ನವದೆಹಲಿ, ಡಿ.19: ಹಾಲಿವುಡ್ ನ ಸಿನಿಮಾ ಒಂದರಲ್ಲಿ ಜೇಡ ಕಚ್ಚಿ ಸ್ಪೈಡರ್ ಮ್ಯಾನ್ ಆಗಿದ್ದ ಕಥೆಯನ್ನು ನಾವು ಕೇಳಿದ್ದೇವೆ. ಜೇಡಕ್ಕೆ ಇರುವ ವಿಶೇಷ ಶಕ್ತಿಯೆಲ್ಲ ಮನುಷ್ಯರಿಗೂ ಹರಡುತ್ತೆ ಎಂಬ ನೆಲೆಯಲ್ಲಿ ಈ ಸಿನಿಮಾ ಹಿಟ್ ಆಗಿತ್ತು. ಆದರೆ ನಿಜ ಜೀವನದಲ್ಲಿ ಜೇಡ ಕಚ್ಚಿದರೆ ಏನು ಸಮಸ್ಯೆ ಇಲ್ಲ ಎಂಬ ನಿರ್ಲಕ್ಷ್ಯ ಭಾವನೆಯೇ ಅಧಿಕವಾಗಿ ಇರಲಿದೆ. ಅಂತೆಯೆ ಮಹಿಳೆಯೊಬ್ಬರಿಗೆ ಜೇಡ ಕಚ್ಚಿದ್ದ ಪರಿಣಾಮ ಸಾವು ಬದುಕಿನ ನಡುವೆ ಹೋರಾಟ ನಡೆಸಿ ಕೊನೆಗೂ ಜೀವ ಉಳಿಸಿ ಕೊಂಡು ಬದುಕಿ ಬಂದ ಘಟನೆ ನಡೆದಿದೆ. ಈ ಮೂಲಕ ಜೇಡ ಕಚ್ಚಿದೆ ಎಂಬ ನಿರ್ಲಕ್ಷ್ಯ ವಹಿಸಿದರೆ ಏನಾಗುತ್ತದೆ ಎಂಬುದಕ್ಕೆ ಈ ಮಹಿಳೆಯೇ ಜ್ವಲಂತ ಉದಾಹರಣೆಯಾಗಿದ್ದಾರೆ. ಸದ್ಯ ಆ ಮಹಿಳೆಯ ಸ್ಥಿತಿ ಚಿಂತಾಜನಕವಾಗಿದ್ದು ವೆಂಟಿಲೇಟರ್ ನಲ್ಲಿ ಆಕೆ ಚಿಕಿತ್ಸೆ ಪಡೆದು ಚೇತರಿಕೆಯಾಗಿದ್ದ ವಿಡಿಯೋ ಒಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ (Viral video) ಆಗುತ್ತಿದೆ. ಈ ಮೂಲಕ ಜೇಡ ಕಚ್ಚಿತು ಎಂಬ ನಿರ್ಲಕ್ಷ್ಯ ವಹಿಸಬಾರದು ಎಂಬ ನೆಲೆಯಲ್ಲಿ ಆನ್ಲೈನ್ ನಲ್ಲಿ ಹೊಸ ಚರ್ಚೆ ಏರ್ಪಡುತ್ತಿದೆ.
2025ರ ಮೇ 17ರಂದು ಕಂದು ಬಣ್ಣದ ಬ್ರೌನ್ ರಿಕ್ಲೋಸ್ ಎಂಬ ಹೆಸರಿನ ಜೇಡವು ಮಹಿಳೆಗೆ ಕಚ್ಚಿದ್ದು ಒಂದುವಾರಕ್ಕೂ ಅಧಿಕ ಕಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯ ಹೆಸರು ಮೈನಿತಾ ಎಸ್. ಎಂದು ತಿಳಿದುಬಂದಿದೆ. ಕೆಲಸದ ವೇಳೆಯಲ್ಲಿ ಈ ಜೇಡ ಕಚ್ಚಿದ್ದು ಕಚ್ಚಿದ ಕೂಡಲೇ ಅವರು ಅದನ್ನು ಹೆಚ್ಚು ಗಣನೆಗೆ ತೆಗೆದುಕೊಳ್ಳದೆ ನಿರ್ಲಕ್ಷ್ಯ ಮಾಡಿ ದ್ದಾರೆ. ಹೀಗಾಗಿ ಆಕೆಯ ದೇಹದ ಮೇಲೆ ಜೇಡದ ವಿಷವು ಗಂಭೀರ ಪರಿಣಾಮ ಬೀರಿದೆ. ನಡೆಯಲು ಸಾಧ್ಯವಾಗದ ಸ್ಥಿತಿಗೆ ಆಕೆ ತಲುಪಿದ್ದು ದೇಹದ ಆರೋಗ್ಯದಲ್ಲಿ ಏರು ಪೇರಾಗಿದ್ದು ತಿಳಿದು ಬಂದಿದೆ.
ವಿಡಿಯೋ ನೋಡಿ:
ಆಹಾರ ಸೇವಿಸಲಾಗದೆ, ನಡೆದಾಡಲು, ಮಾತನಾಡಲು ಕೂಡ ಕಷ್ಟ ಪಡುವ ಪರಿಸ್ಥಿತಿಯು ಆಕೆಗೆ ಎದುರಾಗಿದೆ. ಆಕೆಯ ಹೃದಯ ಬಡಿತ ಹೆಚ್ಚಾಗಿದ್ದು ಆಮ್ಲಜನಕ ಸಮಸ್ಯೆಯಿಂದ ಉಸಿರಾಡಲು ಕೂಡ ಕಷ್ಟಪಡುವಂತಾಯಿತು. ಹಿಮೋ ಗ್ಲೋಬಿನ್ ಮಟ್ಟದಲ್ಲಿ ಏರುಪೇರಾಗಿ ಕೂಡ ಸಮಸ್ಯೆಯಾಗಿದೆ. ಹೀಗಾಗಿ ಮೈನಿತಾನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಕೆಲವು ಚಿಕಿತ್ಸೆ ಕೊಡಿಸಿ ಪುನಃ ಡಿಸ್ಚಾರ್ಜ್ ಮಾಡಲಾಯಿತು. ಎಲ್ಲ ಸರಿಹೋಯ್ತು ಎಂದು ಅಂದುಕೊಳ್ಳುವಾಗಲೆ ಚಿಕಿತ್ಸೆ ಪಡೆದ ಒಂದೇ ವಾರಕ್ಕೆ ಆಕೆಯ ದೇಹದ ಚರ್ಮವು ಹಾವಿನ ಸಿಪ್ಪೆಯಂತೆ ಸುಲಿಯುಲಾರಂಭಿಸಿದೆ. ಆ ಜೇಡದ ವಿಷದ ತೀವ್ರತೆ ಯಾವ ಮಟ್ಟಿಗೆ ಇತ್ತು ಎಂಬುದಕ್ಕೆ ಇವೆಲ್ಲವೂ ಸಾಕ್ಷಿಯಾದಂತಿದೆ ಎನ್ನಬಹುದು.
ಗಾಂಜಾ ಬಗ್ಗೆ ದೂರು ನೀಡಿದ್ದಕ್ಕೆ ಮಕ್ಕಳ ಮೇಲೆ ಹಲ್ಲೆ ನಡೆಸಿದ ಅಪ್ರಾಪ್ತ ಬಾಲಕರು
ಹೀಗಾಗಿ ಆಕೆಯನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆ ವಾಸವು ಭಯಾನಕವಾಗಿದ್ದು ಅಲ್ಲಿ ಅವರು ಪಡೆಯುತ್ತಿದ್ದ ಚಿಕಿತ್ಸೆಗಳು, ಔಷಧ ಇತ್ಯಾದಿಗಳ ವಿಡಿಯೋವನ್ನು ಕಾಣಬಹುದು. ಡಿಸ್ಚಾರ್ಜ್ ನಂತರದ ವೀಡಿಯೊದಲ್ಲಿ ಕೂಡ ಮೈನಿತಾ ಅವರು ತನ್ನ ಚರ್ಮವು ವಿಷದಿಂದ ಹಾವಿನ ಚರ್ಮದಂತಾಗಿದೆ. ಈಗ ನಾನು ಕೂಡ ಜೇಡದಂತೆ ಆಗಿದ್ದೇನೆ ಎಂದು ಬರೆದು ಕೊಂಡಿದ್ದಾರೆ. ಅವರು ತಮ್ಮ ಅನುಭವವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿ ಕೊಂಡಿದ್ದು ಜೇಡದಿಂದ ಹೀಗೂ ಆಗುತ್ತದೆ ಎಂಬ ಮನವರಿಕೆಯನ್ನು ಎಚ್ಚರಿಕೆಯ ಸಂದೇಶವನ್ನು ಜಗತ್ತಿಗೆ ತಿಳಿಸಿದ್ದಾರೆ.
ಕಂದು ಬಣ್ಣದ ಬ್ರೌನ್ ರಿಕ್ಲೋಸ್ ಜೇಡವು ಸಾಮಾನ್ಯವಾಗಿ ಆಗ್ನೇಯ ಮತ್ತು ಮಧ್ಯಪಶ್ಚಿಮ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಕಂಡುಬರುತ್ತದೆ. ಹೆಚ್ಚಾಗಿ ಇವುಗಳು ನೆಲಮಾಳಿಗೆಗಳು ಮತ್ತು ಶೇಖರಣಾ ಪ್ರದೇಶಗಳಂತಹ ಬೆಚ್ಚಗಿನ, ಕತ್ತಲೆಯಾದ ಸ್ಥಳಗಳಲ್ಲಿ ವಾಸವಿರಲಿವೆ. ಇದು ಕಚ್ಚಿದರೆ ಆರಂಭದಲ್ಲಿ ನೋವುಗಳು ತಿಳಿಯಲಾರದು. ಬಳಿಕ ಚಿಕಿತ್ಸೆ ಪಡೆಯದೆ ಅದನ್ನು ನಿರ್ಲಕ್ಷ್ಯ ಮಾಡಿದರೆ ಊತವಾಗುವುದು, ಗುಳ್ಳೆಗಳು ಮತ್ತು ಸ್ನಾಯು ನೋವು, ಜ್ವರ, ತಲೆತಿರುಗುವಿಕೆ, ವಾಂತಿ ಇತರ ಆರೋಗ್ಯ ಸಮಸ್ಯೆ ಉಂಟಾಗಬಹುದು. ವಿಷವು ತುಂಬಾ ಹೆಚ್ಚು ಇದ್ದಾಗ ಅಂಗಾಂಗಳಿಗೆ ಹಾನಿಯಾಗಲೂ ಬಹುದು. ಒಟ್ಟಾರೆಯಾಗಿ ಜೇಡ ಕಚ್ಚಿತೆಂದು ನಿರ್ಲಕ್ಷ್ಯ ಮಾಡದೆ ವೈದ್ಯಕೀಯ ಚಿಕಿತ್ಸೆ ಪಡೆದರೆ ಯಾವ ಸಮಸ್ಯೆಯೂ ಬರಲಾರದು.