ಜೈಪುರ, ಎ.10: ರಾಜಸ್ಥಾನದಲ್ಲಿ ಆಘಾತಕಾರಿ ಘಟನೆಯೊಂದು ಕಂಡು ಬಂದಿದೆ. ವಾಹನ ಸಂಚಾರ ನಡೆಸುತ್ತಿದ್ದಾಗ ಬೈಕ್ ಸವಾರ ಮಹಿಳೆಯನ್ನು ಅಸಭ್ಯವಾಗಿ ಸ್ಪರ್ಶಿಸಿಸಿದ್ದಾನೆ. ಹಗಲು ಹೊತ್ತಿನಲ್ಲಿಯೇ ಸಂಚಾರದ ನಡುವೆ ಕ್ಯಾಮೆರಾದಲ್ಲಿ ಸೆರೆಯಾದ ಈ ದೃಶ್ಯ (Viral News) ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕುವಂತೆ ಮಾಡಿದೆ.
ಇತ್ತೀಚೆಗೆ ಮಹಿಳೆಗೆ ಕಿರುಕುಳ ಉಂಟು ಮಾಡುವ ಅನೇಕ ಘಟನೆಗಳು ನಡೆದಿವೆ. ಇದೀಗ ಜನದಟ್ಟಣಮಾಡಿದ್ದಾರೆ. ರಸ್ತೆಯಲ್ಲೇ ಬೈಕ್‌ನಲ್ಲಿ ಬಂದ ದುಷ್ಕರ್ಮಿಯೊಬ್ಬ ಸ್ಕೂಟರ್ ಚಲಾಯಿಸುತ್ತಿದ್ದ ಮಹಿಳೆಯನ್ನು ಅಸಭ್ಯವಾಗಿ ಮುಟ್ಟಿ ಪರಾಗಿದ್ದಾನೆ. ಈ ಘಟನೆಯನ್ನು ರಾಷ್ಟ್ರೀಯ ಅಪರಾಧ ತನಿಖಾ ಬ್ಯೂರೋ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.
ವಿಡಿಯೋ ನೋಡಿ:
ವೈರಲ್ ವೀಡಿಯೊದಲ್ಲಿ, ಜನದಟ್ಟಣೆಯ ರಸ್ತೆಯಲ್ಲಿ ಮಹಿಳೆಯೊಬ್ಬರು ಸ್ಕೂಟರ್ ಪ್ರಯಾಣ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಹಿಂದಿನಿಂದ ಕಿಡಿಕೇಡಿಯೊಬ್ಬ ಅವಳನ್ನು ಸಮೀಪಿಸು ತ್ತಿರುವುದನ್ನು ತೋರಿಸುತ್ತದೆ. ಆತ ಚಲಿಸುತ್ತಿದ್ದ ವಾಹನದಲ್ಲೇ ಮಹಿಳೆಯನ್ನು ಅಸಭ್ಯವಾಗಿ ಮುಟ್ಟಿ ಪರಾರಿಯಾಗಿದ್ದಾನೆ. ಈ ಘಟನೆಯಿಂದ ಗಾಬರಿಗೊಂಡ ಮಹಿಳೆ ಆತನಿಗೆ ಹೊಡೆಯಲು ಮುಂದಾದರೂ ಆತ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ.
Viral Video: ಶೂಟಿಂಗ್ ವೇಳೆ ಗೋಡೆ ಏರಿದ ಅಕ್ಷಯ ಕುಮಾರ್; ಮೈ ಝುಂ ಎನ್ನುವ ಸಾಹಸ ದೃಶ್ಯ ವೈರಲ್
ಈ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವ್ಯಾಪಕ ಖಂಡನೆಗೆ ಗುರಿಯಾಗಿದೆ. ಜೈಪುರ ಪೊಲೀಸರು NCIB ಯ ಸಂವಹನವನ್ನು ಒಪ್ಪಿಕೊಂಡಿದ್ದು, ಅಗತ್ಯ ಕ್ರಮಕ್ಕಾಗಿ ಮಾಹಿತಿಯನ್ನು ಸಂಬಂಧಪಟ್ಟ ಪ್ರಾಧಿಕಾರಕ್ಕೆ ತಿಳಿಸಿದ್ದಾರೆ. ಬಳಕೆದಾರರೊಬ್ಬರು ಹಗಲು ಹೊತ್ತಿನಲ್ಲಿಯೇ ಮಹಿಳೆಗೆ ಸುರಕ್ಷತೆ ಇಲ್ಲವೆಂದರೆ ಹೇಗೆ? ಎಂದು ಪ್ರಶ್ನೆ ಮಾಡಿದ್ದಾರೆ