ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಏರ್‌ಪೋರ್ಟ್‌ನಲ್ಲಿ ಬೆತ್ತಲೆಯಾಗಿ ಓಡಾಡಿದ ಈ ಮಹಿಳೆ- ವಿಡಿಯೊ ಫುಲ್‌ ವೈರಲ್

ಟೆಕ್ಸಾಸ್ ವಿಮಾನ ನಿಲ್ದಾಣದಲ್ಲಿ ಸಮಂತಾ ಪಾಲ್ಮಾ ಎಂಬ ಮಹಿಳೆಯೊಬ್ಬಳು ಬೆತ್ತಲೆಯಾಗಿ ಓಡಾಡುತ್ತಾ ಜನರನ್ನು ಪೆನ್ಸಿಲ್‍ನಿಂದ ಇರಿದು ಗಾಯಗೊಳಿಸಿದಲ್ಲದೇ ಕೆಲವು ಸಿಬ್ಬಂದಿಯನ್ನು ಕಚ್ಚಿಗಾಯಗೊಳಿಸಿದ್ದಾಳೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral Video) ಆಗಿದೆ.

ಟೆಕ್ಸಾಸ್‍:ಇತ್ತೀಚೆಗೆ ವಿಮಾನದಲ್ಲಿ ಮಹಿಳೆಯೊಬ್ಬಲು ಬೆತ್ತಲೆಯಾಗಿ ಓಡಾಡಿದ ಘಟನೆಯೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಅದರ ಬೆನ್ನಲ್ಲೆ ಈಗ ಟೆಕ್ಸಾಸ್ ವಿಮಾನ ನಿಲ್ದಾಣದಲ್ಲಿ ಮಹಿಳೆಯೊಬ್ಬಳು ಬೆತ್ತಲೆಯಾಗಿ ಓಡಾಡುತ್ತಾ ಜನರನ್ನು ಪೆನ್ಸಿಲ್‍ನಿಂದ ಇರಿದು ಗಾಯಗೊಳಿಸಿದಲ್ಲದೇ ಕೆಲವು ಸಿಬ್ಬಂದಿಯನ್ನು ಕಚ್ಚಿ ಗಾಯಗೊಳಿಸಿದ ಘಟನೆ ನಡೆದಿರುವುದಾಗಿ ವರದಿಯಾಗಿದೆ. ಡಲ್ಲಾಸ್ ಫೋರ್ತ್ ವರ್ತ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಮಂತಾ ಪಾಲ್ಮಾ ಎಂಬ ಮಹಿಳೆ ಇಂತಹ ಕೃತ್ಯವನ್ನು ಎಸಗಿದ್ದಾಳೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಈಕೆ ತನ್ನನ್ನು ತಾನು ‘ಶುಕ್ರ ದೇವತೆ’ ಎಂದು ಹೇಳಿಕೊಂಡು ಓಡಾಡುತ್ತಿದ್ದಾಳೆ ಎನ್ನಲಾಗಿದೆ.

ವರದಿಯ ಪ್ರಕಾರ, ಈಕೆ ವಿಮಾನ ನಿಲ್ದಾಣದ ರೆಸ್ಟೋರೆಂಟ್‍ನಲ್ಲಿ ಬೆತ್ತಲೆಯಾಗಿ ಓಡಾಡುವುದನ್ನು ಕಂಡು ಅಲ್ಲಿನ ಮ್ಯಾನೇಜರ್ ಆಕೆಯನ್ನು ತಡೆಯಲು ಪ್ರಯತ್ನಿಸಿದಾಗ ಅವಳು ತನ್ನ ಕೈಯಲ್ಲಿದ್ದ ಪೆನ್ಸಿಲ್‍ನಿಂದ ಆತನ ತಲೆ ಮತ್ತು ಮುಖಕ್ಕೆ ಇರಿದಿದ್ದಾಳೆ. ನಂತರ ಮಹಿಳೆ ಅವನ ಮುಂಗೈಗೆ ಕಚ್ಚಿ ಗಾಯಗೊಳಿಸಿದ್ದಾಳೆ ಎಂದು ಆರೋಪಿಸಲಾಗಿದೆ.

ವಿಮಾನ ನಿಲ್ದಾಣದಲ್ಲಿ ಮಹಿಳೆ ಬೆತ್ತಲಾಗಿ ಓಡಾಡಿದ ದೃಶ್ಯ ಇಲ್ಲಿದೆ ನೋಡಿ...



ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಲಾದ ಈ ವಿಡಿಯೊ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ವಿಮಾನ ನಿಲ್ದಾಣದಲ್ಲಿದ್ದ ಜನರು ತನ್ನ ವಿಡಿಯೊ ರೆಕಾರ್ಡ್ ಮಾಡುವುದನ್ನು ಕಂಡ ಅವಳು ಅಲ್ಲಿದ್ದ ಟಿವಿ ಒಡೆದಿದ್ದಾಳೆ, ನೀರನ್ನು ಎಸೆದಿದ್ದಾಳಂತೆ.ನೋಡುಗರಲ್ಲಿ ಒಬ್ಬರು ಈಕೆಯನ್ನು ನೋಡಿ ನಕ್ಕಿದ್ದಕ್ಕೆ ಕೋಪಗೊಂಡ ಪಾಲ್ಮಾ ಅವನನ್ನು ಕೆಟ್ಟ ಪದಗಳಿಂದ ಬೈದು ಕೂಗಾಡಿದ್ದಾಳೆ ಎನ್ನಲಾಗಿದೆ.

ನಂತರ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಬಂದ ಪೊಲೀಸರು ಟರ್ಮಿನಲ್ ಡಿ ಯ ಗೇಟ್ ಡಿ 1 ರಲ್ಲಿ ಎಮರ್ಜೆನ್ಸಿ ಬಾಗಿಲಿನ ಹಿಂದೆ ಅಡಗಿದ್ದ ಆಕೆಯನ್ನು ಪತ್ತೆ ಮಾಡಿದ್ದಾರೆ. ವರದಿಯ ಪ್ರಕಾರ, ಮಹಿಳೆ ರಕ್ತದ ಮಡುವಿನಲ್ಲಿ ಬಿದ್ದಿದ್ದಳಂತೆ. ಆದರೆ ಆ ರಕ್ತ ಅವಳ ದೇಹದಲ್ಲ ಎಂದು ವರದಿಯಾಗಿದೆ. ನಂತರ ಪಾಲ್ಮಾ ಅವಳನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ವಿಚಾರಣೆಯ ವೇಳೆ ಆಕೆ ಮಾನಸಿಕ ಅಸ್ವಸ್ಥಳಾಗಿದ್ದು, ಆ ದಿನ ತನ್ನ ಔಷಧಿಗಳನ್ನು ತಗೆದುಕೊಂಡಿಲ್ಲ ಎಂದು ಆಕೆಯೇ ಒಪ್ಪಿಕೊಂಡಿದ್ದಾಳೆ.

ಈ ಸುದ್ದಿಯನ್ನೂ ಓದಿ:Viral Video: ಸೇತುವೆ ಕೆಳಗೆ ಅಪಾಯಕಾರಿಯಾಗಿ ನೇತಾಡಿದ ಕೇಬಲ್; ಏನಿದು ಘಟನೆ...?

ಹಾಗೇ ತಾನು ತನ್ನ 8 ವರ್ಷದ ಮಗಳೊಂದಿಗೆ ಪ್ರಯಾಣಿಸುತ್ತಿದ್ದೆ ಎಂದು ಆಕೆ ಹೇಳಿದ್ದಾಳೆ ಎಂದು ವರದಿಯಾಗಿದೆ. ಮಹಿಳೆಯ ಮೇಲೆ ಮಾರಣಾಂತಿಕ ಆಯುಧದಿಂದ ಹಲ್ಲೆ ನಡೆಸಿದ ಆರೋಪ ಹೊರಿಸಲಾಗಿದ್ದು, ಹಾಗಾಗಿ ಆಕೆಯನ್ನು ಮಾನಸಿಕ ಆರೋಗ್ಯ ಕೇಂದ್ರದಲ್ಲಿ ಬಂಧಿಸಲಾಗಿದೆಯಂತೆ.