#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Viral Video: ಹೈವೇಯಲ್ಲೇ ಟ್ರಕ್‌ನಲ್ಲಿದ್ದ ಗ್ಯಾಸ್ ಸಿಲಿಂಡರ್‌ ಸ್ಫೋಟ; ಶಾಕಿಂಗ್‌ ವಿಡಿಯೊ ವೈರಲ್‌

ತಮಿಳುನಾಡಿನ ಸೇಲಂ ಹೆದ್ದಾರಿಯಲ್ಲಿ ಟ್ರಕ್‍ನಲ್ಲಿ ಇರಿಸಲಾಗಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದ್ದು, ಈ ಘಟನೆಯಲ್ಲಿ ಯುವಕನೊಬ್ಬನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನೆಯ ಭಯಾನಕ ದೃಶ್ಯಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.

ಟ್ರಕ್‌ನಲ್ಲಿದ್ದ ಸಿಲಿಂಡರ್ ಸ್ಫೋಟ; ಕೊನೆಗೆ ಆಗಿದ್ದೇನು?

cyclinder blast viral video

Profile pavithra Feb 1, 2025 10:52 AM

ಚೆನ್ನೈ: ತಮಿಳುನಾಡಿನ ಸೇಲಂನ ಹೆದ್ದಾರಿಯಲ್ಲಿ ಗುರುವಾರ (ಜನವರಿ 30) ಟ್ರಕ್‌ನಲ್ಲಿ ಇರಿಸಲಾಗಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದ್ದು, ಈ ಘಟನೆಯಲ್ಲಿ ಯುವಕ ಮತ್ತು ಇತರರು ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆಯ ಭಯಾನಕ ದೃಶ್ಯಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್(Viral Video) ಆಗಿದೆ.

ವರದಿಗಳ ಪ್ರಕಾರ, ಫೋರ್‌ ವೇ ರಸ್ತೆ ನಿರ್ಮಾಣದ ಸಮಯದಲ್ಲಿ ಚಿನ್ನಪ್ಪಂಪಟ್ಟಿಯಲ್ಲಿ ಈ ಘಟನೆ ಸಂಭವಿಸಿದೆ. ಸೇಲಂ ಬಳಿಯ ಚಿನ್ನಪ್ಪಂಪಟ್ಟಿ-ಕೊಂಗನಪುರಂ ಫೋರ್ ವೇ ರಸ್ತೆಯಲ್ಲಿ ಕೆಲಸದಲ್ಲಿ ತೊಡಗಿದ್ದ ಕಾರ್ಮಿಕರು ಬಣ್ಣವನ್ನು ಬಿಸಿ ಮಾಡಲು ಮಿನಿವ್ಯಾನ್‍ನಲ್ಲಿ ಎಲ್‌ಪಿಸಿ ಸಿಲಿಂಡರ್ ಅನ್ನು ಇಟ್ಟಿದ್ದರು. ಈ ಸಿಲಿಂಡರ್‌ಗೆ ಬೆಂಕಿ ತಗುಲಿ ಸ್ಫೋಟ ಸಂಭವಿಸಿದೆ.‌



ಟ್ರಕ್‍ನಲ್ಲಿದ್ದ ಸಿಲಿಂಡರ್‌ನಿಂದ ಬೆಂಕಿ ಹೊರಹೊಮ್ಮುವುದು ವಿಡಿಯೊದಲ್ಲಿ ಸೆರೆಯಾಗಿತ್ತು. ಈ ಬೆಂಕಿಯನ್ನು ನಂದಿಸಲು ವ್ಯಕ್ತಿಯೊಬ್ಬರು ಬಕೆಟ್‌ನಲ್ಲಿ ನೀರನ್ನು ಹೊತ್ತು ಟ್ರಕ್ ಕಡೆಗೆ ಓಡಿದ್ದಾರೆ. ಅವರ ಹಿಂದೆ ಮತ್ತೊಬ್ಬ ವ್ಯಕ್ತಿ ಕೂಡ ಹೋಗಿದ್ದಾರೆ. ಆದರೆ ಆ ವೇಳೆ ಭಾರಿ ಸ್ಫೋಟ ಸಂಭವಿಸಿದ್ದು, ವ್ಯಕ್ತಿಗಳಿಬ್ಬರು ದಿಕ್ಕುಪಾಲಾಗಿ ಓಡಿದ್ದಾರೆ.

ಸ್ಫೋಟದ ಸಮಯದಲ್ಲಿ ಯಾವುದೇ ವಾಹನವು ಟ್ರಕ್ ಬಳಿ ಇರಲಿಲ್ಲ, ಇದು ದೊಡ್ಡ ಅಪಘಾತವನ್ನು ತಪ್ಪಿಸಿತು ಎನ್ನಲಾಗಿದೆ. ಅದೃಷ್ಟವಶಾತ್, ಯುವಕರು ಮತ್ತು ಇತರ ದಾರಿಹೋಕರು ಪ್ರಾಣಾಪಾಯದಿಂದ ಪಾರಾಗಿದ್ದು,ಒಬ್ಬ ಯುವಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಗಳು ತಿಳಿಸಿವೆ. ಗಾಯಗೊಂಡ ಯುವಕನನ್ನು 24 ವರ್ಷದ ಮಾಧವನ್ ಎಂದು ಗುರುತಿಸಲಾಗಿದ್ದು, ಕಾಲಿಗೆ ಸುಟ್ಟ ಗಾಯಗಳಾಗಿದ್ದು, ನಂತರ ಆತ ನೋವಿನಿಂದ ರಸ್ತೆಯಲ್ಲಿ ಕುಸಿದು ಬಿದ್ದಿದ್ದಾನೆ. ಘಟನೆಯ ನಂತರ ಸ್ಥಳೀಯರು ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆಗಿವೆ. ಈ ಬಗ್ಗೆ ಕೊಂಗನಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಲಿದ್ದಾರೆ.

ಈ ಸುದ್ದಿಯನ್ನೂ ಓದಿ:Hubballi News: ಹುಬ್ಬಳ್ಳಿ ಗ್ಯಾಸ್‌ ಸಿಲಿಂಡರ್‌ ಸ್ಫೋಟ ಪ್ರಕರಣ; ಮೃತರ ಆತ್ಮಕ್ಕೆ ಶಾಂತಿ ಕೋರಿ ಸಾಮೂಹಿಕ ಹೋಮ

ಕಳೆದ ತಿಂಗಳು ನಡೆದ ಪ್ರತ್ಯೇಕ ಘಟನೆಯಲ್ಲಿ, ಜೈಪುರ-ಅಜ್ಮೀರ್ ಹೆದ್ದಾರಿಯ ಭಂಕ್ರೋಟಾ ಪ್ರದೇಶದಲ್ಲಿ ಯು-ಟರ್ನ್ ತೆಗೆದುಕೊಳ್ಳುವಾಗ ಎಲ್‍ಪಿಜಿ ಅನಿಲ ತುಂಬಿದ ಟ್ಯಾಂಕರ್ ಟ್ರಕ್‍ಗೆ ಡಿಕ್ಕಿ ಹೊಡೆದ ಪರಿಣಾಮ 18 ಜನರು ಸಾವನ್ನಪ್ಪಿದ್ದರು ಮತ್ತು 7 ಜನರಿಗೆ ಸುಟ್ಟ ಗಾಯಗಳಾಗಿತ್ತು.