ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಆಟೋದೊಳಗೊಂದು ಲೈವ್‌ ಅಕ್ವೇರಿಯಂ! ಈ ಪ್ರಯಾಣ ನಿಜಕ್ಕೂ ಸುಖಕರ

ಮಹಾರಾಷ್ಟ್ರದ ಪುಣೆಯ ಗಲ್ಲಿ ಬಳಿ ಆಟೋ ಹತ್ತಿದ ಮಹಿಳೆಗೆ ಸಿಕ್ಕಾಪಟ್ಟೆ ಶಾಕ್‌ ಆಗಿತಂತೆ. ಅರೇ... ಆಟೋ ಡ್ರೈವರ್‌ ಏನಾದರೂ ತೊಂದರೆ ನೀಡಿದ್ದಾನಾ... ಎಂದುಕೊಳ್ಳುತ್ತಿದ್ದೀರಾ...? ಹಾಗೇನೂ ಇಲ್ಲ ಆಟೋದೊಳಗೆ ಲೈವ್‌ ಅಕ್ವೇರಿಯಂ ನೋಡಿ ಮಹಿಳೆ ಫುಲ್‌ ಥ್ರಿಲ್‌ ಆಗಿ ಅದನ್ನು ವಿಡಿಯೊ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾಳೆ. ಇದು ಸಿಕ್ಕಾಪಟ್ಟೆ ವೈರಲ್‌(Viral News) ಆಗಿದೆ.

live aquariam

ಪುಣೆ: ಇತ್ತೀಚಿನ ದಿನಗಳಲ್ಲಿ ಆಟೋದವರೆಂದ್ರೆ ಸಾಕು ಮೂಗು ಮುರಿಯವವರೇ ಹೆಚ್ಚು. ಡಬಲ್‌ ಬಾಡಿಗೆ, ಪ್ರಯಾಣಿಕರ ಜೊತೆ ಕಿರಿಕ್‌ ಹೀಗೆ ದಿನ ಬೆಳಗಾದರೆ ಒಂದಲ್ಲ ಒಂದು ದೂರುಗಳು ಆಟೋ ಚಾಲಕರ ವಿರುದ್ಧ ಕೇಳಿಬರುತ್ತಲೇ ಇರುತ್ತವೆ. ಇವೆಲ್ಲದರ ನಡುವೆ ಪ್ರಯಾಣಿಕ ಸ್ನೇಹಿ ಆಟೋಗಳ ಬಗ್ಗೆ ಅಲ್ಲೊಮ್ಮೆ ಇಲ್ಲೊಮ್ಮೆ ಸುದ್ದಿಗಳು ಕೇಳಿಬರುತ್ತಿರುತ್ತವೆ. ಆಟೋಗಳನ್ನು ಹೂವು ಗಿಡಗಳಿಂದ ಸಿಂಗರಿಸಿ ಪ್ರಯಾಣಿಕರಿಗೆ ಮುದ ನೀಡುವಂತೆ ಮಾಡುವುದು. ಇಲ್ಲದಿದ್ದರೆ ಪ್ರಯಾಣಿಕರಿಗೆ ಪ್ರಯಾಣ ಬೋರ್‌ ಎನಿಸದಿರಲೆಂದು ಮನಸ್ಸಿಗೆ ಸಂತಸ ನೀಡುವ ಸಂಗೀತ ಅಥವಾ ಸ್ವಲ್ಪ ಥಾಟ್‌ಫುಲ್‌ ಆಗಿರಲೆಂದು ಪುಸ್ತಕಗಳನ್ನುಆಟೋದಲ್ಲಿ ಜೋಡಿಸುವುದು. ಹೀಗೆ ವೈವಿದ್ಯಮಯ ರೀತಿಯ ಆಟೋಗಳ ವಿಡಿಯೊಗಳು ಹರಿದಾಡುತ್ತಿರುತ್ತವೆ. ಇದೀಗ ಅಂತಹದ್ದೇ ಒಂದು ಆಟೋ ಸೋಶಿಯಲ್‌ ಮೀಡಿಯಾದಲ್ಲಿ ಸುದ್ದಿ(Viral Video) ಮಾಡುತ್ತಿದೆ.



ಪುಣೆಯಲ್ಲಿನ ಈ ಆಟೋ ಹತ್ತಿದ ಮಹಿಳೆ ಸಿಕ್ಕಾಪಟ್ಟೆ ಶಾಕ್‌ ಆಗಿದ್ದಾಳೆ.ಯಾಕೆಂದರೆ ಈ ಆಟೋದಲ್ಲಿ ಲೈವ್‌ ಅಕ್ವೇರಿಯಂ ಇದೆಯಂತೆ. ಇದನ್ನು ನೋಡಿದ ಮಹಿಳೆ ಫುಲ್‌ ಖುಷಿಯಾಗಿ ವಿಡಿಯೊ ಮಾಡಿದ್ದಾಳೆ. ಇದೀದ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌(Viral News) ಆಗಿದೆ. ಆಟೋರಿಕ್ಷಾದ ಒಳಗೆ ಲೈವ್ ಅಕ್ವೇರಿಯಂ ನೋಡಿ ಜನ ಕೂಡ ಫುಲ್‌ ಥ್ರಿಲ್‌ ಆಗಿದ್ದಾರೆ. ನಾವು ಕೂಡ ಈ ಆಟೋದಲ್ಲಿ ಹೋಗಬೇಕು ಎಂಬ ಆಸೆಯನ್ನು ವ್ಯಕ್ತಪಡಿಸಿದ್ದಾರೆ.ಅದು ಅಲ್ಲದೇ, ಇದಕ್ಕೆ ಹೆಚ್ಚುವರಿ ಹಣ ನೀಡುವುದಾದರೂ ಸರಿ ಎಂದು ಹೇಳಿದ್ದಾರಂತೆ.

ಆಟೋದಲ್ಲಿ ಅಕ್ವೇರಿಯಂ

ಆಟೋ ಚಾಲಕನ ಸೀಟಿನ ಹಿಂದೆ ಮೀನುಗಳಿಂದ ತುಂಬಿದ ಅಕ್ವೇರಿಯಂ ಅನ್ನು ಇರಿಸಲಾಗಿತ್ತು. ಮತ್ತು ಆಟೋದ ಒಳಗೆ ಬಣ್ಣ ಬಣ್ಣದ ಲೈಟ್ ಸೆಟ್ಟಿಂಗ್ ಮಾಡಲಾಗಿತ್ತು. ಮಹಿಳೆ ತನ್ನ ಕ್ಯಾಮೆರಾದಲ್ಲಿ ಇದರ ವಿಡಿಯೊ ಮಾಡಿದ್ದಾಳೆ. ಈ ಆಟೋದಲ್ಲಿ ಕುಳಿತರೆ ಪ್ರಯಾಣಿಕರ ಮನಸ್ಸಿಗೆ ಸಿಕ್ಕಾಪಟ್ಟೆ ಖುಷಿಯಾಗುತ್ತದೆಯಂತೆ.

ಅಕ್ವೇರಿಯಂ ಅಳವಡಿಸಿದ ಈ ವಾಹನದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಇದು ಎರಡು ಲಕ್ಷಕ್ಕೂ ಹೆಚ್ಚು ಲೈಕ್ ಗಳನ್ನು ಪಡೆಯಿತು. ಈ ವಿಡಿಯೊಗೆ ಅನೇಕರು ಕಾಮೆಂಟ್ ಮಾಡಿದ್ದಾರೆ. “ಇದರಲ್ಲಿ ಕುಳಿತುಕೊಳ್ಳಲು ಹೆಚ್ಚುವರಿ ಹಣವನ್ನು ನೀಡಬೇಕಾಗುತ್ತದೆಯೇ?” ಎಂದು ನೆಟ್ಟಿಗರೊಬ್ಬರು ಕುತೂಹಲದಿಂದ ಕೇಳಿದ್ದಾರೆ. ಹಾಗೇ ಇನ್ನೊಬ್ಬರು "ಈ ಸವಾರಿಗಾಗಿ ನಾನು ಮೂರು ಪಟ್ಟು ಹಣವನ್ನು ಪಾವತಿಸುತ್ತೇನೆ" ಎಂದು ಉತ್ತರಿಸಿದ್ದಾರೆ. "ಇದನ್ನು ಅನುಭವಿಸಲು ನಾನು ನನ್ನ ಎಲ್ಲವನ್ನೂ ನೀಡುತ್ತೇನೆ" ಎಂದು ಮತ್ತೊಬ್ಬರು ತಿಳಿಸಿದ್ದಾರೆ. ಆಟೋದಲ್ಲಿ ಜೀವಂತ ಮೀನುಗಳನ್ನು ಸಾಕಿರುವ ಬಗ್ಗೆ ಕೆಲವರು ಕಳವಳ ವ್ಯಕ್ತಪಡಿಸಿದ್ದಾರೆ. ಇದು ಅಸುರಕ್ಷಿತ ಮತ್ತು ಹಾನಿಕಾರಕ ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Viral Video: ಚಾಲಕನಿಲ್ಲದೇ ಚಲಿಸಿದ ಆಟೋ; ʼಹಾಂಟೆಡ್ ಆಟೋʼ ಎಂದ ನೆಟ್ಟಿಗರು!
ಇವರ ಕಾಮೆಂಟ್‍ಗೆ ಸಮರ್ಥನೆ ನೀಡಿದ ಕೆಲವರು, ಮೀನುಗಳನ್ನು ಶುದ್ಧವಾದ ನೀರಿನಲ್ಲಿ ಇರಿಸಲಾಗಿದೆ ಮತ್ತು ಅಕ್ವೇರಿಯಂನಲ್ಲಿ ಉತ್ತಮ ಗಾಳಿಯಾಡುತ್ತಿದೆ, ನೀರು ಸ್ವಚ್ಛವಾಗಿದೆ, ಚಾಲಕ ಅದರ ಬಗ್ಗೆ ಗಮನ ಹರಿಸುತ್ತಿರುವುದರಿಂದ ಮೀನುಗಳಿಗೆ ಅಷ್ಟು ಒತ್ತಡವಿಲ್ಲ ಎಂದಿದ್ದಾರೆ.