ಲಖನೌ: ಸಿನಿಮಾಗಳಲ್ಲಿ ನಡೆಯುವ ಹಾಗೇ ದೆವ್ವ, ಭೂತದ ಸಮಸ್ಯೆ ಹಾಗೂ ಕೆಲವು ವಿಚಿತ್ರ ಘಟನೆಗಳು ನಿಜ ಜೀವನದಲ್ಲಿ ನಡೆಯುವುದು ಅಸಂಭವ ಎಂದು ಭಾವಿಸುತ್ತೇವೆ. ಆದರೆ ರಾಜ್‍ಕುಮಾರ್ ರಾವ್ ಮತ್ತು ಶ್ರದ್ಧಾ ಕಪೂರ್ ಅಭಿನಯದ ಬ್ಲಾಕ್‌ಬಾಸ್ಟರ್ ಬಾಲಿವುಡ್ ಚಿತ್ರ 'ಸ್ತ್ರೀ' ಚಿತ್ರದ ಕಥಾವಸ್ತುವನ್ನು ಹೋಲುವ ಘಟನೆ ಉತ್ತರ ಪ್ರದೇಶದ ಜೌನ್ಪುರದ ವ್ಯಕ್ತಿಯೊಬ್ಬನ ಜೀವನದಲ್ಲಿ ನಡೆದಿದೆ ಎಂಬುದಾಗಿ ವರದಿಯಾಗಿದೆ. ಈ ಚಿತ್ರದಲ್ಲಿ ಪುರುಷರು 'ಸ್ತ್ರೀ'ಯಿಂದ ತಮ್ಮ ಜೀವವನ್ನು ಉಳಿಸಿಕೊಳ್ಳಲು ಮಹಿಳೆಯರಂತೆ ವೇಷ ಧರಿಸಿದ್ದರು. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ಕಳೆದ 36 ವರ್ಷಗಳಿಂದ 'ದೆವ್ವ'ಕ್ಕೆ ಹೆದರಿ ಮಹಿಳೆಯಂತೆ ವೇಷ ಧರಿಸಿ ಬದುಕುತ್ತಿದ್ದಾನೆ ಎಂಬುದಾಗಿ ತಿಳಿದುಬಂದಿದೆ.
ಆತ್ಮವೊಂದು ತನಗೆ ಕಿರುಕುಳ ನೀಡುತ್ತಿತ್ತು. ಅದರಿಂದ ಜೀವವನ್ನು ಉಳಿಸಿಕೊಳ್ಳಲು ತಾನು ಮಹಿಳೆಯಂತೆ ವೇಷ ಧರಿಸಿದ್ದೇನಾಂತೆ. ಆತ ಮೂರು ಬಾರಿ ಮದುವೆಯಾಗಿದ್ದು, ತನ್ನ ಎರಡನೇ ಹೆಂಡತಿಯ ಆತ್ಮದಿಂದ ತನಗೆ ಈ ರೀತಿ ಬೆದರಿಕೆ ಹಾಕಿದೆ ಮತ್ತು ತನ್ನ ಜೀವಕ್ಕೆ ಅಪಾಯವಿದೆ ಎಂದು ಆ ವ್ಯಕ್ತಿ ಹೇಳಿಕೊಂಡಿದ್ದಾನೆ. ಆ ವ್ಯಕ್ತಿಯನ್ನು ಚಿಂತಾ ಹರಣ್ ಚೌಹಾಣ್ ಎಂಬುದಾಗಿ ಗುರುತಿಸಲಾಗಿದೆ. ಈತನ ಎರಡನೇ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳಂತೆ. ಅವಳ ಮರಣದ ನಂತರ, ಅವಳ ಆತ್ಮವು ಅವನ ಕನಸಿನಲ್ಲಿ ಬಂದು ಮಹಿಳೆಯಾಗಿ ಜೀವನವನ್ನು ನಡೆಸದಿದ್ದರೆ, ಪ್ರಾಣ ತೆಗೆಯುತ್ತೇನೆ ಎಂದು ಎಚ್ಚರಿಸಿದ್ದಾಳಂತೆ. ಆ ಭಯದಿಂದ, ಚಿಂತಾ ಹರಾನ್ ಸೀರೆ ಧರಿಸಿ ಮಹಿಳೆಯ ಹಾಗೇ ಬದುಕುತ್ತಿದ್ದಾನಂತೆ.
ಕೆಲವು ಸ್ಥಳೀಯರು ಮಾನಸಿಕ ಅಸ್ವಸ್ಥತೆಯಿಂದಾಗಿ ಪುರುಷನು ಮಹಿಳೆಯಂತೆ ವೇಷ ಧರಿಸಿದ್ದಾನೆ ಎಂದು ಪರಿಗಣಿಸಿದರೆ, ಇತರರು ಇದಕ್ಕೆ "ದೆವ್ವಗಳು" ಕಾರಣ ಎಂದು ಹೇಳಿದ್ದಾರೆ. ಆದರೆ, ನಿಖರ ಕಾರಣ ತಿಳಿದುಬಂದಿಲ್ಲ. ಆದರೆ ಸತ್ತ ಹೆಂಡತಿಯ ಆತ್ಮಕ್ಕೆ ಹೆದರಿ, ಅವನು ಪ್ರತಿದಿನ ಹಣೆಯ ಮೇಲೆ ಕುಂಕುಮ, ಕೈಯಲ್ಲಿ ಬಳೆಗಳು, ಕಿವಿಯೋಲೆಗಳು, ಉಗುರುಗಳಿಗೆ ನೈಲ್ ಪಾಲಿಶ್ ಹಚ್ಚುತ್ತಾನಂತೆ.
ಈ ಸುದ್ದಿಯನ್ನೂ ಓದಿ:Haveri News: ʼರೀ ಡಾಬಾ ಬಂತು, ಊಟ ಮಾಡ್ರಿʼ ಎಂದ ಪತ್ನಿ; ಆಂಬ್ಯುಲೆನ್ಸ್‌ನಲ್ಲೇ ಎದ್ದು ಕೂತ ಸತ್ತ ಗಂಡ!
ಅಂತ್ಯಸಂಸ್ಕಾರಕ್ಕೆಂದು ಮೃತದೇಹವನ್ನು ಆಂಬ್ಯುಲೆನ್ಸ್‌ನಲ್ಲಿ ಊರಿಗೆ ಸಾಗಿಸುವಾಗ ಅಚ್ಚರಿ ರೀತಿಯಲ್ಲಿ ಸತ್ತ ವ್ಯಕ್ತಿ ದಿಢೀರನೆ ಎದ್ದು ಕುಳಿತಿದ್ದಾರೆ. ಹೌದು, ಜಿಲ್ಲೆಯ ಬಂಕಾಪುರದಲ್ಲಿ ಇಂತಹದೊಂದು ವಿಸ್ಮಯಕಾರಿ ಘಟನೆ ನಡೆದಿದೆ. ಆಂಬ್ಯುಲೆನ್ಸ್‌ನಲ್ಲಿ ಪಕ್ಕದಲ್ಲೇ ಕುಳಿತು ಗೋಳಾಡುತ್ತಿದ್ದ ಪತ್ನಿ, ಡಾಬಾದ ಬಳಿ ಊಟ ಮಾಡುತ್ತೀಯ? ಎಂದು ಹೇಳಿ ಕಣ್ಣೀರಿಟ್ಟಿದ್ದಾಳೆ. ಈ ವೇಳೆ ಮೃತ ಗಂಡನಿಗೆ ಜೀವ ಬಂದಿದೆ. ಹೀಗಾಗಿ ತಕ್ಷಣ ಆಸ್ಪತ್ರೆಗೆ ದಾಖಲಿಸಿದಾಗ, ವ್ಯಕ್ತಿ ಬದುಕಿರೋದಾಗಿ ವೈದ್ಯರು ಧೃಡಪಡಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ನಂತರ ಆತನನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.