Viral Video: 13 ವರ್ಷದ ವಿದ್ಯಾರ್ಥಿ ಜೊತೆ 23 ವರ್ಷದ ಶಿಕ್ಷಕಿ ಪರಾರಿ! ಈ ಕಿʼಲೇಡಿʼ ಸಿಕ್ಕಿ ಬಿದ್ದಿದ್ದೇ ರೋಚಕ
ತನ್ನ ಮನೆಗೆ ಟ್ಯೂಷನ್‍ಗಾಗಿ ಬರುತ್ತಿದ್ದ 13 ವರ್ಷದ ವಿದ್ಯಾರ್ಥಿಯನ್ನು 23 ವರ್ಷದ ಮಹಿಳಾ ಶಿಕ್ಷಕಿಯೊಬ್ಬಳು ಅಪಹರಿಸಿದ ಘಟನೆ ಗುಜರಾತ್‍ನ ಸೂರತ್‍ನಲ್ಲಿ ನಡೆದಿದೆ. ಇದೀಗ ನಗರ ಪೊಲೀಸರು ಅವರನ್ನು ಹುಡುಕಲು ಹಲವಾರು ತಂಡಗಳನ್ನು ರಚಿಸಿ ಕೊನೆಗೆ ಆಕೆಯನ್ನು ಬಂಧಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.


ಗಾಂಧಿನಗರ: 23 ವರ್ಷದ ಮಹಿಳಾ ಶಿಕ್ಷಕಿಯೊಬ್ಬಳು ತನ್ನ 13 ವರ್ಷದ ವಿದ್ಯಾರ್ಥಿ ಜೊತೆ ಪರಾರಿಯಾಗಿರುವ ಘಟನೆ ಗುಜರಾತ್‍ನ ಸೂರತ್‍ನಲ್ಲಿ ನಡೆದಿದೆ. ಇದೀಗ ನಗರ ಪೊಲೀಸರು ಅವರನ್ನು ಹುಡುಕಲು ಹಲವಾರು ತಂಡಗಳನ್ನು ರಚಿಸಿ ಕೊನೆಗೆ ಆಕೆಯನ್ನು ಬಂಧಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video)ಆಗಿದೆ. ವಿದ್ಯಾರ್ಥಿಗೆ ಶಾಲೆಯಲ್ಲಿ ಮತ್ತು ಟ್ಯೂಷನ್ ತರಗತಿಯಲ್ಲಿ ಕಲಿಸುತ್ತಿದ್ದ ಈ ಶಿಕ್ಷಕಿ, ಪುನಾ ಪೊಲೀಸ್ ಠಾಣೆ ವ್ಯಾಪ್ತಿಯ ಮಾಗೋಬ್ ಪ್ರದೇಶದ ಒಂದೇ ಹೌಸಿಂಗ್ ಸೊಸೈಟಿಯಲ್ಲಿ ವಾಸಿಸುತ್ತಿದ್ದಳು ಎಂಬುದಾಗಿ ತಿಳಿದುಬಂದಿದೆ.
ದೂರಿನ ಪ್ರಕಾರ, ವಿದ್ಯಾರ್ಥಿಯ ಕುಟುಂಬವು ರಾಜಸ್ಥಾನ ಮೂಲದವರಾಗಿದ್ದರೆ, ಶಿಕ್ಷಕಿ ಮೆಹ್ಸಾನಾ ಮೂಲದವಳು. ಅವರು ಒಂದೇ ಕಟ್ಟಡದಲ್ಲಿ ವಾಸವಾಗಿದ್ದು, ಮೂರನೇ ಮಹಡಿಯಲ್ಲಿ ಶಿಕ್ಷಕಿ ಮತ್ತು ಎರಡನೇ ಮಹಡಿಯಲ್ಲಿ ವಿದ್ಯಾರ್ಥಿಯ ಕುಟುಂಬ ವಾಸಿಸುತ್ತಿತ್ತು. ಶಿಕ್ಷಕಿ ಕಳೆದ ಮೂರು ವರ್ಷಗಳಿಂದ ಆ ವಿದ್ಯಾರ್ಥಿಗೆ ಪಾಠ ಹೇಳಿಕೊಡುತ್ತಿದ್ದಳಂತೆ.
ವಿಡಿಯೊ ಇಲ್ಲಿದೆ ನೋಡಿ...
Surat માં 23 વર્ષની શિક્ષિકા 11 વર્ષના વિદ્યાર્થીને ભગાડીને છેક ક્યાં લઈ ગઈ? | Gujarat Samachar#Surat #Gujarat #GujaratiNews #GujaratSamachar pic.twitter.com/NFjK5JD1m8
— Gujarat Samachar (@gujratsamachar) April 30, 2025
ಕಳೆದ 10 ದಿನಗಳಿಂದ ರಜೆಯಲ್ಲಿದ್ದ ಈ ವಿದ್ಯಾರ್ಥಿ ಇತ್ತೀಚೆಗೆ ಮಧ್ಯಾಹ್ನದ ವೇಳೆ ಅಕ್ಕಪಕ್ಕದ ಮಕ್ಕಳ ಜೊತೆ ಆಟವಾಡಲು ಹೊರಗೆ ಹೋಗಿದ್ದ. ನಂತರ ಆತ ಮನೆಗೆ ಹಿಂದಿರುಗಲಿಲ್ಲ. ಇದರಿಂದ ಗಾಬರಿಗೊಂಡ ಕುಟುಂಬವು ಅವನನ್ನು ಹುಡುಕಲು ಶುರುಮಾಡಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ, ವಿದ್ಯಾರ್ಥಿ ಹೌಸಿಂಗ್ ಸೊಸೈಟಿಯ ಬಳಿ ಶಿಕ್ಷಕಿಯೊಂದಿಗೆ ಕಾಣಿಸಿಕೊಂಡಿದ್ದಾನೆ. ಈ ಬಗ್ಗೆ ವಿಚಾರಿಸಲು ಕುಟುಂಬವು ಶಿಕ್ಷಕಿಯ ಮನೆಗೆ ಭೇಟಿ ನೀಡಿದಾಗ ಅಲ್ಲಿ ಆಕೆಯ ಕುಟುಂಬವು ಆಕೆಯ ಫೋನ್ ಸ್ವಿಚ್ ಆಫ್ ಆಗಿದೆ ಮತ್ತು ಮಧ್ಯಾಹ್ನ 2 ಗಂಟೆ ಸುಮಾರಿಗೆ ಮನೆಯಿಂದ ಹೊರಗೆ ಹೋಗಿದ್ದಾಳೆ ಎಂದು ಮಾಹಿತಿ ನೀಡಿದ್ದಾರೆ.
ವಿದ್ಯಾರ್ಥಿಯನ್ನು ಹುಡುಕಲು ಸಾಧ್ಯವಾಗದ ಕುಟುಂಬವು ಮರುದಿನ ಮುಂಜಾನೆ ಪೊಲೀಸ್ ಠಾಣೆಗೆ ದೂರು ನೀಡಿ ಬಿಎನ್ಎಸ್ 137 (2) ಅಡಿಯಲ್ಲಿ ಅಪಹರಣ ಪ್ರಕರಣವನ್ನು ದಾಖಲಿಸಿದ್ದಾರೆ. ಪ್ರಕರಣದ ತನಿಖೆಗಾಗಿ ಪೊಲೀಸರು ಅನೇಕ ತಂಡಗಳನ್ನು ರಚಿಸಿದ್ದಾರೆ. ಘಟನೆಯ ನಡೆದ ದಿನ ಸಂಜೆ 5 ಗಂಟೆ ಸುಮಾರಿಗೆ ಸೂರತ್ ರೈಲ್ವೆ ನಿಲ್ದಾಣದಲ್ಲಿ ಈ ಜೋಡಿ ಕೊನೆಯ ಬಾರಿಗೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನಂತರ ಶಿಕ್ಷಕಿ ತನ್ನ ಫೋನ್ ಸ್ವಿಚ್ ಆಫ್ ಮಾಡಿದ್ದಾಳೆ. ಶಿಕ್ಷಕಿ ಮೇಕ್ ಮೈ ಟ್ರಿಪ್ ವೆಬ್‌ಸೈಟ್‌ನಲ್ಲಿ ಟೂರ್ ಪ್ಯಾಕೇಜ್ ಅನ್ನು ಕಾಯ್ದಿರಿಸಿದ್ದಾಳೆ ಎಂದು ತನಿಖೆಯಿಂದ ತಿಳಿದುಬಂದಿದೆ. ಇದೀಗ ಪೊಲೀಸರು ಶಿಕ್ಷಕಿಯನ್ನು ಬಂದಿಸಿದ್ದಾರೆ. ಆಕೆಯ ಇನ್ನೊಂದು ಮೊಬೈಲ್ ಅನ್ನು ಟ್ರ್ಯಾಕ್ ಮಾಡಿದ್ದರಿಂದ ಆಕೆ ಸಿಕ್ಕಿಬಿದ್ದಿದ್ದಾಳೆ ಎನ್ನಲಾಗಿದೆ.
ವಿದ್ಯಾರ್ಥಿ ಕಳೆದ ಮೂರು ವರ್ಷಗಳಿಂದ ಶಿಕ್ಷಕಿಯಿಂದ ಟ್ಯೂಷನ್ ತೆಗೆದುಕೊಳ್ಳುತ್ತಿದ್ದನಂತೆ. ಈ ಹಿಂದೆ ಮೂವರು ವಿದ್ಯಾರ್ಥಿಗಳು ಟ್ಯೂಷನ್‍ಗೆ ಬರುತ್ತಿದ್ದರು. ಆದರೆ ಕಳೆದ ಒಂದು ವರ್ಷದಿಂದ ಈ ವಿದ್ಯಾರ್ಥಿ ಮಾತ್ರ ಟ್ಯೂಷನ್‍ಗಾಗಿ ಶಿಕ್ಷಕಿಯ ಮನೆಗೆ ಹೋಗುತ್ತಿದ್ದನಂತೆ.ಇದರಿಂದ ಇವರಿಬ್ಬರ ನಡುವೆ ಸಂಬಂಧ ಬೆಳೆದಿತ್ತಂತೆ.
ಈ ಸುದ್ದಿಯನ್ನೂ ಓದಿ:Viral Video: ಚಲಿಸುತ್ತಿದ್ದ ಬೈಕ್‌ನಲ್ಲಿ ಯುವಕನ ಅಪಾಯಕಾರಿ ಸ್ಟಂಟ್! ಇಲ್ಲಿದೆ ಭಯಾನಕ ವಿಡಿಯೊ!..
ಪೊಲೀಸರ ಪ್ರಕಾರ, 23 ವರ್ಷದ ಶಿಕ್ಷಕಿ ಮದುವೆಯ ಕುರಿತು ಒತ್ತಡದಲ್ಲಿದ್ದಳಂತೆ. ವಿದ್ಯಾರ್ಥಿಯು ಓದುವ ವಿಚಾರಕ್ಕೆ ತನ್ನ ಕುಟುಂಬದಿಂದ ಬೈಗುಳವನ್ನು ಕೇಳುತ್ತಿದ್ದನಂತೆ. ಹೀಗಾಗಿ ಇದು ಶಿಕ್ಷಕಿ ಹಾಗೂ ವಿದ್ಯಾರ್ಥಿಗೆ ಓಡಿಹೋಗಲು ಪ್ರೇರೇಪಿಸಿತು ಎನ್ನಲಾಗಿದೆ.