ಮುಂಬೈ: ಇದೀಗ ಮುಂಬೈನಲ್ಲಿ ಹಾಡಹಗಲೇ ಇಬ್ಬರು ಮಹಿಳೆಯರು ಆಟೋ ರಿಕ್ಷಾದಲ್ಲಿ ಕುಳಿತು ಡ್ರಗ್ಸ್ ಸೇವಿಸಿದ್ದಾರೆ. ಈ ಆಘಾತಕಾರಿ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ಈ ಪ್ರದೇಶದಲ್ಲಿ ಅವರು ಹೇಗೆ ಮತ್ತು ಎಲ್ಲಿಂದ ಡ್ರಗ್ಸ್ ಪಡೆದುಕೊಂಡರು ಎಂಬ ಬಗ್ಗೆ ವಿಡಿಯೊದಲ್ಲಿ ಚರ್ಚೆ ಮಾಡಲಾಗಿದೆ. ಮಾತುಕತೆಯ ವೇಳೆ ಆ ಮಹಿಳೆಯರು ಡ್ರಗ್ಸ್ ಬೆಲೆಯನ್ನು ಸಹ ತಿಳಿಸಿದ್ದಾರೆ. ಮುಂಬೈನ ಮಲಾಡ್ನ ಮಾಲ್ವಾನಿ ಪ್ರದೇಶದಲ್ಲಿ ಈ ವಿಡಿಯೊವನ್ನು ರೆಕಾರ್ಡ್ ಮಾಡಲಾಗಿದೆಯಂತೆ.ವೈರಲ್ ಆಗಿರುವ ವಿಡಿಯೊದಲ್ಲಿ, ಆಟೋರೀಕ್ಷಾದಲ್ಲಿ ಕುಳಿತ ಇಬ್ಬರು ಮಹಿಳೆಯರು ಡ್ರಗ್ಸ್ ಸೇವಿಸಿದ್ದಾರಂತೆ.
ವ್ಯಕ್ತಿಯೊಬ್ಬ ರಹಸ್ಯವಾಗಿ ವಿಡಿಯೊ ರೆಕಾರ್ಡ್ ಮಾಡುತ್ತಾ ನಂತರ ಅವರ ಬಳಿಗೆ ಬಂದು ಡ್ರಗ್ಸ್ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಸಲಹೆ ನೀಡಿದ್ದಾನೆ. ಮಹಿಳೆಯರು ತಾವು ಇದಕ್ಕೆ ವ್ಯಸನಿಯಾಗಿದ್ದೇವೆ ಹಾಗಾಗಿ ಡ್ರಗ್ಸ್ ಸೇವಿಸದೆ ನಮಗೆ ಬದುಕಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ನಂತರ ಆ ವ್ಯಕ್ತಿ ಈ ಡ್ರಗ್ಸ್ ಸಿಕ್ಕಿದ ಸ್ಥಳ ಮತ್ತು ಅದಕ್ಕೆ ನೀಡಿದ ಬೆಲೆಯನ್ನು ಕೇಳಿದ್ದಾರೆ. ಮಹಿಳೆಯರು ಸ್ಥಳದ ಬಗ್ಗೆ ಮಾಹಿತಿ ನೀಡಿ ಎರಡು ಪ್ಯಾಕೆಟ್‍ಗಳಿಗೆ 200 ರೂ ಎಂದಿದ್ದಾರೆ. ಈ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ನೆಟ್ಟಿಗ ಇಂದಿನ ದಿನಗಳಲ್ಲಿ ಡ್ರಗ್ಸ್ ಮಾರಾಟ ಮಾಡುವುದು ಮತ್ತು ಸೇವಿಸುವುದು ವಡಾಪಾವ್ ಮಾರಾಟ ಮಾಡುವುದಕ್ಕಿಂತ ಹೆಚ್ಚು ಸುಲಭ ಎಂದಿದ್ದಾನೆ.
ಮಹಿಳೆಯರಿಬ್ಬರು ಆಟೋದಲ್ಲಿ ಕುಳಿತು ಡ್ರಗ್ಸ್ ಸೇವಿಸುತ್ತಿರುವ ವಿಡಿಯೊ ಇಲ್ಲಿದೆ ನೋಡಿ...
ಈ ಡ್ರಗ್ಸ್ ಸಿಗುವ ಸ್ಥಳ ಮಾಲ್ವಾನಿ ಗೇಟ್ ಸಂಖ್ಯೆ 06 ಎಂದು ವಿಡಿಯೊ ರೆಕಾರ್ಡ್ ಮಾಡಿದ ವ್ಯಕ್ತಿ ಮಾಹಿತಿ ಒದಗಿಸಿ ಮುಂಬೈ ಪೊಲೀಸರು, ಸಿಎಂಒ ಮಹಾರಾಷ್ಟ್ರ, ಎನ್ಸಿಬಿ ಇಂಡಿಯಾ ಮತ್ತು ಪ್ರದೇಶದ ಸ್ಥಳೀಯ ಪ್ರತಿನಿಧಿಯಾಗಿರುವ ಕಾಂಗ್ರೆಸ್ ಶಾಸಕ ಅಸ್ಲಂ ಶೇಖ್ ಅವರನ್ನು ಟ್ಯಾಗ್ ಮಾಡಿದ್ದಾನೆ. ವೈರಲ್ ವಿಡಿಯೊವನ್ನು ಗಮನಿಸಿದ ಮುಂಬೈ ಪೊಲೀಸರು ಪೋಸ್ಟ್‌ಗೆ ಪ್ರತಿಕ್ರಿಯಿಸಿ ಮುಂಬೈ ಪೊಲೀಸರ ಅಧಿಕೃತ ಖಾತೆಯಲ್ಲಿ "ನಾವು ಮಾಲ್ವಾನಿ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ" ಎಂದು ತಿಳಿಸಿದ್ದಾರೆ.
ಮುಂಬೈನ ಮಲಾಡ್ ಪ್ರದೇಶದಲ್ಲಿ ಡ್ರಗ್ಸ್ ಮಾರಾಟ ಮಾಡುವ ಪ್ರಕರಣ ಈ ಹಿಂದೆ ಕೂಡ ಬೆಳಕಿಗೆ ಬಂದಿತ್ತು. 2021ರಲ್ಲಿ ಮುಂಬೈ ಪೊಲೀಸರ ಮಾದಕವಸ್ತು ವಿರೋಧಿ ಸೆಲ್ (ಎಎನ್ ಸಿ) ನಗರದಲ್ಲಿ ಮೂವರು ಮಾದಕವಸ್ತು ಮಾರಾಟ ಮಾಡುವವರನ್ನು ಬಂಧಿಸಿದ್ದರು ಮತ್ತು ಅವರಿಂದ 70 ಲಕ್ಷ ರೂ. ಮೌಲ್ಯದ ಮಾದಕವಸ್ತುಗಳನ್ನು ವಶಪಡಿಸಿಕೊಂಡಿದ್ದರು.
ಈ ಸುದ್ದಿಯನ್ನೂ ಓದಿ:Viral Video: ಮೆಟ್ರೋದಲ್ಲಿ ಸಖತ್ ಸ್ಟೆಪ್ ಹಾಕಿದ ಯುವಕ! ವಿಡಿಯೊ ಫುಲ್ ವೈರಲ್
ಮುಂಬೈ ನಗರ ಮತ್ತು ಉಪನಗರ ಪ್ರದೇಶಗಳಲ್ಲಿ ಮಾದಕವಸ್ತು ಪೂರೈಕೆಯಲ್ಲಿ ತೊಡಗಿರುವ ಮೂವರು ವ್ಯಕ್ತಿಗಳು ಮಲಾಡ್‍ನ ಅಪ್ಪಾ ಪದಾ ರಸ್ತೆಯಲ್ಲಿರುವ ಖಾಲಿ ಪಾರ್ಕಿಂಗ್ ಮೈದಾನದಲ್ಲಿ ಹಂಚಲು ಬರಲಿದ್ದಾರೆ ಎಂದು ಎಎನ್ಸಿಯ ಬಾಂದ್ರಾ ಘಟಕಕ್ಕೆ ಮಾಹಿತಿ ಸಿಕ್ಕಿದ ಕೂಡಲೇ ಅವರು ತ್ವರಿತವಾಗಿ ಕಾರ್ಯಕೈಗೊಂಡು ಡ್ರಗ್ಸ್ ಮಾರಾಟಗಾರರನ್ನು ಬಂಧಿಸಿದ್ದರಂತೆ.