ಇಸ್ಲಾಮಾಬಾದ್: ಇಂಗ್ಲಿಷ್‍ಯೆಂದರೆ ಕೆಲವರಿಗೆ ಕಬ್ಬಿಣದ ಕಡಲೆಕಾಯಿ!ಇನ್ನು ಕೆಲವರು ಅರುಳು ಹುರಿದಂತೆ ಪಟಪಟನೆ ಮಾತನಾಡುತ್ತಾರೆ. ಇನ್ನು ಕೆಲವರು ತಾವು ಮಾತನಾಡಿದರೆ ಎಲ್ಲಿ ತಪ್ಪಾಗುತ್ತದೆಯೋ ಎಂಬ ಅಂಜಿಕೆಯಿಂದಲೇ ಮಾತನಾಡುವುದಿಲ್ಲ. ಆದರೆ ಈಗ ಸೋಶಿಯಲ್ ಮೀಡಿಯಾದಲ್ಲೊಂದು ವಿಡಿಯೊ ಸಖತ್ ಸದ್ದು ಮಾಡುತ್ತಿದೆ. ಅದ್ಯಾವುದೆಂದರೆ ಪಾಕಿಸ್ತಾನದ ಪತ್ರಕರ್ತ ಮತ್ತು ಪೊಲೀಸ್ ಅಧಿಕಾರಿಯೊಬ್ಬರು ಸಾರ್ವಜನಿಕ ಸ್ಥಳದಲ್ಲಿ ಕಳಪೆ ಇಂಗ್ಲಿಷ್‍ನಲ್ಲಿ ವಾದಿಸುತ್ತಿರುವ ವಿಡಿಯೊ.ಇದು ಸೋಶಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video)ಆಗಿದೆ. ಮೊದಲಿಗೆ ಪಂಜಾಬಿ ಭಾಷೆಯಲ್ಲಿ ವಾದ ಮಾಡಿದ ಇಬ್ಬರೂ ಕೊನೆಗೆ ಇಂಗ್ಲಿಷ್ ಮಾತನಾಡಿದ್ದಾರೆ. ಇದು ಸಿಕ್ಕಾಪಟ್ಟೆ ಫನ್ನಿಯಾಗಿದೆ. ಇವರಿಬ್ಬರ ಇಂಗ್ಲಿಷ್ ಸಂಭಾಷಣೆ ನೋಡಿ ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ.
ಇನ್ನು ಇವರಿಬ್ಬರು ವಾದ ಮಾಡಿದ್ದು ಪಾರ್ಕಿಂಗ್ ವಿಚಾರಕ್ಕಂತೆ. ವೈರಲ್ ವಿಡಿಯೊದಲ್ಲಿ ಪೊಲೀಸ್ ವರದಿಗಾರನಿಗೆ ಬೆದರಿಕೆ ಹಾಕಿರುವುದು ಸೆರೆಯಾಗಿದೆ. ಇವರಿಬ್ಬರೂ ಜಗಳವಾಡುವಾಗ ಇಂಗ್ಲಿಷ್ ಪದಗಳಿಗಾಗಿ ಹೆಣಗಾಡುತ್ತಿರುವುದು ನೋಡುವುದಕ್ಕೆ ತಮಾಷೆಯಾಗಿತ್ತು.
ಇವರಿಬ್ಬರ ಇಂಗ್ಲಿಷ್ ಸಂಭಾಷಣೆಯ ತಮಾಷೆಯ ವಿಡಿಯೊ ಇಲ್ಲಿದೆ ನೋಡಿ...
ಇವರ ವಾಗ್ವಾದದ ವಿಡಿಯೊ ವೈರಲ್ ಆಗಿದ್ದು, ಇದು ನೆಟ್ಟಿಗರ ಗಮನ ಸೆಳೆದಿದೆ.ಇನ್ನು ಇವರು ಬಳಸಿದ ಕಳಪೆ ಇಂಗ್ಲಿಷ್ ಪದ ನೋಡಿ ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಮೂರು ಲಕ್ಷಕ್ಕೂ ಹೆಚ್ಚು ವ್ಯೂವ್ಸ್ ಗಳಿಸಿದೆ ಹಾಗೂ ಸಿಕ್ಕಾಪಟ್ಟೆ ಜನ ಕಾಮೆಂಟ್ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಪಾಕಿಸ್ತಾನದಲ್ಲಿ ಸ್ನೇಹಿತರೊಂದಿಗೆ ಭೋಜನ ಸವಿದ ಎಲೋನ್ ಮಸ್ಕ್! ಭಾರೀ ಟ್ರೆಂಡ್ ಆಗ್ತಿದೆ ಈ ವಿಡಿಯೊ
"ಇಬ್ಬರು ಒಂದನೇ ತರಗತಿಯ ಮಕ್ಕಳು ಇಂಗ್ಲಿಷ್‍ನಲ್ಲಿ ಜಗಳವಾಡುತ್ತಿದ್ದಾರೆ" ಎಂದು ಒಬ್ಬ ನೆಟ್ಟಿಗರು ತಮಾಷೆ ಮಾಡಿದ್ದಾರೆ. ಇನ್ನೊಬ್ಬರು, "ತ್ರಿಭಾಷಾ ನೀತಿ ಮುಖ್ಯವಾಗಿದೆ." ಎಂದು ಹೇಳಿದ್ದಾರೆ. ಮತ್ತೊಬ್ಬರು ಅವರ ಇಂಗ್ಲಿಷ್ ಅನ್ನು ಪಾಕಿಸ್ತಾನದ ಕ್ರಿಕೆಟಿಗರಾದ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಅವರಿಗೆ ಹೋಲಿಸಿದ್ದಾರೆ. "ನಾನು ಅವರ ಇಂಗ್ಲಿಷ್ ಅನ್ನು ಅರ್ಥಮಾಡಿಕೊಂಡಿದ್ದೇನೆ. ಇದು ರಿಜ್ವಾನ್ ಮತ್ತು ಬಾಬರ್ ಇಂಗ್ಲಿಷ್‍ಗಿಂತ ಉತ್ತಮವಾಗಿದೆ. ನೀವು ಇದನ್ನು ಅರ್ಥಮಾಡಿಕೊಳ್ಳಬಹುದು!" ಎಂದಿದ್ದಾರೆ. ನೆಟ್ಟಿಗರು ಈ ವಿಡಿಯೊ ಕ್ಲಿಪ್‍ಗೆ "ಆರ್‌ಐಪಿ ಇಂಗ್ಲಿಷ್" ಎಂದು ಶೀರ್ಷಿಕೆ ನೀಡಿದ್ದಾರೆ.
ಪಟಪಟನೆ ಹಿಂದಿ ಮಾತನಾಡಿದ ಅಮೆರಿಕನ್ ಮಗು
ಈ ಭಾಷಾ ವಿಚಾರಕ್ಕೆ ಸಂಬಂಧಪಟ್ಟ ವಿಡಿಯೊಗಳು ಸೊಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದು ಇದೇ ಮೊದಲಲ್ಲ. ಇತ್ತೀಚೆಗಷ್ಟೇ ಅಮೆರಿಕದ ಪುಟ್ಟ ಮಗುವೊಂದು ಹಿಂದಿಯಲ್ಲಿ ಬಹಳ ಅದ್ಭುತವಾಗಿ ಮಾತನಾಡಿದ ಹೃದಯಸ್ಪರ್ಶಿ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ವಿಡಿಯೊವನ್ನು ಆ ಮಗುವಿನ ತಾಯಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಳೆ. ಇದು ಈಗ ನೆಟ್ಟಿಗರ ಮನಗೆದ್ದು ಸಿಕ್ಕಾಪಟ್ಟೆ ವೈರಲ್ ಆಗಿತ್ತು.ಭಾರತದಲ್ಲಿ ವಾಸಿಸುವ ಅಮೆರಿಕನ್ ಮಹಿಳೆ ಕ್ರಿಸ್ಟನ್ ಫಿಶರ್ ಎಂಬಾಕೆ ತನ್ನ ಮಗುವಿನ ಈ ವಿಡಿಯೊವನ್ನು ಸೋಶಿಯಲ್ ಮೀಡಿಯಾ ಪೇಜ್‍ನಲ್ಲಿ ಹಂಚಿಕೊಂಡಿದ್ದಾಳೆ. ಇದರಲ್ಲಿ ಆಕೆಯ ಚಿಕ್ಕ ಮಗು ಮಾತನಾಡಲು ಹಿಂದಿ ಪದಗಳನ್ನು ಬಳಸಲು ಪ್ರಯತ್ನಿಸುತ್ತಿರುವುದು ಮತ್ತು ಹಿಂದಿಯನ್ನು ಬಹಳ ಅದ್ಭುತವಾಗಿ ಮಾತನಾಡಿದ್ದು ಸೆರೆಯಾಗಿದೆ. ಮಗುವಿನ ಈ ಮಾತು ಕೇಳಿ ನೆಟ್ಟಿಗರು ಕೂಡ ಫುಲ್ ಖುಷ್ ಆಗಿದ್ದಾರೆ.