ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Skin Care: ಪ್ರತಿದಿನ ಮುಖಕ್ಕೆ ಅಲೋವೆರಾ ಜೆಲ್ ಹಚ್ಚುವುದರಿಂದ ಈ ಅದ್ಭುತ ಲಾಭ ಸಿಗಲಿದೆ!

ಅಲೋವೆರಾದಲ್ಲಿ ವಿಟಮಿನ್ ಎ, ಸಿ,ಕೋಲೀನ್, ಬಿ1, ಬಿ2,ವಿಟಮಿನ್ ಬಿ12, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಸತು, ಕ್ರೋಮಿಯಂ ಸೇರಿದಂತೆ ಹಲವು ರೀತಿಯ ಪೋಷಕಾಂಶಗಳು ಇರಲಿದೆ. ಇದು ತಂಪಾಗಿಸುವ ಗುಣಲಕ್ಷಣ ಹೊಂದಿರುವುದರಿಂದ ಇದರಲ್ಲಿರುವ ಉತ್ತಮ ಅಂಶಗಳು ನಿಮ್ಮ ಚರ್ಮಕ್ಕೆ ಉತ್ತಮವಾದ ಪೋಷಕಾಂಶವನ್ನು ನೀಡುತ್ತದೆ. ಅಲ್ಲದೆ ಇದನ್ನು ಮುಖಕ್ಕೆ ಮತ್ತು ಚರ್ಮಕ್ಕೆ ಹಚ್ಚುವುದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮ ಉಂಟಾಗುವುದಿಲ್ಲ.

ಮುಖದ ಅಂದ ಹೆಚ್ಚಿಸಲು ಅಲೋವೆರಾ ಜೆಲ್‌ ರಾಮಬಾಣ!

Profile Pushpa Kumari Mar 29, 2025 6:30 AM

ನವದೆಹಲಿ: ಅಲೋವೆರಾ ಪ್ರಾಚೀನ ಕಾಲದಿಂದಲೂ ಮತ್ತು ವೈಜ್ಞಾನಿಕ ವಾಗಿಯು ‌ಔಷಧೀಯ ಗುಣಗಳಿಗೆ ಹೆಚ್ಚು ಪ್ರಯೋಜನಕಾರಿ ಎಂದು ಸಾಬೀತಾಗಿದೆ. ಇದನ್ನು ಸಾಮಾನ್ಯವಾಗಿ ಚರ್ಮ ಮತ್ತು ಕೂದಲಿನ ಸಮಸ್ಯೆಗಳಿಗೆ ಪರಿಹಾರವಾಗಿ ಬಳಸಲಾಗುತ್ತದೆ. ಅದರಲ್ಲೂ ಅಲೋವೆರಾ ಜೆಲ್(Aloe Vera Gel) ಗೆ ಇಂದು ಬೇಡಿಕೆ ಹೆಚ್ಚಿದ್ದು ಇದನ್ನು ಸರಿಯಾದ ವಿಧಾನದಲ್ಲಿ ಮುಖಕ್ಕೆ ಹಚ್ಚಿದರೆ(Skin Care Tips) ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಕ್ರೀಂ, ಲೋಶನ್ ಇತ್ಯಾದಿ ಬಳಸುವ ಅಗತ್ಯವೇ ಇರುವುದಿಲ್ಲ. ಏಕೆಂದರೆ ಇದು ನಿಮ್ಮ ಮುಖದ ಕಾಂತಿಯನ್ನು ನೈಸರ್ಗಿಕವಾಗಿ ಹೆಚ್ಚಿಸುವ ಜೊತೆಗೆ ಚರ್ಮದ ವಿವಿಧ ಸಮಸ್ಯೆಗೆ ಮುಕ್ತಿ ನೀಡಲಿದೆ. ಅಲೋವೆರಾದಲ್ಲಿ ವಿಟಮಿನ್ ಎ, ಸಿ, ಕೋಲೀನ್, ಬಿ1, ಬಿ2,ವಿಟಮಿನ್ ಬಿ12, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಸತು, ಕ್ರೋಮಿಯಂ ಸೇರಿದಂತೆ ಹಲವು ರೀತಿಯ ಪೋಷಕಾಂಶಗಳು ಇರಲಿದೆ.

ಇದು ತಂಪಾಗಿಸುವ ಗುಣಲಕ್ಷಣ ಹೊಂದಿರುವುದರಿಂದ ಇದರಲ್ಲಿ ರುವ ಉತ್ತಮ ಅಂಶಗಳು ನಿಮ್ಮ ಚರ್ಮಕ್ಕೆ ಉತ್ತಮವಾದ ಪೋಷಕಾಂಶ ವನ್ನು ನೀಡುತ್ತದೆ.ಅಲ್ಲದೆ ಇದನ್ನು ಮುಖಕ್ಕೆ ಮತ್ತು ಚರ್ಮಕ್ಕೆ ಹಚ್ಚುವುದ ರಿಂದ ಯಾವುದೇ ರೀತಿಯ ಅಡ್ಡ ಪರಿಣಾಮ ಉಂಟಾಗುವುದಿಲ್ಲ. ಹಾಗಾಗಿ ಮುಖದಲ್ಲಿ ಮೊಡವೆ, ಕಲೆ, ಇತ್ಯಾದಿ ಚರ್ಮದ ಸಮಸ್ಯೆ ಇದ್ದಲ್ಲಿ ಅಲೋ ವೆರಾ ಜೆಲ್‌ ಅನ್ನು ಪ್ರತಿದಿನ ಹಚ್ಚುವ ಮೂಲಕ ಚರ್ಮದ ಸಮಸ್ಯೆಯನ್ನು ಹೋಗಲಾಡಿಸಬಹುದು.

ಮೊಡವೆಗಳನ್ನು ಕಡಿಮೆ ಮಾಡುತ್ತದೆ:

ಅಲೋವೆರಾ ಜೆಲ್ ಮೊಡವೆಗಳನ್ನು ಕಡಿಮೆ ಮಾಡಲು ಸಹಾಯಮಾಡು ತ್ತದೆ. ಮುಖದ ಮೇಲೆ ಅಧಿಕ ಎಣ್ಣೆಯ ಅಂಶವು ಮೊಡವೆಗಳನ್ನು ಉಂಟು ಮಾಡುತ್ತದೆ. ಅಂತಹ ಸಂದರ್ಭದಲ್ಲಿ ಚರ್ಮದಿಂದ ಹೆಚ್ಚುವರಿ ಎಣ್ಣೆಯನ್ನು ತೆಗೆದುಹಾಕಲು ಅಲೋವೆರಾ ಜೆಲ್ ಅನ್ನು ಬಳಸಿ. ಚರ್ಮದ ಯಾವುದೇ ಸಮಸ್ಯೆಯನ್ನು ಹೋಗಲಾಡಿಸಲು ವಾರದಲ್ಲಿ ಎರಡರಿಂದ ಮೂರು ಬಾರಿ ಇದನ್ನು ಪ್ರಯತ್ನಿಸಿ. ಇದನ್ನು ನಿಯಮಿತವಾಗಿ ಬಳಸು ವುದರಿಂದ ನಿಮ್ಮ ಮೊಡವೆಯ ಪ್ರಮಾಣ ಕಡಿಮೆಯಾಗುತ್ತದೆ.

ಸೂರ್ಯನ ಕಿರಣಗಳಿಂದ ರಕ್ಷಣೆ ಮಾಡಲಿದೆ:

ಅಲೋವೆರಾ ತುಂಬಾ ತಂಪಾಗಿರುವುದರಿಂದ ಇದನ್ನು ಮುಖಕ್ಕೆ ಹಚ್ಚಿದರೆ ದದ್ದುಗಳು ಮತ್ತು ಮುಖದ ಊರಿಯುತ, ಶಮನಗೊಳಿಸಲು ಸಹಾಯ ಮಾಡುತ್ತದೆ. ಅದೇ ರೀತಿ ಸೂರ್ಯನ ಕಿರಣಗಳಿಂದ ತ್ವಚೆಯನ್ನು ರಕ್ಷಣೆ ಮಾಡಲಿದೆ. ಬಿಸಿಲಿನಲ್ಲಿ ಹೆಚ್ಚು ಓಡಾಟ ಮಾಡಿದ ಸಂದರ್ಭದಲ್ಲಿ ಮುಖ ಟ್ಯಾನ್ ಆಗಿದ್ದರೆ ಈ ಜೆಲ್ ಅನ್ನು ಮುಖಕ್ಕೆ ಹಚ್ಚಿದರೆ ಟ್ಯಾನ್ ರಿಮುವ್ ಆಗುವ ಜೊತೆಗೆ ಮುಖಕ್ಕೆ ಉತ್ತಮ ಫಲಿತಾಂಶ ಸಿಗುತ್ತದೆ.

ಹೈಡ್ರೇಟ್‌ ಮತ್ತು ಮಾಯಿಶ್ಚರೈಸ್:

ಹೆಚ್ಚಿನ ನೀರಿನ ಅಂಶ ಮತ್ತು ಪೋಷಕಾಂಶಗಳಿಂದ ಸಮೃದ್ಧವಾಗಿರುವ ಅಲೋವೆರಾ ಜೆಲ್ ಅನ್ನು ಮುಖಕ್ಕೆ ಹಚ್ಚುವುದರಿಂದ ಚರ್ಮವನ್ನು ಹೈಡ್ರೇ ಟ್ ಮಾಡಲು ಸಹಾಯಕ ವಾಗಲಿದೆ. ಇದು ಎಣ್ಣೆಯುಕ್ತ ಚರ್ಮಕ್ಕೆ ಸೂಕ್ತವಾಗಿದ್ದು ಮುಖದ ಮೇಲಿನ ಹೆಚ್ಚುವರಿ ಎಣ್ಣೆಯನ್ನು ನಿಯಂತ್ರಿಸಲು ಮತ್ತು ಮೊಡವೆಗಳ ಕಲೆಗಳನ್ನು ಮಸುಕಾಗಿಸಲು ಸಹಾಯ ಮಾಡುತ್ತದೆ.ಇದು ಚರ್ಮದ ರಂಧ್ರಗಳನ್ನು ಮುಚ್ಚಿ, ತ್ವಚೆಯಲ್ಲಿ ಹೆಚ್ಚಾಗಿ ಉತ್ಪತ್ತಿಯಾಗುವ ಎಣ್ಣೆ ಅಂಶ, ಬ್ಯಾಕ್ಟೀರಿಯಾ ಮತ್ತು ಕೊಳೆ ನಿವಾರಣೆ ಮಾಡಲು ಹೆಚ್ಚು ಪರಿಣಾಮಕಾರಿ.

ಮುಖದ ಕಲೆ ಶಮನಗೊಳಿಸಲು ಸಹಕಾರಿ:

ಉತ್ಕರ್ಷಣ ನಿರೋಧಕ ಮತ್ತು ವಿಟಮಿನ್ ಸಿ ಹೆಚ್ಚಿರುವ ಅಲೋವೆರಾ ಜೆಲ್ ಹಚ್ಚಿದರೆ ಮುಖದ ಸೂಕ್ಷ್ಮ ರೇಖೆಗಳು, ಸುಕ್ಕುಗಳು ಮತ್ತು ಕಪ್ಪು ಕಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಅಲೋವೆರಾ ಜೆಲ್ ಯಾವುದೇ ರೀತಿಯ ಗಾಯಗಳನ್ನು ಹೊಂದಿದ್ದರೂ ಅದನ್ನು ತಕ್ಷಣವೇ ಗುಣಪಡಿಸಲು ಸಹಾಯ ಮಾಡುತ್ತದೆ. ಇದು ನಿಮ್ಮ ಚರ್ಮದ ಮೇಲೆ ಇರುವ. ಯಾವುದೇ ರೀತಿಯ ಕಠಿಣ ಕಲೆಗಳಿದ್ದರೂ ಸಹ ಅದರ ಮೇಲೆ ಪ್ರತಿದಿನವೂ ಅಲೊವೆರ ಜಲ್ ಅನ್ನು ಹಚ್ಚುತ್ತಾ ಬಂದರೆ ಈ ನಿಮ್ಮ ಮುಖದ ಮೇಲಿನ ಕಲೆಗಳು ಸಂಪೂರ್ಣವಾಗಿ ಕಡಿಮೆಯಾಗಲಿದೆ.

ಚರ್ಮದ ಸುಕ್ಕು ನಿವಾರಣೆ

ಅಲೋವೆರಾದ ಜೆಲ್ ಬೀಟಾ‌ ಕ್ಯಾರೋಟಿನ್ ಮತ್ತು ವಿಟಮಿನ್ ಸಿ ಹೆಚ್ಚಾಗಿ ಇರಲಿದ್ದು ಇದು ಬೇಗ ಚರ್ಮ ಸುಕ್ಕು ಗಟ್ಟುವುದನ್ನು ತಡೆಯುತ್ತದೆ. ಜೊತೆಗೆ ಚರ್ಮದ ಕಲೆ ಮತ್ತು ಸುಕ್ಕು ನಿವಾರಣೆ ಮಾಡಿ ದೇಹದ ಕಾಲ ಜನ್ ಉತ್ಪಾದನೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.ಇದರಿಂದ ನಿಮ್ಮ ಚರ್ಮದ ಅಂದ ಹೆಚ್ಚಿಸಿ ಮುಖ ಕಾಂತಿಯುಕ್ತ ವಾಗಿ ಕಾಣಲಿದೆ.

ಇದನ್ನು ಓದಿ: Beauty Tips: ಹಸಿ ಶುಂಠಿ ಬಳಸಿದ್ರೆ ಮೊಡವೆ ಮಾಯವಾಗುತ್ತಾ? ಈ ಬಗ್ಗೆ ವೈದ್ಯರು ಹೇಳೋದೇನು?

ಅಲೋವೆರಾ ಜೆಲ್ ಹೇಗೆ ಬಳಸುವುದು?

  • ನೀವು ಅಲೋವೆರಾ ಜೆಲ್ ಅನ್ನು ನೇರವಾಗಿ ನಿಮ್ಮ ಚರ್ಮದ ಮೇಲೆ ಅನ್ವಯಿಸುವ ಮುಲಕ ಬಳಸಬಹುದು.
  • ಜೇನುತುಪ್ಪ, ಮೊಸರು ಮುಂತಾದ ಇತರ ನೈಸರ್ಗಿಕ ಪದಾರ್ಥ ಗಳೊಂದಿಗೆ ಅಲೋವೆರಾ ಜೆಲ್ ಅನ್ನು ಬೆರೆಸಿ ನೀವು ಫೇಸ್ ಮಾಸ್ಕ್ ತಯಾರಿಸಿ ಹಚ್ಚಬಹುದು
  • ಅಲೋವೆರಾ ಜೆಲ್‌ನಲ್ಲಿ ಸಮಾನ ಪ್ರಮಾಣದ ಕಾಫಿಯನ್ನು ಮಿಶ್ರಣ ಮಾಡಿ. ಈ ಪೇಸ್ಟ್ ಅನ್ನು ತಯಾರಿಸಿದ ನಂತರ, ಅದನ್ನು 10 ರಿಂದ 15 ನಿಮಿಷಗಳ ಕಾಲ ಮುಖದ ಮೇಲೆ ಹಚ್ಚಿ ತೊಳೆಯಬಹುದು.
  • ಅಲೋವೆರಾ ಜೆಲ್‌ನಲ್ಲಿ 1 ಚಮಚ ನಿಂಬೆ ರಸ ಮತ್ತು 1/2 ಚಮಚ ಜೇನುತುಪ್ಪವನ್ನು ಮಿಶ್ರಣ ಮಾಡಿ ಈ ಪೇಸ್ಟ್ ಅನ್ನು ಮುಖಕ್ಕೆ ಅನ್ವಯಿಸಿದರೆ ಮುಖದ ಕಾಂತಿ ಹೆಚ್ಚು ಮಾಡಲಿದೆ.