Viral Video: ಪಾಕಿಸ್ತಾನದಲ್ಲಿ ಸ್ನೇಹಿತರೊಂದಿಗೆ ಭೋಜನ ಸವಿದ ಎಲೋನ್ ಮಸ್ಕ್! ಭಾರೀ ಟ್ರೆಂಡ್ ಆಗ್ತಿದೆ ಈ ವಿಡಿಯೊ
ಬಿಲಿಯನೇರ್ ಉದ್ಯಮಿ ಎಲೋನ್ ಮಸ್ಕ್ ಅವರನ್ನು ಹೋಲುವ ಪಾಕಿಸ್ತಾನಿ ವ್ಯಕ್ತಿಯೊಬ್ಬರು ತನ್ನ ಸ್ನೇಹಿತರೊಂದಿಗೆ ಊಟ ಮಾಡಿದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ನೆಟ್ಟಿಗರು ಇದನ್ನು ಕಂಡು ಶಾಕ್ ಆಗಿದ್ದಾರೆ. ಇತ್ತೀಚೆಗಷ್ಟೇ ಪಾಕಿಸ್ತಾನದಲ್ಲಿ ಟ್ರಂಪ್ ಮುಖವನ್ನು ಹೋಲುವ ವ್ಯಕ್ತಿಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.


ಇಸ್ಲಾಮಾಬಾದ್: ಇತ್ತೀಚೆಗಷ್ಟೇ ಪಾಕಿಸ್ತಾನದಲ್ಲಿ ಟ್ರಂಪ್ ಮುಖವನ್ನು ಹೋಲುವ ವ್ಯಕ್ತಿಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ಬಿಲಿಯನೇರ್ ಉದ್ಯಮಿ ಎಲೋನ್ ಮಸ್ಕ್ ಅವರನ್ನು ಹೋಲುವ ಪಾಕಿಸ್ತಾನಿ ವ್ಯಕ್ತಿಯೊಬ್ಬರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.ಪಾಕಿಸ್ತಾನದ ಈ ವ್ಯಕ್ತಿಯ ಮುಖ ಚಹರೆ ಥೇಟ್ ಟೆಸ್ಲಾ ಮತ್ತು ಸ್ಪೇಸ್ ಎಕ್ಸ್ ಸಿಇಒ ಎಲೋನ್ ಮಸ್ಕ್ ರೀತಿಯೇ ಇದೆಯಂತೆ. ಹಾಗಾಗಿ ಇತನ ಸ್ನೇಹಿತರು ಎಲೋನ್ ಮಸ್ಕ್ ಎಂದು ಕರೆದಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video)ಆಗಿದೆ. ಪಾಕಿಸ್ತಾನದಲ್ಲಿ ಎಲೋನ್ ಮಸ್ಕ್ ಸಂಬಂಧಿತ ವಿಷಯ ಇದೊಂದೇ ಅಲ್ಲ. ಇತ್ತೀಚೆಗೆ ಟೆಸ್ಲಾ ಅವರ ಭವಿಷ್ಯದ ಸೈಬರ್ ಟ್ರಕ್ ಅನ್ನು ಹೋಲುವ ವಾಹನವೊಂದು ಅಪರಿಚಿತ ನಗರದ ಬೀದಿಗಳಲ್ಲಿ ಸಂಚರಿಸುತ್ತಿರುವುದನ್ನು ತೋರಿಸುವ ವಿಡಿಯೊ ಕೂಡ ವೈರಲ್ ಆಗಿತ್ತು.
ಪಾಕಿಸ್ತಾನದ ಎಲೋನ್ ಮಸ್ಕ್ ವಿಡಿಯೊ ಇಲ್ಲಿದೆ ನೋಡಿ...
Look at this doppelganger of @elonmusk is KPK, Pakistan 🇵🇰
— Gohar Zaman - گوہر زمان (@goharxaman) March 14, 2025
Elon Musk Khan Yousafzai 😁#ElonMusk pic.twitter.com/Btha6pWNM1
ಆಶ್ಚರ್ಯಕರವೆಂದರೆ ಈ ವಾಹನವು ಅದರ ವಿಶಿಷ್ಟ ವಿನ್ಯಾಸದೊಂದಿಗೆ ಟೆಸ್ಲಾ ಅವರ ಭವಿಷ್ಯದ ಸೈಬರ್ ಟ್ರಕ್ ಅನ್ನು ಹೋಲುತ್ತದೆ. ಆದರೆ ಇದು ನಿಜವಾದದ್ದು ಅಲ್ಲವಂತೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಟೆಸ್ಲಾ ಸೈಬರ್ ಟ್ರಕ್ ಪಾಕಿಸ್ತಾನದಲ್ಲಿ ಅನಾಮಧೇಯ ನಗರದಲ್ಲಿ ಪತ್ತೆಯಾಗಿದೆ ಎಂದು ತಿಳಿಸಲಾಗಿದೆ. ಇಲ್ಲಿ ಸೈಬರ್ ಟ್ರಕ್ ಪ್ರತಿಕೃತಿಯಂತೆ ವಾಹನ ರಚಿಸಲು ಪ್ರಯತ್ನಿಸಿದ ಸ್ಥಳೀಯ ಸೃಷ್ಟಿಕರ್ತರ ಜಾಣ್ಮೆಯನ್ನು ಎಲ್ಲರೂ ಮೆಚ್ಚಿದ್ದಾರೆ. ವಾಹನವನ್ನು ಯಾರು ನಿರ್ಮಿಸಿದರು ಎಂಬುದು ಸ್ಪಷ್ಟವಾಗಿಲ್ಲವಾದರೂ, ಅದರ ಲುಕ್ ಮಾತ್ರ ಸೂಪರ್ ಆಗಿತ್ತಂತೆ.
ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮಿಡಿಯಾಗಳು ಪ್ರಸಿದ್ಧ ವ್ಯಕ್ತಿಗಳ ಹಲವಾರು ಡೋಪೆಲ್‍ಗ್ಯಾಂಗರ್‌ಗಳತ್ತ ಗಮನ ಸೆಳೆದಿದೆ. ನಟರಿಂದ ರಾಜಕಾರಣಿಗಳವರೆಗೆ, ಮತ್ತು ಈಗ ಟೆಕ್ ಬಿಲಿಯನೇರ್‌ಗಳವರೆಗೆ, ಅನೇಕ ಹೋಲಿಕೆಗಳು ಸೋಶಿಯಲ್ ಮೀಡಿಯಾಗಳಲ್ಲಿ ಪ್ರೇಕ್ಷಕರನ್ನು ಆಕರ್ಷಿಸುತ್ತಲೇ ಇವೆ.
ಈ ಸುದ್ದಿಯನ್ನೂ ಓದಿ:Elon Musk: ನನ್ನ ಮಗುವಿಗೆ ಎಲಾನ್ ಮಸ್ಕ್ ತಂದೆ ಎಂದ ಮಹಿಳೆ! 13 ಮಕ್ಕಳ ಅಪ್ಪನಾದರೆ ಮಸ್ಕ್?
ಪಾಕಿಸ್ತಾನದಲ್ಲಿ ರೈಸ್ ಪುಡ್ಡಿಂಗ್ ಮಾರಿದ ಡೊನಾಲ್ಡ್ ಟ್ರಂಪ್
ಇತ್ತೀಚೆಗೆ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನೇ ಹೋಲುವ ಪಾಕಿಸ್ತಾನದ ಪಂಜಾಬ್‌ನ ಸಾಹಿವಾಲ್ ಜಿಲ್ಲೆಯ ಚಾಚಾ ಬೀದಿಯಲ್ಲಿ ಗ್ರಾಹಕರಿಗೆ ರೈಸ್ ಪುಡ್ಡಿಂಗ್ ನೀಡುತ್ತಿರುವ ವಿಡಿಯೊವೊಂದು ವೈರಲ್ ಆಗಿತ್ತು. ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹೋಲುವ ಅವರನ್ನು ಜನರು ‘ಪಾಕಿಸ್ತಾನದ ಡೊನಾಲ್ಡ್ ಟ್ರಂಪ್' ಎಂದೇ ಕರೆಯುತ್ತಾರೆ. ಅಲ್ಲದೇ ಅವರ ನಿಜವಾದ ಹೆಸರು ಸಲೀಮ್ ಬಗ್ಗಾ ಆಗಿದ್ದರು ಕೂಡ ಅಲ್ಲಿನ ಜನರು ಅವರನ್ನು ಪ್ರೀತಿಯಿಂದ "ಚಾಚಾ ಬಗ್ಗಾ" ಎಂದು ಸಂಬೋಧಿಸುತ್ತಾರೆ. ಅವರಿಗೆ ಈಗ 53 ವರ್ಷ. ಅಲ್ಬಿನಿಸಂನಿಂದ ಬಳಲುತ್ತಿದ್ದ ಕಾರಣ ಅವರ ಕೂದಲು ವಿಶಿಷ್ಟವಾದ ಹೊಂಬಣ್ಣವನ್ನು ಹೊಂದಿದೆ. ಅಧ್ಯಕ್ಷ ಟ್ರಂಪ್ ಅವರೊಂದಿಗಿನ ಅವರ ವಿಲಕ್ಷಣ ಹೋಲಿಕೆ ಅವರಿಗೆ ಮೆಚ್ಚುಗೆ ಮತ್ತು ಪ್ರಶಂಸೆಯನ್ನು ತಂದಿದೆ.