ಒಟ್ಟಾವಾ: ಕೆನಡಾದಲ್ಲಿ (Canada) ವಲಸಿಗರ ವಿರುದ್ಧ ಹೆಚ್ಚುತ್ತಿರುವ ಜನಾಂಗೀಯತೆ ಮತ್ತು ಅನ್ಯದ್ವೇಷದ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿರುವ ನಡುವೆಯೇ, ಟೊರೊಂಟೊದಲ್ಲಿ ನಡೆದ ಆಘಾತಕಾರಿ ವಿಡಿಯೋ (Viral Video) ಒಂದು ವೈರಲ್ ಆಗಿದೆ. ಮೆಕ್‌ಡೊನಾಲ್ಡ್ಸ್ ಔಟ್‌ಲೆಟ್‌ನಲ್ಲಿ ಭಾರತೀಯ ಮೂಲ ವ್ಯಕ್ತಿ ಮೇಲೆ ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ಹಲ್ಲೆ ನಡೆಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಕ್ಲಿಪ್‌ನಲ್ಲಿ ಟೊರೊಂಟೊ ಬ್ಲೂ ಜೇಸ್ ಜಾಕೆಟ್ ಧರಿಸಿದ ಕಕೇಶಿಯನ್ ಕೆನಡಿಯನ್ ವ್ಯಕ್ತಿಯೊಬ್ಬ ಮೆಕ್‌ಡೊನಾಲ್ಡ್ಸ್ ಔಟ್‌ಲೆಟ್‌ನ 'ಮೊಬೈಲ್ ಆರ್ಡರ್ ಪಿಕ್ ಅಪ್' ಕೌಂಟರ್ ಬಳಿ ಕಂದು ಬಣ್ಣದ ವ್ಯಕ್ತಿಯ (Racial Attack) ಬಳಿಗೆ ಬಂದು ಏಕಾಏಕಿ ಹಲ್ಲೆ ನಡೆಸಿದ್ದಾನೆ.
ಕುಡಿದ ಮತ್ತಿನಲ್ಲಿದ್ದ ಆರೋಪಿ ಮೊದಲು ಕೌಂಟರ್ ಬಳಿ ನಿಂತಿದ್ದ ವ್ಯಕ್ತಿಯನ್ನು ತಳ್ಳಿದನು. ಆ ರಭಸಕ್ಕೆ ಭಾರತೀಯನ ಫೋನ್ ಕೆಳಗೆ ಬಿದ್ದಿದೆ. ಆ ಭಾರತೀಯ ವ್ಯಕ್ತಿ ಶಾಂತವಾಗಿ ತನ್ನ ಫೋನ್ ಅನ್ನು ಎತ್ತಿಕೊಂಡಾಗ, ದಾಳಿಕೋರ ಅವನ ಕಡೆಗೆ ಧಾವಿಸಿ, ಅವನ ಕಾಲರ್ ಹಿಡಿದು ಹಿಂದಕ್ಕೆ ತಳ್ಳಿದನು. ಬಳಿಕ ನೀನು ಶ್ರೇಷ್ಠನಂತೆ ವರ್ತಿಸಬೇಡ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ. ಭಾರತೀಯ ವ್ಯಕ್ತಿ ಯಾವುದೇ ಪ್ರತೀಕಾರವಿಲ್ಲದೆ ತನ್ನನ್ನು ತಾನು ರಕ್ಷಿಸಿಕೊಳ್ಳಲು ಪ್ರಯತ್ನಿಸಿದ್ದಾನೆ.
ಹಲ್ಲೆ ನಡೆಸಿದ ವಿಡಿಯೋ
ದಾಳಿಕೋರನ ವರ್ತನೆ ತಾರಕಕ್ಕೇರಿದಾಗ ಮೆಕ್‌ಡೊನಾಲ್ಡ್ಸ್ ಸಿಬ್ಬಂದಿ ಆತನನ್ನು ತಡೆದಿದ್ದಾರೆ. ಅಷ್ಟಕ್ಕೂ ಸುಮ್ಮನಾಗದ ಆತ ಹೊರ ನಡೆಯುವವರೆಗೂ ನಿಂದಿಸಿದ್ದಾನೆ. ಇಲ್ಲಿಯವರೆಗೆ, ಪೊಲೀಸರು ಈ ವಿಷಯದ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ ಮತ್ತು ಇಬ್ಬರು ಪುರುಷರ ಗುರುತು ದೃಢೀಕರಿಸಲಾಗಿಲ್ಲ. ಈ ಘಟನೆ ನವೆಂಬರ್ 1 ರಂದು ನಡೆದಿದೆ ಎಂದು ತಿಳಿದು ಬಂದಿದೆ. ಕೆನಡಾದ ಎಡ್ಮಂಟನ್‌ನಲ್ಲಿ 55 ವರ್ಷದ ಕೆನಡಾ-ಭಾರತೀಯ ಉದ್ಯಮಿ ಅರ್ವಿ ಸಿಂಗ್ ಸಾಗೂ ಅವರ ಮೇಲೆ ಅಪರಿಚಿತರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಕೆಲವು ದಿನಗಳ ನಂತರ ಈ ಆತಂಕಕಾರಿ ವಿಡಿಯೋ ಹೊರಬಂದಿದೆ. ತನ್ನ ವಾಹನದ ಮೇಲೆ ಮೂತ್ರ ವಿಸರ್ಜಿಸಿದ್ದಕ್ಕಾಗಿ ಅಪರಿಚಿತ ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡ ಬಳಿಕ ಅವರ ಮೇಲೆ ಹಲ್ಲೆ ನಡೆಸಲಾಗಿತ್ತು.
ಈ ಸುದ್ದಿಯನ್ನೂ ಓದಿ: Viral Video: Viral Video: ಪುಣೆಗೆ ಹೊರಟಿದ್ದ ವಿಮಾನದಲ್ಲಿ ತಪ್ಪಿದ ದುರಂತ; ಗಾಳಿಗೆ ಹಾರಿ ಬಿದ್ದ ಕಿಟಕಿಯ ಚೌಕಟ್ಟು, ವಿಡಿಯೋ ನೋಡಿ
ಆಗಸ್ಟ್ ತಿಂಗಳಿನಲ್ಲಿ, ಐರ್ಲೆಂಡ್‌ನ ವಾಟರ್‌ಫೋರ್ಡ್‌ನ ಕಿಲ್‌ಬರಿ ಪ್ರದೇಶದಲ್ಲಿ ಭಾರತೀಯ ಮೂಲದ 6 ವರ್ಷದ ಬಾಲಕಿಯ ಮೇಲೆ 8 ರಿಂದ 14 ವರ್ಷದ ಹುಡುಗರು ಹಲ್ಲೆ ನಡೆಸಿದ್ದರು. ಕೇರಳದ ಕೊಟ್ಟಾಯಂ ಮೂಲದ 6 ವರ್ಷದ ನಿಯಾ ನವೀನ್ ತನ್ನ ಹೆತ್ತವರೊಂದಿಗೆ ಆಗ್ನೇಯ ಐರ್ಲೆಂಡ್‌ನಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿನ ಮಕ್ಕಳು ಅವಳನ್ನು 'ಕೊಳಕು' ಎಂದು ಕರೆದು ಹೊಡೆಯಲು ಪ್ರಾರಂಭಿಸಿದರು. ಅಲ್ಲದೆ 'ಭಾರತಕ್ಕೆ ಹಿಂತಿರುಗಿ' ಎಂದು ಕೂಗಲು ಪ್ರಾರಂಭಿಸಿದರು. ಹುಡುಗಿಯ ತಾಯಿ ಅನುಪಾ ಅಚ್ಯುತನ್ ಕಳೆದ 8 ವರ್ಷಗಳಿಂದ ಐರ್ಲೆಂಡ್‌ನಲ್ಲಿ ನೆಲೆಸಿದ್ದು ನರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ.
ಆಗಸ್ಟ್ 4 ರಂದು ವಾಟರ್‌ಫೋರ್ಡ್‌ನ ಕಿಲ್‌ಬರಿ ಪ್ರದೇಶದಲ್ಲಿ ಬಾಲಕಿ ಮನೆಯ ಹೊರಗೆ ಆಟವಾಡುತ್ತಿದ್ದಳು. ಅಲ್ಲಿಗೆ ಬಂದ ಕೆಲವು ಹುಡುಗರು ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಹುಡುಗಿಯ ಗುಪ್ತಾಂಗದ ಮೇಲೆ ಸೈಕಲ್ ಚಕ್ರದಿಂದ ಹಲ್ಲೆ ನಡೆಸಿ ಮುಖಕ್ಕೆ ಗುದ್ದಿದ್ದಾರೆ ಎಂದು ಆಕೆಯ ಪೋಷಕರು ದೂರಿನಲ್ಲಿ ತಿಳಿಸಿದ್ದರು.