ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಸ್ನೇಹಿತರು ಕೊಟ್ಟ ಉಡುಗೊರೆ ಕಂಡು ವರನಿಗೆ ಫುಲ್‌ ಶಾಕ್‌! ಅಷ್ಟಕ್ಕೂ ಗಿಫ್ಟ್ ಏನು ಗೊತ್ತೆ?..

ಉತ್ತರಪ್ರದೇಶದಲ್ಲಿ ವರನಿಗೆ ನೀಲಿ ಡ್ರಮ್‌ವೊಂದನ್ನು ಆತನ ಸ್ನೇಹಿತರು ಊಡುಗೊರೆ ನೀಡಿದ್ದು ಗಿಪ್ಟ್ ನೋಡಿ ವರನೇ ಶಾಕ್ ಆಗಿದ್ದಾನೆ. ಈ ಘಟನೆಯೂ ಉತ್ತರಪ್ರದೇಶದ ಹಮೀರ್‌ಪುರ್‌ನಲ್ಲಿ ನಡೆದಿದೆ. ಈ ವಿಡಿಯೊ‌ ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral Video) ಆಗಿದ್ದು ಗಿಫ್ಟ್ ಕಂಡು ವರನೇ ಬೆಚ್ಚಿಬಿದ್ದಿದ್ದಾನಂತೆ.

ವರನಿಗೆ ಸ್ನೇಹಿತರು ಕೊಟ್ಟ ಗಿಫ್ಟ್ ಕಂಡು ಬಿದ್ದು ಬಿದ್ದು ನಕ್ಕ ನೆಟ್ಟಿಗರು!

Profile Pushpa Kumari Apr 20, 2025 2:13 PM

ಉತ್ತರ ಪ್ರದೇಶ: ಸಾಮಾನ್ಯವಾಗಿ ಮದುವೆ ಸಮಾರಂಭಗಳಲ್ಲಿ ದುಬಾರಿ ಮೊತ್ತದ ಉಡುಗೊರೆಗಳನ್ನು ನೀಡುವ ಮೂಲಕ ವರ ಮತ್ತು ವಧುವಿನ ಕಡೆಯವರು ಎಲ್ಲರ ಗಮನ ಸೆಳೆಯುತ್ತಾರೆ. ಇದೀಗ ಎಲ್ಲೆಡೆ ಮದುವೆ ಸೀಸನ್​ ಜೋರಾಗಿ ನಡೆಯುತ್ತಿದ್ದು, ಒಂದಿಲ್ಲೊಂದು ಕಾರಣಕ್ಕೆ ಮದುವೆಗೆ ಸಂಬಂಧಿಸಿದ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತವೆ. ಇದೀಗ ಉತ್ತರಪ್ರದೇಶದಲ್ಲಿ ವರನಿಗೆ ನೀಲಿ ಡ್ರಮ್‌ವೊಂದನ್ನು ಆತನ ಸ್ನೇಹಿತರು ಊಡುಗೊರೆ ನೀಡಿದ್ದು, ಗಿಫ್ಟ್‌ ನೋಡಿ ವರನೇ ಶಾಕ್ ಆಗಿದ್ದಾನೆ. ಈ ಘಟನೆಯೂ ಉತ್ತರಪ್ರದೇಶದ ಹಮೀರ್ ಪುರ್ ನಲ್ಲಿ ನಡೆದಿದ್ದು ಸದ್ಯ ನವ ದಂಪತಿಗಳಿಗೆ ಬ್ಲೂ ಡ್ರಮ್ ಉಡುಗೊರೆಯಾಗಿ ನೀಡಿದ್ದ ವಿಡಿಯೊ‌ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದು (Viral Video) ಗಿಫ್ಟ್ ಕಂಡು ವರನೇ ಬೆಚ್ಚಿಬಿದ್ದಿದ್ದಾನೆ.

ಉತ್ತರ ಪ್ರದೇಶದ ಮಂಗ್ರೌಲ್ ಗ್ರಾಮದ ಶೈಲೇಂದ್ರ ರಜಪೂತ್ ಅನ್ನುವವರ ವಿವಾಹವು ರಿಹುಂಟಾ ಗ್ರಾಮದ ಸೀಮಾ ಅವರೊಂದಿಗೆ ನೆರವೇರಿತ್ತು. ಈ ಸಂದರ್ಭ ವರನ ಸ್ನೇಹಿತರು ನೀಲಿ ಡ್ರಮ್ ವೊಂದನ್ನು ದಂಪತಿಗೆ ಗಿಫ್ಟ್ ಆಗಿ ನೀಡಿದ್ದಾರೆ. ಇದನ್ನು ಕಂಡ ವರ ಗೊಂದಲದಲ್ಲಿ  ಆತಂಕಗೊಂಡರೆ ವಧು ಬಿದ್ದು ಬಿದ್ದು ನಕ್ಕಿದ್ದಾಳೆ. ಈ ಉಡುಗೊರೆ  ತಮಾಷೆಯಂತೆ ಕಂಡರೂ, ಇತ್ತೀಚೆಗೆ ಮೀರತ್‌ನಲ್ಲಿ ನಡೆದ  ಕೊಲೆ ಪ್ರಕರಣದ ದುರಂತ ಘಟನೆಯನ್ನು ನೆನಪಿಸುವಂತಿದೆ.

ವೈರಲ್‌ ವಿಡಿಯೊ ಇಲ್ಲಿದೆ



ಮೀರತ್‌ನ ಮರ್ಚೆಂಟ್‌ ನೇವಿ ಅಧಿಕಾರಿ ಸೌರಭ್ ರಜಪೂತ್ ನನ್ನು ಆತನ ಪತ್ನಿಯೇ ಪ್ರಿಯಕರನ ಜೊತೆ ಸೇರಿ ಹತ್ಯೆ ಮಾಡಿದ್ದ ಕರಾಳ ಘಟನೆ ನೆನಪಿಸುವಂತಿದೆ. ಆತನ ದೇಹವನ್ನು 15 ತುಂಡುಗಳಾಗಿ ಕತ್ತರಿಸಿ ನೀಲಿ ಪ್ಲಾಸ್ಟಿಕ್ ಡ್ರಮ್‌ನೊಳಗೆ ಸಿಮೆಂಟ್‌ನಿಂದ ಮುಚ್ಚಿಟ್ಟಿದ್ದರು. ಅಂದಿನಿಂದ ನೀಲಿ ಡ್ರಮ್ ಚರ್ಚೆಯ ವಿಚಾರವಾಗಿದೆ. ಇದೀಗ ನೀಲಿ ಡ್ರಮ್ ವೊಂದನ್ನು ವರನ ಸ್ನೇಹಿತರು ಉಡುಗೊರೆಯಾಗಿ ನೀಡಿದ್ದು ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ. ಈ ಬಗ್ಗೆ ನೆಟ್ಟಿಗರು ನಾನಾ ಬಗೆಯಲ್ಲಿ ಕಮೆಂಟ್ ಮಾಡಿದ್ದಾರೆ.

ಇದನ್ನು ಓದಿ: Viral video: ಬೆಂಗಳೂರಲ್ಲಿ ಇರ್ಬೇಕಂದ್ರೆ ಹಿಂದಿ ಮಾತನಾಡು; ಆಟೋ ಚಾಲಕನಿಗೆ ಹಿಂದಿ ಭಾಷಿಕ ಧಮ್ಕಿ!

ನೆಟ್ಟಿಗರೊಬ್ಬರು ವರ ಡ್ರಮ್ ನೋಡಿ ಒದ್ದಾಡಿದ್ರು, ಆದರೆ ವಧು ಬಿದ್ದು ಬಿದ್ದು ನಕ್ಕಿದ್ದಾರೆ ಎಂದು ಬರೆದು ಕೊಂಡಿದ್ದಾರೆ. ಮತ್ತೊಬ್ಬರು ಇದು ಮದುವೆ ಸಮಾರಂಭದಲ್ಲಿ ನಿಜವಾದ ಮಜಾ ಎಂದು ಟ್ವೀಟ್ ಮಾಡಿದ್ದಾರೆ. ಮತ್ತೊಬ್ಬರು ನೀಲಿ ಡ್ರಮ್ ಅಂದ್ರೆ ಈಗ ಭೀತಿ,ವಿಡಿಯೊ ಸಖತ್ ಫನ್ ಆಗಿದೆ ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.