ಇರಾಕ್: ಇರಾನ್‌ನ ಡ್ರೋನ್ (Iran's Shahed drone) ಅನ್ನು ಅಮೆರಿಕದ ಜೆಟ್ (US air force jet) ಹಿಂಬಾಲಿಸಿಕೊಂಡು ಹೋಗುತ್ತಿರುವ ವಿಡಿಯೊ (Viral Video) ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ಘಟನೆ ಇರಾಕ್‌ನಲ್ಲಿ (Iraq) ನಡೆದಿದೆ ಎನ್ನಲಾಗಿದೆ. ಇರಾನ್‌ನ ಶಹೀದ್ ಡ್ರೋನ್ ಅನ್ನು ಅಮೆರಿಕದ ಎಫ್ -15 ಜೆಟ್ ಹಿಂಬಾಲಿಸಿಕೊಂಡು ಹೋಗುತ್ತಿರುವುದನ್ನು ಈ ವಿಡಿಯೊದಲ್ಲಿ ಕಾಣಬಹುದು. ಇದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ವಿಡಿಯೊದಲ್ಲಿ ಭಾರಿ ಹೊಗೆ, ಗಾಳಿಯಲ್ಲಿ ಡ್ರೋನ್ ಅನ್ನು ಗುರಿಯಾಗಿಸಲು ಜೆಟ್ ಪ್ರಯತ್ನಿಸುತ್ತಿರುವುದನ್ನು ನೋಡಬಹುದಾಗಿದೆ.
ಇದಕ್ಕೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿದ್ದು, ಕೆಲವರು ಉತ್ತರ ಇರಾಕ್‌ನಲ್ಲಿ ಅಮೆರಿಕನ್ ಸೇನೆಯ ಎಫ್ -15 ಜೆಟ್ ಇರಾನ್ ನ ಡ್ರೋನ್ ಅನ್ನು ಹೊಡೆದುರುಳಿಸಲು ವಿಫಲವಾಗಿದೆ ಎಂದು ಹೇಳಿದ್ದಾರೆ. ಇನ್ನು ಕೆಲವರು ಡ್ರೋನ್ ಅನ್ನು ಏರ್ ಬಿಲ್ ನಲ್ಲಿ ಹೊಡೆದುರುಳಿಸಿದೆ ಎಂದು ತಿಳಿಸಿದ್ದಾರೆ.
ರಕ್ಷಣಾ ವಲಯದ ರಫ್ತಿನಲ್ಲಿ ಭಾರತ ಹೊಸ ಮೈಲಿಗಲ್ಲು: ಒಂದೇ ವರ್ಷ 38,424 ಕೋಟಿ ರುಪಾಯಿ ವಹಿವಾಟು; ಶೇಕಡಾ 63ರಷ್ಟು ಏರಿಕೆ
ಇರಾನ್ ಮತ್ತು ಯುಎಸ್ ನಡುವೆ ದಾಳಿ, ಪ್ರತಿದಾಳಿಗಳು ಹೆಚ್ಚುತ್ತಿರುವ ಮಧ್ಯೆಯೇ ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಶಹೀದ್ ಡ್ರೋನ್‌ಗಳು ಕಡಿಮೆ ಬೆಲೆಯ ಇರಾನಿನ ಶಸ್ತ್ರಾಸ್ತ್ರಗಳಾಗಿದ್ದು, ಇಸ್ರೇಲ್ ಮತ್ತು ಯುಎಸ್ ಜೊತೆ ನಡೆಯುತ್ತಿರುವ ಯುದ್ಧದಲ್ಲಿ ಇದನ್ನು ಬಹಳಷ್ಟು ಬಳಸಲಾಗಿದೆ. ಇರಾನ್ ಯುದ್ಧದಲ್ಲಿ ಬಹುದೊಡ್ಡ ಪಾತ್ರವನ್ನು ನಿರ್ವಹಿಸುವ ಈ ಡ್ರೋನ್‌ಗಳನ್ನು ದಾಳಿಗೆ ನಿಯೋಜಿಸುವುದು ಸುಲಭ. ಆದರೆ ಇದನ್ನು ನೆಲದ ಮೇಲೆ ನಾಶ ಪಡಿಸುವುದು ಬಹುತೇಕ ಕಠಿಣ ಕಾರ್ಯವಾಗಿದೆ.
ಇರಾನ್ ಯುದ್ಧದಲ್ಲಿ ಅಮೆರಿಕನ್ ಸೇನೆಯು ಬಳಸುವ ಕ್ಷಿಪಣಿಗಳಿಗಿಂತ ಕಡಿಮೆ ವೆಚ್ಚದ ಡ್ರೋನ್ ಗಳು ಬಳಸುತ್ತಿದ್ದು, ಈ ಡ್ರೋನ್ ಗಳು ಮೋಟಾರ್‌ಸೈಕಲ್ ಎಂಜಿನ್‌ಗಳಲ್ಲಿ ಚಲಿಸುತ್ತವೆ. ಇದರಲ್ಲಿ 25- 50 ಕೆ.ಜಿ. ತೂಕದ ಸುಡು ಮದ್ದುಗಳು ಇರುತ್ತವೆ.
ಇತ್ತೀಚೆಗೆ ಇರಾನ್ ದೇಶದ ದಕ್ಷಿಣ ಕರಾವಳಿಯ ಹೊರ್ಮುಜ್ ದ್ವಿಪಾದ ಬಳಿ ಅಮೆರಿಕದ ಎಫ್ -15 ಜೆಟ್ ಒಂದನ್ನು ಹೊಡೆದು ಉರುಳಿಸಿರುವುದಾಗಿ ಇರಾನ್ ಹೇಳಿದ ಬಳಿಕ ಇದರ ವಿಶೇಷತೆಗಳು ಎಲ್ಲರ ಸೆಳೆದಿತ್ತು. ಆದರೆ ಈ ಸುದ್ದಿಯನ್ನು ಯುಎಸ್ ನಿರಾಕರಿಸಿತ್ತು.
ನಮ್ಮ ಭಾರತೀಯ ಸ್ನೇಹಿತರು ಸುರಕ್ಷಿತರಾಗಿದ್ದಾರೆ; ಸಂಘರ್ಷದ ನಡುವೆಯೂ ಇರಾನ್ ಅಭಯ
ಕಳೆದ ಫೆಬ್ರವರಿ ತಿಂಗಳಾಂತ್ಯಕ್ಕೆ ಇಸ್ರೇಲ್, ಯುಎಸ್ ಮತ್ತು ಇರಾನ್ ನಡುವಿನ ಸಂಘರ್ಷವು ಈಗ ಪಶ್ಚಿಮ ಏಷ್ಯಾದ ವಿವಿಧ ಭಾಗಗಳನ್ನು ವ್ಯಾಪಿಸಿದೆ. ಶೀಘ್ರದಲ್ಲೇ ಯುದ್ಧವನ್ನು ಕೊನೆಗೊಳಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬುಧವಾರ ಘೋಷಣೆಯನ್ನು ಮಾಡಿದ್ದು, ಇದಕ್ಕೂ ಮೊದಲು ಇರಾನ್ ಅನ್ನು ಶಿಲಾಯುಗದ ಕಾಲಕ್ಕೆ ಕಳುಹಿಸಲಾಗುವುದು ಎಂದು ಪ್ರತಿಜ್ಞೆ ಮಾಡಿದ್ದಾರೆ. ಹೀಗಾಗಿ ಇನ್ನು ಸಂಘರ್ಷ ತೀವ್ರಗೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.