ಬೆಂಗಳೂರು: ಐಟಿ ಉದ್ಯಮದಲ್ಲಿ ಸಂಪೂರ್ಣ ಪ್ರಪಂಚಕ್ಕೆ ಚಿರಪರಿಚತವಾಗಿರುವ ಬೆಂಗಳೂರು(bengaluru) ವಿಸ್ಮಯಗಳ ಸಾಗರ. ಇಲ್ಲಿ ಪ್ರತಿಯೊಬ್ಬರ ಬದುಕಿನ ಹಿಂದೆ ಒಂದೊಂದು ಕತೆಯಿದೆ. ಬೆಂಗಳೂರಲ್ಲಿ ಆಟೋ(autorickshaw) ಓಡಿಸುವ ಒಬ್ಬ ಸಾಮಾನ್ಯ ವ್ಯಕ್ತಿ ಸದ್ಯಕ್ಕೆ ಇಂಟರ್‌ನೆಟ್‌ನಲ್ಲಿ(Internet) ಸಂಚಲನ ಮೂಡಿಸಿದ್ದಾರೆ. ಇಷ್ಟಕ್ಕೆಲ್ಲಾ ಕಾರಣ, ಅವರ ಆಟೋದಲ್ಲಿದ್ದ ಒಂದು ಸಣ್ಣ ಪೋಸ್ಟರ್(Poster). ಈ ಪೋಸ್ಟರ್ ಮೂಲಕ ಆಟೋ ಚಾಲಕನ ಬದುಕಿನ ಕತೆ ಇಂದು ನೆಟ್ಟಿಗರಿಗೆ(Netizens) ಸ್ಫೂರ್ತಿಯನ್ನು(Inspiration) ತುಂಬಿದೆ. ಸದ್ಯ ಈ ಸುದ್ದಿ ಭಾರೀ ವೈರಲ್(Viral Post) ಆಗ್ತಿದೆ.
ಇದಕ್ಕೆಲ್ಲಾ ಕಾರಣವಾಗಿದ್ದು ಗಾಯತ್ರಿ ಗೋಪಕುಮಾರ್ ಎಂಬುವವರು ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡ ಆ ಒಂದು ಪೋಸ್ಟ್. ಈಗಾಗಲೇ ಆ ಪೋಸ್ಟ್‌ಗೆ ಸಾವಿರಾರು ಜನರು ಲೈಕ್ ಮಾಡಿದ್ದು, ಹಲವು ಬಗೆಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಅವರು ಗುರುಮೂರ್ತಿ ಎಂಬುವವರ ಆಟೋದಲ್ಲಿ ಹೋಗುವಾಗ ಅದರಲ್ಲಿದ್ದ ಒಂದು ಪೋಸ್ಟರ್ ಗಮನಿಸಿದ್ದಾರೆ. ಆ ಪೋಸ್ಟರ್‌ನಲ್ಲಿ “"ನಾನು ವೃತ್ತಿಪರ ಟಿಟಿ ತರಬೇತುದಾರ. ಟಿಟಿಯಲ್ಲಿ ತರಬೇತಿ ಪಡೆಯಲು ಬಯಸುವ ಯಾರಿಗಾದರೂ - ವ್ಯಕ್ತಿಗಳು, ಕ್ಲಬ್ ಅಪಾರ್ಟ್‌ಮೆಂಟ್ ಕ್ಲಬ್ ಮನೆಗಳು, ಶಾಲೆಗಳೊಂದಿಗೆ ನನ್ನ ಕಾಂಟ್ಯಾಕ್ಟ್ ನಂಬರ್ ಹಂಚಿಕೊಳ್ಳಿ. ಧನ್ಯವಾದಗಳು," ಎಂದು ಬರೆಯಲಾಗಿತ್ತು.
"ಈ ಅದ್ಭುತ ಭೇಟಿಯನ್ನು ನಾನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಬೇಕಾಯಿತು! ಇಂದು ಬೆಳಿಗ್ಗೆ, ಬೆಂಗಳೂರಿನಲ್ಲಿ ವೃತ್ತಿಪರ ಆಟೋ-ರಿಕ್ಷಾ ಚಾಲಕ ಗುರುಮೂರ್ತಿ ಎನ್ ಅವರನ್ನು ಭೇಟಿಯಾಗುವ ಭಾಗ್ಯ ನನಗೆ ಸಿಕ್ಕಿತು. ಆದರೆ ಅಷ್ಟೇ ಅಲ್ಲ - ಅವರು ಟೇಬಲ್ ಟೆನಿಸ್ ತರಬೇತುದಾರರೂ ಹೌದು!" ಎಂದು ಗಾಯತ್ರಿ ಅವರು ತಮ್ಮ ಪೋಸ್ಟ್ ಜತೆ ಕ್ಯಾಪ್ಶನ್ ಹಾಕಿದ್ದರು. ಗುರುಮೂರ್ತಿ ಜತೆ ಮಾತನಾಡುವಾಗ, ಅವರೊಬ್ಬ ವೃತ್ತಿಪರ ಟೇಬಲ್ ಟೆನ್ನಿಸ್ ತರಬೇತುದಾರ ಎಂಬುದನ್ನು ಕಂಡುಕೊಂಡೆ. ಹಲವು ವೃತ್ತಿಗಳನ್ನು ನಿಭಾಯಿಸುವುದು ನಿಜಕ್ಕೂ ಶ್ರೇಷ್ಠ ಕೆಲಸ. ಇದೇ ನಿಜವಾದ ಸ್ಫೂರ್ತಿ ಎಂದು ಗಾಯತ್ರಿ ಅವರು ಹೇಳಿದರು.
ಗಮನಾರ್ಹವಾಗಿ, ಮಲ್ಲೇಶ್ವರಂ ಮೂಲದ ಶ್ರೀ ಗುರುಮೂರ್ತಿ, ಕರ್ನಾಟಕ ರಾಜ್ಯ ಟೇಬಲ್ ಟೆನಿಸ್ ತಂಡಕ್ಕೆ ಪೂರ್ಣಾವಧಿ ತರಬೇತುದಾರರಾಗಿ ಕೆಲಸ ಮಾಡಿದ್ದರು. ಆದರೆ COVID-19 ಸಾಂಕ್ರಾಮಿಕ ರೋಗ ಬಂದಾಗ, ತಮ್ಮ ವೃತ್ತಿಯನ್ನು ತ್ಯಜಿಸಿ ಅವರು ರಿಕ್ಷಾ ಚಾಲಕರಾಗಿ ಕೆಲಸ ಮಾಡಬೇಕಾದ ಪರಿಸ್ಥಿತಿ ಬಂದು ಒದಗಿತು.
ಈ ಸುದ್ದಿಯನ್ನು ಓದಿ: Viral Video: ಟಿಕೆಟ್ ಇಲ್ಲದೆ ಎಸಿ ಕೋಚ್ ಪ್ರಯಾಣ; ಪ್ರಶ್ನಿಸಿದ್ದ ಟಿಟಿಗೆ ಬೆದರಿಕೆ ಹಾಕಿದ ಕಾನ್‌ಸ್ಟೆಬಲ್ ಪತ್ನಿ!
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ಹಲವು ಬಗೆಯಲ್ಲಿ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ಹಲವರು ಗುರುಮೂರ್ತಿಯವರ ಕಠಿಣ ಪರಿಶ್ರಮವನ್ನು ಶ್ಲಾಘಿಸಿದ್ದಾರೆ."ಶ್ರೀ ಗುರುಮೂರ್ತಿಯವರಂತಹ ವ್ಯಕ್ತಿಗಳು ಹೊಂದಿರುವ ಬಹುಮುಖತೆ ಪ್ರತಿಭೆಯನ್ನು ಈ ಪೋಸ್ಟ್ ನಿಜವಾಗಿಯೂ ಎತ್ತಿ ತೋರಿಸುತ್ತದೆ" ಎಂದು ಒಬ್ಬರು ಹೇಳಿದ್ದಾರೆ. ಇದರೊಂದಿಗೆ, ಶೈಕ್ಷಣಿಕ ಪರೀಕ್ಷೆಗಳು ಮುಗಿದ ನಂತರ ಪೋಷಕರು ತಮ್ಮ ಮಕ್ಕಳನ್ನು ಗುರುಮೂರ್ತಿಯವರ ಅಡಿಯಲ್ಲಿ ತರಬೇತಿಗೆ ದಾಖಲಿಸಬೇಕೆಂದು ಮತ್ತೊಬ್ಬರು ಒತ್ತಾಯಿಸಿದ್ದಾರೆ.
ಗುರುಮೂರ್ತಿಯವರ ಈ ಕಥೆಯು ನಮ್ಮ ವೃತ್ತಿ ನಮ್ಮನ್ನು ವ್ಯಾಖ್ಯಾನಿಸುವುದಿಲ್ಲ ಎಂಬುದನ್ನು ತೋರಿಸಿಕೊಟ್ಟಿವೆ. ಉತ್ಸಾಹ, ಸಮರ್ಪಣಾ ಭಾವ ಮತ್ತು ಕಠಿಣ ಪರಿಶ್ರಮದಿಂದ ನಾವು ಏನು ಬೇಖಾದರೂ ಸಾಧಿಸಬಹುದು ಎಂಬುದಕ್ಕೆ ಅತ್ಯಾಪ್ತ ನಿದರ್ಶನವಾಗಿದೆ.