ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಅಂಗಡಿಯವನಿಗೆ ಮೆಣಸಿನ ಪುಡಿ ಎರಚಿ ಆಭರಣ ದೋಚಲು ಯತ್ನಿಸಿದ ಮಹಿಳೆ; ಸಿಕ್ಕಿಬಿದ್ದಿದ್ದು ಹೇಗೆ?

ಅಹಮದಾಬಾದ್‌ನ ರಾಣಿಪ್ ತರಕಾರಿ ಮಾರುಕಟ್ಟೆ ಬಳಿ ಇರುವ ಚಿನ್ನ ಮತ್ತು ಬೆಳ್ಳಿಯ ಆಭರಣ ಅಂಗಡಿಗೆ ಆಭರಣ ದೋಚಲು ಬಂದ ಮಹಿಳೆಗೆ ಅಂಗಡಿಯಾತ ಚೆನ್ನಾಗಿ ಬಾರಿಸಿದ ಘಟನೆ ನಡೆದಿದೆ. ಇದರ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಅಂಗಡಿಯಾತ ಪೊಲೀಸ್ ದೂರು ನೀಡಲು ನಿರಾಕರಿಸಿದ್ದಾನೆ ಎನ್ನಲಾಗಿದೆ.

ಆಭರಣ ದೋಚಲು ಬಂದ ಮಹಿಳೆಯನ್ನು ಥಳಿಸಿದ ಅಂಗಡಿಯಾತ.

ಗಾಂಧಿನಗರ: ಆಭರಣದ ಅಂಗಡಿಯವನ ಮೇಲೆ ಮೆಣಸಿನ ಪುಡಿ ಎರಚಿ (Woman Throws Chilli Powder) ದರೋಡೆ (Robbery) ಮಾಡಲು ಯತ್ನಿಸಿದ ಮಹಿಳೆಗೆ ಅಂಗಡಿಯಾತ ಕಪಾಳಮೋಕ್ಷ ಮಾಡಿರುವ ಘಟನೆ ಗುಜರಾತ್‌ನ (Gujarat) ಅಹಮದಾಬಾದ್‌ನಲ್ಲಿ (Ahmedabad) ನಡೆದಿದೆ. ಮಹಿಳೆಯೊಬ್ಬಳು ಶಾಲಿನಿಂದ ಮುಖ ಮುಚ್ಚಿಕೊಂಡು ಅಂಗಡಿಗೆ ಬಂದಿದ್ದು, ಅಂಗಡಿಯಾತ ಒಬ್ಬನೇ ಇರುವುದನ್ನು ಗಮನಿಸಿ ಆತನ ಕಣ್ಣಿಗೆ ಖಾರದ ಪುಡಿ ಎರಚಿ ದರೋಡೆಗೆ ಯತ್ನಿಸಿದ್ದಾಳೆ. ಕೂಡಲೇ ಎಚ್ಛೆತ್ತುಕೊಂಡ ಅಂಗಡಿಯಾತ ಆಕೆಯನ್ನು ಹಿಡಿದು ಚೆನ್ನಾಗಿ ಬಾರಿಸಿದ್ದಾನೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ (Viral Video) ಆಗಿದೆ.

ಅಹಮದಾಬಾದ್‌ನಲ್ಲಿರುವ ಆಭರಣದ ಅಂಗಡಿಯೊಂದಕ್ಕೆ ನವೆಂಬರ್ 3ರಂದು ಈ ಘಟನೆ ನಡೆದಿದೆ. ಮಧ್ಯಾಹ್ನ 12.30ರ ಸುಮಾರಿಗೆ ದರೋಡೆ ಮಾಡುವ ಉದ್ದೇಶದಿಂದ ಮಹಿಳೆಯೊಬ್ಬಳು ಬಂದಿದ್ದಾಳೆ. ಆದರೆ ಆಕೆಯ ಯೋಜನೆಯನ್ನು ಅಂಗಡಿಯಾತ ವಿಫಲ ಮಾಡಿದ್ದಾನೆ. ಸುಮಾರು 25 ಸೆಕೆಂಡುಗಳ ಕಾಲ ಸೆರೆಯಾಗಿರುವ ಸಿಸಿಟಿವಿ ದೃಶ್ಯಗಳಲ್ಲಿ ಅಂಗಡಿಯವನು 20ಕ್ಕೂ ಹೆಚ್ಚು ಬಾರಿ ಮಹಿಳೆಗೆ ಕಪಾಳಮೋಕ್ಷ ಮಾಡಿದ್ದಾನೆ.

ಇದನ್ನೂ ಓದಿ: Hong Kong Sixes: ಹಾಂಗ್ ಕಾಂಗ್ ಸಿಕ್ಸಸ್‌ನಲ್ಲಿ ಕುವೈತ್, ಯುಎಇ ವಿರುದ್ಧ ಭಾರತಕ್ಕೆ ಹೀನಾಯ ಸೋಲು

ರಾಣಿಪ್ ತರಕಾರಿ ಮಾರುಕಟ್ಟೆಯ ಬಳಿಯ ಚಿನ್ನ ಮತ್ತು ಬೆಳ್ಳಿ ಅಂಗಡಿಗೆ ಗ್ರಾಹಕರಂತೆ ನಟಿಸುತ್ತ ಮಹಿಳೆಯೊಬ್ಬಳು ಬಂದಿದ್ದಾಳೆ. ತನ್ನ ದುಪಟ್ಟಾದಿಂದ ಆಕೆ ಮುಖ ಮುಚ್ಚಿಕೊಂಡಿದ್ದರಿಂದ ಸರಿಯಾಗಿ ಆಕೆಯ ಚಹರೆ ಸಿಸಿಟಿವಿಯಲ್ಲಿ ಸೆರೆಯಾಗಿಲ್ಲ.

ಅಂಗಡಿಗೆ ಪ್ರವೇಶಿಸಿದ ಕೆಲವು ಕ್ಷಣಗಳಲ್ಲಿ ಆಕೆ ದರೋಡೆ ಮಾಡಲು ಯತ್ನಿಸಿದ್ದಾಳೆ. ಇದಕ್ಕಾಗಿ ಅಂಗಡಿಯವನ ಕಣ್ಣಿಗೆ ಮೆಣಸಿನ ಪುಡಿಯನ್ನು ಎಸೆದಿದ್ದಾಳೆ. ಕೂಡಲೇ ಎಚ್ಚೆತ್ತುಕೊಂಡ ಅಂಗಡಿಯಾತ ಮೆಣಸಿನ ಪುಡಿ ಕಣ್ಣಿಗೆ ಬೀಳುವುದರಿಂದ ತಪ್ಪಿಸಿಕೊಂಡಿದ್ದಾನೆ. ಮಹಿಳೆಯ ಉದ್ದೇಶವನ್ನು ಅರಿತು ಆತ ತಕ್ಷಣ ಎದ್ದು ನಿಂತು ಸುಮಾರು 25 ಸೆಕೆಂಡುಗಳಲ್ಲಿ 20ಕ್ಕೂ ಹೆಚ್ಚು ಬಾರಿ ಆಕೆಗೆ ಕಪಾಳಮೋಕ್ಷ ಮಾಡಿದ್ದಾನೆ. ಅನಂತರ ಕೌಂಟರ್‌ನಿಂದ ಹಾರಿ ಮಹಿಳೆಯನ್ನು ಹಿಡಿದು ಅಂಗಡಿಯಿಂದ ಹೊರಗೆ ಎಳೆದುಕೊಂಡು ಹೋಗುವುದು ಸಿಸಿಟಿವಿ ದೃಶ್ಯಗಳಲ್ಲಿ ಕಾಣಬಹುದು. ಈ ವೇಳೆ ಆತ ನಿರಂತರವಾಗಿ ಮಹಿಳೆಗೆ ಕಪಾಳಮೋಕ್ಷ ಮಾಡಿದ್ದಾನೆ.

ವೈರಲ್‌ ವಿಡಿಯೊ ಇಲ್ಲಿದೆ:



ಘಟನೆಯ ಕುರಿತು ಪೊಲೀಸ್ ದೂರು ನೀಡಲು ಅಂಗಡಿಯವನು ನಿರಾಕರಿಸಿದ್ದಾನೆ ಎಂದು ತಿಳಿಸಿರುವ ರಾಣಿಪ್ ಪೊಲೀಸ್ ಠಾಣೆಯ ಪಿಐ ಕೇತನ್ ವ್ಯಾಸ್, ಸಿಸಿಟಿವಿ ದೃಶ್ಯಗಳ ಆಧರಿಸಿ ಮಹಿಳೆಯನ್ನು ಪತ್ತೆಹಚ್ಚಲು ತನಿಖೆ ಆರಂಭಿಸಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Vande Bharat train: ನಾಲ್ಕು ಹೊಸ ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ಮೋದಿ ಚಾಲನೆ

ಘಟನೆಯ ಬಗ್ಗೆ ತನಿಖೆ ನಡೆಸಲಾಗುವುದು. ಆದರೆ ಈ ಕುರಿತು ದೂರು ದಾಖಲಿಸಲುಎರಡು ಬಾರಿ ಅಂಗಡಿಯವನನ್ನು ಭೇಟಿ ಮಾಡಲಾಗಿದೆ. ಆದರೆ ಆತ ನಿರಾಕರಿಸಿದ್ದಾನೆ ಎಂದು ಅವರು ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಮಾಹಿತಿ ನೀಡಿರುವ ಅಹಮದಾಬಾದ್ ಪೊಲೀಸರು, ಪ್ರಕರಣದ ಕುರಿತು ದೂರು ದಾಖಲಿಸಲು ವೈಯಕ್ತಿಕವಾಗಿ ಎರಡು ಬಾರಿ ಅಂಗಡಿಯವನನ್ನು ಕೇಳಲಾಗಿದೆ. ಆದರೆ ಉದ್ಯಮಿ ಈ ವಿಷಯದಲ್ಲಿ ಯಾವುದೇ ಆಸಕ್ತಿ ತೋರುತ್ತಿಲ್ಲ. ಆದರೂ ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಆರೋಪಿಗಳನ್ನು ಹುಡುಕಲು ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author