Viral Video: ʼಜೈ ಜೈ ಶಿವ್ ಶಂಕರ್ʼ ಹಾಡಿಗೆ ಸಖತ್ ಆಗಿ ಹೆಜ್ಜೆ ಹಾಕಿದ ಪೊಲೀಸ್ ಅಧಿಕಾರಿ; ವಿಡಿಯೊ ನೋಡಿ
ರಾಜಸ್ಥಾನದ ಮಹಿಳಾ ಪೊಲೀಸ್ ಅಧಿಕಾರಿ ಟೀನಾ ಸೊಗರ್ವಾಲ್ ರಾಜೇಶ್ ಖನ್ನಾ ಅವರ ಕ್ಲಾಸಿಕ್ ಹಾಡಾದ ʼಜೈ ಜೈ ಶಿವ್ ಶಂಕರ್ʼಗೆ ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದಾರೆ. ಅವರ ಡ್ಯಾನ್ಸ್ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ. ಈ ವಿಡಿಯೊ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ.


ಇತ್ತೀಚೆಗೆ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯೊಬ್ಬ ರಸ್ತೆಯಲ್ಲಿ ಡ್ಯಾನ್ಸ್ ಮಾಡಿದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದೀಗ ರಾಜಸ್ಥಾನದ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಅದ್ಭುತವಾದ ಡ್ಯಾನ್ಸ್ ಪ್ರದರ್ಶನ ನೀಡಿದ ವಿಡಿಯೊವೊಂದು ಸಖತ್ ಸದ್ದು ಮಾಡುತ್ತಿದೆ. ಈ ಡ್ಯಾನ್ಸ್ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral Video) ಆಗಿದೆ. ಅಧಿಕಾರಿಯ ಡ್ಯಾನ್ಸ್ ನೋಡಿದ ನೆಟ್ಟಿಗರು ಫಿದಾ ಆಗಿದ್ದಾರೆ. ರಾಜಸ್ಥಾನ ಪೊಲೀಸ್ ಸಂಸ್ಥಾಪನಾ ದಿನದಂದು, ಸಬ್‌ಇನ್ಸ್‌ಪೆಕ್ಟರ್ ಟೀನಾ ಸೊಗರ್ವಾಲ್ ರಾಜೇಶ್ ಖನ್ನಾ ಕ್ಲಾಸಿಕ್ ಹಾಡಾದ 'ಜೈ ಜೈ ಶಿವ್ ಶಂಕರ್'ಗೆ ಡ್ಯಾನ್ಸ್ ಮಾಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೊದಲ್ಲಿ, ಸಾಂಪ್ರದಾಯಿಕ ಉಡುಪನ್ನು ಧರಿಸಿದ ಪೊಲೀಸ್ ಅಧಿಕಾರಿ 70ರ ದಶಕದ ಟ್ರ್ಯಾಕ್‍ಗೆ ಡ್ಯಾನ್ಸ್ ಮಾಡುತ್ತಾ ಅದನ್ನು ಆನಂದಿಸಿದ್ದಾರೆ. ಸೊಗರ್ವಾಲ್ ಅವರ ಡ್ರಾನ್ಸ್ ಪ್ರದರ್ಶನ ನೋಡಿದ ವೇದಿಕೆಯಲ್ಲಿದ್ದ ಪೊಲೀಸ್ ವರಿಷ್ಠಾಧಿಕಾರಿ ಮಮತಾ ಗುಪ್ತಾ, ಜಿಲ್ಲಾಧಿಕಾರಿ ಶುಭಂ ಚೌಧರಿ ಮತ್ತು ಇತರ ಪೊಲೀಸ್ ಅಧಿಕಾರಿಗಳು ಚಪ್ಪಾಳೆ ತಟ್ಟಿ ಅವರನ್ನು ಪ್ರೋತ್ಸಾಹಿಸಿದ್ದಾರೆ.
ಮಹಿಳಾ ಪೊಲೀಸ್ ಅಧಿಕಾರಿಯ ವಿಡಿಯೊ ಇಲ್ಲಿದೆ ನೋಡಿ...
🔸ड्यूटी के साथ-साथ अपनी नृत्य कला से चर्चाओं में रहने वाली वजीरपुर थानाधिकारी टीनू सोगरवाल द्वारा राजस्थान पुलिस के स्थापना दिवस के खास मौके पर "जय-जय शिवशंकर" गाने पर दी गई प्रस्तुति भी देखी जाए. pic.twitter.com/8e59NqO4CS
— रंग राजस्थानी - Rang Rajasthani (@RangRajasthani_) April 17, 2025
ಸವಾಯಿ ಮಾಧೋಪುರದ ಪೊಲೀಸ್ ಜಿಲ್ಲಾ ಕೇಂದ್ರದಲ್ಲಿ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸೋಗರ್ವಾಲ್ ತನ್ನ ಡ್ಯಾನ್ಸ್ ಪ್ರದರ್ಶನದ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ಅನೇಕರು ತಮ್ಮ ಸೋಶಿಯಲ್ ಮಿಡಿಯಾ ಪೇಜ್‍ನಲ್ಲಿ ಶೇರ್ ಮಾಡಿದ್ದಾರೆ.
ಅನೇಕರು ಕಾಮೆಂಟ್ ವಿಭಾಗದಲ್ಲಿ ಡ್ಯಾನ್ಸ್ ಅನ್ನು ಹೊಗಳಿದ್ದಾರೆ. ಒಬ್ಬರು, "ಅತ್ಯುತ್ತಮ ಪ್ರದರ್ಶನ. ಬಹು-ಪ್ರತಿಭಾವಂತ ವ್ಯಕ್ತಿತ್ವ" ಎಂದರೆ, ಇನ್ನೊಬ್ಬರು, "ಜೈ ಹೋ, ತುಂಬಾ ಸುಂದರವಾದ ನೃತ್ಯ, ಮೇಡಂ; ನೀವು ಪೊಲೀಸ್ ಇಲಾಖೆಯ ಹೆಮ್ಮೆ” ಎಂದಿದ್ದಾರೆ. ಮತ್ತೊಬ್ಬರು ಇದು ನೋಡಲು ಯೋಗ್ಯವಾಗಿದೆ" ಎಂದು ಕಾಮೆಂಟ್ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ:Viral video: ಬೆಂಗಳೂರಿನ ನಡುರಸ್ತೆಯಲ್ಲಿ ಕುಳಿತು ಟೀ ಕುಡಿಯುತ್ತ ರೀಲ್ಸ್ ಮಾಡಿದವನು ಪೊಲೀಸರಿಂದ ಲಾಕ್
ಮಹಿಳಾ ಪೊಲೀಸ್ ತನ್ನ ನೃತ್ಯ ಕೌಶಲ್ಯವನ್ನು ಪ್ರದರ್ಶಿಸುತ್ತಿರುವುದು ಇದೇ ಮೊದಲಲ್ಲ. ಅವರ ಸೋಶಿಯಲ್ ಮೀಡಿಯಾ ಹ್ಯಾಂಡಲ್ ಜನಪ್ರಿಯ ಹಿಂದಿ ಹಾಡುಗಳಲ್ಲಿ ಡ್ಯಾನ್ಸ್ ಪ್ರದರ್ಶನ ನೀಡುವ ವಿಡಿಯೊಗಳನ್ನು ಸಹ ಒಳಗೊಂಡಿದೆ. ಈ ಹಿಂದೆ ಹೋಳಿ ಹಬ್ಬದಂದು, ಸೋಗರ್ವಾಲ್ ಮತ್ತೊಂದು ಬಾಲಿವುಡ್ ಕ್ಲಾಸಿಕ್ ಹಾಡಿಗೆ ಡ್ಯಾನ್ಸ್ ಮಾಡಿದ್ದರು. ಬಣ್ಣಗಳನ್ನು ಬಳಿದುಕೊಂಡ ಅವರು ʼಖೈಕೆ ಪಾನ್ ಬನಾರಸ್ ವಾಲಾʼ ಹಾಡಿಗೆ ಸೊಂಟ ಬಳುಕಿಸಿದ್ದರು. ಇನ್ನೂ ಅನೇಕರು ಈ ಹೋಳಿ ಪಾರ್ಟಿಯಲ್ಲಿ ಅವರೊಂದಿಗೆ ಸೇರಿಕೊಂಡಿದ್ದಾರೆ. ಈ ವಿಡಿಯೊ ಕೂಡ ವೈರಲ್ ಆಗಿದ್ದು, ಅವರ ಈ ಡ್ಯಾನ್ಸ್ ಕಂಡು ನೆಟ್ಟಿಗರು ಆಕರ್ಷಿತರಾಗಿದ್ದಾರೆ.