಕೋಡ್ ಅನ್ನು ಧರಿಸದೆ ಆಫೀಸ್‍ಗೆ ಬಂದ ಕಾರಣ ಆಕೆಗೆ 100ರೂ.ಗಳ ದಂಡ ವಿಧಿಸಿದೆ. ಈ ವಿಚಾರವನ್ನು ಆಕೆ ತನ್ನ ಸೋಶಿಯಲ್ ಮೀಡಿಯಾ ಪೇಜ್‍ನಲ್ಲಿ ಹಂಚಿಕೊಂಡಿದ್ದು ಅದು ಈಗ ವೈರಲ್(Viral Video) ಆಗಿದೆ.


ಮುಂಬೈ: ಸಾಮಾನ್ಯವಾಗಿ ಕೆಲವೊಂದು ಆಫೀಸ್‍ಗಳಲ್ಲಿ ಡ್ರೆಸ್ ಕೋಡ್ ಇರುತ್ತದೆ. ಆಫೀಸ್‍ನಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಕೆಲಸಗಾರರು ಈ ಡ್ರೆಸ್ ಕೋಡ್ ಅನ್ನು ಅನುಸರಿಸಬೇಕಾಗುತ್ತದೆ. ಆದರೆ ಪುಣೆ ಮೂಲದ ಕಂಪನಿಯೊಂದರಲ್ಲಿ ಹೊಸದಾಗಿ ಕೆಲಸಕ್ಕೆ ಸೇರಿಕೊಂಡ ಮಹಿಳೆಯೊಬ್ಬಳು ಹಬ್ಬದ ಆಚರಣೆಯ ಸಲುವಾಗಿ ಧರಿಸಬೇಕಾಗಿದ್ದ ಡ್ರೆಸ್ ಕೋಡ್ ಅನ್ನು ಅನುಸರಿಸದ ಕಾರಣ ಆಕೆಗೆ ದಂಡ ವಿಧಿಸಲಾಗಿದೆಯಂತೆ. ಈ ವಿಚಾರವನ್ನು ಆಕೆ ತನ್ನ ಸೋಶಿಯಲ್ ಮೀಡಿಯಾ ಪೇಜ್‍ನಲ್ಲಿ ಹಂಚಿಕೊಂಡಿದ್ದು ಅದು ಈಗ ವೈರಲ್(Viral News) ಆಗಿದೆ.
ಆಕೆ ಪೋಸ್ಟ್‌ನಲ್ಲಿ ತಿಳಿಸಿದಂತೆ, ಸಾಂಪ್ರದಾಯಿಕ ದಿನದ ಆಚರಣೆಯ ಸಮಯದಲ್ಲಿ ಅವಳು ದಿನ ಹಾಕುವಂತೆ ಜೀನ್ಸ್ ಧರಿಸಿ ಕೆಲಸಕ್ಕೆ ಬಂದಿದ್ದಾಳೆ. ಹಾಗಾಗಿ ಎಚ್ಆರ್ ಅವಳಿಗೆ 100 ರೂಪಾಯಿಗಳ ದಂಡ ವಿಧಿಸಿದ್ದಾರೆ ಎಂದು ಹೇಳಿದ್ದಾಳೆ. ಆದರೆ ಆಕೆ ಈ ಪೋಸ್ಟ್‌ನಲ್ಲಿ ತನ್ನ ಗುರುತನ್ನು ಬಹಿರಂಗಪಡಿಸಿಲ್ಲ. ಪೋಸ್ಟ್ ವೈರಲಾಗ್ತಿದ್ದಂತೆ ನಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
ಮಾಹಿತಿ ಪ್ರಕಾರ, ಭಾನುವಾರದಂದು ನಡೆಯಬೇಕಾಗಿದ್ದ ಹಬ್ಬಕ್ಕೆ ಮುಂಚಿತವಾಗಿ ಕಂಪನಿಯು ಮಾರ್ಚ್ 28 ರಂದು ಗುಡಿ ಪಾಡ್ವಾ ಆಚರಣೆಯನ್ನು ಆಯೋಜಿಸಿತ್ತು. ಕೆಲಸದ ಸ್ಥಳದಲ್ಲಿ ಹಬ್ಬದ ಆಚರಣೆಯಲ್ಲಿ ಸಂಭ್ರಮಿಸಲು ಉದ್ಯೋಗಿಗಳಿಗೆ ಭಾರತೀಯ ಸಂಪ್ರದಾಯಿಕ ಉಡುಗೆ ಸೀರೆ ಧರಿಸಿ ಬರಲು ಹೇಳಲಾಗಿತಂತೆ. ಆದರೆ ಕಚೇರಿಯಲ್ಲಿ ಕೆಲಸಕ್ಕೆ ಸೇರಿ ಇನ್ನು ಒಂದು ತಿಂಗಳು ಸಹ ಆಗದ ಕಾರಣ ಈ ಉದ್ಯೋಗಿ, ಡ್ರೆಸ್ ಕೋಡ್ ಅನ್ನು ನಿರ್ಲಕ್ಷಿಸಿದ್ದಾಳೆ. ಅದು ಅಲ್ಲದೇ, ತಾನು ಹೊಸ ನಗರ, ಹೊಸ ಕೆಲಸಕ್ಕೆ ಬಂದ ಕಾರಣ ತನ್ನ ಬಳಿ ಯಾವುದೇ ಸಾಂಪ್ರದಾಯಿಕ ಉಡುಗೆ ಇರಲಿಲ್ಲ ಮತ್ತು ಅದನ್ನು ಖರೀದಿಸಲು ಹಣ ಕೂಡ ಇರಲಿಲ್ಲ ಎಂದು ಆಕೆ ಪೋಸ್ಟ್‌ನಲ್ಲಿ ತಿಳಿಸಿದ್ದಾಳೆ.
ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಅನೇಕರ ಗಮನಸೆಲೆದು ವೈರಲ್ ಆಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ನೆಟ್ಟಿಗರು ಆಚರಣೆಗಳು ಅಥವಾ ಸಾಂಪ್ರದಾಯಿಕ ದಿನದಂತಹ ಅನೌಪಚಾರಿಕ ಕಾರ್ಯಕ್ರಮದಲ್ಲಿ ಡ್ರೆಸ್ ಕೋಡ್ ಉಲ್ಲಂಘಿಸಿದ್ದಕ್ಕಾಗಿ ಕಂಪನಿಗಳು ನಿಜವಾಗಿಯೂ ಜನರಿಗೆ ದಂಡ ವಿಧಿಸುತ್ತವೆಯೇ ಎಂದು ಆಶ್ಚರ್ಯಪಟ್ಟಿದ್ದಾರೆ. "ಅಯ್ಯೋ? ಅಂತಹ ವಿಷಯಗಳು ಸಹ ಈಗ ಸಂಭವಿಸುತ್ತದೆಯೇ?” ಎಂದು ಒಬ್ಬರು ಆಶ್ಚರ್ಯದಿಂದ ಕಾಮೆಂಟ್ ಮಾಡಿದ್ದಾರೆ.
"ಹಬ್ಬದ ಡ್ರೆಸ್ ಕೋಡ್‍ಗಳನ್ನು ಅನುಸರಿಸದ ಕಾರಣ ನಾನು ಎಂದಿಗೂ ಯಾವುದೇ ದಂಡವನ್ನು ಎದುರಿಸಲಿಲ್ಲ... ಇದು ನಿಜವಾಗಿದ್ದರೆ ಮತ್ತು ಕಂಪನಿಯ ಎಚ್ಆರ್ ನಿಮಗೆ 100 ರೂಪಾಯಿ ದಂಡ ವಿಧಿಸಿದರೆ, ಅದು ನಿಜವಾಗಿಯೂ ತಮಾಷೆಯಾಗಿದೆ " ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ:Viral News: ಇನ್‌ಸ್ಟಾದಲ್ಲಿ ಸ್ನೇಹ... ಆಮೇಲೆ ಲವ್- ಆತನ ಅಸಲಿಯತ್ತು ಬಯಲಾದಾಗ ಕಾಲ ಮಿಂಚಿತ್ತು!
ಇತ್ತೀಚಿನ ದಿನಗಳಲ್ಲಿ ಕೆಲಸದ ಸ್ಥಳಗಳಲ್ಲಿ ಡ್ರೆಸ್ ಕೋಡ್‍ಗಳನ್ನು ಹೆಚ್ಚು ಅನುಸರಿಸಲಾಗುತ್ತದೆ. ಈ ಬಗ್ಗೆ ಹೆಚ್ಚಿನ ಕೆಲಸಗಾರರು ಅಸಮಾಧಾನವನ್ನು ವ್ಯಕ್ತಪಡಿಸುತ್ತಾರೆ. ಆದರೆ ಇದು ಇಂದಿನ ದಿನಗಳಲ್ಲಿ ಉತ್ತಮ ನಿರ್ಧಾರ ಎನ್ನಲಾಗಿದೆ. ಈ ಹಿಂದೆ ಸರ್ಕಾರಿ ಕಚೇರಿಗಳಲ್ಲಿ ಜೀನ್ಸ್ ಮತ್ತು ಟೀ ಶರ್ಟ್ ಧರಿಸುವುದನ್ನು ನಿಷೇಧಿಸಿ ಸಂಭಾಲ್ ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಆದೇಶ ಹೊರಡಿಸಿದ್ದರು. ಹಾಗೂ ಹೊಸ ಡ್ರೆಸ್ ಕೋಡ್ ಉಲ್ಲಂಘಿಸುವವರಿಗೆ 500 ರೂ.ಗಳ ದಂಡ ವಿಧಿಸಲಾಗುವುದು ಎಂದು ವರದಿಯಾಗಿತ್ತು.