ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Viral Video: ವಿ.ವಿ. ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಯನ್ನು ವಿವಾಹವಾದ ಮಹಿಳಾ ಪ್ರೊಫೆಸರ್; ಏನಿದರ ಅಸಲಿಯತ್ತು?

ಪಶ್ವಿಮ ಬಂಗಾಲದ ವಿಶ್ವವಿದ್ಯಾನಿಲಯದಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ಮಹಿಳಾ ಪ್ರೊಫೆಸರ್ ಒಬ್ಬರು ವಿದ್ಯಾರ್ಥಿಯನ್ನು ವಿವಿ ಕ್ಯಾಂಪಸ್ಸಿನಲ್ಲೇ ಮದುವೆಯಾಗುವ ಮೂಲಕ ಸುದ್ದಿಯಾಗಿದ್ದಾರೆ. ಹಾಗಾದರೆ ಏನಿದು ವಿಚಿತ್ರ ಕಥೆ? ಇಲ್ಲಿದೆ ನೋಡಿ ವಿವರ.

ಶೈಕ್ಷಣಿಕ ಪ್ರಾಜೆಕ್ಟ್‌ನ ಭಾಗವೆಂದು ವಿದ್ಯಾರ್ಥಿಯನ್ನು ಮದುವೆಯಾದ ಪ್ರೊಫೆಸರ್ ಸ್ಥಿತಿ ಏನಾಯ್ತು?

ಶೈಕ್ಷಣಿಕ ಪ್ರಾಜೆಕ್ಟ್‌ನ ಒಂದು ಭಾಗವೆಂದು ವಿದ್ಯಾರ್ಥಿಯನ್ನು ಮದುವೆಯಾದ ಪ್ರೊಫೆಸರ್.

Profile Sushmitha Jain Jan 30, 2025 8:55 PM

ಕೊಲ್ಕೊತ್ತಾ: ಪಶ್ಚಿಮ ಬಂಗಾಲದಲ್ಲಿ (West Bengal) ಪ್ರೊಫೆಸರ್ (Professor) ಒಬ್ಬರು ಪ್ರಥಮ ವರ್ಷದ ವಿದ್ಯಾರ್ಥಿಯನ್ನು ಕ್ಲಾಸ್ ರೂಂನಲ್ಲೇ ಮದುವೆಯಾದ ವಿಚಿತ್ರ ಘಟನೆ ನಡೆದಿದೆ. ಈ ಘಟನೆಯ ವಿಡಿಯೊ ವೈರಲ್ (Viral Video) ಆಗುತ್ತಿರುವಂತೆ ಈ ಪ್ರೊಫೆಸರ್ ಅವರನ್ನು ಕಾಲೇಜು ಅಧಿಕಾರಿಗಳು ಕಡ್ಡಾಯ ರಜೆ ಮೇಲೆ ಕಳುಹಿಸಿದ್ದಾರೆ. ಇದೀಗ ಈ ವಿವಾಹ ನಮ್ಮ ‘ಪ್ರಾಜೆಕ್ಟ್’ನ ಒಂದು ಭಾಗವಾಗಿತ್ತು ಎಂಬ ಸಮರ್ಥನೆಯನ್ನು ಆ ಪ್ರೊಫೆಸರ್ ನೀಡಿದ್ದಾರೆ.

ಪಶ್ವಿಮ ಬಂಗಾಲದ ಹರಿಂಘಟಾದಲ್ಲಿರುವ ಮೌಲಾನಾ ಅಬ್ದುಲ್ ಕಲಾಂ ಆಝಾದ್ ತಂತ್ರಜ್ಞಾನ ಕಾಲೇಜಿನಲ್ಲಿ (MAKAUT) ಈ ಘಟನೆ ನಡೆದಿದೆ. ಈ ಘಟನೆಯ ವಿಡಿಯೊ ಇದೀಗ ಎಲ್ಲೆಡೆ ಸದ್ದು ಮಾಡುತ್ತಿದೆ. ಈ ವಿಡಿಯೊದಲ್ಲಿರುವಂತೆ ಅಪ್ಲೈಡ್ ಸೈಕಾಲಜಿ ವಿಭಾಗದ ಸಿಬ್ಬಂದಿಯೊಬ್ಬರು ಮದುಮಗಳಂತೆ ಸಿಂಗರಿಸಿಕೊಂಡಿರುವುದನ್ನು ಕಾಣಬಹುದು ಮತ್ತು ಯುವಕನೊಬ್ಬ ಹಾರಗಳನ್ನು ಬದಲಾಯಿಸಿಕೊಂಡು, ವಧುವಿನ ಹಣೆಗೆ ಸಿಂಧೂರವನ್ನು ಇಡುತ್ತಿರುವುದನ್ನು ಕಾಣಬಹುದಾಗಿದೆ. ಮಾತ್ರವಲ್ಲದೇ ಕೈಬರಹದ ಪ್ರಮಾಣ ಪತ್ರವೊಂದಕ್ಕೆ ಮೂವರು ಸಾಕ್ಷಿಗಳು ಸಹಿ ಹಾಕಿದ್ದಾರೆ. ಇದಕ್ಕೆ ಆ ಪ್ರೊಫೆಸರ್ ಮತ್ತು ವಿದ್ಯಾರ್ಥಿ ಸಹ ಸಹಿ ಮಾಡಿದ್ದಾರೆ. ಈ ಪ್ರಮಾಣ ಪತ್ರದ ಪ್ರತಿಯೂ ಸಹ ಇದೀಗ ಆನ್‌ಲೈನ್‌ನಲ್ಲಿ ಹರಿದಾಡುತ್ತಿದೆ.

ಬಳಿಕ ಈ ಘಟನೆಯ ಕುರಿತು ಮಾತನಾಡಿರುವ ಪ್ರೊಫೆಸರ್, ಇದು ಪ್ರಾಜೆಕ್ಟ್‌ನ ಒಂದು ಭಾಗವಾಗಿತ್ತು ಎಂದು ಹೇಳಿದ್ದಾರೆ. ಆದರೆ ಈ ವಿಡಿಯೋ ವೈರಲ್ ಆಗುತ್ತಿರುವಂತೆ ವಿಶ್ವವಿದ್ಯಾನಿಲಯದ ಅಧಿಕಾರಿಗಳು ಆ ಪ್ರೊಫೆಸರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಿದ್ದಾರೆ ಮತ್ತು ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಆದೇಶ ಹೊರಡಿಸಿದ್ದಾರೆ.



ಆದರೆ ತನ್ನ ಈ ಕೃತ್ಯವನ್ನು ಸಮರ್ಥಿಸಿಕೊಂಡಿರುವ ಪ್ರೊಫೆಸರ್, ಇದನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದ್ದು, ಇದು ಕಾಲೆಜು ಪ್ರಾಜೆಕ್ಟ್ ಒಂದರ ಭಾಗವಾಗಿತ್ತು. ಆದರೆ ಇದನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ಮಾಧ್ಯಮದವರೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ.

ಮಾತ್ರವಲ್ಲದೇ ಈ ವಿಡಿಯೊವನನು ಬೇಕೆಂದೇ ಸೋರಿಕೆ ಮಾಡಿದ್ದು, ಇದಕ್ಕೆ ಕಾರಣವಾಗಿರುವವರ ವಿರುದ್ಧ ಪೊಲೀಸ್ ದೂರನ್ನೂ ಸಹ ನೀಡುವುದಾಗಿ ಆಕೆ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Viral News: ರೆಸ್ಟೋರೆಂಟ್‌ನಲ್ಲಿ ಸೋಶಿಯಲ್‌ ಮೀಡಿಯಾ ಇನ್‌ಫ್ಲುವೆನ್ಸರ್‌ ಖುಲ್ಲಾಂ ಖುಲ್ಲಾ ಕಿಸ್ಸಿಂಗ್‌!

‘ಇದನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಲಾಗಿದೆ. ಇದು ಪ್ರಾಜೆಕ್ಟ್ ಒಂದರ ಭಾಗವಾಗಿತ್ತು. ಹೊಸತಾಗಿ ಸೇರ್ಪಡೆಗೊಂಡವರ ಪಾರ್ಟಿಯಲ್ಲಿ ನಡೆಸಲಾದ ನಾಟಕ ಇದಾಗಿತ್ತು. ಆದರೆ ನನ್ನ ವಿರುದ್ಧ ಪಿತೂರಿಯ ಒಂದು ಭಾಗವಾಗಿ ಈ ವಿಡಿಯೊ ಬೇಕೆಂದೇ ಲೀಕ್ ಮಾಡಿ ವೈರಲ್ ಮಾಡಲಾಗಿದೆ. ನನ್ನ ಮಾನ ಹಾನಿಗೈದವರ ವಿರುದ್ಧ ಪೊಲೀಸ್ ದೂರನ್ನು ಸಲ್ಲಿಸುತ್ತೇನೆ’ ಎಂದು ಆ ಮಹಿಳಾ ಪ್ರೊಫೆಸರ್ ಹೇಳಿಕೊಂಡಿದ್ದಾರೆ.

ವಿಶ್ವವಿದ್ಯಾನಿಲಯದ ಪ್ರಭಾರ ಉಪಕುಲಪತಿ ತಪಸ್ ಚಕ್ರವರ್ತಿ ಮಾತನಾಡಿ, ‘ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಇದರ ತನಿಖೆಗಾಗಿ ಒಂದು ಸಮಿತಿಯನ್ನು ರಚಿಸಲಾಗಿದೆ. ತನ್ನ ಕೃತ್ಯಕ್ಕೆ ಸಂಬಂಧಿಸಿದಂತೆ ಪ್ರೊಫೆಸರ್ ಸ್ಪಷ್ಟನೆಯನ್ನು ನೀಡಿದ್ದಾರೆ’ ಎಂದು ಹೇಳಿದ್ದಾರೆ.

ಮಹಿಳಾ ಪ್ರೊಫೆಸರ್ ನಡೆಸಿದ ಈ ಕೃತ್ಯವನ್ನು ವಿವಿಯ ಇತರೇ ಪ್ರೊಫೆಸರ್‌ಗಳು ಖಂಡಿಸಿದ್ದು, ಶೈಕ್ಷಣಿಕ ಚಟುವಟಿಕೆಗಳ ಭಾಗವಾಗಿ ಇಂತಹ ಕೃತ್ಯಗಳನ್ನು ಸಮರ್ಥಿಸಿಕೊಳ್ಳಲಾಗದು ಎಂದು ಹೇಳಿದ್ದಾರೆ. ವಿವಿಯ ಟೀಚರ್ಸ್ ಯೂನಿಯನ್ ಈ ಘಟನೆಗೆ ಸಂಬಂಧಿಸಿದಂತೆ ಪ್ರೊಫೆಸರ್ ವಿರುದ್ಧ ದೂರು ಸಲ್ಲಿಸಿದ್ದು, ವಿಚಾರಣಾ ಕಮಿಟಿ ಮುಂದಿನ ತನಿಖೆಯನ್ನು ನಡೆಸಲಿದೆ ಎಂದು ತಿಳಿದು ಬಂದಿದೆ.