ಕೆನಡಾದಿಂದ ಭಾರತಕ್ಕೆ ಮರಳಿ ಬಂದ ಎನ್ಆರ್‌ಐ ಮಹಿಳೆ ಹೇಳಿದ್ದೇನು?
NRI Women: ಕೆನಡಾದಲ್ಲಿ ನೆಲೆಸಿದ್ದ ಎನ್‌ಆರ್‌ಐ ಮಹಿಳೆಯೊಬ್ಬರು ಭಾರತಕ್ಕೆ ಮರಳಿದ ನಂತರ ತಮ್ಮ ಜೀವನದಲ್ಲಿ ಸಂಭವಿಸಿದ ಬದಲಾವಣೆಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಭಾರತಕ್ಕೆ ವಾಪಸಾದುದು ಕೇವಲ ಸ್ಥಳಾಂತರವಲ್ಲ, ಬದಲಾಗಿ ಬದುಕಿನ ದೃಷ್ಠಿಕೋನವನ್ನೇ ಬದಲಿಸಿದ ಅನುಭವ ಎಂದು ಅವರು ವಿವರಿಸಿದ್ದಾರೆ.
ಕೆನಡಾದಿಂದ ಭಾರತಕ್ಕೆ ಮರಳಿ ಬಂದ ಎನ್ಆರ್‌ಐ ಮಹಿಳೆ -
ಗಾಂಧಿನಗರ, ಡಿ. 20: ಇತ್ತೀಚೆಗೆ ಕೆನಡಾದಿಂದ ಭಾರತಕ್ಕೆ ಮರಳಿದ ಎನ್‌ಆರ್‌ಐ ಮಹಿಳೆ (NRI Women) ಅಲ್ಲಿನ ತಮ್ಮ ಜೀವನ ಅನುಭವವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಅದು ತನ್ನ ಜೀವನವನ್ನು ಹೇಗೆ ಬದಲಾಯಿಸಿತು ಎಂಬುದನ್ನು ವಿವರಿಸಿದ್ದಾರೆ. ಹಲವು ವರ್ಷ ವಿದೇಶದಲ್ಲಿ ವಾಸಿಸಿ, ಬಳಿಕ ಭಾರತಕ್ಕೆ ಮರಳಿ ಜೀವನ ಮಾಡುವುದು ಸುಲಭವಲ್ಲ ಎಂದೇ ಹಲವರು ಹೇಳುತ್ತಾರೆ. ಆದರೆ ಈ ಮಹಿಳೆ ತಾನು ಹೇಗೆಲ್ಲ ಬದಲಾದೆ ಎಂಬುದನ್ನು ಹೇಳಿದ್ದಾರೆ. ಇಲ್ಲಿನ ಜೀವನ ರೀತಿ, ಮಾನವೀಯ ಸಂಬಂಧಗಳು ಮತ್ತು ಸಮುದಾಯದ ಬೆಂಬಲವು ತನ್ನ ಬದುಕನ್ನು ಹೇಗೆ ಇನ್ನಷ್ಟು ಸಂಪೂರ್ಣವಾಗಿಸಿದೆ ಎಂಬುದನ್ನು ಅವರು ಮನಮುಟ್ಟುವಂತೆ ವಿವರಿಸಿದ್ದಾರೆ.
ಈ ಬದಲಾವಣೆ ಕೇವಲ ಸ್ಥಳಾಂತರವಲ್ಲ; ಮಾನಸಿಕ ಬದಲಾವಣೆ ಎಂದು ಅವರು ಕರೆದಿದ್ದಾರೆ. ಪ್ರಸ್ತುತ ಗುಜರಾತ್‌ನ ಸೂರತ್‌ನಲ್ಲಿ ವಾಸಿಸುವ ಮಾಮ್ ವ್ಲಾಗರ್ ಆಗಿರುವ ಜೀಲ್ ಶಾ, ತಮ್ಮ ಜೀವನದ ಬದಲಾವಣೆಯ ಬಗ್ಗೆ ಹೇಳಿದ್ದಾರೆ. ಭಾರತದಲ್ಲಿ ಜೀವನವು ಉತ್ತಮವಾಗಿಲ್ಲ, ಬದಲಾಗಿ ಅದನ್ನು ಅನುಭವಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಇಲ್ಲಿ ದಿನನಿತ್ಯದ ಜೀವನವು ಅನೇಕ ಅಡಚಣೆಗಳು, ಮಾತುಕತೆಗಳು ಮತ್ತು ಮಾನವೀಯ ಸಂಪರ್ಕಗಳಿಂದ ಕೂಡಿರುತ್ತದೆ. ಇದರಿಂದ ತನ್ನ ಹಿಂದಿನ ನಂಬಿಕೆಗೆ ಸವಾಲು ಎದುರಾಯಿತು ಎಂದು ಅವರು ಹೇಳಿದ್ದಾರೆ.
ಬೇರೆ ಜಾತಿ, ಧರ್ಮದ ಯುವಕನ ಮದುವೆಯಾದರೆ ಮಗಳಿಗೆ ಆಸ್ತಿಯಲ್ಲಿ ಪಾಲು ಕೊಡಬೇಕಿಲ್ಲ: ಸುಪ್ರೀಂ
ಈ ಬದಲಾವಣೆ ಅಗತ್ಯವಾಗಿ ಬೇಕಾದ ಮೌಲ್ಯವನ್ನು ಕಲಿಯುವುದು ಮತ್ತು ಜೀವನವನ್ನು ಸ್ವೀಕರಿಸುವುದರ ಕುರಿತಾಗಿರುತ್ತದೆ ಎಂದು ಅವರು ಹೇಳಿದರು. ಕೆಲವೊಮ್ಮೆ ಶಿಸ್ತು ಬದ್ಧತೆ ಅಥವಾ ನಿಶ್ಶಬ್ಧವನ್ನು ಕಳೆದುಕೊಂಡಿದ್ದರೂ, ತನ್ನ ಜೀವನವನ್ನು ಇನ್ನಷ್ಟು ಪೂರ್ಣ ಮತ್ತು ಮಾನವೀಯವಾಗಿಸಿದ ಜೀವನಶೈಲಿಗೆ ಅವರು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
ಭಾರತಕ್ಕೆ ಹಿಂತಿರುಗಿದ ಬಳಿಕ ಬದುಕು ಸದ್ದಿಲ್ಲದೆ ಬದಲಾಗುತ್ತದೆ ಎಂದು ನನಗೆ ತಿಳಿದಿರಲಿಲ್ಲ. ಇದು ನನ್ನ ಬದುಕಿನ ರೀತಿಯನ್ನೇ ನಿಧಾನವಾಗಿ ಬದಲಿಸಿಬಿಡುತ್ತದೆ ಎಂದು ನಾನು ಊಹಿಸಿರಲಿಲ್ಲ. ಇಲ್ಲಿ ದಿನಗಳು ನನ್ನನ್ನು ಗಾಳಿಯಂತೆ ವೇಗವಾಗಿ ಓಡಿಸುವುದಿಲ್ಲ. ಅವು ಶಬ್ದ, ಮಾತುಕತೆಗಳು ಮತ್ತು ಚಹಾ ವಿರಾಮಗಳೊಂದಿಗೆ, ವಿಶ್ರಾಂತಿ ಪಡೆಯುತ್ತ ಮನಸ್ಸನ್ನು ಉಲ್ಲಾಸದಾಯಕವಾಗಿರಿಸುತ್ತದೆ. ಇಲ್ಲಿ ಜೀವನವನ್ನು ಅನುಭವಿಸಬಹುದು ಎಂದು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದಿದ್ದಾರೆ.
ಇಲ್ಲಿ ನನ್ನ ಮಗು ಬೆಳೆದು ಬರುತ್ತಿರುವುದನ್ನು ನೋಡುತ್ತಾ, ನಾನು ಮರೆತಿದ್ದ ಒಂದು ಸತ್ಯ ಮತ್ತೆ ನೆನಪಾಯಿತು. ಭಾರತಕ್ಕೆ ಮರಳುವುದರಿಂದ ಜೀವನ ಸುಲಭವಾಗಲಿಲ್ಲ. ಆದರೆ ಅದು ನನ್ನ ಬದುಕನ್ನು ಇನ್ನಷ್ಟು ಸಂಪೂರ್ಣವನ್ನಾಗಿಸಿತು. ಬಹುಶಃ ನಾನು ಅತ್ಯಂತ ಕೃತಜ್ಞತೆಯಿಂದ ಸ್ವೀಕರಿಸಿದ ಅಭ್ಯಾಸವೇ ಇದಾಗಿರಬಹುದು ಎಂದು ಅವರು ವಿವರಿಸಿದರು.
ಭಾರತದಲ್ಲಿ ಅವರು ಕಲಿತ ಪಾಠಗಳನ್ನು ಹಂಚಿಕೊಂಡಿದ್ದಾರೆ. ಇಲ್ಲಿ ಬೆಳಗಾಗುವುದು ತಿಳಿಯುವುದು ಅಲಾರಾಂನ ಧ್ವನಿಯಿಂದಲ್ಲ. ಸುತ್ತಮುತ್ತಲಿನ ಬದುಕಿನ ಸಹಜ ಶಬ್ದಗಳಿಂದ ಎಂಬುದಾಗಿ ಹೇಳಿದರು. ಊಟ ಮಾಡುವಾಗ ಯಾವುದೇ ಆತುರವಿಲ್ಲದೆ ನಿಧಾನವಾಗಿ ಕುಳಿತು ಮಾಡುತ್ತೇನೆ. ಆಹಾರವನ್ನು ಜಾಗರೂಕತೆಯಿಂದ ತಯಾರಿಸುವುದು ಇದೀಗ ಅಭ್ಯಾಸವಾಗಿಬಿಟ್ಟಿದೆ ಎಂದು ವಿವರಿಸಿದರು.
ಅವರು ಇನ್ನೊಂದು ರೀತಿಯ ಸಹನಶೀಲತೆಯನ್ನು ಬೆಳೆಸಿಕೊಂಡಿದ್ದಾರೆ. ತನ್ನ ಗೌಪ್ಯತೆ ಕಡಿಮೆಯಾದರೂ, ಇತರರೊಂದಿಗೆ ಇರುವ ಸಂಪರ್ಕದ ಭಾವನೆ ಇನ್ನಷ್ಟು ಗಟ್ಟಿಯಾದುದು ಎಂದು ಅವರು ವಿವರಿಸಿದ್ದಾರೆ. ಹೊಂದಿಕೊಂಡು ಹೋಗುವುದನ್ನು ಅವರು ಕಲಿತಿದ್ದಾಗಿ ವಿವರಿಸಿದ್ದಾರೆ. ಅವರ ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಅನೇಕರ ಮನಸ್ಸನ್ನು ತಟ್ಟಿದೆ.
ಒಬ್ಬ ಬಳಕೆದಾರರು, ಭಾರತಕ್ಕೆ ಮರಳಿದ ನಂತರ ನನಗೂ ಇದೇ ಅನುಭವವಾಗಿದೆ ಎಂದು ಬರೆದಿದ್ದಾರೆ. ನಾನು ಈಗ ಇದೇ ಪಾಠವನ್ನು ಕಲಿಯುತ್ತಿದ್ದೇನೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.