ಡೆಹ್ರಡೂನ್: ಉತ್ತರಾಖಂಡದ ನೈನಿತಾಲ್ ಪ್ರವಾಸದ ವೇಳೆ ದೆಹಲಿ ಮೂಲದ ಮಹಿಳಾ ಪ್ರವಾಸಿ ಬೈಕ್‍ನಲ್ಲಿ ಹೋಗುವಾಗ ನೈನಿತಾಲ್ ಪೊಲೀಸರು ಆಕೆಯನ್ನು ತಡೆದು ಕಪಾಳಮೋಕ್ಷ ಮಾಡಿ ಅವಮಾನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರವಾಸಿ ತಾಣದ ರಾಮಗಢ ಗುಡ್ಡಗಾಡು ಪ್ರದೇಶದ ಅನಧಿಕೃತ ಚೆಕ್‌ಪೋಸ್ಟ್‌ನಲ್ಲಿ ಮಹಿಳೆಯನ್ನು ನಿಲ್ಲಿಸಿ ವಾಹನ ದಾಖಲೆಗಳನ್ನು ತೋರಿಸುವಂತೆ ಕೇಳಿದ್ದಾರಂತೆ. ಹೆಲ್ಮೆಟ್ ಧರಿಸಿದ್ದರೂ ಮತ್ತು ಅಗತ್ಯ ದಾಖಲೆಗಳನ್ನು ನೀಡಿದ್ದರೂ ಪೊಲೀಸರು ಅವಳನ್ನು ಅವಳ ಸ್ನೇಹಿತರ ಮುಂದೆ ಹೊಡೆದಿದ್ದಾರೆ. ಪೊಲೀಸರ ಈ ಕ್ರೂರ ನಡವಳಿಕೆಯನ್ನು ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿದ ಆಕೆ ಸೋಶಿಯಲ್ ಮಿಡಿಯಾದಲ್ಲಿ ಹರಿಬಿಟ್ಟಿದ್ದಾಳೆ. ಇದು ಈಗ ವೈರಲ್(Viral Video) ಆಗಿ ನೆಟ್ಟಿಗರು ಕಿಡಿಕಾರಿದ್ದಾರೆ.
ವೈರಲ್ ಆದ ವಿಡಿಯೊದಲ್ಲಿ, ಗುಲಾಬ್ ಸಿಂಗ್ ಕಾಂಬೋಜ್ ಎಂಬ ಪೊಲೀಸ್ ಅಧಿಕಾರಿ ಮತ್ತು ಅವರ ತಂಡದ ಸದಸ್ಯ ಜಿತೇಂದ್ರ ಯಾದವ್ ಮಹಿಳೆಯರನ್ನು ಗುರಿಯಾಗಿಸಿಕೊಂಡು ಈ ರೀತಿ ಮಾಡಿದ್ದಾರೆ ಎಂದು ಮಹಿಳೆ ಆರೋಪ ಮಾಡಿದ್ದಾಳೆ.
ಕರ್ತವ್ಯದ ಸಮಯದಲ್ಲಿ ಪೊಲೀಸರ ಪಕ್ಷಪಾತ ನೀತಿಯ ವಿರುದ್ಧ ಅವಳು ಧ್ವನಿ ಎತ್ತಿದ್ದಾಳೆ. ಪೊಲೀಸರ ಬಳಿ ಈ ಬಗ್ಗೆ ಪ್ರಶ್ನಿಸಿದ್ದಾಳೆ. ಆದರೆ ಪೊಲೀಸರು ಅದಕ್ಕೆ ಉತ್ತರಿಸುವ ಬದಲು ಅವಳ ಫೋನ್ ಕಸಿದುಕೊಂಡು ಅದನ್ನು ಎಸೆದಿದ್ದಾರೆ. ಮತ್ತು ಮಹಿಳೆಯನ್ನು ಮುಂದೆ ಹೋಗಲು ಬಿಡದೆ ಅವಳಿಗೆ ಬಹಿರಂಗವಾಗಿ ಕಪಾಳಮೋಕ್ಷ ಮಾಡಿದ್ದಾರೆ. ಇದರಿಂದ ಆಕೆಯ ಮುಖ ಊದಿಕೊಂಡಿದೆ ಎಂದು ಆಕೆಯ ಜೊತೆಗಿದ್ದ ಸ್ನೇಹಿತ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾನೆ.
ಈ ಸುದ್ದಿಯನ್ನೂ ಓದಿ:Viral Video: ಪಾಸ್‌ಪೋರ್ಟ್ ಕಚೇರಿಗೆ ಶಾರ್ಟ್ಸ್ ಧರಿಸಿದ ಬಂದ ಭೂಪ! ಆಮೇಲೇನಾಯ್ತು ಗೊತ್ತಾ? ವಿಡಿಯೊ ಇದೆ
ಗುಲಾಬ್ ಸಿಂಗ್ ಯಾದವ್ ಅವರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡ ನಂತರ ಜನರ ಆಕ್ರೋಶಕ್ಕೆ ಕಾರಣವಾಗಿದೆ. ನೆಟ್ಟಿಗರು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ ನಂತರ ನೈನಿತಾಲ್ ಪೊಲೀಸರು ವೈರಲ್ ಆಗಿರುವ ವಿಡಿಯೊವನ್ನು ಉದ್ದೇಶಿಸಿ ಮಾತನಾಡಿ ಅಗತ್ಯ ಕ್ರಮದ ಭರವಸೆ ನೀಡಿದ್ದಾರೆ. ಮತ್ತು ಪೋಸ್ಟ್‌ನಲ್ಲಿ ಮಹಿಳೆ ನಂಬರ್ ಪ್ಲೇಟ್ ಇಲ್ಲದೆ ದ್ವಿಚಕ್ರ ವಾಹನವನ್ನು ಓಡಿಸುತ್ತಿದ್ದಳು ಮತ್ತು ವಾಹನವು ನೋಂದಣಿ ದಾಖಲೆಗಳನ್ನು ಹೊಂದಿರಲಿಲ್ಲ ಮತ್ತು ಹಿಂದೆ ಕುಳಿತಿದ್ದ ವ್ಯಕ್ತಿಯು ಹೆಲ್ಮೆಟ್ ಧರಿಸಿರಲಿಲ್ಲ ಎಂದು ಪೊಲೀಸ್ ತಂಡ ಉಲ್ಲೇಖಿಸಿದೆ. ಈ ಬಗ್ಗೆ ತನಿಖೆ ನಡೆಸಲು ಆದೇಶ ನೀಡಲಾಗಿದೆ ಎಂದು ನೈನಿತಾಲ್ ಪೊಲೀಸರು ಮಾಹಿತಿ ನೀಡಿದ್ದಾರೆ.