ಲಖನೌ: ಪ್ರತಿಯೊಬ್ಬ ಹೆಣ್ಣು ಮಕ್ಕಳು ತಾವು ಅಂದವಾಗಿ ಕಾಣಬೇಕು ಎಂದು ಬ್ಯೂಟಿ ಪಾರ್ಲರ್‌ಗೆ ಹೋಗೊದು ಸಾಮಾನ್ಯ. ಆದರೆ ಇಲ್ಲೊಬ್ಬಳು ಮಹಿಳೆ ಬ್ಯೂಟಿ ಪಾರ್ಲರ್ ಗೆ ಹೋಗಿ ಪತಿಯ ಕೋಪಕ್ಕೆ ಗುರಿಯಾಗಿದ್ದಾಳೆ. ಪತಿಯೂ ಬೇಡವೆಂದು ಹೇಳಿದರೂ ಹಠ ಮಾಡಿ ಬ್ಯೂಟಿ ಪಾರ್ಲರ್ ತೆರಳಿದ್ದ ಪತ್ನಿಯ ಜಡೆಯನ್ನು ಪತಿ ಪಾರ್ಲರ್‌ನಲ್ಲಿಯೇ ಕತ್ತರಿಸಿದ್ದಾನೆ. ಉತ್ತರ ಪ್ರದೇಶದ ಹಾರ್ದೋಯ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು ಜಡೆಯನ್ನು ಕತ್ತರಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದು ಸದ್ಯ ಈ ಸುದ್ದಿ ಸೋಶಿಯಲ್ ಮಿಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದ್ದು (Viral News) ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಉತ್ತರ ಪ್ರದೇಶದ ಸರಮುಲ್ಲಾ ಗಂಜ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು ಸಂತ್ರಸ್ತೆಯ ತಂದೆ ತನ್ನ ಮಗಳಿಗೆ ವರದಕ್ಷಿಣೆ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾನೆ. ಆರೋಪಿ ರಾಮ್‌ಪ್ರತಾಪ್ ತನ್ನ ಮಗಳನ್ನು ವಿವಾಹವಾಗುವಾಗ ವರದಕ್ಷಿಣೆ ಆಮಿಷವೊಡ್ಡಿದ್ದರು. ಹಾಗಾಗಿ ನಿತ್ಯ ತನ್ನ ಮಗಳಿಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದ. ಇತ್ತೀಚೆಗೆ ಈ ಕಿರುಕುಳವು ತಾರಕಕ್ಕೇರಿದಾಗ ಮಗಳು ಐಬ್ರೊ ಮಾಡಿಸಿಕೊಳ್ಳಲು ಬ್ಯೂಟಿ ಪಾರ್ಲರ್‌ಗೆ ಹೋಗಿದ್ದಾಗ ಕೋಪಗೊಂಡು ತನ್ನ ಮಗಳ ಜಡೆಯನ್ನು ಕತ್ತರಿಸಿ ಹಾಕಿದ್ದಾನೆ ಎಂದು ಸಂತ್ರಸ್ತೆಯ ತಂದೆ ರಾಧಾಕೃಷ್ಣ ಪೊಲೀಸರಿಗೆ ದೂರನ್ನು ನೀಡಿದ್ದಾರೆ.
ಆರೋಪಿ ಪತಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಸ್ಥಳೀಯ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. ಅಂಕಿತ್ ಸಿಂಗ್ ಎಂಬ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು ಈ ಬಗ್ಗೆ ನೆಟ್ಟಿಗರು ನಾನಾ ರೀತಿಯ ಕಮೆಂಟ್ ಹಾಕಿದ್ದಾರೆ. ಬ್ಯೂಟಿ ಪಾರ್ಲರ್ ಹೋಗುವುದು ತಪ್ಪೆನು?ಎಂಬಂತೆ ಪತಿಯ ನಡವಳಿಕೆ ಬಗ್ಗೆ ನೆಟ್ಟಿಗರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮತ್ತೊಬ್ಬರು ವರದಕ್ಷಿಣೆ ವಿಚಾರವಾಗಿ ಆತನ ಈ ರೀತಿಯ ನಡವಳಿಕೆ ಸರಿಯಲ್ಲ ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ.
ಇದನ್ನು ಓದಿ: Viral Video: ಸ್ನೇಹಿತರು ಕೊಟ್ಟ ಉಡುಗೊರೆ ಕಂಡು ವರನಿಗೆ ಫುಲ್ ಶಾಕ್! ಅಷ್ಟಕ್ಕೂ ಗಿಫ್ಟ್ ಏನು ಗೊತ್ತೆ?..
ಆರೋಪಿ ರಾಮ್‌ಪ್ರತಾಪ್ ವರದಕ್ಷಿಣೆಗೆಗಾಗಿ ಜಡೆ ಕತ್ತರಿಸಿಲ್ಲ ಎಂದು ಪೊಲೀಸರ ಬಳಿ ತಿಳಿಸಿದ್ದಾನೆ. ಹೆಂಡತಿ ಬ್ಯೂಟಿ ಪಾರ್ಲರ್‌ಗೆ ಹೋಗುವುದನ್ನು ಸಹಿಸದೇ ಅವಮಾನಕಾರಿ ಕೃತ್ಯ ಎಸಗಿದ್ದಾನೆ’ ಎಂದು ಸಂದಿ ಪಟ್ಟಣದ ಪೊಲೀಸ್ ಠಾಣೆಯ ಮುಖ್ಯಾಧಿಕಾರಿ ರವಿ ಪ್ರಕಾಶ್ ತಿಳಿಸಿದ್ದಾರೆ.ಇನ್ನಷ್ಟು ತನಿಖೆ ಬಳಿಕ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸ್ ಠಾಣೆಯ ಮುಖ್ಯಾಧಿಕಾರಿ ತಿಳಿಸಿದ್ದಾರೆ.