Viral Video: ವಿದೇಶಿ ಬೀಚ್ ನಲ್ಲಿ ಭಾರತೀಯ ಯುವಕರ ಅಸಭ್ಯ ವರ್ತನೆಯ ವಿಡಿಯೊ ವೈರಲ್! ನೆಟ್ಟಿಗರ ಆಕ್ರೋಶ
ಸಾರ್ವಜನಿಕರು ಇದ್ದಂತಹ ಸ್ಥಳದಲ್ಲಿ ಭಾರತೀಯ ಯುವಕರ ಗುಂಪೊಂದು ಬಹಿರಂಗವಾಗಿ ಮೂತ್ರವಿಸರ್ಜನೆ ಮಾಡಿದ್ದಾರೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. .ಪ್ರವಾಸಿಗರ ಈ ಅಸಹನೀಯ ವರ್ತನೆ ಸ್ಥಳೀಯರು ಮತ್ತು ಇತರ ಪ್ರವಾಸಿಗರು ಆಕ್ರೋಶ ವ್ಯಕ್ತ ಪಡಸಿದ್ದಾರೆ.
ಥೈಲ್ಯಾಂಡ್: ಥೈಲ್ಯಾಂಡ್‌ನ ಪಟ್ಟಾಯ ಬೀಚ್ ನಲ್ಲಿ ಭಾರತೀಯ ಯುವಕರ ಗುಂಪೊಂದು ಸಾರ್ವಜನಿಕವಾಗಿ ಮೂತ್ರವಿಸರ್ಜನೆ ಮಾಡಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ವೈರಲ್ (Viral Video) ಆಗಿದ್ದು ವ್ಯಾಪಕ ಟೀಕೆಗೆ ಕಾರಣವಾಗಿವೆ. ಭಾರತೀಯ ಪ್ರವಾಸಿಗರ ನಿರ್ಲಕ್ಷ್ಯತನದಿಂದ ಪ್ರವಾಸಿ ಸ್ಥಳಗಳ ಶುಚಿತ್ವ ಹಾಳಾಗುತ್ತಿರುವ ಬಗ್ಗೆ ಅಲ್ಲಿನ ಸ್ಥಳೀಯ ನಿವಾಸಿಗಳು , ವಿದೇಶಿ ಪ್ರವಾಸಿಗರು ವ್ಯಾಪಕ ವಿರೋಧ ವ್ಯಕ್ತ ಪಡಿಸಿದ್ದಾರೆ.
ಥೈಲ್ಯಾಂಡ್ ನ ಪಟ್ಟಾಯ ಸ್ಥಳವು ಜಗತ್ತಿನ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದ್ದು ಪ್ರತಿ ವರ್ಷ ಲಕ್ಷಾಂತರ ಮಂದಿ ಇಲ್ಲಿಗೆ ಭೇಟಿ ನೀಡು ತ್ತಿರುತ್ತಾರೆ. ಮೊನ್ನೆಯಷ್ಟೇ ಆರು ಜನರ ಭಾರತೀಯ ಯುವಕರ ಗುಂಪೊಂದು ಬೆಳ್ಳಂಬೆಳಗ್ಗೆ ಥೈಲ್ಯಾಂಡ್ ನ ಪಟ್ಟಾಯ ಬೀಚ್ ಗೆ ತೆರಳಿದ್ದರು. ಗುಂಪಿನಲ್ಲಿದ್ದ ಕೆಲವರು ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಾರೆ.
ಸಾರ್ವಜನಿಕರು ಇದ್ದಂತಹ ಸ್ಥಳದಲ್ಲಿ ಯುವಕರ ಗುಂಪೊಂದು ಬಹಿರಂಗವಾಗಿ ಮೂತ್ರವಿಸರ್ಜನೆ ಮಾಡಿದ್ದು ಈ ಅಸಭ್ಯ ಕೃತ್ಯ ನಡೆಸು ತ್ತಿರುವಾಗ, ಪಕ್ಕದಲ್ಲಿದ್ದವರು ವಿಡಿಯೊ ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ವಿಡಿಯೊ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿದ್ದು ಈ ಯುವಕರು ಅನುಚಿತವಾಗಿ ವರ್ತಿಸುವ ಮೂಲಕ ದೇಶದ ಪ್ರತಿಷ್ಠೆಗೆ ಕಳಂಕ ತಂದಿದ್ದಾರೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಪ್ರವಾಸಿಗರಿಂದ ಮನವಿ!
ಥೈಲ್ಯಾಂಡ್ ನ ಈ ಘಟನೆಯು ಭಾರತೀಯರಿಗೆ ಕಳಂಕ ತಂದಂತಾಗಿದೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಭಾರತೀಯ ಪ್ರವಾಸಿಗರ ಬೇಜವಾಬ್ದಾರಿತನಕ್ಕೆ ಎಲ್ಲೆಡೆ ವಿರೋಧ ವ್ಯಕ್ತವಾಗುತ್ತಿದೆ. ಈ ಘಟನೆ ವಿವಾದಾಸ್ಪದವಾದ ನಂತರ ಇಲ್ಲಿನ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲು ಸಾಮಾಜಿಕ ಮಾಧ್ಯಮ ಬಳಕೆದಾರರು ಸ್ಥಳೀಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಇದನ್ನು ಓದಿ: Viral Video: ವಧುವಿನ ಹಣೆಗೆ ಸಿಂಧೂರ ಇಡು ಅಂದ್ರೆ ಆಕೆಯ ಸಹೋದರಿಯರ ಹಣೆಗೆ ಕುಂಕುಮ ಹಚ್ಚಿದ ವರ!
ಇತ್ತೀಚಿನ ದಿನಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಭಾರತ ಸೇರಿದಂತೆ ವಿಶ್ವದ ಪ್ರಮುಖ ರಾಷ್ಟ್ರಗಳು ಅಧಿಕ ಒತ್ತನ್ನು ನೀಡುತ್ತಿವೆ. ಇದಕ್ಕೆ ವ್ಯತಿರಿಕ್ತ ವೆಂಬಂತೆ ಪ್ರವಾಸಿ ಸ್ಥಳಗಳ ಏಳಿಗೆಗೆ ಪ್ರವಾಸಿಗರೇ ಸಹಕಾರ ನೀಡದಿ ರುವುದು ಬೇಸರದ ಸಂಗತಿ.