Viral Video: ರೈಲಿನ ಡೋರ್ ಕ್ಲೋಸ್... ರೊಚ್ಚಿಗೆದ್ದ ಜನ ಮಾಡಿದ್ದೇನು ಗೊತ್ತಾ? ವಿಡಿಯೊ ವೈರಲ್
ಬಿಹಾರದ ಗಯಾ ರೈಲ್ವೆ ನಿಲ್ದಾಣಕ್ಕೆ ಸಾವಿರಾರು ಟಿಕೆಟ್ ರಹಿತ ಪ್ರಯಾಣಿಕರು ಬಂದ ಕಾರಣ, ಕೆಲವು ಪ್ರಯಾಣಿಕರು ಹೆಚ್ಚಿನ ಜನಸಂದಣಿಯನ್ನು ತಪ್ಪಿಸಲು ರೈಲು ಬಾಗಿಲುಗಳನ್ನು ಒಳಗಿನಿಂದ ಲಾಕ್ ಮಾಡಿದ್ದಾರೆ. ಇದರಿಂದ ಕೋಪಗೊಂಡ ಪ್ರಯಾಣಿಕರು ರೈಲು ಹಳಿಗಳ ಮೇಲೆ ನಿಂತು ಪ್ರತಿಭಟಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್(Viral Video) ಆಗಿದೆ.


ಪಟನಾ: ಬಿಹಾರದ ಗಯಾ ರೈಲ್ವೆ ನಿಲ್ದಾಣದಲ್ಲಿ ರೈಲಿನಲ್ಲಿ ಜನದಟ್ಟಣೆಯನ್ನು ತಡೆಯಲು ರೈಲಿನ ಬಾಗಿಲುಗಳನ್ನು ಒಳಗಿನಿಂದ ಲಾಕ್ ಮಾಡಲಾಗಿತ್ತು. ಇದರಿಂದ ಕೋಪಗೊಂಡ ಪ್ರಯಾಣಿಕರು ರೈಲು ಹಳಿಗಳ ಮೇಲೆ ನಿಂತು ಅದನ್ನು ನಿರ್ಬಂಧಿಸುವ ಮೂಲಕ ಪ್ರತಿಭಟಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ (Viral Video)ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾದ ವಿಡಿಯೊದಲ್ಲಿ ಪ್ರತಿಭಟನಾಕಾರರು ಹಳಿಗಳ ಮೇಲೆ ಧಿಕ್ಕಾರ ಕೂಗುತ್ತಾ ನಿಂತಿರುವುದು ಸೆರೆಯಾಗಿದೆ. ಕೆಲವರು ರೈಲು ಬಾಗಿಲುಗಳ ಮೇಲೆ ಹತ್ತಿ ಲೋಕೋ ಪೈಲಟ್ ಸೇರಿದಂತೆ ರೈಲ್ವೆ ಸಿಬ್ಬಂದಿಯ ಮೇಲೆ ಕಿರುಚಾಡಿದ್ದಾರೆ.
ಮಾಹಿತಿ ಪ್ರಕಾರ, ಪ್ರಯಾಣಿಕರು ರೈಲಿನ ಬಾಗಿಲುಗಳನ್ನು ಒಳಗಿನಿಂದ ಲಾಕ್ ಮಾಡಿರುವುದಕ್ಕೆ ಪರಿಸ್ಥಿತಿ ಉಲ್ಬಣಗೊಂಡಿತ್ತಂತೆ. ಮಹಾಕುಂಭ ದಟ್ಟಣೆಯ ನಡುವೆ ಸಾವಿರಾರು ಟಿಕೆಟ್ ರಹಿತ ಪ್ರಯಾಣಿಕರು ನಿಲ್ದಾಣಕ್ಕೆ ಬಂದ ಕಾರಣ, ಕೆಲವು ಪ್ರಯಾಣಿಕರು ಹೆಚ್ಚಿನ ಜನಸಂದಣಿಯನ್ನು ತಪ್ಪಿಸಲು ರೈಲು ಬಾಗಿಲುಗಳನ್ನು ಒಳಗಿನಿಂದ ಲಾಕ್ ಮಾಡಿದ್ದಾರೆ. ಈ ಹಿಂದೆ ಟಿಕೆಟ್ ರಹಿತ ಪ್ರಯಾಣಿಕರು ರೈಲು ಬೋಗಿಗಳನ್ನು ಹತ್ತಿದ್ದ ವಿಡಿಯೊಗಳು ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡಿತ್ತು.
ಈ ಸುದ್ದಿಯನ್ನೂ ಓದಿ:Viral Video: ರೈಲು ಹತ್ತಲು ಮುಗಿಬಿದ್ದ ಪ್ರಯಾಣಿಕರು; ಕಾಲ್ತುಳಿತ ಸ್ಥಿತಿ ನಿರ್ಮಾಣ; ಅಷ್ಟಕ್ಕೂ ಆಗಿದ್ದೇನು?
ಮಹಾಕುಂಭ ಮೇಳದ ವಿಶೇಷ ರೈಲಿನ ಮೇಲೆ ಕಲ್ಲು ತೂರಾಟ
ಮಹಾಕುಂಭ ಮೇಳಕ್ಕೆ ತೆರಳುತ್ತಿದ್ದ ವಿಶೇಷ ರೈಲಿನ ಮೇಲೆ ಕಲ್ಲುತೂರಾಟ ನಡೆದಿರುವ ಘಟನೆ ವರದಿಯಾಗಿದೆ. ಝಾನ್ಸಿಯಿಂದ ಪ್ರಯಾಗ್‌ರಾಜ್‌ಗೆ ಹೋಗುತ್ತಿದ್ದ ಮಹಾಕುಂಭ ಮೇಳದ ವಿಶೇಷ ರೈಲಿಗೆ ಹತ್ತಲು ಹೋದಾಗ ಬಾಗಿಲು ಮುಚ್ಚಿದಕ್ಕೆ ಪ್ರಯಾಣಿಕರು ತೀವ್ರ ಆಕ್ರೋಶಗೊಂಡು ರೈಲಿಗೆ ಕಲ್ಲು ಎಸೆದಿರುವ ಘಟನೆ ಮಧ್ಯಪ್ರದೇಶದ ಹರ್ಪಾಲ್‌ಪುರ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಪ್ರಯಾಣಿಕರು ರೈಲಿಗೆ ಕಲ್ಲು ಎಸೆದಿರುವ ವಿಡಿಯೊ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಮಹಾಕುಂಭ ಮೇಳ ಹಿನ್ನೆಲೆ ಪ್ರಯಾಗ್‌ರಾಜ್‌ಗೆ ರೈಲು ತೆರಳುತ್ತಿತ್ತು. ಕಿಕ್ಕಿರಿದ ಜನ ಸಂದಣಿಯಿಂದ ರೈಲಿನ ಬಾಗಿಲನ್ನು ಮುಚ್ಚಲಾಗಿತ್ತು. ಬಾಗಿಲು ತೆರೆಯದ ಕಾರಣಕ್ಕೆ ಆಕ್ರೋಶಗೊಂಡ ಪ್ರಯಾಣಿಕರು ಕಲ್ಲಿನಿಂದ ಬಾಗಿಲಿನ ಗಾಜನ್ನು ಪುಡಿ-ಪುಡಿ ಮಾಡಿರುವ ಘಟನೆ ಮಂಗಳವಾರ(ಜ.28) ನಡೆದಿದೆ ಎಂದು ತಿಳಿದು ಬಂದಿದೆ. ಕಲ್ಲು ಎಸೆದು ಟ್ರೈನ್‌ನ ಬಾಗಿಲಿನ ಗಾಜನ್ನು ಒಡೆಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.