ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ವ್ಯಾಘ್ರನ ಹಸಿವಿಗೆ ಹೆಬ್ಬಾವೇ ಫುಲ್‌ ಮೀಲ್ಸ್‌- ಆಮೇಲೇನಾಯ್ತು ಗೊತ್ತಾ? ಇಲ್ಲಿದೆ ಶಾಕಿಂಗ್‌ ವಿಡಿಯೊ

ಉತ್ತರ ಪ್ರದೇಶದ ಪಿಲಿಭಿತ್ ಹುಲಿ ಮೀಸಲು ಪ್ರದೇಶದಲ್ಲಿ ಹುಲಿಯೊಂದು ಸತ್ತ ಹೆಬ್ಬಾವನ್ನು ತಿಂದು ನಂತರ ವಾಂತಿ ಮಾಡಿದೆ. ಸಫಾರಿ ಪ್ರವಾಸಿಗರು ಈ ದೃಶ್ಯದ ವಿಡಿಯೊ ಮಾಡಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.

ಹೆಬ್ಬಾವನ್ನು ತಿಂದ ಹುಲಿ- ಶಾಕಿಂಗ್‌ ವಿಡಿಯೊ ಇಲ್ಲಿದೆ

Profile pavithra Apr 19, 2025 1:25 PM

ಲಖನೌ: ಉತ್ತರ ಪ್ರದೇಶದ ಪಿಲಿಭಿತ್ ಹುಲಿ ಮೀಸಲು ಪ್ರದೇಶದಲ್ಲಿ ಹುಲಿಯೊಂದು ಹೆಬ್ಬಾವನ್ನು ತಿಂದು ನಂತರ ವಾಂತಿ ಮಾಡಿದೆಯಂತೆ. ಸಫಾರಿ ಪ್ರವಾಸಿಗರು ಇದನ್ನು ನೋಡಿ ವಿಡಿಯೊ ಮಾಡಿದ್ದಾರೆ. ಹುಲಿಯು ಕಾಡಿನ ರಸ್ತೆಯಲ್ಲಿ ಸತ್ತು ಬಿದ್ದ ಹೆಬ್ಬಾವನ್ನು ತಿಂದಿದೆ. ತಿಂದ ಸ್ವಲ್ಪ ಸಮಯದ ನಂತರ ಅದು ವಾಂತಿ ಮಾಡಿದೆ. ಇದನ್ನು ಅವರು ವಿಡಿಯೊದಲ್ಲಿ ರೆಕಾರ್ಡ್‌ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಇದು ಈಗ ವೈರಲ್(Viral Video) ಆಗಿದೆ. ವೈರಲ್ ಆದ ವಿಡಿಯೊದಲ್ಲಿ ಹುಲಿ ಹೆಬ್ಬಾವನ್ನು ತಿನ್ನುವುದನ್ನು ಮಾತ್ರ ರೆಕಾರ್ಡ್‌ ಆಗಿದೆ. ಆದರೆ ಅದು ಹಾವಿನ ಮೇಲೆ ದಾಳಿ ಮಾಡಿ ಬೇಟೆಯಾಡಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಈ ವಿಡಿಯೊದಲ್ಲಿ ಹುಲಿ ಪೊದೆಗಳ ಬಳಿಗೆ ಬಂದಾಗ ಸತ್ತ ಹಾವನ್ನು ನೋಡಿ ನಂತರ ತಿಂದಿದೆ. ಕೊನೆಗೆ ಹುಲಿಯ ಆರೋಗ್ಯದಲ್ಲಿ ಸಮಸ್ಯೆಯಾಗಿ ಅದು ಹುಲ್ಲನ್ನು ತಿನ್ನಲು ಶುರುಮಾಡಿದೆ. ಹುಲಿ ಹುಲ್ಲನ್ನು ತಿನ್ನುವುದನ್ನು ನೋಡಿ ಪ್ರವಾಸಿಗರು ಶಾಕ್‌ ಆಗಿದ್ದಾರೆ. ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ವಿಡಿಯೊ ಇಲ್ಲಿದೆ ನೋಡಿ...



ಅಲ್ಲದೇ ಈ ಹಿಂದೆ ಪಿಲಿಭಿತ್ ಹುಲಿ ಮೀಸಲು ಪ್ರದೇಶದಲ್ಲಿ ಹುಲಿಯು ಬಾಯಲ್ಲಿ ಪ್ಲಾಸ್ಟಿಕ್ ಚೀಲವೊಂದು ಇರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿತ್ತು. ಸಫಾರಿ ಸಮಯದಲ್ಲಿ ಸೆರೆಹಿಡಿಯಲಾದ ವಿಡಿಯೊದಲ್ಲಿ ರಾಕೆಟ್ ಎಂದು ಕರೆಯಲ್ಪಡುವ ಗಂಡು ಹುಲಿ, ಪ್ಲಾಸ್ಟಿಕ್‍ ಚೀಲವನ್ನು ತನ್ನ ಬಾಯಲ್ಲಿ ಹಿಡಿದುಕೊಂಡಿರುವುದು ಸೆರೆಯಾಗಿದೆ. ಸಫಾರಿ ಸಮಯದಲ್ಲಿ ಪ್ರವಾಸಿಗರೊಬ್ಬರು ಆಕಸ್ಮಿಕವಾಗಿ ಚೀಲವನ್ನು ಎಸೆದಿದ್ದಾರೆ ಅದನ್ನು ಹುಲಿ ಬಾಯಲ್ಲಿ ಕಚ್ಚಿಕೊಂಡಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಒಂದು ವೇಳೆ ಹುಲಿ ಆ ಪ್ಲಾಸ್ಟಿಕ್ ವಸ್ತುವಿನ ಯಾವುದೇ ಭಾಗವನ್ನು ತಿಂದರೆ, ಅದು ವಿಷವಾಗಿ ಉಸಿರಾಟದ ಸಮಸ್ಯೆಗೆ ಕಾರಣವಾಗಬಹುದು. ಅಂತಹ ವಸ್ತುಗಳ ಸೇವನೆಯು ಕಾಡು ಪ್ರಾಣಿಗಳಿಗೆ, ವಿಶೇಷವಾಗಿ ಸೂಕ್ಷ್ಮ ಜೀರ್ಣಾಂಗ ವ್ಯವಸ್ಥೆಗಳನ್ನು ಹೊಂದಿರುವ ಹುಲಿಗಳಿಗೆ ಮಾರಕವಾಗಬಹುದಂತೆ. ಹುಲಿ ಚೀಲದ ಯಾವುದೇ ಭಾಗವನ್ನು ನುಂಗಿಲ್ಲ ಎಂದು ಖಚಿತಪಡಿಸಿಕೊಳ್ಳಲು ಅರಣ್ಯ ಸಿಬ್ಬಂದಿ ಹುಲಿಯ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ʼಜೈ ಜೈ ಶಿವ್ ಶಂಕರ್‌ʼ ಹಾಡಿಗೆ ಸಖತ್‌ ಆಗಿ ಹೆಜ್ಜೆ ಹಾಕಿದ ಪೊಲೀಸ್ ಅಧಿಕಾರಿ; ವಿಡಿಯೊ ನೋಡಿ

ಈ ಘಟನೆಗಳನ್ನೆಲ್ಲಾ ಗಮನಿಸಿದ ಹುಲಿ ಮೀಸಲು ಪ್ರದೇಶದ ಅಧಿಕಾರಿಯೊಬ್ಬರು, ಪಿಟಿಆರ್ ಆಡಳಿತವು ಈ ವಿಷಯಗಳ ಬಗ್ಗೆ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ಜಿಪ್ಸಿ ಚಾಲಕರು ಮತ್ತು ಮಾರ್ಗದರ್ಶಿಗಳ ತುರ್ತು ಸಭೆಯನ್ನು ಆಯೋಜಿಸಿದೆ ಎಂದು ವರದಿಯಾಗಿದೆ. ಸಿಸಿಟಿವಿ ಕ್ಯಾಮೆರಾಗಳನ್ನು ಪತ್ತೆಹಚ್ಚಲು ಮತ್ತು ವನ್ಯಜೀವಿಗಳನ್ನು ಮೇಲ್ವಿಚಾರಣೆ ಮಾಡಲು ಆಡಳಿತವು ಮುಂದಾಗಿದೆ ಎನ್ನಲಾಗಿದೆ.