ನವದೆಹಲಿ: ಜನರನ್ನು ಮೋಸಗೊಳಿಸಲು ಸ್ಕ್ಯಾಮರ್‌ಗಳು ಹೊಸ ಹೊಸ ಟ್ರಿಕ್ಸ್‌ಗಳನ್ನು ಮಾಡುತ್ತಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಒಂದು ಹಗರಣವೆಂದರೆ "ತಂದೆಯ ಸ್ನೇಹಿತ" ಎಂದು ಹೇಳಿ ಮೋಸ ಮಾಡುವುದು! ಈ ಹಗರಣದಲ್ಲಿ ವಂಚಕರು ಒಬ್ಬ ವ್ಯಕ್ತಿಯನ್ನು ಗುರಿಯಾಗಿಸಿಕೊಂಡು ಅವರ ತಂದೆಯ ಸ್ನೇಹಿತ ಎಂದು ಸುಳ್ಳು ಹೇಳಿ ಕಾಲ್ ಮಾಡಿ ಪರಿಚಿತರಂತೆ ನಟಿಸಿ ದುಡ್ಡು ಪೀಕುತ್ತಾರೆ. ಇತ್ತೀಚೆಗೆ, ಈ ರೀತಿ ವಂಚಿಸಲು ಪ್ರಯತ್ನಿಸಿದ ಸ್ಕ್ಯಾಮರ್‌ಗೆ ಸ್ಮಾರ್ಟ್ ಯುವತಿಯೊಬ್ಬಳು ಚಳ್ಳೆಹಣ್ಣು ತಿನ್ನಿಸಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ. ಹುಡುಗಿಯ ಬುದ್ಧಿವಂತಿಕೆ ನೋಡಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಘಟನೆಯ ವಿಡಿಯೊವನ್ನು ಯುವತಿ ತನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಳೆ. ಈ ವಿಡಿಯೊದಲ್ಲಿ ಯುವತಿ ತನ್ನ ತಂದೆಯ ಸ್ನೇಹಿತ ಎಂದು ಹೇಳಿಕೊಂಡ ವಂಚಕನೊಂದಿಗೆ ಫೋನ್‍ನಲ್ಲಿ ಮಾತನಾಡುವುದು ಸೆರೆಯಾಗಿದೆ. ಅವಳಿಗಿದು ಸ್ಕ್ಯಾಮ್ ಎಂದು ಗೊತ್ತಾಗಿ ವಂಚಕನಿಗೆ ಚಳ್ಳೆಹಣ್ಣು ತಿನ್ನಿಸಲು ಮುಂದಾಗಿದ್ದಾಳೆ. ಆಕೆಯ ಯುಪಿಐ ಖಾತೆಗೆ ಹಣವನ್ನು ವರ್ಗಾಯಿಸಲು ಆಕೆಯ ತಂದೆ ಹೇಳಿದ್ದಾರೆ ಎಂದು ಸ್ಕ್ಯಾಮರ್ ಆಕೆಗೆ ಹೇಳಿದ್ದಾನೆ. ಅದರಂತೆ ಯುಪಿಐ ಮೂಲಕ 12,000 ರೂ.ಗಳನ್ನು ಕಳುಹಿಸುವುದಾಗಿ ವಂಚಕ ತಿಳಿಸಿದ್ದಾನೆ. ನಂತರ ಆಕೆಯ ಖಾತೆಗೆ 10,000 ರೂ.ಗಳನ್ನು ಕಳುಹಿಸಿದ್ದೇನೆ ಎಂದು ಆಕೆಯ ಫೋನ್‍ಗೆ ಫೇಕ್ SMS ಕಳುಹಿಸಿದ್ದಾನೆ.
ಸ್ಕ್ಯಾಮರ್ ಕಳುಹಿಸಿದ ಆ ಮೆಸೇಜ್ ತನ್ನ ಬ್ಯಾಂಕಿನಿಂದ ಅಲ್ಲ, ವೈಯಕ್ತಿಕ ಸಂಖ್ಯೆಯಿಂದ ಬಂದಿದೆ ಎಂದು ಯುವತಿ ಗಮನಿಸಿದ್ದಾಳೆ. ನಂತರ ಆ ವ್ಯಕ್ತಿ ಆಕೆಗೆ 2,000 ರೂ.ಗಳ ಬದಲು 20,000 ರೂ.ಗಳನ್ನು ತಪ್ಪಾಗಿ ಕಳುಹಿಸಿ, 18,000 ರೂ.ಗಳನ್ನು ಹಿಂದಿರುಗಿಸಲು ಹೇಳಿದ್ದಾನೆ. ಆಗ ಯುವತಿ ನಕಲಿ ಎಸ್ಎಂಎಸ್ ಅನ್ನು ಎಡಿಟ್ ಮಾಡಿ ತಾನು 18,000 ರೂ.ಗಳನ್ನು ವಾಪಸ್ ಕಳುಹಿಸಿದ್ದೇನೆ ಎಂದು ಮಸೇಜ್ ಕಳುಹಿಸಿದ್ದಾಳೆ. ಆಗ ವಂಚಕನು ತನ್ನ ಮೋಸ ಆಕೆಗೆ ತಿಳಿಯಿತು ಎಂದುಕೊಂಡು ಕಾಲ್ ಕಟ್ ಮಾಡಿದ್ದಾನೆ.
ಈ ಸುದ್ದಿಯನ್ನೂ ಓದಿ:Viral Video: ಸತ್ತ ಸೊಳ್ಳೆಯನ್ನು ಸಂಗ್ರಹಿಸುವ ಹುಡುಗಿ; ವೈರಲ್ ಆಯ್ತು ವಿಲಕ್ಷಣ ಹವ್ಯಾಸದ ವಿಡಿಯೊ
ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದಕ್ಕೆ ನೆಟ್ಟಿಗರು ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಒಬ್ಬರು ಕಾಮೆಂಟ್ ಮಾಡಿ "ಉತ್ತಮ ಐಕ್ಯೂ ಹೊಂದಿರುವ ತುಂಬಾ ಸ್ಮಾರ್ಟ್ ಹುಡುಗಿ" ಎಂದು ಬರೆದಿದ್ದಾರೆ. ಇನ್ನೊಬ್ಬರು ಕಾಮೆಂಟ್ ಮಾಡಿ "ಜನರು ಯುಪಿಐ ಅಪ್ಲಿಕೇಶನ್‍ನಲ್ಲಿ ಪರಿಶೀಲಿಸುವ ಬದಲು ಎಸ್ಎಂಎಸ್ ಅನ್ನು ಏಕೆ ನಂಬುತ್ತಾರೆ, ಅದು ಹೆಚ್ಚು ಕೆಲಸವಲ್ಲ" ಎಂದು ಹೇಳಿದ್ದಾರೆ.