Viral Video: ಜೆಸಿಬಿ ವರ್ಸಸ್ ಗಜರಾಜ- ಬಿಗ್ ಫೈಟಿಂಗ್ ವಿಡಿಯೊ ಭಾರೀ ವೈರಲ್
ಉತ್ತರ ಬಂಗಾಳದ ಜಲ್ಪೈಗುರಿಯಲ್ಲಿ ಜೆಸಿಬಿ ಮೂಲಕ ಆನೆಯನ್ನು ಬೆನ್ನಟ್ಟಿದ್ದ ಕಾರಣ ಗಾಯಗೊಂಡ ಆನೆ ಕೋಪಗೊಂಡು ಜೆಸಿಬಿಯ ಮೇಲೆ ಪ್ರತಿದಾಳಿ ಮಾಡಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಪೊಲೀಸರು ಆ ವ್ಯಕ್ತಿಯನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
![elephant attack video](https://cdn-vishwavani-prod.hindverse.com/media/images/elephant_attack_video.max-1280x720.jpg)
![Profile](https://vishwavani.news/static/img/user.png)
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಜಲ್ಪೈಗುರಿಯಲ್ಲಿ ಆನೆಯೊಂದು ಜೆಸಿಬಿ ಯಂತ್ರದ ಮೇಲೆ ದಾಳಿ ಮಾಡಿದ ಘಟನೆ ನಡೆದಿದೆ. ಫೆ.1ರಂದು ಈ ಘಟನೆ ನಡೆದಿದ್ದು, ಕಾಡಾನೆಯೊಂದನ್ನು ಓಡಿಸಲು ವ್ಯಕ್ತಿಯೊಬ್ಬ ಜೆಸಿಬಿ ಯಂತ್ರವನ್ನು ಬಳಸಿದ್ದಾನೆ. ಇದರಿಂದ ಕೋಪಗೊಂಡ ಆನೆ ಜೆಸಿಬಿಯ ಮೇಲೆ ಪ್ರತಿದಾಳಿ ಮಾಡಿದೆ. ಆನೆ ತನ್ನ ಸೊಂಡಿಲಿನಿಂದ ಜೆಸಿಬಿಯನ್ನು ಎತ್ತುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video)ಆಗಿದೆ. ಪ್ರಾಣಿಯನ್ನು ಪ್ರಚೋದಿಸಿದ್ದಕ್ಕೆ ಮತ್ತು ಯಂತ್ರದಿಂದ ಅದರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಪಶ್ಚಿಮ ಬಂಗಾಳದ ಮಾಲ್‍ಬಜಾರ್‌ನಲ್ಲಿ ಆ ವ್ಯಕ್ತಿಯನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಈ ಘಟನೆಯ ವೇಳೆ ಆನೆಯ ಹಣೆ ಮತ್ತು ಸೊಂಡಿಲಿಗೆ ಗಾಯವಾಗಿದೆಯಂತೆ.
ವೈರಲ್ ಆದ ವಿಡಿಯೊದಲ್ಲಿ ವ್ಯಕ್ತಿಯು ಜೆಸಿಬಿಯ ಮೂಲಕ ಆನೆಯನ್ನು ತಳ‍್ಳುವುದು ಸೆರೆಯಾಗಿದೆ. ನಂತರ, ಆನೆ ಜೆಸಿಬಿ ಯಂತ್ರವನ್ನು ಮೇಲಕ್ಕೆ ಎತ್ತುವ ಮೂಲಕ ಪ್ರತಿದಾಳಿ ಮಾಡಿತಂತೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
TRAGIC THIS: In search of food but disturbed by human noise, a wild elephant attacked a JCB and a watchtower in Damdim (Dooars) today.
— The Darjeeling Chronicle (@TheDarjChron) February 1, 2025
In the chaos, the tusker also sustained injuries. pic.twitter.com/ZKlnRixaFN
ಈ ತಿಂಗಳ ಆರಂಭದಲ್ಲಿ, ಭಾರತದಲ್ಲಿ ಕನಿಷ್ಠ ಎರಡು ಆನೆ ದಾಳಿ ಪ್ರಕರಣಗಳು ವರದಿಯಾಗಿವೆ. ಒಂದು ತಮಿಳುನಾಡಿನ ವಾಲ್ಪಾರೈ ಕಣಿವೆಯಲ್ಲಿ 76 ವರ್ಷದ ಜರ್ಮನ್ ಬೈಕ್ ಸವಾರನನ್ನು ದೈತ್ಯ ಆನೆಯೊಂದು ಕೊಂದಿದೆ. ಕೊಯಮತ್ತೂರಿನ ವಾಲ್ಪಾರೈನಲ್ಲಿ ದೈತ್ಯ ಆನೆಯೊಂದು ರಸ್ತೆ ದಾಟುತ್ತಿದ್ದಾಗ ಸ್ಥಳೀಯ ಅಧಿಕಾರಿಗಳು ವಾಹನ ಸಂಚಾರವನ್ನು ನಿಲ್ಲಿಸುವಂತೆ ಜನರನ್ನು ವಿನಂತಿಸಿದ್ದಾರೆ. ಆದರೆ, ಜರ್ಮನ್ ಬೈಕ್ ಸವಾರನು ಎಚ್ಚರಿಕೆಗಳನ್ನು ನಿರ್ಲಕ್ಷಿಸಿ ಆನೆಯ ಮುಂದೆ ಬಂದು ನಿಂತಿದ್ದಕ್ಕೆ ಆನೆ ಆತನನ್ನು ತುಳಿದು ಕೊಂದಿದೆ. ಆತನ ನಿರ್ಲಕ್ಷ್ಯವು ಈ ದುರಂತಕ್ಕೆ ಕಾರಣವಾಗಿದೆ. ಫೆಬ್ರವರಿ 4 ರಂದು ಟೈಗರ್ ವ್ಯಾಲಿ ಬಳಿ ಈ ಘಟನೆ ವರದಿಯಾಗಿದೆ.
ಮತ್ತೊಂದು ಪ್ರಕರಣದಲ್ಲಿ, ಕೇರಳದ ಇಡುಕ್ಕಿಯ 57 ವರ್ಷದ ವ್ಯಕ್ತಿಯ ಮೇಲೆ ಕಾಡು ಆನೆ ಮಾರಣಾಂತಿಕ ದಾಳಿ ನಡೆಸಿದೆ. ಮೃತನನ್ನು ವಿಮಲ್ ಎಂದು ಗುರುತಿಸಲಾಗಿದೆ. ಮರಯೂರ್ ಪೊಲೀಸ್ ಠಾಣೆ ವ್ಯಾಪ್ತಿಯ ಚಂಪಕ್ಕಡ್‍ನ ಬುಡಕಟ್ಟು ಕುಗ್ರಾಮದಿಂದ ಈ ಘಟನೆ ವರದಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Viral Video: ಕೆಳಗೆ ಬಿದ್ದ ಮಗುವಿನ ಶೂ ಎತ್ತಿಕೊಟ್ಟ ಆನೆಯ ಮುದ್ದಾದ ವಿಡಿಯೊ ವೈರಲ್
ಚೀನಾದ ಮೃಗಾಲಯವೊಂದರಲ್ಲಿ ಮಗುವೊಂದು ಆನೆಯನ್ನು ನೋಡುತ್ತಿದ್ದ ಸಂದರ್ಭ ಪುಟ್ಟ ಮಗುವಿನ ಕಾಲಲ್ಲಿ ಇದ್ದ ಶೂ ಆನೆಯ ಆವರಣದ ಒಳಗೆ ಬಿದ್ದಿದೆ. ಮಗುವಿನ ಶೂ ಆಕಸ್ಮಿಕವಾಗಿ ಆನೆಯ ಆವರಣದೊಳಗೆ ಬಿದ್ದಿದ್ದು ಆನೆ ಇದನ್ನು ಗಮನಿಸಿ ತನ್ನ ಸೊಂಡಿಲಿನಿಂದ ಬಿದ್ದಂತಹ ಶೂ ಅನ್ನುಎತ್ತಿ ಕೊಡುತ್ತದೆ. ಈ ಮುದ್ದಾದ ವಿಡಿಯೊವೊಂದು ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿದೆ.