ಮುಂಬೈ: ರೈಲು ಹಳಿಯಲ್ಲಿ ಕುಳಿತಿದ್ದ ವೃದ್ಧ ವ್ಯಕ್ತಿಯೊಬ್ಬ ಕೂದಲೆಳೆ ಅಂತರದಲ್ಲಿ ಸಾವಿನಿಂದ ಪಾರಾಗಿರುವ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (Viral Video) ಆಗಿದ್ದು, ಇದು ಇಂಟರ್ನೆಟ್‍ನಲ್ಲಿ ಬಿರುಗಾಳಿ ಎಬ್ಬಿಸಿದೆ. ರೈಲ್ವೆ ಹಳಿಯಲ್ಲಿ ಕುಳಿತಿದ್ದ ವೃದ್ಧರೊಬ್ಬರು ಸಾವಿನಿಂದ ಪಾರಾಗುತ್ತಿರುವುದನ್ನು ವಿಡಿಯೊದಲ್ಲಿ ತೋರಿಸಲಾಗಿದೆ. ಈ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ (social media) ಹರಿದಾಡುತ್ತಿದೆ.
ವೃದ್ಧರೊಬ್ಬರು ರೈಲು ಬರುತ್ತಿದ್ದಂತೆ ರೈಲ್ವೆ ಹಳಿಯ ಮೇಲೆ ಅಪಾಯಕಾರಿಯಾಗಿ ಕುಳಿತಿರುವುದನ್ನು ವಿಡಿಯೊದಲ್ಲಿ ಗಮನಿಸಬಹುದು. ಮುಂದೆ ಏನಾಯಿತು ಎಂಬುದು ಎಲ್ಲರನ್ನೂ ದಿಗ್ಭ್ರಮೆಗೊಳಿಸಿದೆ. ವಿಡಿಯೊದಲ್ಲಿ, ವಯಸ್ಸಾದ ವ್ಯಕ್ತಿಯು ಮೂತ್ರ ವಿಸರ್ಜನೆ ಅಥವಾ ಮಲವಿಸರ್ಜನೆ ಮಾಡಲು ಹಳಿಯ ಬಳಿ ಇಳಿದಂತೆ ಕಾಣುತ್ತದೆ. ಅವರ ಕೈಯಲ್ಲಿ ನೀರಿನ ಬಾಟಲಿಯನ್ನು ಹಿಡಿದುಕೊಂಡಿರುವುದು ಕಂಡುಬರುತ್ತದೆ. ಕೆಲವೇ ಕ್ಷಣಗಳ ನಂತರ, ವೇಗವಾಗಿ ಚಲಿಸುವ ರೈಲು ಪ್ಲಾಟ್‌ಫಾರ್ಮ್ ಸಮೀಪಿಸುತ್ತಿರುವುದನ್ನು ಕಾಣಬಹುದು.
ಲೋಕೋ ಪೈಲಟ್ ನಿರಂತರವಾಗಿ ಹಾರ್ನ್ ಬಾರಿಸುತ್ತಾ ಅವನಿಗೆ ಎಚ್ಚರಿಕೆ ನೀಡಿದ್ದಾನೆ. ಆದರೆ, ವೃದ್ಧ ಗಾಬರಿಯಾಗುವುದಿಲ್ಲ. ಅವನು ಶಾಂತವಾಗಿ ಎದ್ದು, ಪ್ಲಾಟ್‌ಫಾರ್ಮ್ ಮೇಲೆ ಹತ್ತಿದ್ದಾನೆ. ರೈಲು ಹತ್ತಿರ ಬರುತ್ತಿದ್ದಂತೆ ಆತ ಫ್ಲಾಟ್‌ಫಾರ್ಮ್ ಅನ್ನು ಹತ್ತಿದ್ದಾನೆ. ಈ ಭಯಾನಕ ಘಟನೆಯನ್ನು ಅಲ್ಲಿದ್ಧ ವೀಕ್ಷಕರೊಬ್ಬರು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ಮಾರಣಾಂತಿಕ ಅಪಘಾತವಾಗಬಹುದಾಗಿದ್ದ ದುರ್ಘಟನೆಯಿಂದ ಆ ವೃದ್ಧ ವ್ಯಕ್ತಿ ಕೂದಲೆಳೆಯ ಅಂತರದಲ್ಲಿ ಹೇಗೆ ಪಾರಾಗಿದ್ದಾನೆ ಎಂಬುದನ್ನು ವಿಡಿಯೊ ತೋರಿಸುತ್ತದೆ.
ವಿಡಿಯೊ ವೀಕ್ಷಿಸಿ:
ರೈಲು ಆ ವೃದ್ಧ ವ್ಯಕ್ತಿಯಿಂದ ಕೆಲವೇ ಇಂಚುಗಳಷ್ಟು ದೂರದಲ್ಲಿ ಹಾದು ಹೋಗುತ್ತಿದ್ದಂತೆ ಪ್ರತ್ಯಕ್ಷದರ್ಶಿಗಳು ಆಘಾತಗೊಂಡಿದ್ದಾರೆ. ತಾತಾ ಯಮರಾಜನೊಂದಿಗೆ ನೇರ ಸಂಪರ್ಕವನ್ನು ಹೊಂದಿರಬೇಕು ಎಂದು ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ತಮಾಷೆ ಮಾಡಿದ್ದಾರೆ. ಅಂತಹ ಅಪಾಯಕಾರಿ ಪರಿಸ್ಥಿತಿಯಲ್ಲೂ, ವೃದ್ಧ ವ್ಯಕ್ತಿ ಶಾಂತವಾಗಿ ಪ್ರತಿಕ್ರಿಯಿಸಿರುವುದು ಹಲವರನ್ನು ಗಮನಸೆಳೆದಿದೆ. ಆದರೆ, ಈ ಘಟನೆ ಎಲ್ಲಿ ನಡೆದಿರುವುದು ಎಂಬ ಬಗ್ಗೆ ತಿಳಿದುಬಂದಿಲ್ಲ.
ಇದನ್ನೂ ಓದಿ: Viral News: ದೀಪಾವಳಿಯಂದು ಪತ್ನಿ ಮನೆ ಬಾಗಿಲು ತೆಗೆಯದಿದ್ದಕ್ಕೆ ಬೆಂಕಿ ಹಚ್ಚಿಕೊಂಡು ಪತಿ ಆತ್ಮಹತ್ಯೆ
@Anand_thunder ಎಂಬ ಬಳಕೆದಾರರು X ನಲ್ಲಿ ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ತಾತ ಯಮರಾಜನೊಂದಿಗೆ ಸುತ್ತಾಡುತ್ತಿರುವಂತೆ ತೋರುತ್ತಿದೆ ಎಂದು ವಿಡಿಯೊಗೆ ಶೀರ್ಷಿಕೆ ನೀಡಲಾಗಿದೆ. ಅಜ್ಜ ಪ್ರತಿದಿನ ಯಮರಾಜನೊಂದಿಗೆ ಉಪಾಹಾರ ಸೇವಿಸುತ್ತಿರಬೇಕು ಎಂದು ಬಳಕೆದಾರರೊಬ್ಬರು ತಮಾಷೆ ಮಾಡಿದ್ದಾರೆ. ಆದರೂ, ಯಮರಾಜನೊಂದಿಗೆ ಹೋರಾಡಿ ವೃದ್ಧ ಗೆದ್ದು ಬಂದಿದ್ದು ಮಾತ್ರ ರೋಚಕ ಎಂದು ಮತ್ತೊಬ್ಬ ಬಳಕೆದಾರರು ಲೇವಡಿ ಮಾಡಿದರು.
ವೃದ್ಧ ರೈಲು ಫ್ಲಾಟ್‍ಫಾರ್ಮ್ ಅನ್ನು ಹತ್ತುವುದನ್ನು ಗಮನಿಸಿದರೆ ನಾನಿನ್ನು ಬರುವುದಿಲ್ಲ, ನೀವು ಆರಾಮವಾಗಿ ಹೋಗಿ ಎಂಬಂತಿದೆ ಅವರ ವರ್ತನೆ ಎಂದು ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. ರೈಲು ಬರುವ ಮುನ್ನ ಕೆಂಪು ದೀಪ (Red Signal) ಗಳನ್ನು ಬೆಳಗುತ್ತಾರೆ. ಹೀಗಾಗಿ ಬಹಳ ಮುನ್ನೆಚ್ಚರಿಕೆ ವಹಿಸಬೇಕು ಎಂದು ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸಿದರು.