ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಭಾರತದ ಕ್ವಿಕ್ ಡೆಲಿವರಿ ಸರ್ವಿಸ್‍ ನೋಡಿ ವಿದೇಶಿ ಮಹಿಳೆ ಹೇಳಿದ್ದೇನು? ವಿಡಿಯೊ ವೈರಲ್!

ಪೋಲೆಂಡ್‌ನಿಂದ ಭಾರತಕ್ಕೆ ಭೇಟಿ ನೀಡಿದ ಮಹಿಳಾ ಪ್ರವಾಸಿ ವಿಕ್ಟೋರಿಯಾ, ಬ್ಲಿಂಕಿಟ್‌ ಮೂಲಕ ಕಲ್ಲಂಗಡಿ ಹಣ್ಣನ್ನು ಆರ್ಡರ್ ಮಾಡಿದ್ದರು. ಕೆಲವೇ ಕ್ಷಣಗಳಲ್ಲಿ ಅದು ಅವರ ಕೈಗೆ ಸಿಕ್ಕಿದೆಯಂತೆ. ಕ್ವಿಕ್ ಡೆಲಿವರಿ ಸರ್ವಿಸ್‍ ನೋಡಿ ಆಕೆ ಶಾಕ್‌ ಆಗಿದ್ದಾರೆ. ಈ ಬಗ್ಗೆ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಇದು ಈಗ ವೈರಲ್ ಆಗಿದೆ.

ಕಣ್ಣು ಮಿಟುಕಿಸುವುದ್ರಲ್ಲಿ ಬಂದ ಕಲ್ಲಂಗಡಿ ಹಣ್ಣು ನೋಡಿ ಮಹಿಳೆ ಹೇಳಿದ್ದೇನು?

Profile pavithra May 14, 2025 8:55 PM

ಈಗ ಹೊರಗಡೆ ಹೋಗಿ ಮನೆಗೆ ಬೇಕಾದ ವಸ್ತುಗಳನ್ನು ತರುವ ಬದಲು ಹಲವರು ಕುಳಿತಲ್ಲಿಯೇ ಅದು ಕ್ಷಣ ಮಾತ್ರದಲ್ಲಿಯೇ ತಮಗೆ ಬೇಕಾದ ವಸ್ತುಗಳನ್ನು ಆರ್ಡರ್‌ ಮಾಡುತ್ತಾರೆ. ಫುಡ್‌ನಿಂದ ಹಿಡಿದು, ಮನೆಗೆ ಬೇಕಾಗುವ ಸಾಮಾಗ್ರಿಗಳು ಕಣ್ಣುಮುಚ್ಚಿ ತೆರೆಯುವುದರೊಳಗೆ ಮನೆ ಬಾಗಿಲಿಗೆ ಬಂದು ಬೀಳುತ್ತವೆ. ಇದೀಗ ಪೋಲೆಂಡ್‌ನಿಂದ ಭಾರತಕ್ಕೆ ಭೇಟಿ ನೀಡಿದ ಮಹಿಳಾ ಪ್ರವಾಸಿಗರೊಬ್ಬರು ಭಾರತದ ಕ್ವಿಕ್ ಡೆಲಿವರಿ ಸರ್ವಿಸ್‍ ನೋಡಿ ಆಶ್ಚರ್ಯಚಕಿತಳಾಗಿದ್ದಾರೆ. ಇದನ್ನು ವಿಡಿಯೊ ಮಾಡಿ ಆಕೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇದು ಈಗ ವೈರಲ್ (Viral News) ಆಗಿ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಅನೇಕ ಪಾಶ್ಚಿಮಾತ್ಯ ನೆಟಿಜನ್‌ಗಳು ಇದರ ಕುರಿತು ಟೀಕಿಸಿದ್ದಾರೆ. ಆದರೆ ಭಾರತೀಯರು ಈ ಬಗ್ಗೆ ವಾದಿಸುತ್ತಾ ತಮ್ಮನ್ನು ಸಮರ್ಥಿಸಿಕೊಳ್ಳಲು ಮುಂದಾಗಿದ್ದಾರೆ.

ವಿಕ್ಟೋರಿಯಾ ಬ್ಲಿಂಕಿಟ್‌ ಮೂಲಕ ಆರ್ಡರ್ ಮಾಡಿದ ಕಲ್ಲಂಗಡಿ ಹಣ್ಣನ್ನು ಸವಿಯುತ್ತಿರುವ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮಹಿಳೆ ಖುಷಿಯಿಂದ ಕಲ್ಲಂಗಡಿ ಹಣ್ಣನ್ನು ಎರಡು ಭಾಗ ಮಾಡಿ ಹಾಸಿಗೆಯ ಮೇಲೆ ಕುಳಿತು ಚಮಚದಿಂದ ಹಣ್ಣನ್ನು ತಿನ್ನುವುದು ವಿಡಿಯೊದಲ್ಲಿ ಸೆರೆಯಾಗಿದೆ.

ವಿಡಿಯೊ ಇಲ್ಲಿದೆ ನೋಡಿ...

ವಿಡಿಯೊದಲ್ಲಿ ವಿಕ್ಟೋರಿಯಾ ಭಾರತದಲ್ಲಿ ಮಧ್ಯರಾತ್ರಿಯಲ್ಲೂ ವಸ್ತುಗಳನ್ನು ಆರ್ಡರ್ ಮಾಡುವುದು ಎಷ್ಟು ಸುಲಭ ಎಂದು ಮಾತನಾಡಿದ್ದಾರೆ. ಹಾಗೇ ಈ ಸ್ಪೀಡ್‌ ಡೆಲಿವರಿ ಕುರಿತು ಸಖತ್‌ ಖುಷಿಯಾಗಿದ್ದಾರೆ. "ಪೋಲೆಂಡ್‌ನಲ್ಲಿಯೂ ಸಹ ನಾವು ಈ ವ್ಯವಸ್ಥೆ ಇದೆ. ಆದರೆ ನನಗೆ ಭಾರತೀಯ ಅಪ್ಲಿಕೇಶನ್‌ಗಳು ತುಂಬಾ ಇಷ್ಟ. ಹಗಲು ಅಥವಾ ರಾತ್ರಿ, ನಾನು ಹಣ್ಣುಗಳು, ಕೇಕ್, ಯುನೊ ಅಥವಾ ಅಕ್ಷರಶಃ ನನಗೆ ಬೇಕಾದ ಯಾವುದೇ ವಸ್ತುವನ್ನು ಆರ್ಡರ್ ಮಾಡಬಹುದು” ಎಂದು ಅವರು ಹೇಳಿದ್ದಾರೆ. ಇದಲ್ಲದೆ, ಬೆಲೆ ಕೂಡ ನ್ಯಾಯಯುತವಾಗಿವೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಕಪ್‌ಕೇಕ್ ಹೀಗೂ ಮಾಡಬಹುದಾ? ಸಿಕ್ಕಾಪಟ್ಟೆ ವೈರಲ್‌ ಆಯ್ತು ಈ ವಿಡಿಯೊ

ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಒಬ್ಬರು ಕಾಮೆಂಟ್ ಮಾಡಿ, "ವಾಸ್ತವದಲ್ಲಿ ಇದು ಹುಚ್ಚುತನ. ಕಡಿಮೆ ಸಂಬಳದಲ್ಲಿ ಡೆಲಿವರಿ ಬಾಯ್ಸ್‌ಗೆ ಈ ರೀತಿಯ ಕೆಲಸಗಳನ್ನು ಮಾಡುವಂತೆ ಒತ್ತಾಯಿಸಲಾಗಿದೆ” ಎಂದು ಹೇಳಿದ್ದಾರೆ. ಈ ರೀಲ್ ಈಗಾಗಲೇ ವೈರಲ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸುಮಾರು ಎರಡು ಲಕ್ಷ ಲೈಕ್‌ಗಳನ್ನು ಗಳಿಸಿದೆ.