ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

4 ನಿಮಿಷದಲ್ಲೇ ಸ್ಥಳಕ್ಕೆ ಆಗಮಿಸಿ ವೃದ್ಧೆಯ ಪ್ರಾಣ ಉಳಿಸಿದ ಬ್ಲಿಂಕ್‌ಇಟ್‌ ಆಂಬ್ಯುಲೆನ್ಸ್

Viral Post: ಇದೀಗ ಆನ್ ಲೈನ್ ಆ್ಯಪ್ ಬ್ಲಿಂಕ್‌ಇಟ್‌ ವೈದಕೀಯ ಸೇವೆಯಲ್ಲೂ ಮುಂದಿದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಚಂಡೀಗಢದ ಗುರುಗ್ರಾಮದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧೆಯನ್ನು ಕೇವಲ 20 ನಿಮಿಷದಲ್ಲಿ ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸುವ ಮೂಲಕ ಜೀವ ಉಳಿಸಲಾಗಿದೆ.

4 ನಿಮಿಷದಲ್ಲಿ ತಲುಪಿ ವೃದ್ಧೆಯ ಪ್ರಾಣ ಉಳಿಸಿದ ಬ್ಲಿಂಕಿಟ್ ಆಂಬ್ಯುಲೆನ್ಸ್

ವೃದ್ಧೆಯ ಪ್ರಾಣ ಉಳಿಸಿದ ಬ್ಲಿಂಕ್‌ಇಟ್‌ ಆಂಬ್ಯುಲೆನ್ಸ್ -

Profile
Pushpa Kumari Mar 16, 2026 5:01 PM

ಚಂಡೀಗಢ, ಮಾ. 16: ಯಾವುದೇ ಅಗತ್ಯ ವಸ್ತು ಬೇಕು ಅಂದಾಗ ನಾವು ಆನ್‌ಲೈನ್ ಮೂಲಕವೇ ಹೆಚ್ಚಾಗಿ ಖರೀದಿಸುತ್ತೇವೆ. ಜಿಯೊ ಮಾರ್ಟ್, ಬ್ಲಿಂಕ್‌ಇಟ್‌ ಹೀಗೆ ಆನೇಕ ಆ್ಯಪ್‌ಗಳಿದ್ದು, ಆರ್ಡರ್ ಮಾಡಿದ ತಕ್ಷಣ ನಮಗೆ ವಸ್ತುಗಳನ್ನು ತಲುಪಿಸುತ್ತಾರೆ. ಇದರೊಂದಿಗೆ ಆನ್‌ಲೈನ್ ಆ್ಯಪ್ ಬ್ಲಿಂಕ್‌ಇಟ್‌ ವೈದಕೀಯ ಸೇವೆಯಲ್ಲೂ ಮುಂದಿದೆ ಎನ್ನುವುದನ್ನು ಈ ಘಟನೆ ಸಾರಿ ಹೇಳಿದೆ. ಹರಿಯಾಣದ ಗುರುಗ್ರಾಮದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧೆಯನ್ನು ಕೇವಲ 20 ನಿಮಿಷದಲ್ಲಿ ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸುವ ಮೂಲಕ ಜೀವ ಉಳಿಸಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ದೃಶ್ಯ ವೈರಲ್ (Viral News) ಆಗುತ್ತಿದ್ದಂತೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಗುರುಗ್ರಾಮದಲ್ಲಿ ವೃದ್ಧೆಯೊಬ್ಬರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು. ಇದರಿಂದ ಅವರ ಮಗ ತಕ್ಷಣವೇ ಬ್ಲಿಂಕ್‌ಇಟ್‌ ಮೂಲಕ ಆಂಬ್ಯುಲೆನ್ಸ್ ಬುಕ್ ಮಾಡಿದ್ದಾರೆ. ಆಶ್ಚರ್ಯ ಅಂದರೆ ಕೇವಲ ನಾಲ್ಕೇ ನಿಮಿಷದಲ್ಲಿ ಅಂಬ್ಯುಲೆನ್ಸ್ ಮನೆಯ ಬಾಗಿಲ ಹತ್ತಿರ ನಿಂತಿದೆ. ಆತನ ತಾಯಿ 20 ನಿಮಿಷಗಳಲ್ಲಿ ಆಸ್ಪತ್ರೆಯ ತುರ್ತು ವಾರ್ಡ್‌ನಲ್ಲಿದ್ದರು. ಪ್ಯಾರಾಮೆಡಿಕ್ ಅಟೆಂಡೆಂಟ್‌ಗಳು ಮತ್ತು ಚಾಲಕ ಇಬ್ಬರೂ ರೋಗಿಯನ್ನು ಅತ್ಯುತ್ತಮವಾಗಿ ನೋಡಿಕೊಂಡರು ಎಂದು ಆ ವ್ಯಕ್ತಿ ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ವೈರಲ್‌ ಪೋಸ್ಟ್‌ ಇಲ್ಲಿದೆ:



ಬ್ಲಿಂಕ್‌ಇಟ್‌ನ ಕಾರ್ಯ ವೈಖರಿ ಬಗ್ಗೆ ಆ ವ್ಯಕ್ತಿ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ವಯಸ್ಸಾದ ಮಹಿಳೆಗೆ ವೈದ್ಯಕೀಯ ಆರೈಕೆಯ ಅಗತ್ಯವಿದ್ದಾಗ ಬ್ಲಿಂಕ್‌ಇಟ್‌ನ ಆಂಬ್ಯುಲೆನ್ಸ್ ಸೇವೆಯು ಜೀವರಕ್ಷಕ ಎಂದು ಸಾಬೀತಾಯಿತು ಎಂಬುದಾಗಿ ಮೆಚ್ಚುಗೆ ಸೂಚಿಸಿದ್ದಾರೆ. ಕೇವಲ 4 ನಿಮಿಷಗಳಲ್ಲಿ ತಲುಪಿದ್ದು ತಾಯಿ 20 ನಿಮಿಷಗಳಲ್ಲಿ ಆಸ್ಪತ್ರೆಯ ತುರ್ತು ವಿಭಾಗದಲ್ಲಿದ್ದರು ಎಂದು ಬರೆದುಕೊಂಡಿದ್ದಾರೆ.

ಪ್ರಿಯಕರನಿಗೆ ಸಾರ್ವಜನಿಕವಾಗಿ ಕಪಾಳಮೋಕ್ಷ ಮಾಡಿದ ಯುವತಿ

ವಿಶೇಷವಾಗಿ ಆಂಬ್ಯುಲೆನ್ಸ್ ಸೇವೆಯು ಏನನ್ನೂ ಶುಲ್ಕ ವಿಧಿಸದ ಕಾರಣ ಅವರು ಅಚ್ಚರಿ ವ್ಯಕ್ತ ಪಡಿಸಿದ್ದಾರೆ. ಈ ಸೇವೆಗೆ ಹಣ ಪಡೆಯದ ಕಾರಣ, ಸಿಬ್ಬಂದಿಗೆ ಪ್ರೋತ್ಸಾಹ ನೀಡಲು ಆ್ಯಪ್‌ನಲ್ಲಿ 'ಟಿಪ್' ನೀಡುವ ಆಯ್ಕೆ ಅಳವಡಿಸುವಂತೆ ಗ್ರಾಹಕರು ಸಂಸ್ಥೆಗೆ ಮನವಿ ಮಾಡಿದ್ದಾರೆ.

ಜನವರಿಯಲ್ಲಿ, ತನ್ನ ಉಚಿತ ಆಂಬ್ಯುಲೆನ್ಸ್ ಸೇವೆಯನ್ನು ಪ್ರಾರಂಭಿಸಿದ್ದು , ಬ್ಲಿಂಕ್‌ಇಟ್‌ 4,200ಕ್ಕೂ ಹೆಚ್ಚು ಪ್ರಕರಣಗಳನ್ನು ನಿರ್ವಹಿಸಿದೆ. ವೈದ್ಯಕೀಯ ಆರೈಕೆಗೆ ತ್ವರಿತ ಪ್ರವೇಶವನ್ನು ಒದಗಿಸುವ ಮೂಲಕ ಹಲವು ಜೀವಗಳನ್ನು ಉಳಿಸಿದೆ ಎಂದು ತಿಳಿಸಿದೆ.