ನವದೆಹಲಿ: ಮುಖ ಫಳಫಳ ಹೊಳೆಯಬೇಕು ಅನ್ನೋದು ಬಹುತೇಕರು ಕನಸು. ಹೊಳೆಯುವ ಮತ್ತು ಆರೋಗ್ಯಕರವಾಗಿ ಕಾಣುವ ಚರ್ಮವನ್ನು ಪಡೆಯಬೇಕು ಅನ್ನೋದು ಹಲವರಿಗೆ ಕನಸಾಗಿಯೇ ಉಳಿದಿದೆ. ಇದಕ್ಕಾಗಿ ಸಮತೋಲಿತ ಆಹಾರ, ದೇಹವನ್ನು ಹೈಡ್ರೇಟ್ ಆಗಿಡುವುದು, ಸಾಕಷ್ಟು ನಿದ್ರೆ, ಒತ್ತಡ ನಿರ್ವಹಣೆ ಇತ್ಯಾದಿ ಆರೋಗ್ಯಕರ ಜೀವನಶೈಲಿಯ ಅಭ್ಯಾಸಗಳ ಜೊತೆಗೆ ಸ್ಥಿರವಾದ ಚರ್ಮದ ಆರೈಕೆ (Skin care) ದಿನಚರಿ ಸೇರಿದಂತೆ ವ್ಯಾಪಕವಾದ ವಿಧಾನದ ಅಗತ್ಯವಿದೆ. ಇದರ ಜೊತೆಗೆ, ಇತ್ತೀಚೆಗೆ ಕೊರಿಯನ್ ಚರ್ಮದ ಆರೈಕೆ ಹೆಚ್ಚು ಚಾಲ್ತಿಯಲ್ಲಿದೆ. ಸ್ಪಷ್ಟ, ಕಲೆಗಳಿಲ್ಲದ ಚರ್ಮವನ್ನು ಸಾಧಿಸಲು ಅನೇಕ ಜನರು ವಿವಿಧ ಉತ್ಪನ್ನಗಳು, ರಾಸಾಯನಿಕಗಳು, ಫೇಸ್‍ಮಾಸ್ಕ್‌ಗಳು, ಸನ್‌ಸ್ಕ್ರೀನ್‌ಗಳನ್ನು ಹೆಚ್ಚಾಗಿ ಉಪಯೋಗಿಸುತ್ತಾರೆ. ಇದೀಗ ವೈರಲ್ ಆಗಿರುವ ವಿಡಿಯೊ (Viral Video) ನಿಮ್ಮನ್ನು ಅಚ್ಚರಿಗೊಳಿಸುತ್ತದೆ.
ಕೊರಿಯನ್ ಫೇಸ್ ಪ್ಯಾಕ್ ಇತ್ತೀಚೆಗೆ ಬಹಳ ಜನಪ್ರಿಯವಾಗುತ್ತಿದೆ. ಕೆಲವೇ ನಿಮಿಷಗಳಲ್ಲಿ ಇದರಿಂದ ಫಲಿತಾಂಶ ಹೊರಬರುತ್ತದೆ ಎಂಬುದನ್ನು ನೀವು ನಂಬುತ್ತೀರಾ? ಕೊರಿಯನ್ ವೈಟನಿಂಗ್ ಸೋಪ್ ಒಂದು ಬಾರಿ ತೊಳೆದ ನಂತರ ಸ್ವಚ್ಛ ಮತ್ತು ಕಾಂತಿಯುತ ಚರ್ಮವನ್ನು ನೀಡುತ್ತದೆ ಎಂದು ಹೇಳಲಾಗುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆದಿದೆ.
ಇದನ್ನೂ ಓದಿ: Viral News: ಗಾಢ ನಿದ್ದೆಯಲ್ಲಿದ್ದ ಗಂಡನ ಮೇಲೆ ಕೊತ ಕೊತ ಕುದಿಯುವ ಎಣ್ಣೆ ಸುರಿದು ಖಾರದ ಪುಡಿ ಎರಚಿದ ಪತ್ನಿ!
ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೊವೊಂದರಲ್ಲಿ, ವ್ಯಕ್ತಿಯೊಬ್ಬ ವೈರಲ್ ಆಗಿರುವ ಕೊರಿಯನ್ ಸೋಪ್ ಅನ್ನು ಮುಖದ ಮೇಲೆ ಕೆಲವು ನಿಮಿಷಗಳ ಕಾಲ ಹಚ್ಚಿಕೊಳ್ಳುತ್ತಿರುವುದು ಕಂಡುಬರುತ್ತದೆ. ನಂತರ, ಅವನು ತನ್ನ ಮುಖವನ್ನು ಟವಲ್‍ನಿಂದ ತೊಳೆಯುತ್ತಾನೆ. ಫಲಿತಾಂಶ ಗಮನಾರ್ಹವಾಗಿವೆ. ಈ ವೇಳೆ ಅವನ ಚರ್ಮವು ಬೆಳ್ಳನೆ ಹೊಳೆದಿದೆ. ಅವನ ಮುಖ ಮತ್ತು ಕತ್ತಿನ ಮೈಬಣ್ಣದ ನಡುವಿನ ವ್ಯತ್ಯಾಸವು ಸ್ಪಷ್ಟವಾಗಿ ಗೋಚರಿಸುತ್ತದೆ.
ಇಲ್ಲಿದೆ ವಿಡಿಯೊ:
ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಬಳಕೆದಾರರ ಗಮನ ಸೆಳೆದಿದೆ. ಇದಕ್ಕೆ ತರಹೇವಾರಿ ಪ್ರತಿಕ್ರಿಯೆಗಳು ಬಂದವು. ಅನೇಕರು ವಿಡಿಯೊ ಎಡಿಟಿಂಗ್ ಕೌಶಲ್ಯವನ್ನು ನೋಡಿ ನಕ್ಕರೆ, ಇತರರು ಈ ಸೋಪ್ ಹಲವಾರು ಉನ್ನತ ಸೌಂದರ್ಯ ಬ್ರಾಂಡ್‌ಗಳನ್ನು ಮೀರಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ವ್ಯಂಗ್ಯವಾಡಿದರು.
ಇನ್‌ಸ್ಟಾಗ್ರಾಮ್ ಬಳಕೆದಾರರೊಬ್ಬರು, ಇದು ಫೇರ್ ಅಂಡ್ ಲವ್ಲಿಯನ್ನು ಸಹ ಸೋಲಿಸಬಹುದು ಎಂದು ಬರೆದಿದ್ದಾರೆ. ಫಿಲ್ಟರ್ ಕ್ಯಾಮರಾ ಬಳಸಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಈ ಸೋಪ್ ಕನಸು ನನಸಾದಂತಿದೆ. ಇದು ನಿಮ್ಮ ಮುಖವನ್ನು ತೊಳೆಯುತ್ತದೆ ಎಂದು ಹೇಳಿದ್ದಾರೆ.
ಒಬ್ಬ ಬಳಕೆದಾರರು, ಇನ್ನೊಂದು ಹಂತದ ಹಗರಣ ಎಂದು ಹಂಚಿಕೊಂಡಿದ್ದಾರೆ. ನಾನು ಕೊರಿಯಾದಲ್ಲಿ ವಾಸಿಸುತ್ತಿದ್ದೇನೆ. ಆದರೆ ನಾನು ಈ ರೀತಿಯ ಸೋಪ್ ಬಾರ್ ಅನ್ನು ಎಂದಿಗೂ ನೋಡಿಲ್ಲ. ಬಹುಶಃ ಎಡಿಟಿಂಗ್ ಮಾಡಲು ಉತ್ತಮ ಉದ್ಯೋಗಿಯನ್ನು ನೇಮಿಸಿರಬಹುದು ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ. ಮುಖ ಫಳಫಳ ಹೊಳೆಯುವಂತೆ ಪಡೆಯಲು ತಣ್ಣೀರಿನಿಂದ ಮುಖ ತೊಳಿಯುವುದು, ನಿಯಮಿತ ಎಫ್ಫೋಲಿಯೇಶನ್, ದೈನಂದಿನ ಮಾಯಿಶ್ಚರೈಸಿಂಗ್ ಮತ್ತು ಸನ್‍ಸ್ಕ್ರೀನ್ ಅನ್ನು ಹಚ್ಚುವುದು ಇತ್ಯಾದಿ ಚರ್ಮದ ಆರೈಕೆ ದಿನಚರಿಯನ್ನು ಅನುಸರಿಸಬೇಕು.