Viral Video: ಚಾಲಕನಿಲ್ಲದೇ ಚಲಿಸಿದ ಆಟೋ; ʼಹಾಂಟೆಡ್ ಆಟೋʼ ಎಂದ ನೆಟ್ಟಿಗರು!
ದೆಹಲಿಯ ಬೀದಿಗಳಲ್ಲಿ ಚಾಲಕನ ಸಹಾಯವಿಲ್ಲದೇ ಆಟೋವೊಂದು ಚಲಿಸಿದೆ.ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ನೆಟ್ಟಿಗರನ್ನು ದಿಗ್ಭ್ರಮೆಗೊಳಿಸಿದೆ. ಆದರೆ ಆಟೋ ಈ ರೀತಿ ಚಲಿಸಲು ಕಾರಣವೇನು? ಇದಕ್ಕೆ ನೆಟ್ಟಿಗರು ಹೇಳಿದ್ದೇನು?
ನವದೆಹಲಿ, ಜ.18,2025: ಚಾಲಕನಿಲ್ಲದೇ ಆಟೋರಿಕ್ಷಾವೊಂದು ದೆಹಲಿಯ ಬೀದಿಗಳಲ್ಲಿ ಪ್ರಯಾಣಿಸಿದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್(Viral Video) ಆಗಿದೆ. ಇದು ಸೋಶಿಯಲ್ ಮೀಡಿಯಾದ ವೀಕ್ಷಕರನ್ನು ದಿಗ್ಭ್ರಮೆಗೊಳಿಸಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ 'ದೆಹಲಿ ಸೆ ಸ್ಕೈ' ಎಂಬ ಇನ್ಸ್ಟಾಗ್ರಾಂ ಪೇಜ್‍ನಲ್ಲಿ ಅಪ್ಲೋಡ್ ಮಾಡಲಾದ ಈ ವಿಡಿಯೊ ಈಗ ಕೂಡ ನೆಟ್ಟಿಗರ ಗಮನ ಸೆಳೆಯುತ್ತಿದೆ.
ಆಟೋ ತಾನಾಗಿಯೇ ಚಲಿಸಲು ಹೇಗೆ ಸಾಧ್ಯ? ರಾಷ್ಟ್ರ ರಾಜಧಾನಿಯ ಬೀದಿಗಳಲ್ಲಿ ಯಾವುದೇ ಚಾಲಕನಿಲ್ಲದೆ ವಾಹನ ಚಲಿಸುವ ವಿಡಿಯೊವನ್ನು ನೋಡಿದ ನಂತರ ಈ ಪ್ರಶ್ನೆ ವೀಕ್ಷಕರನ್ನು ಗೊಂದಲಕ್ಕೀಡು ಮಾಡಿದೆ. ಈ ವೈರಲ್ ವಿಡಿಯೊದಲ್ಲಿ ಆಟೋ ರಸ್ತೆಯಲ್ಲಿ ಚಲಿಸುತ್ತಿದೆ. ಆದರೆ ಚಾಲಕನ ಸೀಟಿನಲ್ಲಿ ಯಾವುದೇ ವ್ಯಕ್ತಿ ಕುಳಿತಿಲ್ಲ. ಈ ವಿಡಿಯೊದಲ್ಲಿ ಆಟೋ ಯಾವುದೇ ಚಾಲಕನ ಸಹಾಯವಿಲ್ಲದೇ ರಸ್ತೆಯಲ್ಲಿ ಚಲಿಸಿದೆ.
ಸೋಷಿಯಲ್ ಮೀಡಿಯಾ ಪೋಸ್ಟ್ ಪ್ರತಿಕ್ರಿಯಿಸಿದ ನೆಟ್ಟಿಗರೊಬ್ಬರು ಆಟೋವನ್ನು "ಟಾರ್ಜಾನ್: ದಿ ವಂಡರ್ ರಿಕ್ಷಾ" ಎಂದು ಕರೆದಿದ್ದಾರೆ. ಅಂದರೆ ಈ ಕಾಮೆಂಟ್‍ನ ಮೂಲಕ ನೆಟ್ಟಿಗರು ಕಾಲ್ಪನಿಕ ಚಿತ್ರ 'ಟಾರ್ಜಾನ್: ದಿ ವಂಡರ್ ಕಾರ್' ಅನ್ನು ನೆನೆಪಿಸಿಕೊಂಡಿದ್ದಾರೆ. ಇದರಲ್ಲಿ ಕೂಡ ಚಾಲಕನಿಲ್ಲದೇ ಕಾರು ಚಲಿಸುತ್ತಿತ್ತು. ಅನೇಕ ಇನ್‌ಸ್ಟಾಗ್ರಾಂ ಬಳಕೆದಾರರು ಇದನ್ನು "ಹಾಂಟೆಡ್ ಆಟೋ" ಎಂದು ಕರೆದಿದ್ದಾರೆ.
ಈ ಸುದ್ದಿಯನ್ನೂ ಓದಿ:Daavudi Song: 'ದಾವುಡಿ' ಹಾಡಿಗೆ ಕುಣಿದು ಕುಪ್ಪಳಿಸಿದ ಶಾಲಾ ಮಕ್ಕಳು; ವೈರಲ್ ವಿಡಿಯೊ ನೋಡಿ ನೆಟ್ಟಿಗರು ಫಿದಾ
ಕೆಲವರು ಆಟೋ ತಾನಾಗಿಯೇ ಚಲಿಸುವುದನ್ನು ಕಂಡು "ಆಟೋವನ್ನು ಎಳೆಯಲಾಗುತ್ತಿದೆ, ಸುಮ್ಮನಿರಿ" ಎಂದು ಹೇಳಿದ್ದಾರೆ.