ನವದೆಹಲಿ,ಜೂ.11: ಉದ್ಯೋಗ, ನಗರ ಜೀವನ ಶೈಲಿ, ಮೂಲಭೂತ ಸೌಕರ್ಯ ಅಂತ ಬಂದಾಗ ಹೆಚ್ಚಿನವರು ಬೆಂಗಳೂರು ಮತ್ತು ಹೈದರಾಬಾದ್ ನಂತ ಪ್ರದೇಶವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಅದರಲ್ಲೂ ಸಿಲಿಕಾನ್ ಸಿಟಿ ಮತ್ತು ಹೈದರಾಬಾದ್ ನಗರಗಳ ನಡುವಿನ ಹೋಲಿಕೆ ಇಂದಿನದಲ್ಲ. ಆಹಾರ, ಹವಾಮಾನದಿಂದ ಹಿಡಿದು ಸಾರಿಗೆ ಮೂಲ ಸೌಕರ್ಯದವರೆಗೆ ಚರ್ಚೆ ನಡೆಯುತ್ತಲೇ ಇರುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಇತ್ತೀಚೆಗೆ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು ಶೇರ್ (Viral News) ಮಾಡಿದ ಪೋಸ್ಟ್ ಬಹಳಷ್ಟು ಚರ್ಚೆಗೆ ಕಾರಣವಾಗಿದೆ.
ಕೇವಲ ಎರಡು ವಾರಗಳ ಕಾಲ ಹೈದರಾಬಾದ್ ನಲ್ಲಿ ವಾಸ್ತವ್ಯ ಕಳೆದಿದ್ದ ಯುವಕ ಅನುಭವ ಶೇರ್ ಮಾಡಿದ್ದು "ಇದೊಂದು ಅತ್ಯಂತ ಕಳಪೆ ವಿಮರ್ಶೆ" ಎಂದು ಆತನನ್ನು ನೆಟ್ಟಿಗರು ತರಾಟೆಗೆ ತೆಗೆದು ಕೊಂಡಿದ್ದಾರೆ. ಆಶಿಶ್ ಕುಮಾರ್ ಎಂಬ ಸಾಫ್ಟ್ ವೇರ್ ಇಂಜಿನಿಯರ್ ಬೆಂಗಳೂರಿನಲ್ಲಿ ಉತ್ತಮ ವಾಗಿರುವ ಕೆಲ ವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಆಹಾರ, ಸಾರ್ವ ಜನಿಕ ಸಾರಿಗೆ, ಹವಾಮಾನ, ವೈವಿಧ್ಯಮಯ ಜನರ ಬಗ್ಗೆ ಅವರು ಮೆಚ್ಚುಗೆ ವ್ಯಕ್ತ ಪಡಿಸಿದ್ದರು.
ಹೈದರಾಬಾದ್ ಕೇವಲ ಮೂಲಸೌಕರ್ಯದಲ್ಲಿ ಮುಂದಿದೆ ಎಂದು ಹೇಳುವ ಮೂಲಕ ಈ ಅನುಭವ ಕೊನೆಗೊಳಿಸಿದ್ದರು. ಆದರೆ ಈ ಪೋಸ್ಟ್ ಪ್ರಕಟವಾಗುತ್ತಿದ್ದಂತೆ, ಎರಡೂ ನಗರಗಳ ನಿವಾಸಿಗಳು ಪ್ರತಿಕ್ರಿಯೆ ನೀಡಲು ಮುಂದಾಗಿದ್ದಾರೆ. ಮುಖ್ಯವಾಗಿ ಆಹಾರ ಮತ್ತು ಸಾರ್ವಜನಿಕ ಸಾರಿಗೆಯ ವಿಷಯದಲ್ಲಿ ಈ ಅಭಿಪ್ರಾಯಯನ್ನು ಬಹುತೇಕರು ಖಂಡಿಸಿದ್ದಾರೆ.
ಆಹಾರದ ವಿಷಯದಲ್ಲಿ ಹೈದರಾಬಾದ್ ಬೆಂಗಳೂರಿಗಿಂತ ಬಹಳಷ್ಟು ಮುಂದಿದೆ. ಅದರಲ್ಲೂ ಮಾಂಸಹಾರಿ ಊಟ ಹಾಗೂ ಬಿರಿಯಾನಿ ಪ್ರಿಯರಿಗೆ ಹೈದರಾಬಾದ್ ಗಿಂತ ಯಾವುದು ಮುಂದಿಲ್ಲ ಎಂದಿದ್ದಾರೆ. ಬೆಂಗಳೂರು ಸಾರ್ವಜನಿಕ ಸಾರಿಗೆಗೆ ಒಳ್ಳೆಯದು? ನಿಮ್ಮ ವಯಸ್ಸು ಎಷ್ಟು? ನಿಮ್ಮ ಮೆದುಳು ಅಭಿವೃದ್ಧಿ ಹೊಂದಿಲ್ಲ ಎಂದು ನಾನು ಭಾವಿಸುತ್ತೇನೆ.. ಬೆಂಗಳೂರಿನ ಟ್ರಾಫಿಕ್ ನೆನೆದರೆ ಈಗಲೂ ಚಳಿ ಹಿಡಿಯುತ್ತದೆ ಎಂದು ವ್ಯಂಗ್ಯ ಮಾಡಿದ್ದಾರೆ.
ಈ ಬಗ್ಗೆ ಅನುಭವ ಹಂಚಿಕೊಂಡ ಮತ್ತೊಬ್ಬರು ಬೆಂಗಳೂರಿನಲ್ಲಿ ವರ್ಷಪೂರ್ತಿ ಅತ್ಯುತ್ತಮ ಮತ್ತು ತಂಪಾದ ವಾತಾವರಣವಿರುತ್ತದೆ. ಆದರೆ ಹೈದರಾಬಾದ್‌ನಲ್ಲಿ ಮಾರ್ಚ್‌ನಿಂದ ಮೇ ತಿಂಗಳವರೆಗೆ ಉರಿ ಸೆಕೆ. ಉಳಿದಂತೆ ಸಾಮಾನ್ಯ ವಾತಾವರಣವಿರುತ್ತದೆ. ಬೆಂಗಳೂರು ಸಸ್ಯಾಹಾರಿಗೆ ಹೆಸರುವಾಸಿಯಾಗಿದ್ದರೆ, ಹೈದರಾಬಾದ್ ಬಿರಿಯಾನಿ, ನಾನ್-ವೆಜ್ ಖಾದ್ಯಕ್ಕೆ ಹೆಸರುವಾಸಿ ಎಂದು ಬರೆದುಕೊಂಡಿದ್ದಾರೆ. ಆದರೆ ಇಂಜನಿಯರಿಂಗ್ ಯುವಕನ ಪೋಸ್ಟ್ ಗೆ ಮಾತ್ರ ಹೆಚ್ಚಿನವರು ವ್ಯಂಗ್ಯ ವಾಡಿದ್ದಾರೆ.