ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಸಿಕ್ಕಾಪಟ್ಟೆ ಚಳಿಯ ಕಾರಣದಿಂದ ಬಾಲ್ಕನಿಯಲ್ಲಿ ಈ ಯುವಕ ಮಾಡಿದ್ದೇನು?ವಿಡಿಯೊ ವೈರಲ್

ಕೆನಡಾದಲ್ಲಿನ ವಿಪರೀತ ಚಳಿಯಿಂದಾಗಿ ಇನ್‌ಸ್ಟಾಗ್ರಾಮರ್‌ ಕಬೀರ್ ಸ್ನೇಹಿತ, ತನ್ನ ವಸ್ತುಗಳನ್ನು ಫ್ರಿಜ್‍ನಲ್ಲಿಡುವ ಬದಲು ಹೊರಗೆ ಬಾಲ್ಕನಿಯಲ್ಲಿ ಸಂಗ್ರಹಿಸಿದ್ದಾನಂತೆ. ಇದನ್ನು ಕಂಡು ದಿಗ್ಭ್ರಮೆಗೊಂಡ ಕಬೀರ್ ಅದನ್ನು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಇದು ಈಗ ವೈರಲ್(Viral Video) ಆಗಿದೆ.

Balcony Viral video

ಒಟ್ಟಾವಾ: ತುಂಬಾ ಚಳಿ ಇರುವ ಪ್ರದೇಶಗಳಲ್ಲಿ ಫ್ರಿಜ್‍ನ ಅವಶ್ಯಕತೆಯೇ ಇರುವುದಿಲ್ಲ. ಹಾಗಾಗಿ ಕೆನಡಾದಲ್ಲಿ ವಿಪರೀತ ಚಳಿ ಇರುವ ಕಾರಣ ತನ್ನ ಗುಜರಾತಿ ಸ್ನೇಹಿತ ವಿದ್ಯುತ್ ಬಿಲ್ ಅನ್ನು ಹೇಗೆ ಉಳಿಸಿದ್ದಾನೆ ಎಂಬುದನ್ನು ಇನ್‌ಸ್ಟಾಗ್ರಾಂ ಬಳಕೆದಾರರೊಬ್ಬ ಬಹಿರಂಗಪಡಿಸಿದ್ದಾನೆ. ಕೆನಡಾದಲ್ಲಿ ವಾಸವಿರುವ ತನ್ನ ಸ್ನೇಹಿತ ಫ್ರಿಜ್ ಒಳಗಿರುವ ವಸ್ತುಗಳನ್ನೆಲ್ಲಾ ತೆಗೆದು ಬಾಲ್ಕನಿಯಲ್ಲಿ ಇಟ್ಟಿದ್ದಾನೆ ಎಂದು ಹೇಳಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್(Viral Video) ಆಗಿದೆ.

ಇನ್‌ಸ್ಟಾಗ್ರಾಮರ್‌ ಕಬೀರ್ ತನ್ನ ಸ್ನೇಹಿತ ಕೆನಡಾದಲ್ಲಿ ಫ್ರಿಜ್ ಅನ್ನು ಹೇಗೆ ತ್ಯಜಿಸಿದನೆಂದು ವಿವರಿಸಿದ ವೈರಲ್ ವೀಡಿಯೊದಲ್ಲಿ "ಕೆನಡಾ ದುಬಾರಿ ದೇಶ, ಆದರೆ ನಾವು ಗುಜರಾತಿಗಳು. ನಾವು ಜಗತ್ತನ್ನು ಅಲುಗಾಡಿಸಬಹುದು ಆದರೆ ನಮ್ಮ ಬಜೆಟ್‍ನಲ್ಲಿ ಯಾವುದೇ ಸಮಸ್ಯೆಯಾಗಲು ಬಿಡುವುದಿಲ್ಲ” ಎಂದಿದ್ದಾರೆ. ರೆಫ್ರಿಜರೇಟರ್ ಒಳಗೆ ವಸ್ತುಗಳನ್ನು ಸಂಗ್ರಹಿಸುವ ಮೂಲಕ ವಿದ್ಯುತ್ ಬಿಲ್ ಹೆಚ್ಚಿಸುವ ಬದಲು ಕೋಲ್ಡ್ ಆಗಿದ್ದ ಬಾಲ್ಕನಿಯಲ್ಲಿ ವಸ್ತುಗಳನ್ನು ಇಡುವ ಈ ಹ್ಯಾಕ್ ನೋಡಿ ನೆಟ್ಟಿಗರು ಪ್ರಭಾವಿತರಾಗಿದ್ದಾರೆ.



ಫ್ರಿಜ್ ಮೇಲಿನ ವಿದ್ಯುತ್ ಶುಲ್ಕವನ್ನು ಕಡಿಮೆ ಮಾಡಲು ತನ್ನ ಸ್ನೇಹಿತ ಹೀಗೆ ಮಾಡಿದ್ದಾನೆ ಎಂದು ಕಬೀರ್ ಹೇಳಿದ್ದಾನೆ. ಹೊರಗಿನ ತಾಪಮಾನವು ಮೈನಸ್ ಡಿಗ್ರಿ ಸೆಲ್ಸಿಯಸ್ ಆಗಿದ್ದು, ಅಲ್ಲಿ ಆಹಾರ ಪದಾರ್ಥಗಳನ್ನು ಸುಲಭವಾಗಿ ಸಂಗ್ರಹಿಸಬಹುದು ಎಂದು ಆತ ಹೇಳುವ ಮೂಲಕ ಎಲ್ಲರ ಗಮನಸೆಳೆದಿದ್ದಾನೆ. ಸ್ನೇಹಿತ ಹಾಲನ್ನು ಕೂಡ ಬಾಲ್ಕನಿಯಲ್ಲಿ ಸಂಗ್ರಹಿಸಿದ್ದಾನಂತೆ. ಹಾಗಾಗಿ ಕಬೀರ್ ಹಾಲನ್ನು ಹುಡುಕುತ್ತಿದ್ದಾಗ, ಆತನ ಸ್ನೇಹಿತ ಅದು ಫ್ರಿಜ್‍ನಲ್ಲಿಲ್ಲ ಹೊರಗೆ ಇಟ್ಟಿದ್ದೇನೆ ಎಂದು ಹೇಳಿದಾಗ ಕಬೀರ್‌ಗೆ ಆಶ್ಚರ್ಯವಾಗಿ ಇದನ್ನು ವಿಡಿಯೊ ಮಾಡಿದ್ದಾನಂತೆ.

ತನ್ನ ಸ್ನೇಹಿತ ಬಾಲ್ಕನಿ ಜಾಗವನ್ನು ರೆಫ್ರಿಜರೇಟರ್ ಆಗಿ ಹೇಗೆ ಬುದ್ಧಿವಂತಿಕೆಯಿಂದ ಬಳಸಿದ್ದಾನೆಂದು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾನೆ.

ಈ ಸುದ್ದಿಯನ್ನೂ ಓದಿ:Viral Video: ವಿದೇಶಿ ಬೀಚ್ ನಲ್ಲಿ ಭಾರತೀಯ ಯುವಕರ ಅಸಭ್ಯ ವರ್ತನೆಯ ವಿಡಿಯೊ ವೈರಲ್! ನೆಟ್ಟಿಗರ ಆಕ್ರೋಶ

ಈ ವಿಡಿಯೋ ವೈರಲ್ ಆಗಿದ್ದು, 60,000 ಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದಿದೆ. ನೆಟ್ಟಿಗರೊಬ್ಬರು ಈ ವಿಡಿಯೊಗೆ ಪ್ರತಿಕ್ರಿಯಿಸಿ, "ಬ್ರೋ ಫಿನ್ಲ್ಯಾಂಡ್‍ನಲ್ಲಿಯೂ ನಾವು ಎಲ್ಲವನ್ನೂ ನಮ್ಮ ಬಾಲ್ಕನಿಯಲ್ಲಿ ಇಡುತ್ತೇವೆ" ಎಂದು ಬರೆದಿದ್ದಾರೆ. ಕಾಮೆಂಟ್ ವಿಭಾಗವು ಹೆಚ್ಚು 'ಸ್ಮೈಲ್' ಎಮೋಜಿಗಳಿಂದ ತುಂಬಿತ್ತು.