ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ವಿಚ್ಛೇದನದಿಂದ ಬೇಸರಗೊಂಡು ರೈಲಿಗೆ ಬೆಂಕಿ ಹಚ್ಚಿದ ಭೂಪ

ವಿಚ್ಛೇದನದಿಂದ ಬೇಸರಗೊಂಡ ವ್ಯಕ್ತಿಯೊಬ್ಬ ಚಲಿಸುತ್ತಿದ್ದ ರೈಲಿನೊಳಗೆ ಬೆಂಕಿ ಹಚ್ಚಿರುವ ಘಟನೆ ಸಿಯೋಲ್‌ನಲ್ಲಿ ನಡೆದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. 67 ವರ್ಷದ ವಾನ್ ಎಂಬಾತ ವಿಚ್ಛೇದನದ ಕುರಿತು ನ್ಯಾಯಾಲಯ ನೀಡಿದ ತೀರ್ಪಿನಿಂದ ಬೇಸೆತ್ತು ಆತ ಸುರಂಗ ಮಾರ್ಗದೊಳಗೆ ಚಲಿಸುತ್ತಿದ್ದ ರೈಲಿನೊಳಗೆ ಬೆಂಕಿ ಹಚ್ಚಿದ್ದಾನೆ.

ಸಿಯೋಲ್: ವಿಚ್ಛೇದನದಿಂದ (Divorce) ಬೇಸರಗೊಂಡ ವ್ಯಕ್ತಿಯೊಬ್ಬ ಚಲಿಸುತ್ತಿದ್ದ ರೈಲಿನೊಳಗೆ ಬೆಂಕಿ ಹಚ್ಚಿರುವ (Fire To Moving Train) ಘಟನೆ ದಕ್ಷಿಣ ಕೊರಿಯಾದ ಸಿಯೋಲ್‌ನಲ್ಲಿ (Seoul) ನಡೆದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. 67 ವರ್ಷದ ವಾನ್ ಎಂಬಾತ ವಿಚ್ಛೇದನದ ಕುರಿತು ನ್ಯಾಯಾಲಯ ನೀಡಿದ ತೀರ್ಪಿನಿಂದ ಬೇಸೆತ್ತು ಆತ ಸುರಂಗ ಮಾರ್ಗದೊಳಗೆ ಚಲಿಸುತ್ತಿದ್ದ ರೈಲಿನೊಳಗೆ ಬೆಂಕಿ ಹಚ್ಚಿದ್ದಾನೆ. ಇದರ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ. ಈ ಘಟನೆಯಿಂದ ಅನೇಕ ಪ್ರಯಾಣಿಕರು ಗಾಬರಿಯಾಗಿದ್ದಾರೆ. ಕೆಲವರಿಗೆ ಸುಟ್ಟ ಗಾಯಗಳಾಗಿದ್ದು, ಇನ್ನು ಕೆಲವರು ಹೊಗೆಯಿಂದ ಅಸ್ವಸ್ಥಗೊಂಡಿದ್ದಾರೆ.

ಸಿಯೋಲ್ ಸಬ್‌ವೇ ಲೈನ್ 5ರಲ್ಲಿ ಬರುವ ಯೆಯೋಯಿನಾರು ನಿಲ್ದಾಣ ಮತ್ತು ಮಾಪೋ ನಿಲ್ದಾಣದ ನಡುವೆ ಪ್ರಯಾಣಿಸುತ್ತಿದ್ದ ರೈಲು ಮೇ 31ರಂದು ಹಾನ್ ನದಿಯ ಕೆಳಗಿರುವ ಸಮುದ್ರದ ಸುರಂಗದ ಮೂಲಕ ಹಾದುಹೋಗುತ್ತಿದ್ದಾಗ ಬೆಳಗ್ಗೆ ಸುಮಾರು 8.42ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ವಾನ್ ಎಂಬಾತ ಸುರಂಗ ಮಾರ್ಗದೊಳಗೆ ರೈಲು ಚಲಿಸುತ್ತಿದ್ದಾಗ ಗ್ಯಾಸೋಲಿನ್ ಸುರಿದು ಬೆಂಕಿ ಹಚ್ಚಿದ್ದಾನೆ ಎನ್ನಲಾಗಿದೆ.

ರೈಲಿನೊಳಗೆ ಬೆಂಕಿ ಹಚ್ಚಿದ ಪರಿಣಾಮ 22 ಮಂದಿ ಪ್ರಯಾಣಿಕರು ಹೊಗೆಯನ್ನು ಉಸಿರಾಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಮಾರು 129 ಮಂದಿಗೆ ಸ್ಥಳದಲ್ಲೇ ತುರ್ತು ಚಿಕಿತ್ಸೆ ನೀಡಲಾಯಿತು.

ಆರೋಪಿ ವಾನ್ ಅನ್ನು ಬಂಧಿಸಿದ ಪೊಲೀಸರು ಆತನನ್ನು ಕೂಡ ಆಸ್ಪತ್ರೆಗೆ ದಾಖಲಿಸಿದ್ದಾರೆ. ರೈಲಿನಲ್ಲಿ ಉಂಟಾದ ಬೆಂಕಿಯಿಂದ ಸುಮಾರು 2.07 ಕೋಟಿ ರೂ. ನಷ್ಟವಾಗಿದೆ.



ವಾನ್ ವಿಚ್ಛೇದನದಿಂದ ಬೇಸರಗೊಂಡು ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ಆರೋಪ ಪಟ್ಟಿಯನ್ನು ಸಲ್ಲಿಸಲಾಗಿದೆ. ಈ ಘಟನೆ ಮೇ 31ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇದರಿಂದ ಸಾಕಷ್ಟು ಮಂದಿ ಗಾಯಗೊಂಡಿದ್ದಾರೆ ಮತ್ತು ಅಪಾರ ಆಸ್ತಿ ಹಾನಿಯಾಗಿದೆ ಎಂದು ದೋಷಾರೋಪಣೆ ಪಟ್ಟಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Davanagere News: ಮದುವೆಯಾದ ಎರಡೇ ತಿಂಗಳಿಗೆ ಪತ್ನಿ ಬಿಟ್ಟು 55 ವರ್ಷದ ಅತ್ತೆ ಜತೆ ಅಳಿಯ ಎಸ್ಕೇಪ್‌!

ವಾನ್ ವಿರುದ್ಧ ಕೊಲೆ ಯತ್ನ, ಚಲಿಸುತ್ತಿರುವ ರೈಲಿಗೆ ಬೆಂಕಿ ಹಚ್ಚುವುದು ಮತ್ತು ರೈಲ್ವೆ ಸುರಕ್ಷತಾ ಕಾಯ್ದೆಯ ಉಲ್ಲಂಘನೆ ಸೇರಿದಂತೆ ಹಲವಾರು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಸಿಯೋಲ್ ದಕ್ಷಿಣ ಜಿಲ್ಲಾ ಪ್ರಾಸಿಕ್ಯೂಟರ್‌ ಕಚೇರಿ ಮಾಹಿತಿ ತಿಳಿಸಿದೆ.

ಜೂನ್ 9ರಂದು ಪೊಲೀಸರು ಆತನನ್ನು ವಶಕ್ಕೆ ಪಡೆದು ಪ್ರಾಸಿಕ್ಯೂಷನ್‌ಗೆ ಹಸ್ತಾಂತರಿಸಿದ್ದಾರೆ. ವಿಚ್ಛೇದನ ತೀರ್ಪಿನಿಂದ ಹತಾಶೆಗೊಂಡು ವಾನ್ ಈ ಕೃತ್ಯ ಎಸಗಿದ್ದಾನೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಭವಿಷ್ಯದಲ್ಲಿ ಈ ರೀತಿಯ ಘಟನೆಗಳು ನಡೆಯದಂತೆ ತಡೆಯಲು ಅಧಿಕಾರಿಗಳು ಆತನ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author