ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‌Viral Video: ಅಬ್ಬಾ...! ಈತ ನಿಜಕ್ಕೂ ಆಪದ್ಬಾಂಧವ- ಮುಳುಗುತ್ತಿದ್ದ ವ್ಯಕ್ತಿಯ ರಕ್ಷಣೆಗೆ ಈತ ಮಾಡಿದ್ದೇನು ಗೊತ್ತಾ?

ಉತ್ತರಾಖಂಡದ ಋಷಿಕೇಶದಲ್ಲಿ ರಿವರ್ ರಾಫ್ಟಿಂಗ್‌ ಮಾಡುತ್ತಿದ್ದಾಗ ಗಂಗಾ ನದಿಯ ಭೀಕರ ಪ್ರವಾಹದಲ್ಲಿ ಮುಳುಗುತ್ತಿರುವ ವ್ಯಕ್ತಿಯೊಬ್ಬನನ್ನು ರಕ್ಷಿಸಲು ರಾಫ್ಟಿಂಗ್ ಗೈಡ್ ತನ್ನ ಜೀವವನ್ನು ಪಣಕಿಟ್ಟಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್(Viral Video) ಆಗಿದ್ದು, ಅನೇಕರು ಗೈಡ್‍ನ ಕಾರ್ಯವನ್ನು ಹೊಗಳಿದ್ದಾರೆ.

ಡೆಹ್ರಡೂನ್‍: ರಿವರ್ ರಾಫ್ಟಿಂಗ್ ಮಾಡುವುದೆಂದರೆ ಸಾಹಸ ಪ್ರಿಯರಿಗೆ ಬಹಳ ಇಷ್ಟ. ಆದರೆ ಇದು ಕೆಲವೊಮ್ಮೆ ಜೀವಕ್ಕೆ ಅಪಾಯಕಾರಿ ಸಹ ಆಗಬಹುದು. ಇದೀಗ ಉತ್ತರಾಖಂಡದ ಋಷಿಕೇಶದಲ್ಲಿ ರಿವರ್ ರಾಫ್ಟಿಂಗ್‌ಗೆ ಸಂಬಂಧಿಸಿದ ಘಟನೆಯೊಂದು ಬೆಳಕಿಗೆ ಬಂದಿದೆ. ರಾಫ್ಟಿಂಗ್ ಮಾಡುತ್ತಿದ್ದ ಸಮಯದಲ್ಲಿ ಮುಳುಗುತ್ತಿರುವ ವ್ಯಕ್ತಿಯೊಬ್ಬನನ್ನು ರಕ್ಷಿಸಲು ರಾಫ್ಟಿಂಗ್ ಗೈಡ್ ತನ್ನ ಜೀವವನ್ನು ಪಣಕಿಟ್ಟಿದ್ದಾನೆ. ಈ ರಕ್ಷಣಾ ಕಾರ್ಯಾಚರಣೆಯ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್(Viral Video) ಆಗಿ ನೆಟ್ಟಿಗರ ಮನಗೆದ್ದಿದೆ.

ವೈರಲ್ ಆದ ವಿಡಿಯೊದಲ್ಲಿ, ಗಂಗಾ ನದಿಯ ಭೀಕರ ಪ್ರವಾಹದಲ್ಲಿ ಲೈಫ್ ಜಾಕೆಟ್ ಧರಿಸಿದ ವ್ಯಕ್ತಿಯೊಬ್ಬರು ಈಜುತ್ತಿರುವುದು ಸೆರೆಯಾಗಿದೆ. ರಾಫ್ಟಿಂಗ್ ಗೈಡ್‌ ಪ್ರಜ್ಞಾಹೀನನಾಗಿ ಬಿದ್ದ ವ್ಯಕ್ತಿಯೊಬ್ಬನನ್ನು ತೆಪ್ಪದ ಮೂಲಕ ದಡಕ್ಕೆ ಎಳೆದು ತಂದಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ಈ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಅನೇಕರು ಗೈಡ್‍ನ ಧೈರ್ಯವನ್ನು ಹೊಗಳಿದ್ದಾರೆ.

ವಿಡಿಯೊ ಇಲ್ಲಿದೆ ನೋಡಿ...



ಈ ರೀತಿಯ ಘಟನೆ ನಡೆದಿದ್ದು ಇದೇ ಮೊದಲಲ್ಲ. ಈ ಹಿಂದೆ ದೆಹಲಿಯಿಂದ ಬಂದ ಆರು ಪ್ರವಾಸಿಗರನ್ನು ಪ್ರವಾಹದಿಂದ ರಕ್ಷಿಸಿದ ನಂತರ, ಋಷಿಕೇಶ ಬಳಿಯ ಗಂಗಾ ನದಿಯಲ್ಲಿ ರಾಫ್ಟಿಂಗ್ ಮಾರ್ಗದರ್ಶಿಯೊಬ್ಬ ಮುಳುಗಿ ಸಾವನ್ನಪ್ಪಿದ್ದನು. ಅವನನ್ನು ಹೊತ್ತೊಯ್ಯುತ್ತಿದ್ದ ತೆಪ್ಪವು ಕೆಳಕ್ಕೆ ಉರುಳಿದಾಗ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದರು.

ಈ ಸುದ್ದಿಯನ್ನೂ ಓದಿ:Viral Video: ಚಿಕನ್ ಬಿರಿಯಾನಿ ಡ್ಯಾನ್ಸ್‌ ನೋಡಿದ್ರಾ? ಸಿಕ್ಕಾಪಟ್ಟೆ ತಮಾಷೆಯಾಗಿದೆ ಈ ವಿಡಿಯೊ

ಋಷಿಕೇಶದಿಂದ 18 ಕಿ.ಮೀ ದೂರದಲ್ಲಿರುವ ತೆಹ್ರಿ ಜಿಲ್ಲೆಯ ಶಿವಪುರಿಯಲ್ಲಿ ಈ ಘಟನೆ ಸಂಭವಿಸಿತ್ತು. ಮುಳುಗಿ ಸಾವನಪ್ಪಿದ ರಾಫ್ಟಿಂಗ್ ಮಾರ್ಗದರ್ಶಿಯನ್ನು 45 ವರ್ಷದ ರಾಮ್ ಕುಮಾರ್ ಪಾಠಕ್ ಎಂದು ಗುರುತಿಸಲಾಗಿತ್ತು. ಆರು ಪ್ರವಾಸಿಗರನ್ನು ಪಾಠಕ್ ರಕ್ಷಿಸಿದ್ದನು.