ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಚಿಕನ್ ಬಿರಿಯಾನಿ ಡ್ಯಾನ್ಸ್‌ ನೋಡಿದ್ರಾ? ಸಿಕ್ಕಾಪಟ್ಟೆ ತಮಾಷೆಯಾಗಿದೆ ಈ ವಿಡಿಯೊ

ನಾರ್ವೇಜಿಯನ್-ಪಾಕಿಸ್ತಾನಿ ಅವಳಿಗಳಾದ ಸುಲೇಮಾನ್ ಮತ್ತು ಬಿಲಾಲ್ ಮಲಿಕ್ ಮತ್ತು ಅವರ ಸ್ನೇಹಿತ ನಾಸಿರ್ ಸಿರಿಖಾನ್ ಸ್ಥಾಪಿಸಿದ ಜನಪ್ರಿಯ ಕ್ವಿಕ್ ಸ್ಟೈಲ್‍ ಡ್ಯಾನ್ಸ್ ಗ್ರೂಪ್ ಮನೆಯಲ್ಲಿ ತಯಾರಿಸಿದ ಚಿಕನ್ ಬಿರಿಯಾನಿಯನ್ನು ತಿನ್ನುವ ವಿಚಿತ್ರವಾದ ಮ್ಯೂಸಿಕ್‍ವೊಂದಕ್ಕೆ ಡ್ಯಾನ್ಸ್‌ ಮಾಡುವ ವಿಡಿಯೊವೊಂದನ್ನು ಬಿಡುಗಡೆ ಮಾಡಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ಸಿಕ್ಕಾಪಟ್ಟೆ ವೈರಲ್‌ ಆಯ್ತು ಈ  ಚಿಕನ್ ಬಿರಿಯಾನಿ ವಿಡಿಯೊ

Profile pavithra Jun 13, 2025 11:54 AM

ಇಸ್ಲಾಮಾಬಾದ್‌: ನಾರ್ವೇಜಿಯನ್-ಪಾಕಿಸ್ತಾನಿ ಅವಳಿಗಳಾದ ಸುಲೇಮಾನ್ ಮತ್ತು ಬಿಲಾಲ್ ಮಲಿಕ್ ಮತ್ತು ಅವರ ಸ್ನೇಹಿತ ನಾಸಿರ್ ಸಿರಿಖಾನ್ ಸ್ಥಾಪಿಸಿದ ಜನಪ್ರಿಯ ಡ್ಯಾನ್ಸ್ ಗ್ರೂಪ್ ಕ್ವಿಕ್ ಸ್ಟೈಲ್‍ನ ವೆಡ್ಡಿಂಗ್ ಡ್ಯಾನ್ಸ್ ವಿಡಿಯೊ ಈ ಹಿಂದೆ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಇತ್ತೀಚೆಗೆ ಈ ಗ್ರೂಪ್‍ ಮನೆಯಲ್ಲಿ ತಯಾರಿಸಿದ ನೆಚ್ಚಿನ ಚಿಕನ್ ಬಿರಿಯಾನಿಯನ್ನು ತಿನ್ನುವ ವಿಚಿತ್ರ ಮ್ಯೂಸಿಕ್ ವಿಡಿಯೊವೊಂದನ್ನು ಬಿಡುಗಡೆ ಮಾಡಿದೆ. ಈ ವಿಡಿಯೊವು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral Video) ಆಗಿದೆ.

ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆದಿದೆ. ಪೋಸ್ಟ್‌ಗೆ ಪ್ರತಿಕ್ರಿಯಿಸುತ್ತಾ, ಒಬ್ಬ ನೆಟ್ಟಿಗರು, “ಚಿಕನ್‍ ಮೂವ್‍ಮೆಂಟ್ ಅನ್ನು ಪ್ರೀತಿಸುತ್ತೇನೆ” ಎಂದು ಬರೆದಿದ್ದಾರೆ. "ಮಿಷನ್ ಕ್ವಿಕ್ ಸ್ಟೈಲ್ ಯಶಸ್ವಿಯಾಗಿದೆ" ಎಂದು ಮತ್ತೊಬ್ಬರು ಹಂಚಿಕೊಂಡಿದ್ದಾರೆ. “ಎಚ್ಚರಿಕೆ: ಈ ರೀಲ್ ನೋಡುವುದರಿಂದ ಬಿರಿಯಾನಿ ತಿನ್ನುವ ಬಯಕೆ ಉಂಟಾಗಬಹುದು" ಎಂದು ಇನ್ನೊಬ್ಬರು ಕಾಮೆಂಟ್‌ನಲ್ಲಿ ಹೇಳಿದ್ದಾರೆ.

ವಿಡಿಯೊ ಇಲ್ಲಿದೆ ನೋಡಿ...

ಮತ್ತೊಬ್ಬರು, "ನನಗೆ ಬಿರಿಯಾನಿ ತುಂಬಾ ಇಷ್ಟ. ನಮಗೆ ಇನ್ನೂ ಸ್ವಲ್ಪ ಬಿರಿಯಾನಿ ಬಡಿಸಿ" ಎಂದು ಹೇಳಿದ್ದಾರೆ. "ಈ ಹಾಡು ಕೇಳಿದಾಗಿನಿಂದ ನನ್ನ ತಲೆಯಲ್ಲಿರುವ ಎಲ್ಲಾ ಟೆನ್ಷನ್ ಮರೆತು ಖುಷಿಯಾಗಿದ್ದೇನೆ" ಎಂದು ಮತ್ತೊಬ್ಬರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ರಿಲ್ಯಾಕ್ಸ್‌ ಆಗೋಕೆ ಟೀ ಕುಡಿಯೋಣ ಅಂದ್ರೆ ಈಕೆ ಚಹಾ ಮಾಡೋ ರೀತಿ ಕಂಡ್ರೆ ಟೆನ್ಷನ್‌ ಆಗುತ್ತೆ! ವಿಡಿಯೊ ನೋಡಿ

ಕೆಲವು ವರ್ಷಗಳ ಹಿಂದೆ ಸುಲೇಮಾನ್ ಮಲಿಕ್ ಅವರ ಮದುವೆಯಲ್ಲಿ ಮೋಜಿಗಾಗಿ ಈ ಗ್ರೂಪ್ ಡ್ಯಾನ್ಸ್ ಮಾಡಿದ್ದು, ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ನಂತರ ಕ್ವಿಕ್ ಸ್ಟೈಲ್ ಫೆಮಸ್‌ ಆಗಿತ್ತು. ಈ ಗುಂಪು ಮ್ಯೂಸಿಕ್‍ನಲ್ಲಿ ಈಗಾಗಲೇ ದೊಡ್ಡ ಹೆಸರು ಮಾಡಿರುವ ಕೆಲವು ವ್ಯಕ್ತಿಗಳೊಂದಿಗೆ ಕೆಲಸ ಮಾಡಿತ್ತು. ಪ್ರಸಿದ್ಧ ಕೆ-ಪಾಪ್ ಗ್ರೂಪ್‍ ಬಿಟಿಎಸ್‌ಗಾಗಿ ʼಬಾಯ್ಸ್ ವಿಥ್ ಲವ್ʼ, ʼಬ್ಲಡ್ ಸ್ವೆಟ್ & ಟಿಯರ್ಸ್ʼ ಮತ್ತು ʼಸೇವ್ ಮಿʼನಂತಹ ಹಿಟ್ ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿದೆ.