Viral Video: ಟಿಕೆಟ್ ಇಲ್ಲದೆ ಎಸಿ ಕೋಚ್‌ನಲ್ಲಿ ಜರ್ನಿ... ಪ್ರಶ್ನಿಸಿದ್ದ ಟಿಟಿಇಗೆ ಧಮ್ಕಿ!ದರ್ಪ ಮೆರೆದ ಕಾನ್‌ಸ್ಟೇಬಲ್ ಪತ್ನಿಯ ವಿಡಿಯೊ ವೈರಲ್
ಹಬ್ಬದ ಸಮಯದಲ್ಲಿ ರೈಲ್ವೆ ಟಿಕೆಟ್ ಸಿಗೋದೇ ಕಷ್ಟ. ಅಂತಹದ್ರಲ್ಲಿ ಕಾನ್‌ಸ್ಟೇಬಲ್ ಪತ್ನಿಯೊಬ್ಬಳು ಟಿಕೆಟ್ ಪಡೆಯದೇ ಎಸಿ ಕೋಚ್ ಹತ್ತಿ ಪ್ರಯಾಣಿಸಿದ್ದಾಳೆ. ಇದನ್ನು ಪ್ರಶ್ನಿಸಿದ ಟಿಟಿಇಗೂ ಈಕೆ ಧಮ್ಕಿ ಹಾಕಿ ಪುಂಡಾಟ ಮೆರೆದಿದ್ದಾಳೆ. ಈ ವಿಡಿಯೊ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗ್ತಿದೆ.


ನವದೆಹಲಿ: ದೇಶಾದ್ಯಂತ ಹೋಳಿ ಸಂಭ್ರಮ ಮನೆ ಮಾಡಿದ್ದು ಕುಟುಂಬದ ಜೊತೆ ಹಬ್ಬ ಆಚರಿಸುವ ಅನೇಕ ಜನರು ತಮ್ಮ ತಮ್ಮ ಊರಿನತ್ತ ಪಯಣ ಬೆಳೆಸುತ್ತಿದ್ದಾರೆ. ಹೀಗಾಗಿ ಸಾರಿಗೆ ಸಂಪರ್ಕಗಳಾದ ಬಸ್ , ಟ್ರೈನ್ ಟಿಕೆಟ್‌ಗಳನ್ನು ಕಾಯ್ದಿರಿಸುವುದು ಕಷ್ಟಕರವಾದ ಕೆಲಸ. ಇನ್ನು ಈ ಹಬ್ಬದ ಸಮಯದಲ್ಲಿ ಹೆಚ್ಚಿನ ಜನದಟ್ಟಣೆ ಇರುವುದರಿಂದ ಟಿಕೆಟ್‌ಗಳು ಕನ್ಫರ್ಮ್ ಆಗಲ್ಲ. ಈ ಸಮಯದಲ್ಲಿ ಟಿಕೆಟ್ ಸಿಕ್ಕಿಲ್ಲ ಎಂದು ಕೆಲ ಜನ ಪರದಾಡಿದ್ರೆ ಇನ್ನೊಂದೆಡೆ ಕೆಲವು ಅಧಿಕಾರಿಗಳು ಅಧಿಕಾರ ದುರ್ಬಳಕೆ ಮಾಡ್ಕೊಂಡು ಟಿಕೆಟ್ ಇಲ್ಲದೇ ಎಸಿ ಕಂಪಾರ್ಟ್‌ಮೆಂಟ್‌ನಲ್ಲಿ ಪ್ರಯಾಣ ಬೆಳೆಸಿದ್ದಾರೆ. ಇತ್ತೀಚೆಗೆ ಸರಕಾರಿ ರೈಲ್ವೇ ಕಾನ್‌ಸ್ಟೇಬಲ್ ಪತ್ನಿ ಟಿಕೆಟ್ ಇಲ್ಲದೆ ಎಸಿ ಕೋಚ್ ನಲ್ಲಿ ಪ್ರಯಾಣಿಸಿದ್ದು ಪ್ರಶ್ನಿಸಿದ್ದ ಟಿಟಿಇಗೆ ಬೆದರಿಕೆ ಹಾಕಿರುವ ದೃಶ್ಯ ವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗುತ್ತಿದೆ. ಈ ದೃಶ್ಯ ನೋಡಿದ ನೆಟ್ಟಿಗರು ಕಾನ್‌ಸ್ಟೇಬಲ್ ಪತ್ನಿಗೆ ಅಧಿಕಾರದ ದರ್ಪ ನೆತ್ತಿಗೇರಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಮಾರ್ಚ್ 10ರಂದು ನವದೆಹಲಿಯಿಂದ ಸೋಗಾರಿಯಾ ಎಕ್ಸ್ ಪ್ರೆಸ್ ನಲ್ಲಿ ಕಾನ್ ಸ್ಟೇಬಲ್ ಹಾಗೂ ಅವರ ಪತ್ನಿ ಪ್ರಯಾಣ ಮಾಡಿದ್ದಾರೆ. ಆದರೆ ಕಾನ್ ಸ್ಟೇಬಲ್ ಪತ್ನಿ ಸ್ಲೀಪರ್ ಕೋಚ್ ಟಿಕೆಟ್ ಪಡೆದು ಎಸಿ ಕಂಪಾರ್ಟ್ ಮೆಂಟ್ ನಲ್ಲಿ ಪ್ರಯಾಣಿಸಿದ್ದಾರೆ. ಇದನ್ನು ಗಮನಿಸಿದ ಟಿಟಿಇ ಮುಂದಿನ ನಿಲ್ದಾಣದಲ್ಲಿ ಇಳಿಯಬೇಕು ಎಂದು ಸೂಚಿಸಿದ್ದರು. ಆದರೆ ಕಾನ್ಸ್ ಟೇಬಲ್ ಪತ್ನಿ ತಮ್ಮ ಅಧಿಕಾರದ ದುರುಪಯೋಗ ಪಡಿಸಿಕೊಂಡು ಟಿಟಿಇ ಜೊತೆ ವಾಗ್ವಾದಕ್ಕೆ ಇಳಿದಿದ್ದಾರೆ.
वीडियो में कांस्टेबल टीटीई से कहता दिख रहा है कि वह वीडियो न बनाए !!
— MANOJ SHARMA LUCKNOW UP🇮🇳🇮🇳🇮🇳 (@ManojSh28986262) March 13, 2025
होली के अवसर पर रेलवे में यात्रियों की भारी भीड़ देखी जा रही है, जिससे यात्रियों को वेटिंग टिकट का सामना करना पड़ रहा है. इसी बीच, नई दिल्ली-सोगरिया एक्सप्रेस ट्रेन में 10 मार्च को एक पुलिस कांस्टेबल और टीटीई… pic.twitter.com/hYhyDyZTpn
ಈ ಸಂದರ್ಭ ಟಿಟಿ ಜೊತೆ ಕಾನ್ಸ್ ಸ್ಟೇಬಲ್ ಪತ್ನಿ ಜಗಳಕ್ಕೆ ಇಳಿದಿದ್ದಾರೆ. ನಾನು ಏನು ಬೇಕಾದರೂ ಮಾಡುತ್ತೇನೆ, ದೊಡ್ಡ ದೊಡ್ಡ ಅಧಿಕಾರಿಗಳ ಪರಿಚಯ ನನಗಿದೆ, ವಿಡಿಯೊ ಮಾಡಿದ್ರೆ ನಿನ್ನ ಫೋನ್ ಕಿತ್ತುಕೊಳ್ಳುವೆ ಎಂದು ಟಿಟಿಗೆ ಬೆದರಿಕೆ ಹಾಕಿದ್ದಾರೆ. ಇದಕ್ಕೆ ಟಿಟಿಇ ಕೂಡ ಪ್ರತಿಕ್ರಿಯೆ ನೀಡಿ ನನಗೂ ಐಪಿಎಸ್ ಅಧಿಕಾರಿಗಳ ಪರಿಚಯ ಇದೆ. ಟಿಕೆಟ್ ರಹಿತ ಪ್ರಯಾಣ ಕಾನೂನು ಬಾಹಿರ ಎಂದು ಮಾತಿನಲ್ಲೇ ತಿರುಗೇಟು ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕಾನ್ ಸ್ಟೇಬಲ್ ಕೂಡ ನಾನೇ ಈ ಕೋಚ್ ನ ಮುಖ್ಯಸ್ಥ ಎಂಬಂತೆ ಹೇಳಿಕೆ ನೀಡಿದ್ದಾರೆ.
ಈ ಘಟನೆ ನಂತರ ಮುಖ್ಯ ಟಿಕೆಟ್ ಪರೀಕ್ಷಕ ರಾಕೇಶ್ ಕುಮಾರ್ ಪಿಪಲ್ ಕಾನ್ ಸ್ಟೇಬಲ್ ಎಂ.ಕೆ. ಮೀನಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಿರಿಯ ಡಿಸಿಎಂ ಅಧಿಕಾರಿಗೆ ದೂರು ಸಲ್ಲಿಸಿದ್ದಾರೆ. ಆ ಬಳಿಕ ಕಾನ್ ಸ್ಟೇಬಲ್ ಪತ್ನಿಗೆ ಗಂಗಾಪುರಕ್ಕೆ ಪ್ರಯಾಣ ಮಾಡಲು ಸ್ಲಿಪರ್ ಕೋಚ್ ಗೆ ನಲ್ಲಿ ಪ್ರಯಾಣಿಸಲು ತಿಳಿಸಿ 530 ರೂಪಾಯಿ ದಂಡವನ್ನು ಸಹ ವಸೂಲಿ ಮಾಡ ಲಾಗಿದೆ. ದೆಹಲಿಯ ಸೊಗಾರಿಯಾ ಎಕ್ಸ್‌ಪ್ರೆಸ್ ಈ ಘಟನೆ ಬಗ್ಗೆ ವರದಿ ಮಾಡಿದ್ದು ಸಂಪೂರ್ಣ ತನಿಖೆ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕೋಟಾ ಹಿರಿಯ ಡಿಸಿಎಂ ಅಧಿಕಾರಿ ಸೌರಭ್ ಜೈನ್ ಈ ಬಗ್ಗೆ ತಿಳಿಸಿದ್ದಾರೆ.
ಇದನ್ನು ಓದಿ: Viral Video: ಇರಾನ್‍ನಲ್ಲಿ ರಕ್ತದ ಮಳೆ; ಕೆಂಪು ಬಣ್ಣಕ್ಕೆ ತಿರುಗಿದ ಸಮುದ್ರದ ನೀರು: ಕಾರಣವೇನು?
ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿದ್ದು ನೆಟ್ಟಿಗರು ನಾನಾ ಬಗೆಯ ಕಮೆಂಟ್ ಮಾಡಿದ್ದಾರೆ. ಬಳಕೆದಾರ ರೊಬ್ಬರು ಅಧಿಕಾರದ ದರ್ಪವೇ ಈ ರೀತಿ ನಡವಳಿಕೆಗೆ ಕಾರಣ ಆಗುತ್ತಿದೆ, ನಿಯಮ ಎಲ್ಲರಿಗೂ ಒಂದೇ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಮೊತ್ತೊಬ್ಬರು ವಿಮಾನ ನಿಲ್ದಾಣಗಳಂತೆ ರೈಲ್ವೆಗೆ ಒಂದು ವ್ಯವಸ್ಥೆ ಬೇಕು, ಮಾನ್ಯವಾದ ಕಾಯ್ದಿರಿಸಿದ ಟಿಕೆಟ್ ಹೊಂದಿರುವ ಪ್ರಯಾಣಿಕರಿಗೆ ಮಾತ್ರ ಅನುಮತಿ ನೀಡಬೇಕು"ಎಂದು ಬಳಕೆದಾರರೊಬ್ಬರು ಟ್ವೀಟ್ ಮಾಡಿದ್ದಾರೆ.