ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಮಹಾ ಕುಂಭಮೇಳದಲ್ಲಿ ಉಚಿತ ಸ್ಯಾನಿಟರಿ ಪ್ಯಾಡ್ ಹಂಚಿದ ಮಹಿಳೆ

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳ ಈಗಾಗಲೇ ವಿಶ್ವದ ಗಮನ ಸೆಳೆದಿದೆ. ಇದೀಗ ಇಲ್ಲಿ ಮಹಿಳೆಯೊಬ್ಬರು ಉಚಿತವಾಗಿ ಸ್ಯಾನಿಟರಿ ಪ್ಯಾಡ್‌ಗಳನ್ನುಹಂಚುತ್ತಿರುವ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಅವರ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಮಹಾಕುಂಭ ಮೇಳದಲ್ಲಿ ಉಚಿತವಾಗಿ ಸ್ಯಾನಿಟರಿ ಪ್ಯಾಡ್ ಹಂಚುತ್ತಿರುವ ಮಹಿಳೆ.

ಪ್ರಯಾಗ್‌ರಾಜ್: ಉತ್ತರಪ್ರದೇಶದ (Uttar Pradesh) ಪ್ರಯಾಗ್‌ರಾಜ್‌ನಲ್ಲಿ (Prayagraj) ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ (Maha Kumbh Mela) ಮಹಿಳೆಯೊಬ್ಬರು ಉಚಿತವಾಗಿ ಸ್ಯಾನಿಟರಿ ಪ್ಯಾಡ್‌ಗಳನ್ನು (Sanitary Pads) ಹಂಚುತ್ತಿರುವ ವಿಡಿಯೊ ಇದೀಗ ಸೋಶಿಯಲ್ ಮಿಡಿಯಾದಲ್ಲಿ (Viral Video) ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ.

ಮಹಾ ಮೇಳದಲ್ಲಿ ಮಹಿಳೆಯ ಈ ಸೇವಾ ಮನೋಭಾವಕ್ಕೆ ಸರ್ವತ್ರ ಪ್ರಶಂಸೆ ವ್ಯಕ್ತವಾಗುತ್ತಿದೆ. ಇದಾದ ಬಳಿಕ ಯೋಗಿ ಆದಿತ್ಯನಾಥ್ (Yogi Adityanath) ಅವರ ಸರ್ಕಾರ ಇದೀಗ ಮಹಾ ಕುಂಭಮೇಳದ ಹಲವು ಕಡೆಗಳಲ್ಲಿ ಉಚಿತ ಸ್ಯಾನಿಟರಿ ಪ್ಯಾಡ್ ಕಾರ್ನರ್‌ಗಳನ್ನು ಸ್ಥಾಪಿಸಿದೆ.

ಈ ಬಾರಿಯ ಕುಂಭಮೇಳದಲ್ಲಿ ಕೆಲವೊಂದು ಕಂಪೆನಿಗಳು ಉತ್ತಮ ಕಾರ್ಯಗಳನ್ನು ಮಾಡುತ್ತಿವೆ. ಒಂದು ಕಂಪೆನಿಯು ಇಲ್ಲಿಗೆ ಬರುವ ಮಹಿಳೆಯರಿಗೆ ಮತ್ತು ಯುವತಿಯರಿಗೆ ಉಚಿತವಾಗಿ ಸ್ಯಾನಿಟರಿ ಪ್ಯಾಡ್ ಗಳನ್ನು ಹಂಚುತ್ತಿದೆ ಎಂದು ಪತ್ರಕರ್ತ ರಾಜೇಶ್ ಸಾಹು ತಮ್ಮ ಎಕ್ಸ್ (X) ಖಾತೆಯಲ್ಲಿ ವಿಡಿಯೊ ಅಪ್‌ಲೋಡ್‌ ಮಾಡಿದ್ದಾರೆ.

ಅದೇ ರೀತಿಯಲ್ಲಿ ಆರೋಗ್ಯ ಇಲಾಖೆಯೂ ಸಹ ಕುಂಭ ಮೇಳದಲ್ಲಿ ಸ್ಥಾಪಿಸಿರುವ ಎಲ್ಲ ಆಸ್ಪತ್ರೆಗಳಲ್ಲಿ ಇದೀಗ ಸ್ಯಾನಿಟರಿ ಪ್ಯಾಡ್‌ಗಳನ್ನು ಉಚಿತವಾಗಿ ಹಂಚಲಾಗುತ್ತಿದೆ’ ಎಂದು ಅವರು ಬರೆದುಕೊಂಡಿದ್ದಾರೆ.

ಈ ವಿಡಿಯೊದಲ್ಲಿ ಮಹಿಳೆಯೊಬ್ಬರು ದೊಡ್ಡ ಬ್ಯಾಗ್‌ಗಳಲ್ಲಿ ತುಂಬಿರುವ ಸ್ಯಾನಿಟರಿ ಪ್ಯಾಡ್‌ಗಳನ್ನು ಮಹಿಳೆಯರಿಗೆ ಹಂಚುತ್ತಿರುವುದನ್ನು ಕಾಣಬಹುದು. ಕಿತ್ತಳೆ ಬ‍ಣ್ಣದ ಪ್ಯಾಕ್ ನಲ್ಲಿರುವ ಈ ಪ್ಯಾಡ್‌ಗಳು, ಒಂದು ಪ್ಯಾಕೆಟ್‌ನಲ್ಲಿ ಎರಡು ಪ್ಯಾಡ್‌ಗಳಿವೆ ಎಂದು ವರದಿಯಾಗಿದೆ. ಕೆಲವರು ಹೆಚ್ಚಿನ ಪ್ಯಾಡ್‌ಗಳನ್ನು ಪಡೆದುಕೊಳ್ಳುತ್ತಿರುವುದೂ ಈ ವಿಡಿಯೊ ದಾಖಲಾಗಿದೆ.

ಇದನ್ನೂ ಓದಿ: Mahakumbh: 27 ವರ್ಷಗಳ ಹಿಂದೆ ಮನೆ ಬಿಟ್ಟು ಹೋದವ ಕುಂಭಮೇಳದಲ್ಲಿ ಬಾಬಾ ಆಗಿ ಪ್ರತ್ಯಕ್ಷ!



ಈ ವಿಡಿಯೊ ಇದೀಗ ನೆಟ್ಟಿಗರ ಪ್ರಶಂಸೆಗೆ ಪಾತ್ರವಾಗಿದ್ದು, ಹಲವರು, ಮಹಿಳೆಯ ಈ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ‘ಇದೊಂದು ಉತ್ತಮವಾದ ಕೆಲಸ’ ಎಂದು ಹಲವರು ಕಾಮೆಂಟ್ ಮಾಡುತ್ತಿದ್ದಾರೆ.

‘ಈ ಭವ್ಯ ಪವಿತ್ರ ಹಬ್ಬದ ಸಂದರ್ಭದಲ್ಲಿ ಬಹಳಷ್ಟು ಮಾಡಬಹುದಾಗಿದೆ. ನಿಮ್ಮ ಉದ್ದೇಶ ಸರಿಯಾಗಿದ್ದಲ್ಲಿ, ನೀವು ಬಹಳಷ್ಟು ಒಳ್ಳೆಯದನ್ನು ಮಾಡಬಹುದಾಗಿದೆ’ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.

‘ಮಹಾಕುಂಭ ಮೇಳಕ್ಕೆ ಗ್ರಾಮೀಣ ಪ್ರದೇಶಗಳಿಂದ ಹೆಚ್ಚಿನ ಮಹಿಳೆಯರು ಬರುತ್ತಿದ್ದಾರೆ. ಹಾಗಾಗಿ ಈ ಕಾರ್ಯ ನಿಸ್ಸಂಶಯವಾಗಿಯೂ ಉತ್ಕೃಷ್ಟವಾದುದು’ ಎಂದು ಮತ್ತೊಬ್ಬರ ತಿಳಿಸಿದ್ದಾರೆ.

ಒಟ್ಟಿನಲ್ಲಿ ಈ ಬಾರಿಯ ಕುಂಭಮೇಳ ಹಲವಾರು ವಿಷಯಗಳಿಗೆ ಸುದ್ದಿಯಾಗುತ್ತಲೇ ಇದೆ. ಫೆ. 26ರವರೆಗೆ ನಡೆಯಲಿರುವ ಈ ಮಹಾಮೇಳದಲ್ಲಿ ಈಗಾಗಲೇ ಎರಡು ಪುಣ್ಯ ಸ್ನಾನಗಳು ನಡೆದು ಹೋಗಿದೆ. ಹಲವಾರು ಖ್ಯಾತನಾಮರೂ ಸಹ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನವನ್ನು ಕೈಗೊಂಡಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹಲವು ಖ್ಯಾತನಾಮರು ಇಲ್ಲಿಗೆ ಭೇಟಿ ನೀಡಲಿದ್ದಾರೆಂದು ನಿರೀಕ್ಷಿಸಲಾಗುತ್ತಿದೆ.